ತೊಗರಿ ನಂತರ ಕಡಲೆಯ ಸರದಿ; ಕಲಬುರ್ಗಿಯ 64 ಕಡೆ ಖರೀದಿ ಕೇಂದ್ರ ಸ್ಥಾಪನೆ

ಪ್ರತಿ ರೈತನಿಂದ ಗರಿಷ್ಠ 15 ಕ್ವಿಂಟಾಲ್ ಖರೀದಿಗೆ ಮಿತಿಯನ್ನೂ ಹೇರಿದೆ. ರೈತರ ಹೆಸರು ನೋಂದಣಿಗೆ ಏಪ್ರಿಲ್ 30 ರವರೆಗೂ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸಹಕಾರ ಮಹಾಮಂಡಳದ ನಿಯಮತದಿಂದ 36 ಖರೀದಿ ಕೇಂದ್ರ ಹಾಗೂ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯಿಂದ 28 ಖರೀದಿ ಕೇಂದ್ರ ಸೇರಿ ಒಟ್ಟು 64 ಕಡೆ ಖರೀದಿ ಕೇಂದ್ರ ಆರಂಭಿಸಲಾಗುತ್ತಿದೆ.

ಖರೀದಿ ಕೇಂದ್ರ

ಖರೀದಿ ಕೇಂದ್ರ

  • Share this:
ಕಲಬುರ್ಗಿ(ಫೆ.18): ತೊಗರಿ ರಾಶಿಯ ಬೆನ್ನ ಹಿಂದೆಯೇ ಕಲಬುರ್ಗಿ ಜಿಲ್ಲೆಯಲ್ಲಿ ಕಡಲೆ ರಾಶಿ ಆರಂಭಗೊಳ್ಳುತ್ತಿದೆ. ಹೀಗಾಗಿ ತೊಗರಿ ಖರೀದಿ ಕೇಂದ್ರಗಳ ಜೊತೆ ಜೊತೆಗೆ ಕಡಲೆ ಖರೀದಿ ಕೇಂದ್ರಗಳನ್ನೂ ಪ್ರಾರಂಭಿಸಲಾಗುತ್ತಿದೆ. ಕಲಬುರ್ಗಿ ಜಿಲ್ಲೆಯ ವಿವಿಧೆಡೆ ಕಡಲೆ ಖರೀದಿ ಕೇಂದ್ರ ಸ್ಥಾಪನೆಗೆ ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲೆಯ 64 ಕಡೆ ಕಡಲೆ ಖರೀದಿ ಕೇಂದ್ರ ಸ್ಥಾಪಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.  ಪ್ರತಿ ಎಕರೆಗೆ 4 ಕ್ವಿಂಟಾಲ್ ಕಡಲೆ ಖರೀದಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಪ್ರತಿ ರೈತನಿಂದ ಗರಿಷ್ಠ 15 ಕ್ವಿಂಟಾಲ್ ಖರೀದಿಗೆ ಮಿತಿಯನ್ನೂ ಹೇರಿದೆ. ರೈತರ ಹೆಸರು ನೋಂದಣಿಗೆ ಏಪ್ರಿಲ್ 30 ರವರೆಗೂ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸಹಕಾರ ಮಹಾಮಂಡಳದ ನಿಯಮತದಿಂದ 36 ಖರೀದಿ ಕೇಂದ್ರ ಹಾಗೂ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯಿಂದ 28 ಖರೀದಿ ಕೇಂದ್ರ ಸೇರಿ ಒಟ್ಟು 64 ಕಡೆ ಖರೀದಿ ಕೇಂದ್ರ ಆರಂಭಿಸಲಾಗುತ್ತಿದೆ.

ಪ್ರತಿ ಕ್ವಿಂಟಾಲ್ ಕಡಲೆಗೆ ಕೇಂದ್ರ ಸರ್ಕಾರ 5100 ರೂಪಾಯಿ ಬೆಂಬಲ ಬೆಲೆ ನಿಗದಿಗೊಳಿಸಿದ್ದು, ಅದೇ ದರದೊಂದಿಗೆ ಖರೀದಿಸಲಾಗುತ್ತಿದೆ. ಕಲಬುರ್ಗಿ ತಾಲೂಕಿನಲ್ಲಿ ಭೀಮಳ್ಳಿ, ಹೊನ್ನ ಕಿರಣಗಿ, ಔರಾದ್, ಕಲಮೂಡ, ಫರತಾಬಾದ್, ಫಿರೋಜಾಬಾದ್, ನಾಗೂರು, ಸಣ್ಣೂರ, ಮಹಾಗಾಂವ, ಮೇಳಕುಂದಾ, ಶ್ರೀನಿವಾಸ ಸರಡಗಿ ಹಾಗೂ ತಾಲೂಕು ಎಪಿಎಂಸಿ ಮಾರುಕಟ್ಟೆ ಸೇರಿ 12 ಕಡೆ ಖರೀದಿ ಕೇಂದ್ರ ಆರಂಭಿಸಲಾಗುತ್ತಿದೆ. ಸೇಡಂ ತಾಲೂಕಿನಲ್ಲಿ ಯಡಗಾ, ಸಿಂಧನಮಡು, ಊಡಗಿ, ಕಾನಾಗಡ್ಡಾ, ಆಡಕಿ, ಮುಧೋಳ, ಹಂದರಕಿ ಸೇರಿ 8 ಕಡೆ ಖರೀದಿ ಕೇಂದ್ರ ಆರಂಭಿಸಲು ತೀರ್ಮಾನಿಸಲಾಗಿದೆ.

ಡೀಸೆಲ್ ದರ ಏರಿಕೆಗೆ ಕಂಗಾಲಾದ ಮೀನುಗಾರರು; ಮತ್ಸೋದ್ಯಮವೇ ಸ್ಥಗಿತವಾಗುವ ಸಾಧ್ಯತೆ!

ಅಫಜಲಪುರ ತಾಲೂಕಿನಲ್ಲಿ ಮಣ್ಣೂರ, ಅತನೂರ, ಗೊಬ್ಬೂರ(ಬಿ), ರೇವೂರ, ಮಾಶ್ಯಾಳ, ಕರ್ಜಗಿ, ದೇವಲ ಗಾಣಗಾಪುರ, ಚಿಣಮಗೇರಾ, ಅಫಜಲಪುರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸೇರಿ 09 ಕಡೆ ಖರೀದಿ ಕೇಂದ್ರ ಆರಂಭಿಸಲಾಗುತ್ತಿದೆ. ಆಳಂದ ತಾಲೂಕಿನಲ್ಲಿ ಖಜೂರಿ, ನರೋಣ, ಕಡಗಂಚಿ, ಮಾದನ ಹಿಪ್ಪರಗಾ, ಚಿಂಚನಸೂರ (ಕೆರೆ ಅಂಬಲಗಾ), ಕಿಣ್ಣಿ ಸುಲ್ತಾನ್, ತಡಕಲ್, ನಿರಂಬರ್ಗಾ, ಸರಸಂಬಾ, ಭೂಸನೂರ ಸೇರಿ 10 ಕಡೆ ಖರೀದಿ ಕೇಂದ್ರ ಆರಂಭಿಸಲಾಗುತ್ತಿದೆ.

ಚಿಂಚೋಳಿ ತಾಲೂಕಿನಲ್ಲಿ ಸಾಲೇ ಬೀರನಹಳ್ಳಿ, ಕನಕಪುರ, ಸುಲೇಪೇಟ್, ಕೋಡ್ಲಿ, ಐನೊಳ್ಳಿ, ಐನಾಪುರ, ಚಿಮ್ಮನಚೋಡ ಸೇರಿ 7 ಕಡೆ ಖರೀದಿ ಕೇಂದ್ರ ತೆರೆಯಲಾಗ್ತಿದೆ. ಚಿತ್ತಾಪುರ ತಾಲೂಕಿನ ದಿಗ್ಗಾಂವ್. ಭೀಮನಳ್ಳಿ, ಅಲ್ಲೂರು(ಬಿ), ಗೋಟೂರು, ಗುಂಡಗುರ್ತಿ, ಕೊಡದೂರು, ಕಂದಗೋಳ, ಭಂಕೂರ, ಕಾಳಗಿ, ನಾಲವಾರ, ಹೆರೂರ, ಹಲಕಟ್ಟಾ, ಅರಣಕಲ್, ತೊನಸಳ್ಳಿ ಸೇರಿ 15 ಕಡೆ ಖರೀದಿ ಕೇಂದ್ರ ತೆರಯಲು ತೀರ್ಮಾನಿಸಲಾಗಿದೆ.

ಜೇವರ್ಗಿ ತಾಲೂಕಿನಲ್ಲಿ ಕೋಳಕೂರ, ನರಿಬೋಳ, ನೆಲೋಗಿ ಹಾಗೂ ಬಳಬಟ್ಟಿ ಗ್ರಾಮಗಳಲ್ಲಿ ಖರೀದಿ ಕೇಂದ್ರ ಸ್ಥಾಪಿಸಲಾಗ್ತಿದೆ. ಖರೀದಿ ಕೇಂದ್ರಕ್ಕೆ ತೆರಳಿ ಆನ್ ಲೈನ್ ಮೂಲಕ ಹೆಸರು ನೋಂದಣಿಗೆ ಕಲಬುರ್ಗಿ ಡಿಸಿ ವಿ.ವಿ. ಜ್ಯೋತ್ಸ್ನಾ ರೈತರಿಗೆ ಸಲಹೆ ನೀಡಿದ್ದಾರೆ. ಆದರೆ ರೈತರು ಮಾತ್ರ ಖರೀದಿ ಮಿತಿ ಹಾಗೂ ದರ ಹೆಚ್ಚಳಕ್ಕೆ ಆಗ್ರಹಿಸಿದ್ದಾರೆ.

ಪ್ರತಿ ರೈತನಿಂದ ಗರಿಷ್ಠ 15 ಕ್ವಿಂಟಲ್ ಖರೀದಿ ಮಿತಿ ಹೇರಿರೋದು ಸರಿಯಲ್ಲ. ರೈತರು ಬೆಳೆದ ಎಲ್ಲ ಕಡಲೆಯನ್ನು ಖರೀದಿ ಕೇಂದ್ರದ ಮೂಲಕ ಖರೀದಿಸಬೇಕು. ಕಡಲೆಯ ಬೆಂಬಲ ಬೆಲೆಯನ್ನು ಕನಿಷ್ಟ 7 ಸಾವಿರ ರೂಪಾಯಿಗಳಿಗಾದ್ರೂ ಏರಿಸಬೇಕೆಂದು ಅಖಿಲ ಭಾರತ ಕಿಸಾನ್ ಸಭಾದ ಮುಖಂಡ ಭೀಮಾಶಂಕರ್ ಮಾಡಿಯಾಳ ಆಗ್ರಹಿಸಿದ್ದಾರೆ.
Published by:Latha CG
First published: