• Home
  • »
  • News
  • »
  • state
  • »
  • Bengaluru: 8 ತಿಂಗಳ ಮಗುವಿನ ಗಂಟಲಿನಲ್ಲಿತ್ತು 2 ಸೆಂ.ಮೀ ಅಗಲದ ಬಾಟಲ್​ ಕ್ಯಾಪ್!​

Bengaluru: 8 ತಿಂಗಳ ಮಗುವಿನ ಗಂಟಲಿನಲ್ಲಿತ್ತು 2 ಸೆಂ.ಮೀ ಅಗಲದ ಬಾಟಲ್​ ಕ್ಯಾಪ್!​

ಮಗುವಿನ ಗಂಟಲಿನಲ್ಲಿದ್ದ ಮುಚ್ಚಳ

ಮಗುವಿನ ಗಂಟಲಿನಲ್ಲಿದ್ದ ಮುಚ್ಚಳ

8 ತಿಂಗಳ ಗಂಡು ಮಗುವು ಮನೆಯಲ್ಲಿ ಆಟವಾಡುತ್ತಿರುವ ವೇಳೆ ಕೈಗೆ ಸಿಕ್ಕಿದ ರಬ್ಬರ್‌ನಂತಿದ್ದ ಬಾಟಲ್‌ನ ಮುಚ್ಚಳವನ್ನು ನುಂಗಿದೆ.

  • Share this:

ಬೆಂಗಳೂರು (ಡಿ.07): ಮನೆಯಲ್ಲಿ (Home) ಮಕ್ಕಳ ಕೈಗೆ ಸಣ್ಣ-ಪುಟ್ಟ ವಸ್ತುಗಳು  ಸಿಗದಂತೆ ನೋಡಿಕೊಳ್ಳ ಬೇಕು ಇಲ್ಲವಾದ್ರೆ ದೊಡ್ಡ ಅನಾಹುತಗಳೇ ಆಗುತ್ತೆ. ಬೆಂಗಳೂರಲ್ಲಿ 8 ತಿಂಗಳ ಮಗು ಮನೆಯಲ್ಲಿ ಸಿಕ್ಕ ಬಾಟಲ್‌ನ ರಬ್ಬರ್ ಮುಚ್ಚಳ (Bottle Rubber Cap) ನುಂಗಿದೆ. ಮಗು ಕ್ಯಾಪ್​ ನುಂಗಿರೋದನ್ನು ಯಾರು ನೋಡಿಲ್ಲ, ಇದು ಮಗುವಿನ ಜೀವಕ್ಕೆ  ಕುತ್ತು ತಂದಿತ್ತು. ಆರೋಗ್ಯ ಸಮಸ್ಯೆ (Health Problem) ಉಂಟಾಗಿ, ಮಗು ಆಹಾರ (Food) ಸೇವಿಸೋದನ್ನೇ ನಿಲ್ಲಿಸಿದೆ. ಪೋಷಕರು ಮಗುವನ್ನು ವೈದ್ಯರ ಬಳಿ ಕರೆದೊಯ್ದ ಬಳಿಕ ಮಗು ಬಾಟಲಿನ ಮುಚ್ಚಳ ನುಂಗಿರುವ ವಿಷಯ ಬೆಳಕಿಗೆ ಬಂದಿದೆ. 


 2 ಸೆಂ.ಮೀನ ರಬ್ಬರ್ ಮುಚ್ಚಳ


ಮನೆಯಲ್ಲಿ ಆಟವಾಡ್ತಿದ್ದ ಮಗು ಆಕಸ್ಮಿಕವಾಗಿ 2 ಸೆಂ.ಮೀನ ಬಾಟಲ್‌ನ ರಬ್ಬರ್ ಮುಚ್ಚಳ ನುಂಗಿದೆ. ಪೋಷಕರು ಮಗು ಮುಚ್ಚಳ ನುಂಗಿದೆ ಅನ್ನೋದನ್ನು ತಿಳಿಯದೇ ಆರೋಗ್ಯ ಹದಗೇಟ್ಟು, ಧ್ವನಿ ಬದಲಾದ ಬಳಿಕ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಗೆ ಕರೆದು ತಂದಿದ್ದಾರೆ.


bottle cap was in the throat of an 8 month old baby
ಮಗುವಿನ ಗಂಟಲಿನಲ್ಲಿದ್ದ ಮುಚ್ಚಳ




ಮಗುವಿನ ಪ್ರಾಣ ಉಳಿಸುವಲ್ಲಿ ವೈದ್ಯರು ಯಶಸ್ವಿ


8 ತಿಂಗಳ ಮಗುವಿನ ಗಂಟಲಿನಲ್ಲಿದ್ದ ಮುಚ್ಚಳವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ಮೂಲಕ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಎನ್‌ಟಿ ತಜ್ಞ ಡಾ. ಎಚ್‌. ಕೆ. ಸುಶೀನ್‌ ದತ್‌ ಹಾಗೂ ಡಾ ನರೇಂದ್ರನಾಥ್‌ ಅವರ ತಂಡ ಮಗುವಿಗೆ ಚಿಕಿತ್ಸೆ ನೀಡಿದೆ.


ಡಾ.ನರೇಂದ್ರನಾಥ್‌ ತಂಡದಿಂದ ಚಿಕಿತ್ಸೆ


ಯಶಸ್ವಿಯಾಗಿ ಚಿಕಿತ್ಸೆ ನೀಡಿದ ಬಳಿಕ ಮಾತಾಡಿದ ಡಾ.ನರೇಂದ್ರನಾಥ್‌, 8 ತಿಂಗಳ ಗಂಡು ಮಗುವು ಮನೆಯಲ್ಲಿ ಆಟವಾಡುತ್ತಿರುವ ವೇಳೆ ಕೈಗೆ ಸಿಕ್ಕಿದ ರಬ್ಬರ್‌ನಂತಿದ್ದ ಬಾಟಲ್‌ನ ಮುಚ್ಚಳವನ್ನು ನುಂಗಿದೆ. ಆದರೆ, ಆ ಕ್ಷಣಕ್ಕೆ ಮಗುವಿಗೆ ಯಾವುದೇ ಸಮಸ್ಯೆಯಾಗಿಲ್ಲ. ಈ ಬಗ್ಗೆ ಪೋಷಕರಿಗೂ ತಿಳಿದಿಲ್ಲ. ಆದರೆ, ಒಂದು ವಾರದೊಳಗೆ ಮಗುವಿನ ಧ್ವನಿ ಬದಲಾಗಿದೆ. ಮಗುವಿನ ಆರೋಗ್ಯ ಹದಗೆಟ್ಟಿದ್ದು, ಆಹಾರ ಸೇವಿಸುತ್ತಿರಲಿಲ್ಲ. ಗಂಟಲಿನಿಂದ ಶಿಳ್ಳೆಯ ರೀತಿಯಲ್ಲಿ ಸೌಂಡ್​ ಕೇಳಿ ಬಂದಿದೆ. ಇದರಿಂದ ಗಾಬರಿಯಾದ ಕುಟುಂಬಸ್ಥರು ಫೋರ್ಟಿಸ್‌ ಆಸ್ಪತ್ರೆಗೆ ಕರೆ ತಂದರು.


2 ಸೆಂ.ಮೀ ಅಗಲದ ಬಿಳಿ ಮುಚ್ಚಳ ಪತ್ತೆ


ಮಗುವನ್ನು ಪರೀಕ್ಷಿಸಿದ ಪ್ರಾರಂಭದಲ್ಲಿ ಶ್ವಾಸಕೋಶದ ಸಮಸ್ಯೆ ಇರಬಹುದೆಂದು ತಿಳಿದಿದ್ದೆವು. ಆದರೆ ಕೆಲ ಅನುಮಾನದಿಂದ ಲಾರಿಂಗೋಸ್ಕೋಪಿ ಮೂಲಕ ಗಂಟಲಿನ ಪರೀಕ್ಷೆ ನಡೆಸಿದಾಗ 2 ಸೆಂ.ಮೀ ಅಗಲದ ಬಿಳಿ ಆಕಾರದ ಮುಚ್ಚಳ ಇರುವುದು ತಿಳಿದು ಬಂದಿತ್ತು. ಕೂಡಲೇ ಆ ಮುಚ್ಚಳವನ್ನು ತೆಗೆದು ಹಾಕುವಲ್ಲಿ ಯಶಸ್ವಿಯಾದೆವು ಎಂದು ವೈದ್ಯರು ಹೇಳಿದ್ದಾರೆ. 


ಒಂದು ವೇಳೆ ಕ್ಯಾಪ್​ ಇರುವ ವಿಷಯ ತಿಳಿಯದೇ ಇಂಜಕ್ಷನ್‌ ನೀಡಿದ್ರೆ ಮುಂದಿನ ದಿನಗಳಲ್ಲಿ ಅನ್ನನಾಳದ ಮೇಲ್ಭಾಗ, ಎದೆಯ ಸೋಂಕು ಅಥವಾ ಶ್ವಾಸಕೋಶದ ಸೋಂಕು ಇತ್ಯಾದಿ ಬಹುದೊಡ್ಡ ಆರೋಗ್ಯ ಸಮಸ್ಯೆ ಉಂಟಾಗುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.


ಇದನ್ನೂ ಓದಿ: Crime News: ಮಕ್ಕಳಿಗೆ ಪೆಟ್ರೋಲ್ ಸುರಿದ ಆತ್ಮಹತ್ಯೆಗೆ ಯತ್ನಿಸಿದ ತಾಯಿ; ಇತ್ತ ಹಾವಿನಿಂದ ಸರಣಿ ಅಪಘಾತ


ಸಣ್ಣ ಮಕ್ಕಳ ಬಗ್ಗೆ ಇರಲಿ ಎಚ್ಚರ


ಬಳಿಕ ಮಾತಾಡಿದ ಡಾ. ಎಚ್ ಕೆ ಸುಶೀನ್ ದತ್  ಮನೆಯಲ್ಲಿ ಸಣ್ಣ ಮಕ್ಕಳ ಕೈಗೆ ಇಂತಹ ಸಣ್ಣ ವಸ್ತುಗಳು ಸಿಗದಂತೆ ಎಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯಕವಾಗಿದೆ. ಮಕ್ಕಳಿಗೆ ತಿಳಿಯದೇ ಅದನ್ನು ನುಂಗಬಹುದು. ಹೀಗಾಗಿ ಮನೆಯಲ್ಲಿ ಮಗುವಿನ ಆರೈಕೆ ಬಗ್ಗೆ ಹೆಚ್ಚು ಗಮನ ನೀಡಿ. ಈ ಮಗುವಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, ಮಗುವು ಸದ್ಯ ಆರೋಗ್ಯವಾಗಿದೆ ಎಂದು ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು