ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್; ಯಶಸ್ವಿಯಾಗಿ ಸ್ಪೋಟಿಸಿ ಆತಂಕ ದೂರ ಮಾಡಿದ ಪೊಲೀಸರು

ಕೆಂಜಾರೆ ಮೈದಾನದಲ್ಲಿ ಮರಳಿನ ಮೂಟೆಗಳ ನಡುವೆ ಬಾಂಬ್ ಇಟ್ಟು ಹೆಚ್ಚು ಅಪಾಯಕಾರಿಯಲ್ಲದ ರೀತಿಯಲ್ಲಿ ಸಂಜೆ 5.30ರ ಸುಮಾರಿಗೆ ಸ್ಪೋಟಕವನ್ನು ಸ್ಪೋಟಿಸಲಾಗಿದೆ. ಇದರಿಂದ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. 

ಸ್ಪೋಟಕವನ್ನು ಸಿಡಿಸಿರುವುದು.

ಸ್ಪೋಟಕವನ್ನು ಸಿಡಿಸಿರುವುದು.

  • Share this:
ಮಂಗಳೂರು (ಜನವರಿ 20); ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಂದು ಒಂದರ ಹಿಂದೊಂದರಂತೆ ಪತ್ತೆಯಾದ ಸಜೀವ ಬಾಂಬ್ ಇಡೀ ರಾಜ್ಯವನ್ನು ತಲ್ಲಣಕ್ಕೆ ದೂಡಿತ್ತು. ಹೀಗೆ ಪತ್ತೆಯಾದ ಸ್ಪೋಟಕವನ್ನು ನಿಷ್ಕ್ರಿಯಗೊಳಿಸಲು ಬೆಂಗಳೂರಿನಿಂದ ಬಾಂಬ್​ ನಿಷ್ಕ್ರಿಯ ದಳದ ಸಿಬ್ಬಂದಿಗಳು ಕರಾವಳಿಗೆ ತೆರಳಿದ್ದರು. ಆದರೆ, ಪೊಲೀಸರು ಇದೀಗ ಸ್ಫೋಟಕವನ್ನು ನಿಷ್ಕ್ರಿಯಗೊಳಿಸುವ ಬದಲು ​ಸ್ಪೋಟಿಸುವ ಮೂಲಕ ಆತಂಕವನ್ನು ದೂರ ಮಾಡಿದ್ದಾರೆ.

ಬೆಳಗ್ಗೆ ವಿಮಾನ ನಿಲ್ದಾಣದ ಪ್ರಯಾಣಿಕರು ವಿಶ್ರಾಂತಿ ಪಡೆಯುವ ಸ್ಥಳದಲ್ಲಿ ಲ್ಯಾಪ್​ಟಾಪ್​ ಬ್ಯಾಗ್​ನಲ್ಲಿ ಒಂದು ಸಜೀವ ಬಾಂಬ್​ ಪತ್ತೆಯಾಗಿದ್ದರೆ, ಮಧ್ಯಾಹ್ನದ ವೇಳೆಗೆ ಹೈದರಾಬಾದ್​ಗೆ ತೆರಳಲು ಸಿದ್ಧವಾಗಿದ್ದ ವಿಮಾನದಲ್ಲಿ ಮತ್ತೊಂದು ಬಾಂಬ್ ಪತ್ತೆಯಾಗಿತ್ತು. ವಿಮಾನ ನಿಲ್ದಾಣದಲ್ಲಿ ಇನ್ನೊಂದು ಕಡೆಯೂ ಬಾಂಬ್ ಇಡಲಾಗಿದ್ದು ಅದರ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.

ಈ ಸ್ಪೋಟಕವನ್ನು ಆರ್​ಡಿಎಕ್​ ನಿಂದ ಸಿದ್ಧಪಡಿಸಿರುವ ಸುಧಾರಿತ ಸ್ಪೋಟಕ ಎಂದು ಊಹಿಸಲಾಗಿದ್ದು, ಇದನ್ನು ನಿಷ್ಕ್ರಿಯಗೊಳಿಸಲು ಮಂಗಳೂರಿನ ಕೆಂಜಾರ್​ ಮೈದಾನಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಆದರೆ, ನಿಷ್ಕ್ರಿಯಗೊಳಿಸುವ ಸಂದರ್ಭದಲ್ಲಿ ಬಾಂಬ್​ ಸ್ಫೋಟಕ್ಕೊಳಗಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಪೊಲೀಸ್ ಇಲಾಖೆ ಅದನ್ನು ಸ್ಪೋಟಿಸಲು ಮುಂದಾಗಿತ್ತು.

ಕೆಂಜಾರೆ ಮೈದಾನದಲ್ಲಿ ಮರಳಿನ ಮೂಟೆಗಳ ನಡುವೆ ಬಾಂಬ್ ಇಟ್ಟು ಹೆಚ್ಚು ಅಪಾಯಕಾರಿಯಲ್ಲದ ರೀತಿಯಲ್ಲಿ ಸಂಜೆ 5.30ರ ಸುಮಾರಿಗೆ ಸ್ಪೋಟಕವನ್ನು ಸ್ಪೋಟಿಸಲಾಗಿದೆ. ಇದರಿಂದ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಮಂಗಳೂರಿನ ಇಂಡಿಗೋ ವಿಮಾನದಲ್ಲಿ ಮತ್ತೊಂದು ಬಾಂಬ್​ ಪತ್ತೆ; ಕರಾವಳಿ ತಲ್ಲಣ
First published: