Kalaburagi: ಕೆಲಸಕ್ಕೆ ಹೋಗೋದಾಗಿ ಹೇಳಿದ ಮಗ ನಾಪತ್ತೆ: ಪೊಲೀಸ್ ಠಾಣೆಗೆ ತೆರಳಿದ್ರೆ ಸಿಕ್ತು ಪುತ್ರನ ಶವದ ಫೋಟೋ
ಮಂಗಳವಾರ ಬೆಳಗ್ಗೆ ತಮ್ಮ ಊರಿಗೆ ಹೋಗಿ ಸಂಜೆಯವರೆಗೂ ಮನೆಯವರ ಜೊತೆ ಕಾಲ ಕಳೆದಿದ್ದಾನೆ. ಬಳಿಕ ಸಂಜೆ ತನ್ನ ಸಹೋದರನ ಬೈಕ್ (Bike) ಮೇಲೆ ಕಲಬುರಗಿಗೆ ಬಂದಿದ್ದಾನೆ. ಮಗ ಸೇಫ್ ಆಗಿ ಹೋಗಿದ್ದಾನ ಅಂತಾ ವಿಚಾರಿಸೋದಕ್ಕೆ ಹೆತ್ತವರು ಮಗನಿಗೆ ಕಾಲ್ (Call) ಮಾಡಿದ್ದಾರೆ. ಆದ್ರೆ ಮಗನ ಮೊಬೈಲ್ ಸ್ವಿಚ್ ಆಫ್ (Mobile Switch Off) ಆಗಿತ್ತು
ಈ ಯುವಕ ಫೋಟೋಗ್ರಾಫರ್ (Photographer) ಆಗಿ ಕಳೆದ ನಾಲ್ಕೈದು ವರ್ಷಗಳಿಂದ ಕಲಬುರಗಿ(Kalaburagi)ಯಲ್ಲಿ ಕೆಲಸ ಮಾಡ್ತಿದ್ದನು. ವಾರಕ್ಕೆ ಒಂದೆರೆಡು ಬಾರಿ ಊರಿಗೆ ಹೋಗಿ ಹೆತ್ತವರನ್ನ ಭೇಟಿಯಾಗಿ ಬರ್ತಿದ್ದನು. ಅದರಂತೆ ಮಂಗಳವಾರ ಬೆಳಗ್ಗೆ ತಮ್ಮ ಊರಿಗೆ ಹೋಗಿ ಸಂಜೆಯವರೆಗೂ ಮನೆಯವರ ಜೊತೆ ಕಾಲ ಕಳೆದಿದ್ದಾನೆ. ಬಳಿಕ ಸಂಜೆ ತನ್ನ ಸಹೋದರನ ಬೈಕ್ (Bike) ಮೇಲೆ ಕಲಬುರಗಿಗೆ ಬಂದಿದ್ದಾನೆ. ಮಗ ಸೇಫ್ ಆಗಿ ಹೋಗಿದ್ದಾನ ಅಂತಾ ವಿಚಾರಿಸೋದಕ್ಕೆ ಹೆತ್ತವರು ಮಗನಿಗೆ ಕಾಲ್ (Call) ಮಾಡಿದ್ದಾರೆ. ಆದ್ರೆ ಮಗನ ಮೊಬೈಲ್ ಸ್ವಿಚ್ ಆಫ್ (Mobile Switch Off) ಆಗಿತ್ತು. ಸರಿ ಅಂತಾ ಸುಮ್ಮನಾಗಿದ್ದ ಪೊಷಕರು ಮರುದಿನ ಬೆಳಗ್ಗೆ ಮತ್ತೆ ಕಾಲ್ ಮಾಡಿದ್ದಾರೆ ಆಗಲು ಮೊಬೈಲ್ ಸ್ವಿಚ್ ಆಫ್. ಎರಡ್ಮೂರು ದಿನಗಳವರೆಗೆ ಹೆತ್ತವರ ಸಂಪರ್ಕಕ್ಕೆ ಬಾರದೆ ಇದ್ದಾಗ ಅನುಮಾನ ಬಂದ ಪೋಷಕರು ದೂರು ಕೋಡೊಕೆ ಹೋಗಿದ್ದಾರೆ. ಆದ್ರೆ ಅಷ್ಟರಲ್ಲೇ ಹೆತ್ತವರ ಕಿವಿಗೆ ಮಗ ಬರ್ಬರವಾಗಿ ಕೊಲೆಯಾಗಿರೋ ಸುದ್ದಿ ಬಂದು ಅಪ್ಪಳಿಸಿದೆ.
ಕೊಲೆಯಾಗಿರುವ ಯುವಕನ ಹೆಸರು ಶಿವಕುಮಾರ್. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಶ್ರೀಚಂದ ಗ್ರಾಮದ ನಿವಾಸಿ. ಶಿವಕುಮಾರ್ ಕಳೆದ ನಾಲ್ಕೈದು ವರ್ಷಗಳಿಂದ ಫೋಟೊಗ್ರಾಫರ್ ಆಗಿ ಕೆಲಸ ಮಾಡಿಕೊಂಡು ಕಲಬುರಗಿಯ ಕನಕನಗರದಲ್ಲಿ ಒಂಟಿಯಾಗಿ ವಾಸವಿದ್ದನು.
ವಾರಕ್ಕೆ ಒಂದೆರೆಡು ಬಾರಿಯಂತೆ ಶ್ರಿಚಂದ ಗ್ರಾಮಕ್ಕೆ ಹೋಗಿ ಹೆತ್ತವರನ್ನ ಭೇಟಿಯಾಗಿ ಬರ್ತಿದ್ದನು. ಮಂಗಳವಾರ ಸಂಜೆ ಹೋದ ಮಗ ಎರಡ್ಮೂರು ದಿನವಾದ್ರೂ ಸಂಪರ್ಕಕ್ಕೆ ಸಿಗದಿದ್ದಾಗ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋಗಿದ್ದರು. ಆಗ ಬಬಲಾದ ಮತ್ತು ಸಾವಳಗಿ ಮಾರ್ಗ ಮಧ್ಯೆ ಪತ್ತೆಯಾಗಿದ್ದ ಶವದ ಫೋಟೋ ತೋರಿಸಿದ್ದಾರೆ. ಫೋಟೋ ನೋಡಿದ ಪೋಷಕರು ಶವವನ್ನು ಗುರುತಿಸಿದ್ದಾರೆ.
ಮಗನನ್ನು ಯಾರು ಕೊಲೆ ಮಾಡಿದ್ದು? ಯಾಕೆ ಎಂಬುದರ ಬಗ್ಗೆ ಶಿವಕುಮಾರ್ ಪೋಷಕರು ಪ್ರಶ್ನೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೋಷಕರು ತನಿಖೆ ನಡೆಸುತ್ತಿದ್ದಾರೆ.
ಕಲಬುರಗಿ ಬಸ್ ನಿಲ್ದಾಣದಲ್ಲಿ ಯುವಕನ ಕೊಲೆ
ಕಲಬುರಗಿ ನಗರದ ಜನರು ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದರು. ಜನರು ಗಡಿಬಿಡಿಯಿಂದ ತಮ್ಮ ಮನೆಗೆ ಹೋಗುತ್ತಿದ್ದರೆ, ಮತ್ತೊಂದಡೆ ಜನನಿಬಿಡ ಪ್ರದೇಶದಲ್ಲಿಯೇ ರೌಡಿ ಶೀಟರ್ ನೋರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ನವೆಂಬರ್ 4ರ ಮುಂಜಾನೆ ಏಳು ಗಂಟೆಗೆ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ರೌಡಿಶೀಟರ್ ರ್ ನೋರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.
ಜಿಮ್ ಗೆ ಹೊರಟವನ ಕೊಲೆ
ಕೊಲೆಯಾದ ಯುವಕನ ಹೆಸರು ಅಭಿಷೇಕ್ ನಂದೂರ್. ವಯಸ್ಸು ಕೇವಲ 25 ವರ್ಷ. ಕಲಬುರಗಿ ನಗರದ ವಿದ್ಯಾ ನಗರದ ನಿವಾಸಿ. ಮುಂಜಾನೆ ಜಿಮ್ ಗೆ ಹೋಗಲು ಅಭಿಷೇಕ, ಮನೆಯಿಂದ ಸ್ಕೂಟಿ ಹತ್ತಿ ಹೋಗಿದ್ದ. ಆದ್ರೆ ಕೇಂದ್ರ ಬಸ್ ನಿಲ್ದಾಣದ ಮುಂದೆ ಬಂದಾಗ, ಅಭಿಷೇಕ ಬೈಕ್ ಗೆ ದುಷ್ಕರ್ಮಿಗಳು ತಮ್ಮ ಪಲ್ಸರ್ ಬೈಕ್ ನಿಂದ ಡಿಕ್ಕಿ ಹೊಡೆಸಿದ್ದಾರೆ.
ಬೆನ್ನಹಿಂದ ಬಂದವರು, ತನ್ನ ಕೊಲೆ ಮಾಡಲಿಕ್ಕೆ ಬಂದಿದ್ದಾರೆ ಅನ್ನೋದು ಅಭಿಷೇಕ್ ಗೆ ಅರ್ಥವಾಗಿತ್ತು. ಹೀಗಾಗಿ ದಿಡೀರನೆ ಅಲ್ಲಿಂದ ಕಾಲ್ಕಿತ್ತಿದ್ದ. ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಹೋಗಲು ಮುಂದಾಗಿದ್ದ. ಆದ್ರೆ ದುಷ್ಕರ್ಮಿಗಳು ಅಭಿಷೇಕ್ ನನ್ನು ಬೆನ್ನು ಹತ್ತಿದ್ದರು. ಕೊನೆಗೆ ಅಭಿಷೇಕ್ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದೊಳಗೆ ಹೋಗಿದ್ದ. ಆದ್ರೆ ಅಲ್ಲಿ ಹೋದ್ರು ಕೂಡಾ ಬಿಡದ ನಾಲ್ವರು ದುಷ್ಕರ್ಮಿಗಳು ಬಸ್ ನಿಲ್ದಾಣದ ಆವರಣದಲ್ಲಿಯೇ ನೂರಾರು ಜನರು ಇದ್ರು ಕೂಡಾ ಅಭಿಷೇಕ್ ಮೇಲೆ ಮಾರಕಾಸ್ತ್ರಗಳಿಂದ ಮನಸೋ ಇಚ್ಚೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.
ವರದಿ: ಅರುಣ್ ಕುಮಾರ್ ಕದಂ
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ