ಮಾಗಡಿ ರಸ್ತೆಯ ಫುಡ್​ ಫ್ಯಾಕ್ಟರಿಯಲ್ಲಿ ಬಾಯ್ಲರ್​ ಸ್ಪೋಟ: ಇಬ್ಬರು ಕಾರ್ಮಿಕರ ಸಾವು

ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದ್ದು ಕಾರ್ಖಾನೆಯ ಒಳಗೆ  ಐದು ಮಂದಿ ಕೆಲಸ ಮಾಡುತ್ತಿದ್ದರು. ಈ ಕಾರ್ಖಾನೆಯ ಮಾಲಿಕ ವಿಜಯ್ ಮೆಹ್ತಾ ಸುಮಾರು 5 ತಿಂಗಳ ಹಿಂದೆಯಷ್ಟೇ ಈ ಕಂಪೆನಿ ಶುರು ಮಾಡಿದ್ದರು. 

ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದ್ದು ಕಾರ್ಖಾನೆಯ ಒಳಗೆ 
ಐದು ಮಂದಿ ಕೆಲಸ ಮಾಡುತ್ತಿದ್ದರು. ಈ ಕಾರ್ಖಾನೆಯ ಮಾಲಿಕ ವಿಜಯ್ ಮೆಹ್ತಾ
ಸುಮಾರು 5 ತಿಂಗಳ ಹಿಂದೆಯಷ್ಟೇ ಈ ಕಂಪೆನಿ ಶುರು ಮಾಡಿದ್ದರು. 

ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದ್ದು ಕಾರ್ಖಾನೆಯ ಒಳಗೆ  ಐದು ಮಂದಿ ಕೆಲಸ ಮಾಡುತ್ತಿದ್ದರು. ಈ ಕಾರ್ಖಾನೆಯ ಮಾಲಿಕ ವಿಜಯ್ ಮೆಹ್ತಾ ಸುಮಾರು 5 ತಿಂಗಳ ಹಿಂದೆಯಷ್ಟೇ ಈ ಕಂಪೆನಿ ಶುರು ಮಾಡಿದ್ದರು. 

 • Share this:
  ಮಾಗಡಿ ರೋಡ್ ಅಂಜನ್ ಟಾಕೀಸ್​ ಬಳಿ  ಇರುವ ಆಹಾರ ತಯಾರಿಕಾ ಕಂಪೆನಿಯಲ್ಲಿ ಬಾಯ್ಲರ್​ ಜೊತೆಗೆ ಸಿಲಿಂಡರ್ ಕೂಡ​  ಸ್ಪೋಟಗೊಂಡು, ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ  ಇಬ್ಬರು ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು ಮೂವರಿಗೆ ಗಂಬೀರ ಗಾಯಗಳಾಗಿವೆ. ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನಗಳ ದೌಡಾಯಿಸಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

  ಕುರು- ಕುರೇ ಜಂಕ್​ಫುಡ್​ ತಯಾರಿಕಾ ಕಂಪೆನಿಯ ಒಳಗೆ ಆಹಾರ ತಯಾರಿಕೆಗೆ ಎಂದು ಇಟ್ಟಿದ್ದ ಸಿಲಿಂಡರ್​ ಸ್ಪೋಟಗೊಂಡು ಈ ದರ್ಘಟನೆ ಸಂಭವಿಸಿದೆ.  ಫ್ಯಾಕ್ಟರಿಯಲ್ಲಿ ಇದ್ದ ಸಿಲಿಂಡರ್ ಬ್ಲಾಸ್ಟ್ ಆದ ಕಾರಣ ಅಕ್ಕ ಪಕ್ಕದ ಕಟ್ಟಡಗಳೂ ಸಾಕಷ್ಟು ಹಾನಿಯಾಗಿದೆ. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಗಳು ಘಟನೆ ನಡೆದ ಸ್ಥಳವನ್ನು ಪರಿಶೀಲಿಸುತ್ತಿದ್ದಾರೆ.

  ಗಂಬೀರವಾಗಿ ಗಾಯಗೊಂಡಿರುವ  ಮೂವರನ್ನು ಸ್ಥಳೀಯ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಮಾಗಡಿ ರಸ್ತೆಯ ಗೋಪಾಲಪುರದ ಫ್ಯಾಕ್ಟರಿಯಲ್ಲಿ ಘೋರ ದುರಂತ ಸಂಭವಿಸಿದೆ.

  ಮೃತ ದೇಹಗಳನ್ನ ಮಾಗಡಿ ರೋಡ್ ಪೊಲೀಸರು ಸ್ಥಳಾಂತರಿಸಿದ್ದು
  ಸೌರವ್ ಹಾಗೂ ಮನೀಶ್ ಎನ್ನುವ ಯುವಕ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

  ಗಂಬೀರವಾಗಿ ಗಾಯಗೊಂಡವರಲ್ಲಿ ಸಚಿನ್ (೩೫), ಧನಲಕ್ಷ್ಕಿ ( ೫೦), ಶಾಂತಿ(೫೨) ಸೇರಿದ್ದಾರೆ. ಸ್ಥಳೀಯರಾದ ಧನಲಕ್ಷ್ಮಿ ,ಶಾಂತಿ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗಿದೆ. ಫುಡ್ ತಯಾರಿಸೋ ಬಾಯ್ಲರ್ ಹೆಚ್ಚು ಹೀಟ್ ಆಗಿ ಸ್ಪೋಟಗೊಂಡಿದೆ. ಇದರ ಪರಿಣಾಮವಾಗಿ ಸಿಲಿಂಡರ್ ಕೂಡಾ ಸ್ಫೋಟಗೊಂಡು ಇಬ್ಬರನ್ನ ಬಲಿ ಪಡೆದಿದೆ.

  ದುರ್ಘಟನೆಯಲ್ಲಿ ಮೃತಪಟ್ಟಿರುವ ಬಿಹಾರ್​ ಮೂಲದ ಕಾರ್ಮಿಕ ಸೌರವ್​


  ಬಿಹಾರ ಮೂಲದ  ಸೌರವ್ ಹಾಗೂ ಮನೀಷ್​ ಸಾವನ್ನಪ್ಪಿರುವ ನತದೃಷ್ಟರು, ಜೊತೆಗೆ
  ಮಾಲೀಕ ಹಾಗೂ ಉದ್ಯಮದ ಪಾರ್ಟನರ್ ಆಗಿರುವ ಸಚಿನ್ ಗೆ ಗಂಭೀರ ಗಾಯಗಳಾಗಿವೆ.

  ಗೋಪಾಲಪುರ ಅತ್ಯಂತ ಚಿಕ್ಕ ಪ್ರದೇಶ‌. ನಾಗರಿಕರು ವಾಸ ಮಾಡುವ ಏರಿಯಾದಲ್ಲಿ ಫ್ಯಾಕ್ಟರಿ ಪ್ರಾರಂಭಕ್ಕೆ ಅನುಮತಿ ಕೊಟ್ಟಿದ್ದಾರೆಯೇ ಅಥವಾ ಅಕ್ರಮವಾಗಿ ಇದನ್ನು ಪ್ರಾರಂಭ ಮಾಡಲಾಗಿದೆಯೇ  ಎನ್ನುವ ಬಗ್ಗೆ  ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

  ದುರ್ಘಟನೆಯಲ್ಲಿ ಮೃತಪಟ್ಟಿರುವ ಕಾರ್ಮಿಕ ಮನೀಷ್​


  ಹೆಚ್ಚು ಪ್ರಾಡೆಕ್ಟ್ ಹೊರತೆಗೆಯಲು ಬಾಯ್ಲರ್ ಒಳಗೆ ಹೆಚ್ಚು ಪದಾರ್ಥಗಳನ್ನು ಹಾಕಿದ ಪರಿಣಾಮವೇ ಓವರ್ ಹೀಟ್ ಆಗಿ ಬ್ಲಾಸ್ಟ್ ಆಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಾಗಿದೆ.

  ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದ್ದು ಕಾರ್ಖಾನೆಯ ಒಳಗೆ
  ಐದು ಮಂದಿ ಕೆಲಸ ಮಾಡುತ್ತಿದ್ದರು. ಈ ಕಾರ್ಖಾನೆಯ ಮಾಲಿಕ ವಿಜಯ್ ಮೆಹ್ತಾ
  ಸುಮಾರು 5 ತಿಂಗಳ ಹಿಂದೆಯಷ್ಟೇ ಈ ಕಂಪೆನಿ ಶುರು ಮಾಡಿದ್ದರು.

  ಕಟ್ಟಡದ ಮಾಲೀಕ ಹಾಗೂ ಎಂಎಂ ಫುಡ್ ಫ್ಯಾಕ್ಟರಿ ಶೇರ್ ಹೋಲ್ಡರ್ ಸೇರಿ ಮೂವರ ವಿರುದ್ಧ ಪ್ರಕರಣ.

  ಕಟ್ಟಡದ ಮಾಲೀಕ  ನರೇಂದ್ರ,  ಫ್ಯಾಕ್ಟರಿ ಮಾಲೀಕರಾದ ವಿಜಯ್ ಮೆಹ್ತಾ ಹಾಗೂ ಸಚಿನ್ ಅವರ ಮೇಲೆ ದೂರು ದಾಖಲಿಸಲಾಗೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರ್ಲಕ್ಷ್ಯತನದಿಂದ ಸಾವು ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಗಾಯಾಳುಗಳ ಹೇಳಿಕೆ ಪಡೆದ ಬಳಿಕ ಹೆಚ್ಚುವರಿ ಸೆಕ್ಷನ್ ಸೇರ್ಪಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

  ಇದನ್ನೂ ಓದಿ: Disrespect to National Flag| ಕಲ್ಯಾಣ್ ಸಿಂಗ್ ಪ್ರಾರ್ಥಸಭೆಯಲ್ಲಿ ಪ್ರಧಾನಿ ಮೋದಿ ಎದುರೇ ಭಾರತ ಧ್ವಜವನ್ನು ಅವಮಾನಿಸಿತೇ ಬಿಜೆಪಿ?

  ಪ್ರಾಥಮಿಕವಾಗಿ ಬಾಯ್ಲರ್ ಸ್ಪೋಟದಿಂದ ಘಟನೆ ನಡೆದಿರುವುದಾಗಿ ಹೇಳಲಾಗಿದ್ದು, ಏಳು ಸಿಲಿಂಡರ್ ಗಳು ಪಕ್ಕದಲ್ಲಿದ್ದು, ಅದೃಷ್ಟವಶಾತ್ ಸ್ಪೋಟವಾಗಿಲ್ಲ ಇಲ್ಲದಿದ್ದರೆ ಇನ್ನೂ ಹೆಚ್ಚಿನ ದುರಂತ ನಡೆಯುತ್ತಿತ್ತು ಎಂದು ಹೇಳಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: