• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Modi Letter: ಬೆಂಗಳೂರಿನ ಬಾಲಕನಿಗೆ ಪ್ರಧಾನಿಯವರಿಂದ ಬಂತು ಪತ್ರ! ವಿದ್ಯಾರ್ಥಿಗೆ ಥ್ಯಾಂಕ್ಸ್ ಹೇಳಿದ್ದೇಕೆ ಮೋದಿ?

Modi Letter: ಬೆಂಗಳೂರಿನ ಬಾಲಕನಿಗೆ ಪ್ರಧಾನಿಯವರಿಂದ ಬಂತು ಪತ್ರ! ವಿದ್ಯಾರ್ಥಿಗೆ ಥ್ಯಾಂಕ್ಸ್ ಹೇಳಿದ್ದೇಕೆ ಮೋದಿ?

ಪ್ರಧಾನಿ ಮೋದಿ

ಪ್ರಧಾನಿ ಮೋದಿ

ಬೆಂಗಳೂರಿನ ಪುಟ್ಟ ಬಾಲಕನೊಬ್ಬ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದ. ಇದೀಗ ಆ ಬಾಲಕ ಬರೆದ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಉತ್ತರ ಬರೆದಿದ್ದಾರೆ. ಇನ್ನು ತನ್ನ ಪತ್ರಕ್ಕೆ ಪ್ರಧಾನಿ ಮೋದಿ ಅವರಿಂದ ಸಿಕ್ಕ ಪ್ರತಿಕ್ರಿಯೆಗೆ ವಿದ್ಯಾರ್ಥಿ ಸಂತಸ ವ್ಯಕ್ತಪಡಿಸಿದ್ದಾನೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Bangalore, India
  • Share this:

    ಬೆಂಗಳೂರು: ಡಿಸೆಂಬರ್ 30, 2022ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ (Prime Minister Narendra Modi) ತಾಯಿ  ಹೀರಾಬೆನ್ ಅವರು (Heera ben) ಇಹಲೋಕ ತ್ಯಜಿಸಿದ್ದರು (Death). ಈ ವೇಳೆ ದೇಶ ವಿದೇಶಗಳ ಗಣ್ಯರು, ನಾಯಕರು ಹಾಗೂ ನಾಗರಿಕರು ಸಂತಾಪ ಸೂಚಿಸಿದ್ದರು. ಇದೇ ಸಮಯದಲ್ಲಿ ಬೆಂಗಳೂರಿನ ಪುಟ್ಟ ಬಾಲಕನೊಬ್ಬ (Boy) ಪ್ರಧಾನಿ ಮೋದಿ ಅವರಿಗೆ ಪತ್ರ (Letter) ಬರೆದು ಸಂತಾಪ ಸೂಚಿಸಿದ್ದ. ಈಗ ಆ ಪತ್ರಕ್ಕೆ ಪ್ರಧಾನಿ ಮೋದಿ ಸ್ಪಂದಿಸಿದ್ದು, ಬಾಲಕನಿಗೆ ಧನ್ಯವಾದ ತಿಳಿಸಿದ್ದಾರೆ. ಬಾಲಕನ ಪತ್ರಕ್ಕೆ ಪ್ರಧಾನಿ ಮೋದಿ ಪತ್ರದ ಮೂಲಕವೇ ಸ್ಪಂದಿಸಿದ್ದಾರೆ.


    ಡಿಸೆಂಬರ್ 30ರಂದು ನಿಧನರಾಗಿದ್ದ ಪ್ರಧಾನಿ ತಾಯಿ


    ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಡಿಸೆಂಬರ್ 30, 2022 ರಂದು ನಿಧನರಾಗಿದ್ದರು. ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಅವರಿಗೆ 100 ವರ್ಷ ವಯಸ್ಸಾಗಿತ್ತು. ಅನಾರೋಗ್ಯ ಹಿನ್ನೆಲೆ ಅವರನ್ನು ಅಹಮದಾಬಾದ್‌ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದರು.


    ಬಾಲಕ ಬರೆದಿದ್ದ ಪತ್ರ


    ಮೋದಿಗೆ ಪತ್ರ ಬರೆದಿದ್ದ ಬೆಂಗಳೂರಿನ ಬಾಲಕ


    ಈ ವೇಳೆ ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ನಿಧನಕ್ಕೆ ಅನೇಕ ಗಣ್ಯರು, ನಾಯಕರು ಸಂತಾಪ ಸೂಚಿಸಿದ್ದರು. ಈ ವೇಳೆ ಬೆಂಗಳೂರಿನ ಮಲ್ಲೇಶ್ವರಂನ MES ಕಿಶೋರ ಕೇಂದ್ರ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಆರುಶ್ ಶ್ರೀವತ್ಸ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಸಂತಾಪ ಸೂಚಿಸಿದ್ದ. ಈಗ ಬಾಲಕನ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಪತ್ರದ ಮೂಲಕವೇ ಧನ್ಯವಾದ ತಿಳಿಸಿದ್ದಾರೆ.


    ಇದನ್ನೂ ಓದಿ: Narendra Modi: ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು ಮೋದಿಯವರಿಂದ ಮಾತ್ರ ಸಾಧ್ಯ! ಅಮೇರಿಕಾ ಶ್ವೇತಭವನದ ಹೇಳಿಕೆ


    ತಾಯಿ ಜೊತೆ ಮೋದಿ


    ಪತ್ರದಲ್ಲಿ ಏನಿದೆ?


    ಪತ್ರದಲ್ಲಿ ಪ್ರಧಾನಿ ಮೋದಿ ಅವರು, "ತಾಯಿಯ ಅಗಲಿಕೆ ತುಂಬಲಾರದ ನಷ್ಟ. ಅದರ ನೋವು ಹೇಳತೀರದ್ದು. ಆದರೆ ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳಲ್ಲಿ ನನ್ನನ್ನು ಸೇರಿಸಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ತಿಳಿಸುತ್ತೇನೆ. ನಿಮ್ಮ ಪ್ರೀತಿ, ಸಾಂತ್ವನ ನನಗೆ ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ಮತ್ತು ಧೈರ್ಯ ನೀಡುತ್ತದೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಜೊತೆಗೆ ಪತ್ರದ ಮೂಲಕವೇ ಧನ್ಯವಾದ ಅರ್ಪಿಸಿದ್ದಾರೆ.


    ಪ್ರಧಾನಿ ಕಾರ್ಯಾಲಯದಿಂದ ಬಂದ ಪತ್ರ


    ಇನ್ನು ತನ್ನ ಪತ್ರಕ್ಕೆ ಪ್ರಧಾನಿ ಮೋದಿ ಅವರಿಂದ ಸಿಕ್ಕ ಪ್ರತಿಕ್ರಿಯೆಯ ಪತ್ರದಿಂದ ವಿದ್ಯಾರ್ಥಿ ಸಂತಸ ವ್ಯಕ್ತಪಡಿಸಿದ್ದಾನೆ.


    ಪ್ರಧಾನಿ ನರೇಂದ್ರ ಮೋದಿಗೆ ರಾಕಿ ಭಾಯ್ ಸ್ಪೆಷಲ್ ಡಿಮ್ಯಾಂಡ್! 


    ಸ್ಯಾಂಡಲ್​ವುಡ್ ಗಣ್ಯರ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು, ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬಳಿ ರಾಕಿಂಗ್ ಸ್ಟಾರ್ ಯಶ್ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾರೆ. ಕೆಜಿಎಫ್ ಸ್ಟಾರ್ ಯಶ್ ಅವರಿಗೂ ಮೋದಿ ಡಿನ್ನರ್ ಪಾರ್ಟಿಗೆ ಆಹ್ವಾನ ನೀಡಲಾಗಿತ್ತು. ಮೋದಿ ಜೊತೆ ಸಂವಾದದಲ್ಲಿ ಕನ್ನಡ ಸಿನಿಮಾ ರಂಗದ ಬೆಳವಣಿಗೆ ಬಗ್ಗೆ ಯಶ್ ಮಾತಾಡಿದ್ದು, ಚಿತ್ರರಂಗದ ಬೇಡಿಕೆಯನ್ನು ಯಶ್ ಮೋದಿ ಮುಂದೆ ಇಟ್ಟಿದ್ದಾರೆ.


    ಯಶ್ ಇಟ್ಟ ಬೇಡಿಕೆಗಳೇನು?





    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು