HOME » NEWS » State » BOMBAY TEAM MINISTER WORRIED ON RAMESH JARKIHOLI RESIGNATION SESR

Ramesh Jarkiholi: ರಮೇಶ್​ ಜಾರಕಿಹೊಳಿ ರಾಜೀನಾಮೆ; ಸಿಎಂ ಭೇಟಿ ಮಾಡಿದ ಮಿತ್ರಮಂಡಳಿ ಸಚಿವರು

ವಲಸಿಗ ಬಿಜೆಪಿ ನಾಯಕರಲ್ಲಿ  ಅತ್ಯಂತ ಪ್ರಭಾವಿ ಸಚಿವರಾಗಿದ್ದ ರಮೇಶ್​ ಜಾರಕಿಹೊಳಿ ರಾಜೀನಾಮೆ ಮಿತ್ರ ಮಂಡಳಿಯ ಇನ್ನಿತರನ್ನು ಕಂಗೆಡಿಸಿದೆ

news18-kannada
Updated:March 4, 2021, 5:59 PM IST
Ramesh Jarkiholi: ರಮೇಶ್​ ಜಾರಕಿಹೊಳಿ ರಾಜೀನಾಮೆ; ಸಿಎಂ ಭೇಟಿ ಮಾಡಿದ ಮಿತ್ರಮಂಡಳಿ ಸಚಿವರು
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
  • Share this:
ಬೆಂಗಳೂರು (ಮಾ. 4): ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದವರು ರಮೇಶ್​ ಜಾರಕಿಹೊಳಿ. ಸದ್ಯ ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡಿರುವ ರಮೇಶ್​ ಜಾರಕಿಹೊಳಿ ನೈತಿಕ ಹೊಣೆಯೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಲಸಿಗ ಬಿಜೆಪಿ ನಾಯಕರಲ್ಲಿ  ಅತ್ಯಂತ ಪ್ರಭಾವಿ ಸಚಿವರಾಗಿದ್ದ ರಮೇಶ್​ ಜಾರಕಿಹೊಳಿ ರಾಜೀನಾಮೆ ಮಿತ್ರ ಮಂಡಳಿಯ ಇನ್ನಿತರನ್ನು ಕಂಗೆಡಿಸಿದೆ. ಇದೇ ಹಿನ್ನಲೆ ಇಂದು ಮಿತ್ರ ಮಂಡಳಿಯ ಪ್ರಮುಖ ಸಚಿವರುಗಳಾದ  ಸುಧಾಕರ್, ಎಸ್ ಟಿ ಸೋಮಶೇಖರ್, ನಾರಾಯಣಗೌಡ, ಎಂಟಿ ಬಿ ನಾಗರಾಜ್, ಬಿಸಿ ಪಾಟೀಲ್ ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.ಕಲಾಪದ ಮಧ್ಯೆ ಮಧ್ಯಾಹ್ನದ ಭೋಜನ ವಿರಾಮ ನಾಯಕರುಗಳು ಸಿಎಂ ಜೊತೆ ಸಭೆ ನಡೆಸಿದ್ದಾರೆ. 

ಇಷ್ಟೆ ಅಲ್ಲದೇ ನಿನ್ನೆ ರಾತ್ರಿ ಕೂಡಕೆಲ ಶಾಸಕರು ಡಿನ್ನರ್​ ನೆಪದಲ್ಲಿ ಒಟ್ಟುಗೂಡಿದ್ದು,  ರಮೇಶ್​ ಜಾರಕಿಹೊಳಿ ಸಿಡಿ ಸ್ಟೋಟದ ವಿಚಾರ ಚರ್ಚೆ ನಡೆಸಿದ್ದಾರೆ.

ಸರ್ಕಾರದಲ್ಲಿ ಮಿತ್ರಮಂಡಳಿಯ ನಾಯಕರಾಗಿದ್ದ ರಮೇಶ್​ ಜಾರಕಿಹೊಳಿ ರಾಜೀನಾಮೆಯಿಂದ ಉಳಿದ ಸಚಿವರ ಸ್ಥಾನಮಾನಕ್ಕೆ ಧಕ್ಕೆ ಬರಬಹುದಾ ಎಂಬ ಆತಂಕ ಕೂಡ ಮೂಡಿದೆ. ಅಲ್ಲದೇ ಈಗಾಗಲೇ ಮೂಲ ಬಿಜೆಪಿಗರು, ವಲಸಿಗರ ಮೇಲೆ ಸಿಟ್ಟಿರುವ ಹಿನ್ನಲೆ ತಮ್ಮ ಪ್ರಾಬಲ್ಯ ಕಡಿಮೆಯಾಗುತ್ತದೆ ಎಂಬ ಅನುಮಾನ ವ್ಯಕ್ತವಾಗಿದೆ. ಮಿತ್ರಮಂಡಳಿಯ ಯಾವುದೇ ಸಮಸ್ಯೆಗೂ ಬಗೆಹರಿಸುತ್ತಿದ್ದ ರಮೇಶ್​ ನಾಯಕತ್ವ ಈಗ ಎದ್ದು ಕಾಣುತ್ತಿದ್ದು ಮುಂದೆ ನಮ್ಮ ಅಹವಾಲುಗಳನ್ನು ಯಾರ ಬಳಿ ಚರ್ಚಿಸುವುದು ಎಂಬ ಚಿಂತೆ ನಾಯಕರಲ್ಲಿ ಶುರವಾಗಿದೆ. ಇದೇ ಕಾರಣದಿಂದ ಈ ಎಲ್ಲಾ ವಿಚಾರಗಳ ಕುರಿತು ಮಿತ್ರಮಂಡಳಿ ಸಚಿವರು ಸಿಎಂ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

ಇದನ್ನು ಓದಿ: ಸುಲಭ ಜೀವನ ಗುಣಮಟ್ಟ ಸೂಚ್ಯಂಕ; ಬೆಂಗಳೂರಿಗೆ ಅಗ್ರಸ್ಥಾನ

ಸರ್ಕಾರ ರಚನೆಗೆ ಸಹಾಯ ಮಾಡಿದ ಹಿನ್ನಲೆ ಮಿತ್ರ ಮಂಡಳಿ ಬಗ್ಗೆ ಸಿಎಂ ಒಲವು ಹೊಂದಿದ್ದು, ಸಚಿವ ಸ್ಥಾನ ಕೊಡಿಸುವಲ್ಲಿ ಅವರೇ ಪ್ರಧಾನ ಪಾತ್ರವಹಿಸಿದ್ದರು. ಈಗ ತಮ್ಮ ನಾಯಕರು ರಾಜೀನಾಮೆ ನೀಡಿದ ಹಿನ್ನಲೆ ಸಿಎಂ ಅವರೇ ರಕ್ಷಣೆಗೆ ನಿಲ್ಲಬೇಕು ಎಂಬ ಕೂಗು ಕೂಡ ಮುಂದಿಟ್ಟಿದ್ದಾರೆ ಎನ್ನಲಾಗಿದೆ.ರಮೇಶ್​ ಜಾರಕಿಹೊಳಿಯಿಂದ ಸರ್ಕಾರಕ್ಕೆ ಮುಜುಗರಕ್ಕೆ ಇಡಾಗಿದ್ದು, ಇದು ಮೂಲ ಬಿಜೆಪಿಗರಿಗೆ ವಲಸಿಗರ ಮೇಲೆ ಸಿಕ್ಕ ಬಹು ದೊಡ್ಡ ಅಸ್ತ್ರವಾಗಿದೆ. ಈ ಹಿನ್ನಲೆ ಮಿತ್ರಮಂಡಳಿ ಪ್ರಾಬಲ್ಯ ಕಡಿಮೆಯಾಗಿ, ಸಚಿವ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತೆ ಇಲ್ಲ. ಈ ಹಿನ್ನಲೆ ಈ ಎಲ್ಲಾವುಗಳನ್ನು ಗಮನದಲ್ಲಿರಿಸಿ ಮಿತ್ರಮಂಡಳಿ ಸಚಿವರು ಸಿಎಂ ಅವರೊಂದಿಗೆ ಗಂಭೀರ ಚರ್ಚೆ ನಡೆಸಿದ್ದಾರೆ.
Published by: Seema R
First published: March 4, 2021, 5:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories