• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bomb Threat Call: ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಕರೆ! "ಏನ್ ಮಾಡ್ಕೋತೀರಿ" ಎಂದ ಅಪರಿಚಿತ ಯಾರು?

Bomb Threat Call: ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಕರೆ! "ಏನ್ ಮಾಡ್ಕೋತೀರಿ" ಎಂದ ಅಪರಿಚಿತ ಯಾರು?

KIAL ಸಂಗ್ರಹ ಚಿತ್ರ

KIAL ಸಂಗ್ರಹ ಚಿತ್ರ

ಮುಂಜಾನೆ ಏರ್‌ಪೋರ್ಟ್‌ನ ಪೊಲೀಸ್‌ ಕಂಟ್ರೋಲ್‌ ರೂಂಗೆ (Police Control room) ಕರೆ ಮಾಡಿದ್ದಾನೆ. “ಏರ್‌ ಪೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದೇವೆ” ಅಂತ ಹೇಳಿದ್ದಾನೆ. “ಈಗಲೇ ಬಾಂಬ್ ಬ್ಲಾಸ್ಟ್ (Blast) ಆಗುತ್ತೆ, ಏನು ಮಾಡ್ಕೋತೀರಿ” ಅಂತ ಬೆದರಿಸಿ, ಕಾಲ್ ಕಟ್ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಏರ್‌ ಪೋರ್ಟ್‌ನಲ್ಲಿ ತೀವ್ರ ಪರಿಶೀಲನೆ ನಡೆಸಲಾಯ್ತು.

ಮುಂದೆ ಓದಿ ...
  • Share this:

ಬೆಂಗಳೂರು: ದೇವನಹಳ್ಳಿಯಲ್ಲಿ (Devanahalli) ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಬಾಂಬ್ ಬೆದರಿಕೆ ಕರೆ (Bomb threat call) ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬ (Unknown person) ಬೆಳ್ಳಂ ಬೆಳಗ್ಗೆ ಏರ್‌ಪೋರ್ಟ್‌ನ ಪೊಲೀಸ್‌ ಕಂಟ್ರೋಲ್‌ ರೂಂಗೆ (Police Control room) ಕರೆ ಮಾಡಿದ್ದಾನೆ. “ಏರ್‌ ಪೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದೇವೆ” ಅಂತ ಹೇಳಿದ್ದಾನೆ. “ಈಗಲೇ ಬಾಂಬ್ ಬ್ಲಾಸ್ಟ್ (Blast) ಆಗುತ್ತೆ, ಏನು ಮಾಡ್ಕೋತೀರಿ” ಅಂತ ಬೆದರಿಸಿ, ಕಾಲ್ ಕಟ್ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಏರ್‌ ಪೋರ್ಟ್‌ನಲ್ಲಿ ತೀವ್ರ ಪರಿಶೀಲನೆ ನಡೆಸಲಾಯ್ತು. ಇದರಿಂದ ಏರ್‌ಪೋರ್ಟ್‌ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಪ್ರಯಾಣಿಕರು ಆತಂಕಕ್ಕೆ ಒಳಗಾದರು.


ಮುಂಜಾನೆ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ


ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್‌ಪೋರ್ಟ್‍ನಲ್ಲಿ ಬಾಂಬ್ ಇಟ್ಟಿರೋದಾಗಿ ಅಪರಿಚಿತನಿಂದ ಬೆದರಿಕೆ ಕರೆ ಬಂದಿದೆ. ಪರಿಣಾಮ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇಂದು ಮುಂಜಾನೆ 03:30 ರ ಸುಮಾರಿಗೆ ಏರ್‌ ಪೋರ್ಟ್‌ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರೋದಾಗಿ ಹೇಳಿದ್ದಾನೆ. “ಈಗಲೇ ಬಾಂಬ್ ಬ್ಲಾಸ್ಟ್ ಆಗುತ್ತೆ, ಏನು ಮಾಡ್ಕೋತೀರಿ” ಅಂತ ಬೆದರಿಸಿ, ಕಾಲ್ ಕಟ್ ಮಾಡಿದ್ದಾನೆ.


2 ಗಂಟೆಗೂ ಅಧಿಕ ಕಾಲ ಏರ್‌ಪೋರ್ಟ್‌ನಲ್ಲಿ ತಪಾಸಣೆ


ಬಾಂಬ್ ಬೆದರಿಕೆ ಕಾಲ್ ಬರುತ್ತಿದ್ದಂತೆ ಏರ್ ಪೋರ್ಟ್ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು, ಸಿಐಎಸ್ಎಪ್ ಭದ್ರತಾ ಪಡೆ ಹಾಗೂ ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ ತೀವ್ರ ತಪಾಸಣೆ ನಡೆಸಿದೆ. ಈಶಾನ್ಯ ವಿಭಾಗ ಡಿಸಿಪಿ ಅನೂಪ್ ಶೆಟ್ಟಿ ಅವರು, ಬಾಂಬ್ ನಿಷ್ಟ್ರಿಯ ದಳ, ಶ್ವಾನ ದಳ ಸ್ಥಳಕ್ಕೆ ಆಗಮಿಸಿದೆ. ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ ಮಾಡಲಾಯ್ತು. ಸುಮಾರು 2 ಗಂಟೆಗೂ ಅಧಿಕ ಕಾಲ ತಪಾಸಣೆ ನಡೆಸಲಾಯ್ತು. ಏರ್ ಲೈನ್ಸ್ ಗೇಟ್‌ಗಳು ಸೇರಿದಂತೆ ಏರ್ಪೋಟ್ ಟರ್ಮಿನಲ್ ನಲ್ಲಿ ತೀವ್ರ ತಪಾಸಣೆ ನಡೆಸಲಾಯ್ತು.


ಇದನ್ನೂ ಓದಿ: Land Slides: ಉತ್ತರ ಕನ್ನಡದಲ್ಲಿ ಮತ್ತೆ ಭೂ ಕುಸಿತದ ಭೀತಿ; ಈ ವರ್ಷ ಈ 5 ಪ್ರದೇಶಗಳಿಗೆ ಅಪಾಯವಂತೆ!


ಇದೊಂದು ಹುಸಿ ಬಾಂಬ್ ಕರೆ ಅಂತ ಸ್ಪಷ್ಟಪಡಿಸಿದ ಪೊಲೀಸರು


2 ಗಂಟೆಗಳ ಕಾಲ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಏರ್‌ಪೋರ್ಟ್‌ನ ಮೂಲೆ ಮೂಲೆಯನ್ನು ಹುಡುಕಾಡಿದ್ದಾರೆ. ಕೊನೆಗೆ ಇದೊಂದು ಹುಸಿ ಬಾಂಬ್ ಕರೆ ಎನ್ನುವುದು ಗೊತ್ತಾಗಿದೆ. ಬಳಿಕ ಸಿಬ್ಬಂದಿ, ಪೊಲೀಸರು ನೆಮ್ಮದಿಯ  ನಿಟ್ಟುಸಿರು ಬಿಟ್ಟಿದ್ದಾರೆ.


ನೆಮ್ಮದಿಯ ನಿಟ್ಟುಸಿರು ಬಿಟ್ಟ ಪ್ರಯಾಣಿಕರು


ಅಪರಿಚಿತನ ಬಾಂಬ್ ಬೆದರಿಕೆ ಕಾಲ್‌ನಿಂದ ಏರ್ ಪೋರ್ಟ್‌ನಲ್ಲಿ ಕೆಲಕಾಲ ತೀವ್ರ ಆತಂಕ ಹಾಗೂ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಬಳಿಕ ಇದು ಹುಸಿ ಬಾಂಬ್ ಕರೆ ಅಂತ ಗೊತ್ತಾಗುತ್ತಿದ್ದಂತೆ ವಾತಾವರಣ ತಿಳಿಯಾಯ್ತು.


ಇದನ್ನೂ ಓದಿ: Ola Cabs: ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ, ಪ್ರಯಾಣಿಕನನ್ನು ಮಾರ್ಗ ಮಧ್ಯೆ ಬಿಟ್ಟು ಹೋದ ಓಲಾ ಕ್ಯಾಬ್! ಮುಂದೆ ಆಗಿದ್ದೇನು?


ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ಅಪರಿಚಿತನಿಗಾಗಿ ಶೋಧ


ಇದೀಗ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದವನಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಆತ ಯಾರು, ಎಲ್ಲಿಂದ ಕರೆ ಮಾಡಿದ್ದ, ಆತ ಸುಮ್ಮನೆ ಬೆದರಿಕೆ ಹಾಕಿದ್ದು ಯಾಕೆ? ಇದರ ಹಿಂದೆ ಬೇರೆ ಯಾರಿದ್ದಾರೇ ಅವರ ಉದ್ದೇಶವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ.

Published by:Annappa Achari
First published: