• Home
  • »
  • News
  • »
  • state
  • »
  • Bus Service: ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಆರಂಭ; ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಮುಂದಾದ MES

Bus Service: ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಆರಂಭ; ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಮುಂದಾದ MES

ಬಸ್ ಸಂಚಾರ

ಬಸ್ ಸಂಚಾರ

ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಸಾರಿಗೆ ಸಿಬ್ಬಂದಿ ಮಹಾರಾಷ್ಟ್ರಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದು, ಹಿರಿಯ ಅಧಿಕಾರಿಗಳು ಚಾಲಕ-ನಿರ್ವಾಹಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

  • Share this:

Karnataka-Maharashtra Border Issue: ಗಡಿ ವಿವಾದ ಹಿನ್ನೆಲೆ ಸ್ಥಗಿತಗೊಂಡಿದ್ದ ಕರ್ನಾಟಕ- ಮಹಾರಾಷ್ಟ್ರ (Karnataka-Maharashtra) ನಡುವಿನ ಬಸ್​ ಸಂಚಾರ (Bus Service) ಆರಂಭಗೊಂಡಿದೆ. ಕಳೆದ ಎರಡು ದಿನಗಳಿಂದ ಎರಡೂ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಎರಡು ದಿನದಿಂದ ಗಡಿ ಭಾಗದವರೆಗೆ ಮಾತ್ರ ಬಸ್​​​ಗಳು ತೆರಳುತ್ತಿದ್ದಿರಂದ ಜನರು ಕಾಲ್ನಡಿಗೆಯಲ್ಲಿ ಬಂದು ರಾಜ್ಯದ ಮತ್ತೊಂದು ವಾಹನ ಹಿಡಿಯುವಂತಾಗಿತ್ತು. ಬಸ್ ಸಂಚಾರ ಆರಂಭಗೊಂಡಿದ್ದರಿಂದ ಎರಡೂ ರಾಜ್ಯಗಳ ಗಡಿ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಶಿವಸೇನೆ (Shivsena), ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಪುಂಡರ ಉದ್ಧಟತನಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇಂದಿನಿಂದ ‌ಬೆಳಗಾವಿ (Belagavi), ಚಿಕ್ಕೋಡಿ (Chikkodi) ವಿಭಾಗದ ಬಸ್ ಸಂಚಾರ ಪುನರಾರಂಭಗೊಂಡಿವೆ.


ಬೆಳಗಾವಿ ವಿಭಾಗದಿಂದ 150 ಮತ್ತು  ಚಿಕ್ಕೋಡಿ ವಿಭಾಗದಿಂದ 250 ಬಸ್ ಸಂಚಾರ ಆರಂಭಿಸಿವೆ. ಬೆಳಗಾವಿಯಿಂದ ಮುಂಬೈ, ಥಾಣೆ, ನಾಸಿಕ್, ಪುಣೆ ಔರಂಗಾಬಾದ್, ಮೀರಜ್, ಸಿಂಧದುರ್ಗ‌ಗೆ ಬಸ್ ಸಂಚಾರ ಆರಂಭಗೊಂಡಿದೆ.


ಎರಡು ದಿನದಲ್ಲಿ 70 ಲಕ್ಷ ನಷ್ಟ


ಎರಡು ದಿನ ಬಸ್ ಸಂಚಾರ ಸ್ಥಗಿತಗೊಂಡಿದಕ್ಕೆ ಬೆಳಗಾವಿ- ಚಿಕ್ಕೋಡಿ ವಿಭಾಗಕ್ಕೆ 70 ಲಕ್ಷ ನಷ್ಟ ಆಗಿದೆ ಎಂದು ತಿಳಿದು ಬಂದಿದೆ. ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಸಾರಿಗೆ ಸಿಬ್ಬಂದಿ ಮಹಾರಾಷ್ಟ್ರಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದು, ಹಿರಿಯ ಅಧಿಕಾರಿಗಳು ಚಾಲಕ-ನಿರ್ವಾಹಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.


ಬಸ್ ಸೇವೆ ಆರಂಭಿಸದ ಮಹಾರಾಷ್ಟ್ರ


ಮಹಾರಾಷ್ಟ್ರ ‌ಸಾರಿಗೆ ಅಧಿಕಾರಿಗಳ ಜೊತೆಗೆ ಬೆಳಗಾವಿ ಅಧಿಕಾರಿಗಳ ನಿರಂತರ ಸಂಪರ್ಕದಲ್ಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಮಹಾರಾಷ್ಟ್ರ ಸಾರಿಗೆ ಇಲಾಖೆ ತನ್ನ ಬಸ್​ಗಳನ್ನು ಕರ್ನಾಟಕಕ್ಕೆ ಬಿಟ್ಟಿಲ್ಲ. ಮಹಾರಾಷ್ಟ್ರದಿಂದ ನಿತ್ಯ ಬೆಳಗಾವಿ ‌ವಿಭಾಗಕ್ಕೆ ಸುಮಾರು 69 ಬಸ್‌ ಬರುತ್ತಿದ್ದವು.


ಮಹಾಮೇಳಾವ್ ಆಯೋಜನೆಗೆ ಸಿದ್ಧತೆ


ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದಿಂದ ಉಭಯ‌ ರಾಜ್ಯಗಳಲ್ಲಿ ದ್ವೇಷಮಯ ವಾತಾವರಣ ನಿರ್ಮಾಣವಾಗಿದ್ರೆ ನಾಡದ್ರೋಹಿ ಎಂಇಎಸ್​, ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಮುಂದಾಗಿದೆ. ಡಿಸೆಂಬರ್ 19 ರಂದು ಚಳಿಗಾಲ ‌ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ್ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚಳಿಗಾಲದ ಅಧಿವೇಶನದ ದಿನ ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಮಹಾಮೇಳಾವ್‌ಗೆ ಸಿದ್ಧತೆ ನಡೆಸಿದೆ.


ಇದನ್ನೂ ಓದಿ:  Viral Video: ರೈಲು ಪಾಸ್ ಆದ್ರೂ ಬದುಕುಳಿದ ಜೀವಗಳು; ತಾಯಿ-ಮಗ ಗ್ರೇಟ್ ಎಸ್ಕೇಪ್


ಮಹಾರಾಷ್ಟ್ರ ನಾಯಕರಿಗೆ ಎಂಇಎಸ್​ ಆಹ್ವಾನ


ಮಹಾಮೇಳಾವ್‌ದಲ್ಲಿ ಪಾಲ್ಗೊಳ್ಳುವಂತೆ ಮಹಾರಾಷ್ಟ್ರ ‌ನಾಯಕರಿಗೆ ಎಂಇಎಸ್ ‌ಆಹ್ವಾನ ನೀಡಿದೆ. ಮಹಾರಾಷ್ಟ್ರ ‌ಮುಖ್ಯಮಂತ್ರಿ ಏಕನಾಥ್ ‌ಶಿಂಧೆ, ಎನ್‌ಸಿಪಿ ವರಿಷ್ಠ ಶರದ್ ಪವಾರ್, ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ್ ‌ಪಾಟೀಲ್, ಶಂಭುರಾಜ್ ದೇಸಾಯಿ, ಶಿವಸೇನೆ ‌ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ ‌ಹಲವು ನಾಯಕರಿಗೆ ಎಂಇಎಸ್ ‌ಆಹ್ವಾನ ನೀಡಿದೆ.


Border dispute Buses restart between Karnataka and Maharashtra mrq
ಬೆಳಗಾವಿ ಬಸ್ ನಿಲ್ದಾಣ


ಅನುಮತಿ ನೀಡದಂತೆ ಕನ್ನಡ ಪರ ಸಂಘಟನೆಗಳ ಆಗ್ರಹ


ಒಂದು ಪಕ್ಷದಿಂದ ತಲಾ ಇಬ್ಬರು ನಾಯಕರನ್ನು ಮಹಾಮೇಳಾವ್‌ಗೆ ಕಳುಹಿಸುವಂತೆ ಎಂಇಎಸ್ ಪತ್ರ ಮುಖೇನ ಮನವಿ ಮಾಡಿಕೊಂಡಿದೆ. ಚುನಾವಣೆ ‌ವರ್ಷ ಆಗಿರುವ ಕಾರಣಕ್ಕೆ ‌ಈ ಸಲ ಅದ್ಧೂರಿಯಾಗಿ ಮಹಾಮೇಳಾವ್ ‌ನಡೆಸಲು ಎಂಇಎಸ್​ ಪ್ಲಾನ್ ಮಾಡಿಕೊಂಡಿದೆ. ಮಹಾಮೇಳಾವ್‌ಗೆ ಅನುಮತಿ ‌ನೀಡದಂತೆ ಕನ್ನಡ ಪರ‌ ಸಂಘಟನೆಗಳು ಆಗ್ರಹಿಸಿವೆ.


ಇದನ್ನೂ ಓದಿ:  Belagavi Dispute: ಬೆಳಗಾವಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ; ಕನ್ನಡಿಗರನ್ನು ಕೆರಳಿಸಿದ ರಾಜ್ ಠಾಕ್ರೆ!


ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ


ವಿಕೃತಿ ಮರೆಯುತ್ತಿರುವ ಶಿವಸೇನೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಪುಂಡರ ವಿರುದ್ಧ ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರ ಆಕ್ರೋಶ ಮುಂದುವರೆದಿದೆ. ಮಹಾ ಪುಂಡರ ಪುಂಡಾಟಿಕೆ ಖಂಡಿಸಿ ಕರವೇ ಕಾರ್ಯಕರ್ತರಿಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಮಹಾರಾಷ್ಟ್ರ ಪುಂಡರ ದೌರ್ಜನ್ಯ ಖಂಡಿಸಿದರು.

Published by:Mahmadrafik K
First published: