BMTC ಬಸ್​ನಲ್ಲಿ ಇನ್ಮುಂದೆ ಕಂಡಕ್ಟರ್ ಇರೋದಿಲ್ಲ! ಟಿಕೆಟ್ ಪಡೆಯೋದು ಹೇಗೆ ಗೊತ್ತಾ?

ಸದ್ಯ ಬಿಎಂಟಿಸಿ ಬಸ್ ಹತ್ತುತ್ತಿದ್ದಂತೆ ನಿಮ್ಮನ್ನ ಸ್ವಾಗತಿಸೋದೇ ಕಂಡೆಕ್ಟರ್. ಆದರೆ ಇನ್ಮುಂದೆ ಬಿಎಂಟಿಸಿಯಲ್ಲಿ ಈ ಕಂಡೆಕ್ಟರ್ಸ್ ಕಾಣೋದು ಡೌಟ್. ಇದನ್ನ ಕೇಳೋಕೆ ನಿಮ್ಗೆ ಆಶ್ಚರ್ಯ ಆಗ್ಬಹುದು. ಆದರೆ ಬಿಎಂಟಿಸಿ ಇಂಥ ಒಂದು ಪ್ಲಾನ್ ಮಾಡಿಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜು.3): ಬಿಎಂಟಿಸಿ (BMTC) ಸದ್ಯ ಮುಳುಗೋ ಹಡಗು, ಇರೋ ನೌಕರರಿಗೆ ಸಂಬಳ ಕೊಡಲಾಗದೇ ನಿಗಮ ಹೆಣಗಾಡ್ತಿದೆ. ಹೀಗಿರುವಾಗ ನಷ್ಟದ ಸುಳಿಯಿಂದ ಬಿಎಂಟಿಸಿಯನ್ನ ಮೇಲೆತ್ತಲು ಮಾಸ್ಟರ್ ಪ್ಲಾನ್ (Master Plan) ಒಂದು ರೆಡಿಯಾಗಿದೆ. ಹೊಸ ಪ್ಲಾನ್ ಪ್ರಕಾರ ಬಸ್ (Bus) ಓಡುತ್ತೆ, ಡ್ರೈವರ್ (Driver) ಇರ್ತಾರೆ. ಆದರೆ ಕಂಡೆಕ್ಟರ್ (Conductor) ಮಾತ್ರ ಇರೋದಿಲ್ಲ. ಏನಿದು ಹೊಸ ಪ್ಲ್ಯಾನ್? ಕಂಡಕ್ಟರ್ ಇಲ್ಲದೇ ಟಿಕೆಟ್ ಕಲೆಕ್ಷನ್ ಹೇಗೆ ಮಾಡುತ್ತೆ BMTC ಅನ್ನೋದ ರೋಚಕ ಸಂಗತಿ.

ಕಂಡೆಕ್ಟರ್ ರಹಿತ ಸೇವೆ ನೀಡಲು ನಿರ್ಧರಿಸಿರುವ BMTC !

ಸದ್ಯ ಬಿಎಂಟಿಸಿ ಬಸ್ ಹತ್ತುತ್ತಿದ್ದಂತೆ ನಿಮ್ಮನ್ನ ಸ್ವಾಗತಿಸೋದೇ ಕಂಡೆಕ್ಟರ್. ಆದರೆ ಇನ್ಮುಂದೆ ಬಿಎಂಟಿಸಿಯಲ್ಲಿ ಈ ಕಂಡೆಕ್ಟರ್ಸ್ ಕಾಣೋದು ಡೌಟ್. ಇದನ್ನ ಕೇಳೋಕೆ ನಿಮ್ಗೆ ಆಶ್ಚರ್ಯ ಆಗ್ಬಹುದು. ಕಂಡೆಕ್ಟರ್ ಇಲ್ಲದೇ ಟಿಕೆಟ್ ಕಲೆಕ್ಷನ್ ಆದ್ರೂ ಹೇಗೆ ಅಂತ. ಆದರೆ ಬಿಎಂಟಿಸಿ ಇಂಥಹದೊಂದು ಪ್ಲಾನ್ ಮಾಡಿಕೊಂಡಿದೆ. ಸದ್ಯ ನಿಗಮ ಆರ್ಥಿಕ ಹೊರೆ ಎದುರಿಸುತ್ತಿದೆ. ಜೊತೆಗೆ ಡ್ರೈವರ್ ಕೊರತೆಯೂ ಕಾಡ್ತಿದೆ. ಹೊಸ ನೇಮಕಾತಿಗೂ ಸರ್ಕಾರ ಒಪ್ಪಿಗೆ ಸೂಚಿಸ್ತಿಲ್ಲ. ಹೀಗಾಗಿ ಕಂಡೆಕ್ಟರ್ ಪೋಸ್ಟ್ ಗಳನ್ನೇ ಎತ್ತಂಗಡಿ ಮಾಡೋಕೆ ನಿಗಮ ಪ್ಲಾನ್ ಮಾಡಿದೆ.

ಡಿಜಿಟಲ್ ಮೂಲಕ‌ ಟಿಕೆಟ್ ಪಾವತಿಗೆ ಚಿಂತನೆ !

ಹೌದು, ಸದ್ಯ ಬಿಎಂಟಿಸಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸೋಕೆ ಪ್ರಯತ್ನ ಆರಂಭವಾಗಿದೆ. ಕಾಮನ್ ಮೊಬಿಲಿಟಿ ಕಾರ್ಡ್, ಇ ಪಾಸ್, ಸೇರಿ ಹಲವು ಡಿಜಿಟಲ್ ಫೆಸಿಲಿಟಿನ ಜಾರಿಗೆ ತಂದು ಟಿಕೆಟ್ ಕಲೆಕ್ಷನನ್ನು ಸಂಪೂರ್ಣ ಡಿಜಿಟಲೈಸ್ ಮಾಡಲು ಬಿಎಂಟಿಸಿ ತೀರ್ಮಾನಿಸಿದೆ. ಈ ಮೂಲಕವಾಗಿ ನಿಗಮದಲ್ಲಿರೋ ಎಲ್ಲಾ ಕಂಡೆಕ್ಟರ್ಗಳು ಕೆಲಸದಿಂದ ಮುಕ್ತರಾಗಲಿದ್ದಾರೆ. ಸದ್ಯ ಇರೋ ಪ್ರತಿಯೊಬ್ಬ ಕಂಡೆಕ್ಟಗಳೂ ಕಂಡೆಕ್ಟರ್ ಕಂ ಡ್ರೈವರ್ ಆದವರೇ.

ಇದನ್ನೂ ಓದಿ: Bidar To Bengaluru: ಬೀದರ್​ ಟು ಬೆಂಗಳೂರು, ಕೇವಲ 1 ಗಂಟೆ 10 ನಿಮಿಷಕ್ಕೆ ಪ್ರಯಾಣಿಸಿ!

ಹೀಗಾಗಿ ಈ ಎಲ್ಲಾ ಕಂಡೆಕ್ಟರ್ ಗಳನ್ನ ಡ್ರೈವಿಂಗ್‌ಗೆ ನಿಯೋಜಿಸಲು ಬಿಎಂಟಿಸಿ ತೀರ್ಮಾನಿಸಿದೆ. ಈ ಮೂಲಕ ಹೊಸ ನೇಮಕಾತಿ ಇಲ್ಲದೇ ಹೆಚ್ಚುವರಿ ಬಸ್​ ಗಳನ್ನ ರಸೆಗಿಳಿಸಲು ಬಿಎಂಟಿಸಿ ಪ್ಲಾನ್ ಮಾಡಿದೆ. ಆದರೆ ಇದು ಮತ್ತೊಂದಿಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡಲಿದೆ. ಅಲ್ಲದೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತೆ ಅಂತ ಸಾರಿಗೆ ಮುಖಂಡ ಅನಂತು ಸುಬ್ಬರಾವ್ ದೂರಿದ್ದಾರೆ.

2 ವರ್ಷದಲ್ಲಿ 100% ಟಿಕೆಟ್ ಲೆಸ್ ಬಸ್ ಸೇವೆಗೆ BMTC ಮುಂದು !

ಸದ್ಯದ ಪರಿಸ್ಥಿತಿಯಲ್ಲಿ ಕಂಡೆಕ್ಟರ್ ಇಲ್ಲದೇ ಬಸ್ ಊಹಿಸೋದು ಅಸಾಧ್ಯ, ಹೆಚ್ಚಿನ ಮಂದಿಗೆ ಡಿಜಿಟಲ್ ತಂತ್ರಜ್ಞಾನ ಒಪ್ಪಿಕೊಳ್ಳೋಕೆ ಸಮಯ ಬೇಕಾಗಲಿದೆ. ಆದರೂ ಬಿಎಂಟಿಸಿ ಸಿಬ್ಬಂದಿ ಹೊರೆ ತಪ್ಪಿಸೋ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಮುಂದಾಗಿದೆ. ಮುಂದಿನ ಒಂದೆರಡು ವರ್ಷದಲ್ಲಿ 100 ಶೇಕಡಾದಷ್ಟು ಕಂಡೆಕ್ಟರ್ ಲೆಸ್ ಬಸ್ ರಸ್ತೆಗಿಳಿಯಬೇಕು ಅನ್ನೋದು ಬಿಎಂಟಿಸಿ ಲೆಕ್ಕಾಚಾರ. ಆದರೆ ಇದು ಎಷ್ಟರಮಟ್ಟಿಗೆ ಕೈಗೂಡಲಿದೆ ಅನ್ನೋದನ್ನ ಕಾದುನೋಡ್ಬೇಕಿದೆ.

ಇದನ್ನೂ ಓದಿ: Guledagudda Khana Notebooks: ಗುಳೇದಗುಡ್ಡ ಖಣದಿಂದ ನೋಟ್​ಬುಕ್! ಏನಿದರ ವಿಶೇಷ? ಎಲ್ಲಿ ಸಿಗುತ್ತೆ?

ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್​ಗಳು

ಬೆಂಗಳೂರು: ಈಗಾಗಲೇ ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್​ಗಳು (Electric Buses In Bengaluru) ಓಡಾಡುತ್ತಿವೆ. ನೀವೂ ಹಲವು ಬಾರಿ ಎಲೆಕ್ಟ್ರಿಕ್ ಬಸ್​ಗಳಲ್ಲಿ ಪ್ರಯಾಣಿಸಿರಬಹುದು. ಬೆಂಗಳೂರಿನ ಜನರಿಗೆ ಇನ್ನೊಂದು ಖುಷಿ ಸುದ್ದಿ (Bengaluru News) ಹೊರಬಿದ್ದಿದೆ. ನೀವು ಶೀಘ್ರದಲ್ಲೇ ಬೆಂಗಳೂರಿನಿಂದ ಬಿಡದಿ, ಹೊಸಕೋಟೆ ಮತ್ತು ಅತ್ತಿಬೆಲೆಗೆ ಸಹ ಎಲೆಕ್ಟ್ರಿಕ್ ಬಸ್​ಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ  (BMTC) 300 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳಿಗೆ 14 ಮಾರ್ಗಗಳನ್ನು ಗುರುತಿಸಿದೆ. ಇವೆಲ್ಲವೂ ಅಕ್ಟೋಬರ್ ವೇಳೆಗೆ ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದೆ. ಹೀಗಾಗಿ ಬೆಂಗಳೂರಿನ ಜನರು ಎಲೆಕ್ಟ್ರಿಕ್ ಬಸ್​ಗಳ ಸೇವೆಯನ್ನು ಇನ್ನಷ್ಟು ಮಾರ್ಗಗಳಲ್ಲಿ ಬಳಸಬಹುದಾಗಿದೆ.
Published by:Pavana HS
First published: