HOME » NEWS » State » BOLLYWOOD ACTOR SONU SOOD HELPED WOMAN WHO GAVE BIRTH THREE BABIES IN YADAGIRI LG

ಬಡವರ ಪಾಲಿನ ಆಪದ್ಭಾಂದವ ಸೋನು ಸೋದ್; ಯಾದಗಿರಿಯ ಬಾಣಂತಿಗೆ ನೆರವು ನೀಡಿದ ನಟ

ತ್ರಿವಳಿ ಮಕ್ಕಳ ಪೋಷಣೆ ಬಗ್ಗೆ ಹಾಗೂ ಬಾಣಂತಿ ಕುಟುಂಬದ ಆರ್ಥಿಕ ಸಮಸ್ಯೆಯನ್ನು ಹತ್ತಿಕುಣಿ ಗ್ರಾಮದ ಮಲ್ಲಿಕಾರ್ಜುನರೆಡ್ಡಿ ಅವರು, ಬಾಲಿವುಡ್ ನಟ ಸೋನು ಸೂದ್ ಗಮನಕ್ಕೆ ತಂದಿದ್ದರು. ನಂತರ ಈ ವಿಷಯ ಅರಿತು ಸೋನು ಸೂದ್ ಅವರು ನಾಗರಾಜ ಕುಟುಂಬಕ್ಕೆ ದಿನಸಿ ಹಾಗೂ ಮಕ್ಕಳ ಆರೋಗ್ಯದ ವೆಚ್ಚಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು.

news18-kannada
Updated:August 27, 2020, 4:12 PM IST
ಬಡವರ ಪಾಲಿನ ಆಪದ್ಭಾಂದವ ಸೋನು ಸೋದ್; ಯಾದಗಿರಿಯ ಬಾಣಂತಿಗೆ ನೆರವು ನೀಡಿದ ನಟ
ನಟ ಸೋನು ಸೂದ್​
  • Share this:
ಯಾದಗಿರಿ(ಆ.27): ಬಡವರ ಪಾಲಿಗೆ  ಆಪದ್ಭಾಂದವರಾದ ಬಾಲಿವುಡ್ ನಟ ಸೋನು ಸೂದ್ ಈಗ ಬಾಣಂತಿ ಕುಟುಂಬಕ್ಕೆ ನೆರವಾಗಿದ್ದಾರೆ. ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಬಾಣಂತಿ ಪದ್ಮಾ ಕುಟುಂಬಕ್ಕೆ ಈಗ ದಿನಸಿ ಆಹಾರ ಪದಾರ್ಥಗಳನ್ನು ಪೂರೈಸಿ ಮಾನವೀಯತೆ ತೋರುವ ಜೊತೆ ತ್ರಿವಳಿ ಮಕ್ಕಳಿಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಇದು ಬಡಕುಟುಂಬಕ್ಕೆ ಖುಷಿಕೊಟ್ಟಿದೆ.

ಯಾದಗಿರಿ ‌ತಾಲೂಕಿನ ರಾಮಸಮುದ್ರ ಗ್ರಾಮದ ನಾಗರಾಜನ ಪತ್ನಿ ಪದ್ಮಾ ಇದೇ ಆಗಸ್ಟ್ 22 ರಂದು ಯಾದಗಿರಿ ಜಿಲ್ಲಾಸ್ಪತ್ಪೆಯಲ್ಲಿ ತ್ರೀವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದಳು. ಆದರೆ, ನಾಗರಾಜ ಕುಟುಂಬ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು, ತ್ರಿವಳಿ ಮಕ್ಕಳ ಪಾಲನೆ ಮಾಡಲು ಕೂಡ ಕಷ್ಟವಾಗಿತ್ತು. ಆಸ್ಪತ್ರೆ ಖರ್ಚು ಹಾಗೂ ಇನ್ನಿತರ ವೆಚ್ಚ ಮಾಡಲು ಕೂಡ ನಾಗರಾಜ ಸಹಾಯಕ್ಕಾಗಿ ಅಂಗಲಾಚುತ್ತಿದ್ದನು. ನಂತರ ಸ್ಥಳೀಯರು ಸಹಾಯ ಮಾಡಿದ್ದರು.

ಕಾಫಿ ತೋಟದಲ್ಲಿ 15 ದಿನಗಳಿಂದ ಕಾಟ ಕೊಡುತ್ತಿದ್ದ ಕಾಳಿಂಗ ಸರ್ಪ ಸೆರೆ

ತ್ರಿವಳಿ ಮಕ್ಕಳ ಪೋಷಣೆ ಬಗ್ಗೆ ಹಾಗೂ ಬಾಣಂತಿ ಕುಟುಂಬದ ಆರ್ಥಿಕ ಸಮಸ್ಯೆಯನ್ನು ಹತ್ತಿಕುಣಿ ಗ್ರಾಮದ ಮಲ್ಲಿಕಾರ್ಜುನರೆಡ್ಡಿ ಅವರು, ಬಾಲಿವುಡ್ ನಟ ಸೋನು ಸೂದ್ ಗಮನಕ್ಕೆ ತಂದಿದ್ದರು. ನಂತರ ಈ ವಿಷಯ ಅರಿತು ಸೋನು ಸೂದ್ ಅವರು ನಾಗರಾಜ ಕುಟುಂಬಕ್ಕೆ ದಿನಸಿ ಹಾಗೂ ಮಕ್ಕಳ ಆರೋಗ್ಯದ ವೆಚ್ಚಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು.ಅದರಂತೆ ನಟ ಸೋನು ಸೂದ್ ಅವರು, ಖುದ್ದು ಬಾಣಂತಿ ಕುಟುಂಬಕ್ಕೆ ಎರಡು ತಿಂಗಳಿಗೆ ಬೇಕಾಗುವಷ್ಟು ದಿನಸಿ ಪದಾರ್ಥಗಳನ್ನು  ಕಳುಹಿಸಿ ಮಾನವೀಯತೆ ಕಾಳಜಿ ತೋರಿದ್ದಾರೆ. ಅದೆ ರೀತಿ ತ್ರಿವಳಿ ಮಕ್ಕಳಿಗೆ ಸಹಾಯ ಮಾಡುವುದಾಗಿ ಹೇಳಿದ್ದು, ಯಾದಗಿರಿ ಜಿಲ್ಲೆಯ ಜನ ಬಡಜನರಿಗೆ ಸಹಾಯ ಮಾಡಬೇಕೆಂದು ಕಿವಿ ಮಾತು ಹೇಳಿದ್ದಾರೆ.
Published by: Latha CG
First published: August 27, 2020, 3:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories