Boir Goats: ಕೃಷಿ ಮೇಳದಲ್ಲಿ ಎಲ್ಲರ ಚಿತ್ತ ತನ್ನತ್ತ ಸೆಳೆದ 7 ಲಕ್ಷ ರೂ. ಮೌಲ್ಯದ ಮೇಕೆ
ಮೊದಲ ದಿನವೇ ತುಮಕೂರಿನಿಂದ (Tumakuru) ಬಂದಿದ್ದ ವಿಶೇಷ ತಳಿಯ ಮೇಕೆ ಎಲ್ಲರ ಚಿತ್ತವನ್ನ ತನ್ನತ್ತ ಸೆಳೆದುಕೊಂಡಿತ್ತು. ಕೃಷಿ ಮೇಳಕ್ಕೆ ಬಂದವರೆಲ್ಲ ಮೇಕೆ ಬೆಲೆ ಕೇಳಿ ಆಶ್ಚರ್ಯ ವ್ಯಕ್ತಪಡಿಸಿ, ವಿಶೇಷ ತಳಿಯ ಮಾಹಿತಿ ಪಡೆದುಕೊಂಡರು.
ಬೆಂಗಳೂರು ಕೃಷಿ ವಿದ್ಯಾಲಯ (University of Agricultural Sciences, Bangalore) ಜಿಕೆವಿಕೆ ಆವರಣದಲ್ಲಿ ಈ ವರ್ಷದ ಕೃಷಿ ಮೇಳ (Krushi Mela) ಆಯೋಜಿಸಲಾಗಿದೆ. ಗುರುವಾರ ಕೃಷಿ ಮೇಳಕ್ಕೆ ಚಾಲನೆ ನೀಡಲಾಗಿದ್ದು, ನವೆಂಬರ್ 13ವರೆಗೆ ಇರಲಿದೆ. ಮೊದಲ ದಿನವೇ ತುಮಕೂರಿನಿಂದ (Tumakuru) ಬಂದಿದ್ದ ವಿಶೇಷ ತಳಿಯ ಮೇಕೆ ಎಲ್ಲರ ಚಿತ್ತವನ್ನ ತನ್ನತ್ತ ಸೆಳೆದುಕೊಂಡಿತ್ತು. ಕೃಷಿ ಮೇಳಕ್ಕೆ ಬಂದವರೆಲ್ಲ ಮೇಕೆ ಬೆಲೆ ಕೇಳಿ ಆಶ್ಚರ್ಯ ವ್ಯಕ್ತಪಡಿಸಿ, ವಿಶೇಷ ತಳಿಯ ಮಾಹಿತಿ ಪಡೆದುಕೊಂಡರು. ರೈತರ (Farmers) ಆದಾಯ ದ್ವಿಗುಣಗೊಳಿಸಲು ಲಭ್ಯವಿರುವ ಹೊಸ ತಾಂತ್ರಿಕತೆ ಬಳಕೆ, ನವ ತಳಿಯ ಭತ್ತ, ರಾಗಿ, ಹಲಸು, ನವನೆಣೆ, ಮೇವಿನ ತೋಕೆ ಗೋಧಿ, ಬರಗು ಪರಿಚಯಿಸಲಾಗುತ್ತಿದೆ. ತಳಿಯ ಬಿಡುಗಡೆ ಜೊತೆಗೆ ಕೃಷಿ ಸಾಧಕರನ್ನು ಸನ್ಮಾನಿಸಲಾಗಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಬಳಿಯ ತರಬೇನಹಳ್ಳಿ ಗ್ರಾಮದ ರೈತ ಈ ವಿಶೇಷ ತಳಿಯ ಮೇಕೆಗಳನ್ನು ಕೃಷಿ ಮೇಳಕ್ಕೆ ತಂದಿದ್ದರು. ಈ ಬೋಯರ್ ತಳಿಯ ಮೇಕೆಗಳು ಅತ್ಯಂತ ವೇಗವಾಗಿ ಬೆಳವಣಿಗೆ ಆಗುತ್ತವೆ ಮತ್ತು ಅಷ್ಟೇ ಬೇಗ ಸಂತಾನೋತ್ಪತ್ತಿಗೆ ಸಜ್ಜಾಗುತ್ತವೆ. ಕೆಲ ವರ್ಷಗಳ ಹಿಂದೆ ಉಮೇಶ್, ಮಹಾರಾಷ್ಟ್ರದ ಪುಣೆಯಿಂದ ಬೋಯರ್ ತಳಿಯ ಒಂದು ಗಂಡು ಮತ್ತು ಒಂದು ಹೆಣ್ಣು ಮೇಕೆಯನ್ನು ಎರಡೂವರೆ ಲಕ್ಷ ರೂಪಾಯಿ ನೀಡಿ ತಂದಿದ್ದರು. ಇದೀಗ ಈ ಮೇಕೆಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಬೋಯರ್ ತಳಿಯ ಅಭಿವೃಧ್ದಿಪಡಿಸಲು ಇಚ್ಛಿಸುವ ರೈತರು, ಈ ಮೇಕೆ ಮೂಲಕ ಸಂಕರ ಮಾಡಿಸಬಹುದು, ಕೇರಳ ರಾಜ್ಯದ ತಲಶ್ಯೇರಿಯ ತಳಿಯ ಮೇಕೆಗಳಿಗೆ ಬೋಯರ್ ಮೇಕೆಯಿಂದಲೇ ಸಂಕರ ಮಾಡಿಸಲಾಗತ್ತದೆ. ಮೂಲ ಬೋಯರ್ ತಳಿಯ ಮೇಕೆಯನ್ನು ತೂಕದ ಮೇಲೆ ಖರೀದಿಸಲಾಗುತ್ತದೆ, ಇಂದು ಮೇಕೆ ಸುಮಾರು ಏಳು ಲಕ್ಷ ರೂ.ಗೆ ಬೆಲೆ ಬಾಳುತ್ತದೆ.
ಬೋಯರ್ ತಳಿ ಮೇಕೆ ವಿಶೇಷತೆ
ಒಂದು ಮೇಕೆ ಸುಮಾರು 25 ರಿಂದ 30 ಕೆಜಿ ತೂಕ ಬರುತ್ತದೆ.
ಹುಟ್ಟುವ ಮೇಕೆ ಆರು ತಿಂಗಳಲ್ಲಿಯೇ 18 ರಿಂದ 20 ಕೆಜಿ ತೂಕ ಹೊಂದುತ್ತವೆ.
ನೇರವಾಗಿ ಬೋಯರ್ ತಳಿಯಿಂದ ಹುಟ್ಟುವ ಮರಿಗಳ ವೇಗ ಹೆಚ್ಚಾಗಿರುತ್ತದೆ.
ಬೋಯರ್ ತಳಿಯ ಮೇಕೆಗೆ ವಿಶೇಷವಾದ ಆಹಾರ ನೀಡಬೇಕಿಲ್ಲ ಮತ್ತು ಹೆಚ್ಚಿನ ಪೌಷ್ಠಿಕಾಂಶ ಬೇಕಿಲ್ಲ.
ಎಲ್ಲ ಮೇಕೆಗಳಂತೆ ಹುಲ್ಲು, ಕಾಳು, ಹಸಿರು ಮೇವು ತಿನ್ನುತ್ತವೆ.
ರಾಜ್ಯದ ಹವಾಮಾನಕ್ಕೆ ಬೋಯರ್ ತಳಿಯ ಮೇಕೆಗಳು ಹೊಂದಿಕೊಳ್ಳುತ್ತವೆ.
ಮೂಲ ತಿಳಿಯ ಒಂಭತ್ತು ತಿಂಗಳ ಮೇಕೆ 65 ಕೆಜಿವರೆಗೆ ತೂಕಕ್ಕೆ ಬರುತ್ತದೆ.
ಈ ತಳಿಯ ಮೇಕೆಗಳನ್ನು ಮಾಂಸಕ್ಕಿಂತಲೂ ಹೆಚ್ಚಾಗಿ ಸಂತಾನೋತ್ಪತ್ತಿಗಾಗಿ ಬಳಸಲಾಗುತ್ತದೆ.
ಮೂಲ ತಳಿಯ ಮೇಕೆಗಳ ಬೆಲೆ 1,500 ರೂ,ನಿಂದ 3 ಸಾವಿರ ರೂ.ವರೆಗೆ ಬರುತ್ತದೆ. ಇನ್ನು ತಲ್ಯಶೇರಿಯ ಮೇಕೆಗಳ ಬೆಲೆ ಕೆಜಿಗೆ 500 ರೂ.ನಿಂದ ಆರಂಭಗೊಳ್ಳುತ್ತದೆ. ಎಲ್ಲ ಮೇಕೆಗಳಂತೆ ನೀಡುವ ಆಹಾರವನ್ನೇ ಇವುಗಳಿವೆ ನೀಡುತ್ತೇವೆ. ಈ ಅಭಿವೃದ್ಧಿಯ ತಳಿ ಪಡೆಯಲು ಇಷ್ಟಪಡುವ ರೈತರು ತಮ್ಮ ಮೇಕೆಗಳನ್ನು ತಂದು ಇವುಗಳ ಮೂಲಕ ಸಂಕರ ಮಾಡಿಸಿಕೊಳ್ಳುತ್ತಾರೆ ಎಂದು ರೈತ ಉಮೇಶ್ ಹೇಳುತ್ತಾರೆ.
ಈ ವಿಶೇಷ ತಳಿಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಕೃಷಿ ಮೇಳಕ್ಕೆ ತರಲಾಯ್ತು. ಆದ್ರೆ ನಮಗೆ ಮಳಿಗೆಯನ್ನು ನೀಡಲಿಲ್ಲ. ಹಾಗಾಗಿ ತುಂಬಾ ಸಮಯದವರೆಗೆ ವಾಹನದಲ್ಲಿಯೇ ಮೇಕೆಗಳನ್ನು ಇರಿಸಲಾಯ್ತು. ಜನರು ಮಾತ್ರ ವಾಹನದ ಬಳಿಯೇ ಬಂದು ಮೇಕೆಗಳನ್ನುಕಂಡು ಮಾಹಿತಿ ಪಡೆದುಕೊಂಡರು ಎಂದು ಉಮೇಶ್ ಹೇಳಿದರು.
ಕೃಷಿ ಮೇಳಕ್ಕೆ ಮಳೆ ಅಡ್ಡಿ
ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಕೃಷಿ ಮೇಳದಲ್ಲಿ ಹಾಕಲಾಗಿದ್ದ ಮಳಿಗೆಗಳು ಗಾಳಿ-ಮಳೆಗೆ ನೆಲ ಕಚ್ಚಿದ್ದವು. ಹಾಗಾಗಿ ದೂರ ದೂರ ಪ್ರದೇಶಗಳಿಂದ ಬಂದಿದ್ದ ರೈತರಿಗೆ ಅನಾನೂಕೂಲತೆ ಉಂಟಾಗಿತ್ತು.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ