Bomb Threat: ಬೆಂಗಳೂರಿನ ಮತ್ತೊಂದು ಸ್ಕೂಲ್​ಗೆ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಮೇಲ್; ಶಾಲೆಯಲ್ಲಿ ಪೊಲೀಸರ ಪರಿಶೀಲನೆ

ಪ್ರತಿಷ್ಠಿತ ಶಾಲೆ ಬಿಷಪ್​ ಕಾಟನ್​ ಸ್ಕೂಲ್​ಗೆ ಬೆದರಿಕೆ ಮೇಲ್​ ಬಂದಿದೆ. ಮೇಲ್​ ನೋಡ್ತಿದ್ದಂತೆ ಶಾಲೆಯ ಆಡಳಿತ ಮಂಡಳಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಅಲರ್ಟ್​ ಆದ ಕಬ್ಬನ್​ ಪಾರ್ಕ್​ ಪೊಲೀಸರು ( Cubbon Park Police) ಸ್ಥಳಕ್ಕೆ ದೌಡಾಯಿಸಿದ್ದು, ಶಾಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.

ಬಿಷಪ್​ ಕಾಟನ್​ ಸ್ಕೂಲ್​

ಬಿಷಪ್​ ಕಾಟನ್​ ಸ್ಕೂಲ್​

  • Share this:
ಬೆಂಗಳೂರು (ಏ.11): ಎರಡು ದಿನದ ಹಿಂದಷ್ಟೆ 6 ಶಾಲೆಗಳಿಗೆ ಬಾಂಬ್​ ಇಟ್ಟಿರೋದಾಗಿ ಅನಾಮಿಕ ಬೆದರಿಕೆ ಮೇಲ್​ (Threat Mail) ಬಂದಿತ್ತು, ಇದೀಗ ಮತ್ತೆ ಬೆದರಿಕೆ ಮೇಲ್​ ಬಂದಿದೆ. ಪ್ರತಿಷ್ಠಿತ ಶಾಲೆ ಬಿಷಪ್​ ಕಾಟನ್​ ಸ್ಕೂಲ್​ಗೆ (Bishop Cotton School) ಬೆದರಿಕೆ ಮೇಲ್​ ಬಂದಿದೆ. ಮೇಲ್​ ನೋಡ್ತಿದ್ದಂತೆ ಶಾಲೆಯ ಆಡಳಿತ ಮಂಡಳಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಅಲರ್ಟ್​ ಆದ ಕಬ್ಬನ್​ ಪಾರ್ಕ್​ ಪೊಲೀಸರು ( Cubbon Park Police) ಸ್ಥಳಕ್ಕೆ ದೌಡಾಯಿಸಿದ್ದು, ಶಾಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳಿಗೆ ಪರೀಕ್ಷೆ (Exam) ನಡೆಯುತ್ತಿರೋ ಸಮಯದಲ್ಲಿ ಇಂತಹ ಬಾಂಬ್​ ಬೆದರಿಕೆ (Bomb Threat) ಮೇಲ್​ಗಳು ಬರುತ್ತಿರೋದು ಶಾಲೆ ಹಾಗೂ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.

ತಡವಾಗಿ ಮೇಲ್​ ಚೆಕ್​ ಮಾಡಿದ ಸಿಬ್ಬಂದಿ

8 ನೇ ತಾರೀಖಿನಂದೇ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಆದ್ರೆ ಶಾಲಾ ಆಡಳಿತ ಮಂಡಳಿ ಇಂದು ಮೇಲ್​ ಚೆಕ್​ ಮಾಡಿದಾಗ ವಿಷಯ ತಿಳಿದಿದೆ ಕೂಡಲೇ ಕಬ್ಬನ್​ ಪಾರ್ಕ್​ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಶಾಲಾ ಆಡಳಿತ ಮಂಡಳಿ ಇಂದು ಮೇಲ್ ನೋಡಿದ್ದಾರೆ. ನಾವು ಸಹ ಪರಿಶೀಲನೆ ನಡೆಸುತ್ತಿರೋದಾಗಿ ತಿಳಿದ್ದಾರೆ.

ಏಪ್ರಿಲ್​ 8 ರಂದು 6 ಶಾಲೆಗಳಿಗೆ ಬೆದರಿಕೆ ಮೇಲ್​

ಬೆಂಗಳೂರು, (ಏ. 08): ರಾಜಧಾನಿಯ ಆರು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಿಕ ಇ ಮೇಲ್ ಮೂಲಕ ಬೆದರಿಕೆ ಹಾಕಲಾಗಿತ್ತು ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ಅರು ಶಾಲೆಗಳಲ್ಲಿ ತಪಾಸಣೆ ನಡೆಸಿದ್ರು ಪೋಷಕರು ಮತ್ತು ವಿದ್ಯಾರ್ಥಿಗಳು ಅತಂಕಕ್ಕೆ ಒಳಗಾಗಿದ್ದರು.

ಇದನ್ನೂ ಓದಿ: Online Fraud: ನಿಮಗೆ ಕರೆ ಮಾಡಿದ ಚಂದಾದಾರರು ನಿಮ್ಮ ಖಾತೆಯಿಂದ 43 ಸಾವಿರ ಕದ್ದಿದ್ದಾರೆ!

ಬಾಂಬ್ ಪತ್ತೆ ದಳದೊಂದಿಗೆ ನಡೆದಿತ್ತು ತಪಾಸಣೆ

11 ಗಂಟೆಗೆ ಬೆದರಿಕೆ ಇ ಮೇಲ್ : barons.masarfm@gmail.comಎಂಬ ಇ ಮೇಲ್ ನಿಂದ ಬೆದರಿಕೆ ಪತ್ರವನ್ನು ರವಾನಿಸಲಾಗಿದೆ. ಹನ್ನೊಂದು ಗಂಟೆಗೆ ಬೆದರಿಕೆ ಇ ಮೇಲ್ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರಿನ ಆರು ಶಾಲೆಗಳಿಗೆ ಬಾಂಬ್ ಪತ್ತೆ ದಳದೊಂದಿಗೆ ಪೊಲೀಸರು ತೆರಳಿ ತಪಾಸಣೆ ನಡೆಸಿದರು. ಶಾಲೆಗಳಿಗೆ ಬಾಂಬ್ ಇಡಲಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಆರು ಶಾಲೆಗಳ ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿ ಶಾಲೆಗಳಿಂದ ಹೊರ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಆರು ಖಾಸಗಿ ಶಾಲೆಗಳಿಗೆ ಬೆದರಿಕೆ

ಮಹದೇವಪುರದ ಗೋಪಾಲನ್ ಇಂಟರ್ ನ್ಯಾಷನಲ್ ಶಾಲೆ, ಗೋವಿಂದಪುರದಲ್ಲಿರುವ ಇಂಡಿಯನ್ ಪಬ್ಲಿಕ್ ಶಾಲೆ, ಹೆಬ್ಬಗೋಡಿಯಲ್ಲಿರುವ ಎಬ್‌ನೈಸರ್ ಇಂಟರ್ ನ್ಯಾಷನಲ್ ಸ್ಕೂಲ್, ವರ್ತೂರು ಬಳಿ ಇರುವ ಡೆಲ್ಲಿ ಪಬ್ಲಿಕ್ ಶಾಲೆ, ಹೆಣ್ಣೂರು ಬಳಿಯಿರುವ ವಿನ್ಸೆಂಟ್ ಪಲ್ಲೋಟಿ ಶಾಲೆ ಹಾಗೂ ಮತ್ತೊಂದು ಖಾಸಗಿ ಶಾಲೆ ಬೆದರಿಕೆಗೆ ಒಳಗಾಗಿದ್ದವು. ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇಮೇಲ್ ಬಂದಿರುವ ವಿಚಾರವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್  ಅವರೇ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ರು.

ಇದನ್ನೂ ಓದಿ: PSI Exams Scam: ಮೂರು ಬಾರಿ ಪರೀಕ್ಷೆಯಲ್ಲಿ ಫೇಲ್, 4ನೇ ಬಾರಿ 20 ಪ್ರಶ್ನೆಗೆ ಉತ್ತರಿಸಿ 121 ಅಂಕ ಪಡೆದ!

ಚಂದ್ರು ಕೊಲೆ ಪ್ರಕರಣ, ಬಿಜೆಪಿ ವಿರುದ್ಧ ಭಾಸ್ಕರ್​ ರಾವ್​ ಅಸಮಾಧಾನ

ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಂದ್ರಶೇಖರ್ ಅಲಿಯಾಸ್ ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ಹೇಳಿಕೆಗೆ ಮಾಜಿ ಬೆಂಗಳೂರು ಪೊಲೀಸ್ ಆಯುಕ್ತ, ಎಎಪಿ ಮುಖಂಡ ಭಾಸ್ಕರ್ ರಾವ್ ಅಸಮಾಧಾನ ಹೊರ ಹಾಕಿದ್ದಾರೆ.

ಚಂದ್ರು ಕೊಲೆ ಬೈಕ್ ಟಚ್ ಆಗಿದ್ದರಿಂದ ನಡೆದಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದರು. ಆದ್ರೆ ಚಂದ್ರು ಗೆಳೆಯ ಸೈಮನ್ ದಿಢೀರ್ ತನ್ನ ಹೇಳಿಕೆ ಬದಲಾಯಿಸಿ, ಉರ್ದು ಮಾತನಾಡದ್ದಕ್ಕೆ ಕೊಲೆ ನಡೆದಿದೆ ಎಂದು ಹೇಳಿದ್ದರಿಂದ ಬಿಜೆಪಿ ನಾಯಕರ ಕಮಲ್ ಪಂತ್ ವಿರುದ್ಧ ಮುಗಿಬಿದ್ದಿದ್ದರು. ಬಿಜೆಪಿ ಕೆಲ ನಾಯಕರು ಕಮಿಷನರ್ ಕಮಲ್ ಪಂತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಬಿಜೆಪಿಯ ರವಿಕುಮಾರ್, ಕಮಿಷನರ್ ಅವರನ್ನ ಸುಳ್ಳುಗಾರ ಎಂದು ಹೇಳಿದ್ದರು. ಈ ಹೇಳಿಕೆಗೆ ಭಾಸ್ಕರ್ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.
Published by:Pavana HS
First published: