ಶ್ರೀಮತಿ ಸನ್ನಿ ಲಿಯೋನ್​ ಯುವಕರ ಸಂಘ: ಸದಸ್ಯರಾಗಬೇಕಾದ್ರೆ ರಾಯಚೂರಲ್ಲಿದೆ ಸುವರ್ಣಾವಕಾಶ!

ಬಾಲಿವುಡ್ ನಟಿ  ಸನ್ನಿ ಲಿಯೋನ್ ಹೆಸರಿನಲ್ಲೊಂದು ಯುವಕ ಸಂಘವೊಂದು‌ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹುಡಾ ಗ್ರಾಮದಲ್ಲಿ ಹುಟ್ಟಿಕೊಂಡಿದೆ

news18-kannada
Updated:January 15, 2020, 4:55 PM IST
ಶ್ರೀಮತಿ ಸನ್ನಿ ಲಿಯೋನ್​ ಯುವಕರ ಸಂಘ: ಸದಸ್ಯರಾಗಬೇಕಾದ್ರೆ ರಾಯಚೂರಲ್ಲಿದೆ ಸುವರ್ಣಾವಕಾಶ!
ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿಯ ಫ್ಲೆಕ್ಸ್
  • Share this:
ರಾಯಚೂರು(ಜ.15) :  ಮಡಿವಂತರಿಗೆ ಆಕೆ ಹೆಸರು ಕೇಳಿದರೆ ಸಾಕು ಮೂಗು ಮುರಿಯುತ್ತಾರೆ, ಈಗ ಮೂಗು ಮುರುಯುವಂಥ ಕೆಲಸದಿಂದ ದೂರ ಉಳಿದು ಸಮಾಜ ಸೇವೆಗೆ ಮುಂದಾಗಿದ್ದಾಳೆ, ಆಕೆಯ ಹೆಸರಿನಲ್ಲೊಂದು ಯುವಕ ಮಂಡಳವೊಂದು ಹುಟ್ಟಿಕೊಂಡಿದೆ.

ಬಾಲಿವುಡ್ ನಟಿ  ಸನ್ನಿ ಲಿಯೋನ್ ಹೆಸರಿನಲ್ಲೊಂದು ಯುವಕ ಸಂಘವೊಂದು‌ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹುಡಾ ಗ್ರಾಮದಲ್ಲಿ ಹುಟ್ಟಿಕೊಂಡಿದೆ. ಗ್ರಾಮದ ಕೆಲವು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ವಿವಿಧ ಸಣ್ಣ ಪುಟ್ಟ ಕೆಲಸ ಮಾಡುವ ಯುವಕರು ಸೇರಿಕೊಂಡು ಎರಡು ತಿಂಗಳ ಹಿಂದೆ ಶ್ರೀಮತಿ ಸನ್ನಿ‌ ಲಿಯೋನ್ ಯುವಕ ಮಂಡಳ ಎಂಬ ಹೆಸರಿನಲ್ಲಿ ಸಂಘ ರಚಿಸಿಕೊಂಡಿದ್ದಾರೆ.

sunny leone
ಯುವಕ ಮಂಡಳಿಯ ಫ್ಲೆಕ್ಸ್


ಈ ಸಂಘ ಮಾಡಿದಾಗ ಆರಂಭದಲ್ಲಿ ಗ್ರಾಮ ಹಿರಿಯರು ವಿರೋಧಿಸಿದರು, ಆದರೆ ಆಕೆಯು ನೀಲಿ ಚಿತ್ರಗಳಲ್ಲಿ ನಟಿಸುವುದು ಬಿಟ್ಟು 7 ವರ್ಷವಾಗಿದೆ, ಈಗ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿನ ನೆರೆ ಸಂತ್ರಸ್ತರಿಗೆ 10 ಕೋಟಿ ರೂಪಾಯಿ ಪರಿಹಾರ ನೀಡಿದ್ದಾಳೆ, ಅನಾಥರಿಗಾಗಿ ಆಶ್ರಮ ನಡೆಸುತ್ತಿದ್ದಾರೆ, ದೇಶದಲ್ಲಿ ಸನ್ನಿ ಲಿಯೋನ್ ಫ್ಯಾನ್ ಫಾಲೋವರ್ ಅಧಿಕವಾಗಿದ್ದಾರೆ, ಈ ಹಿನ್ನೆಲೆಯಲ್ಲಿ ಆಕೆಯ ಹೆಸರಿಟ್ಟುಕೊಂಡು ಯುವಕ ಮಂಡಳ ಸ್ಥಾಪಿಸಿದ್ದಾಗಿ ಸಂಘದ ಅಧ್ಯಕ್ಷ ಗೋಪಾಲ ಹೇಳುತ್ತಾರೆ.


ಇದನ್ನೂ ಓದಿ : ಸಿಎಂ ಯಡಿಯೂರಪ್ಪ ಮತ್ತು ಸಂತೋಷ್ ಜಗಳದಿಂದ ರಾಜ್ಯಕ್ಕೆ ಕುಷ್ಠರೋಗ ; ಮಾರುತಿ ಮಾನ್ಪಡೆ ಕಿಡಿ 

ಈ ಸಂಘ ರಚನೆಯಾಗಿ ಎರಡು ತಿಂಗಳಾಗಿದ್ದರೂ ಈಗ ಪ್ರಚಾರಕ್ಕೆ ಬಂದಿದೆ, ಅಂಬಾಮಠದಲ್ಲಿ ನಡೆಯುತ್ತಿರುವ ಅಂಬಾದೇವಿ ಜಾತ್ರೆಗಾಗಿ ಬ್ಯಾನರ್ ಹಾಕಿದ್ದು ಈ ಕುರಿತು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಈ ಮಧ್ಯೆ ಸನ್ನಿ ಲಿಯೋನ್ ಯುವಕ ಮಂಡಳದವರು ಮುಂದಿನ ದಿನಗಳಲ್ಲಿ ಪರಿಸರ ರಕ್ಷಣೆ ಸೇರಿದಂತೆ ಉತ್ತಮ ಕೆಲಸ ಮಾಡುತ್ತೇವೆ ಎನ್ನುತ್ತಾರೆ, ಸದಸ್ಯರು.ಸಿದ್ಧಪರ್ವತ ಅಂಬಾದೇವಿಯ ರಥೋತ್ಸವ ಹಾಗೂ ಕುಂಭೋತ್ಸವಕ್ಕೆ ಸರ್ವರಿಗೂ ಆದರದ ಸುಸ್ವಾಗತ. ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ ಹುಡಾ ಅನ್ನೋ ಫ್ಲೆಕ್ಸ್ ಈಗ ಗ್ರಾಮದಲ್ಲಿ ಎಲ್ಲರ ಕಣ್ಣು ಕುಕ್ಕುತ್ತಿದೆ.
First published:January 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ