ನಾಳೆಯಿಂದ ವಿದ್ಯಾರ್ಥಿಗಳ ಮನೆ ಬಾಗಿಲಿಗೇ ಬರುತ್ತದೆ ಬಿಎಂಟಿಸಿ ಬಸ್​ ಪಾಸ್​!


Updated:July 12, 2018, 5:57 PM IST
ನಾಳೆಯಿಂದ ವಿದ್ಯಾರ್ಥಿಗಳ ಮನೆ ಬಾಗಿಲಿಗೇ ಬರುತ್ತದೆ ಬಿಎಂಟಿಸಿ ಬಸ್​ ಪಾಸ್​!

Updated: July 12, 2018, 5:57 PM IST
ನ್ಯೂಸ್ 18 ಕನ್ನಡ

ಬೆಂಗಳೂರು(ಜು.12): ಬಿಎಂಟಿಸಿ ಬಸ್​ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ಇನ್ಮುಂದೆ ಬಸ್​ ಪಾಸ್​ಗಾಗಿ ಡಿಪೋಗಳೆದುರು ಕ್ಯೂ ನಿಲ್ಲಬೇಕಾದ ಅಗತ್ಯವಿಲ್ಲ. ವಿದ್ಯಾರ್ಥಿಗಳ ಸಮಸ್ಯೆಯನ್ನು ಕಂಡ ಬೆಂಗಳೂರು ಮಹಾನಗದ ಸಾರಿಗೆ ಇಲಾಖೆಯು ಸ್ಮಾರ್ಟ್​ ಕಾರ್ಡ್​ ವಿತರಣೆಗೆ ಕಾರ್ಯಕ್ಕೆ ಚಾಲನೆ ನೀಡಿದೆ. ಈ ಮೂಲಕ ಶುಕ್ರವಾರದಿಂದ 20 ಸಾವಿರ ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್​ ಪಾಸನ್ನು ಸ್ಮಾರ್ಟ್​ ಕಾರ್ಡ್​ ರೂಪದಲ್ಲಿ ಪಡೆಯಲಿದ್ದಾರೆ. ಈ ಕಾರ್ಡ್​ಗಳನ್ನು ಪೋಸ್ಟ್​ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಅಥವಾ ಶಾಲೆಗಳಿಗೇ ಬಿಎಂಟಿಸಿ ಅಧಿಕಾರಿಗಳು ತಲುಪಿಸಲಿದ್ದಾರೆ.
ಬಿಎಂಟಿಸಿಯು ವಿದ್ಯಾರ್ಥಿಗಳಿಗೆ ಬಸ್​ ಪಾಸ್​ಸೌಲಭ್ಯ ಕಲ್ಪಿಸಲು ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಇಲಾಖೆಯೊಂದಿಗೆ ಕೈ ಜೋಡಿಸಿದೆ. ಕ್ರೆಡಿಟ್​ ಕಾರ್ಡ್​ ಶೈಲಿಯಲ್ಲಿರುವ ಈ ಸ್ಮಾರ್ಟ್​ ಕಾರ್ಡ್​ ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಸಲಷ್ಟೇ ಬಳಸಬಹುದಾಗಿದೆ.

"ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯೊಂದಿಗೆ ಸೇರಿ ಈ ವರ್ಷದಿಂದ ನಾವು ಬಸ್​ ಪಾಸ್​ ಅರ್ಜಿ ಪ್ರಕ್ರಿಯೆಯನ್ನು ಕಂಪ್ಯೂಟರೀಕರಣಗೊಳಿಸಿದ್ದೇವೆ. ಹೀಗಾಗಿ ವಿದ್ಯಾರ್ಥಿಗಳು ಪಾಸ್​ ಪಡೆಯಲು ಬಸ್​ ಸ್ಟೇಷನ್​ಗಳಲ್ಲಿ ಕಾಯಬೇಕಾದ ಕಷ್ಟ ತಪ್ಪುತ್ತದೆ. ನಾವು ಶಾಲೆ ಹಾಗೂ ಪಿಯು ಕಾಲೇಜುಗಳಿಂದ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಗ್ರಹಿಸಿದ್ದೇವೆ. ವಿದ್ಯಾರ್ಥಿಗಳು ವೆಬ್​ಸೈಟ್​ ಮೂಲಕವೂ ಅರ್ಜಿ ಸಲ್ಲಿಸಬಹುದು. ಅಲ್ಲದೇ ಆ್ಯಪ್​ನಲ್ಲೂ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಸೇರಿಸಿದ್ದೇವೆ. ಇಲ್ಲಿ ಅವರು ತಮ್ಮ ಶಾಲೆ/ ಕಾಲೇಜಿನ ಐಡಿ ಕಾರ್ಡ್​, ಕಾಲೇಜು ಶುಲ್ಕ ಪಾವತಿಸಿದ ರಶೀದಿ ಅಪ್ಲೋಡ್​ ಮಾಡಬೇಕಾಗುತ್ತದೆ. ಪಾಸ್​ ಶುಲವನ್ನು ನಮ್ಮ ಅಧಿಕಾರಿಗಳು ಪಾಸ್​ ನೀಡಲು ಬಂದಾಗ ಇಲ್ಲವೇ ಪೋಸ್ಟ್​ ಮ್ಯಾನ್​ಗಳಿಗೆ ನೀಡಬೇಕು" ಎಂದು ಪೊನ್ನುರಾಜ್​ ತಿಳಿಸಿದ್ದಾರೆ.

ಈಗಾಗಲೇ 55 ಸಾವಿರ ವಿದ್ಯಾರ್ಥಿಗಳು ಬಿಎಂಟಿಸಿ ಬಸ್​ ಪಾಸ್​ಗಾಗಿ ಅರ್ಜಿ ಸಲ್ಲಿಸಿದ್ದು, ಜುಲೈ ತಿಂಗಳ ಅಂತ್ಯದೊಳಗೆ 20 ಸಾವಿರ ಪಾಸ್​ಗಳನ್ನು ವಿತರಿಸಲಾಗುತ್ತದೆ ಎನ್ನಲಾಗಿದೆ. 3.80 ಲಕ್ಷ ವಿದ್ಯಾರ್ಥಿಗಳು(33,250 ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, 60,000 ಪ್ರೌಢ ಶಾಲಾ ವಿದ್ಯಾರ್ಥಿಗಳು ಹಾಗೂ 1,05,000 ಪಿಯುಸಿ ವಿದ್ಯಾರ್ಥಗಳು) ಪ್ರತಿ ವರ್ಷ ಬಸ್​ ಪಾಸ್​ ಸೌಲಭ್ಯವನ್ನು ಪಡೆಯುತ್ತಿದ್ದರು. ಈವರೆಗೂ ಬಂದ ಬಸ್​ಪಾಸ್​ ಅರ್ಜಿಗಳ ಕುರಿತಾಗಿ ಮಾತನಾಡಿದ ಎಂಡಿ ಪೊನ್ನುರಾಜ್​ "ಈ ವರ್ಷದಲ್ಲಿ ಈವರೆಗೂ ಬಂದ ಅರ್ಜಿಗಳನ್ನು ಗಮನಿಸಿದರೆ, ಕಡಿಮೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎನ್ನಬಹುದು. ಆದರೆ ಜೂನ್​ 15 ರ ಬಳಿಕ ಹೆಚ್ಚಿನ ಅರ್ಜಿಗಳು ಬರುವ ಸಾಧ್ಯತೆಗಳಿವೆ" ಎಂದಿದ್ದಾರೆ.

ಬೇಡಿ, ಸಾಲ ಮಾಡಿ ಅಥವಾ ಕಳ್ಳತನ ಮಾಡಿ, ಆದರೆ ವಿದ್ಯಾರ್ಥಿಗಳಿಗೆ ಫ್ರೀ ಬಸ್​ ಪಾಸ್​ ನೀಡಿ!

"ನೀವು ಹೇಗೆ ಇದಕ್ಕೆ ಬೇಕಾದ ವೆಚ್ಚ ಸಂಗ್ರಹಿಸುತ್ತೀರಿ ಅದು ನಮಗೆ ತಿಳಿದಿಲ್ಲ. ಬೇಡಿ, ಸಾಲ ಮಾಡಿ ಅಥವಾ ಕಳ್ಳತನ ಮಾಡಿದರೂ ಸರಿ ಆದರೆ ವಿದ್ಯಾರ್ಥಿಗಳಿಗೆ ಉಚಿತ ಬಸ್​ ಪಾಸ್​ ನೀಡಿ" ಇದು ಸಾರಿಗೆ ಸಚಿವ ಡಿ. ಸಿ. ತಮ್ಮಣ್ಣ ಉಚಿತ ಬಸ್​ ಪಾಸ್​ ನೀಡಲು ಸಾಧ್ಯವಿಲ್ಲ ಎಂದು ಅಸಹಾಯತೆ ವ್ಯಕ್ತಪಡಿಸಿದಾಗ, ಕಾಂಗ್ರೆಸ್​ ನಾಯಕ ಎಸ್​. ಆರ್​. ಪಾಟೀಲ್​ ಹೇಳಿದ ಮಾತುಗಳು.
Loading...

ಈ ಯೋಜನೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕೊನೆಯ ಬಜೆಟ್​ನಲ್ಲಿ ಘೋಷಿಸಿದ್ದರು. ಆದರೆ ಇದು ಹಣಕಾಸು ಹಾಗೂ ಸಾರಿಗೆ ಇಲಾಖೆ ಇಬ್ಬರಿಗೂ ತಲೆನೋವು ನೀಡಿತ್ತು. ಆದರೆ ಈ ಕುರಿತಾಗಿ ಧ್ವನಿ ಎತ್ತಿದ ಎಸ್​. ಆರ್​ ಪಾಟೀಲ್​ "ಈ ಯೋಜನೆಯನ್ನು ಬಜೆಟ್​ನಲ್ಲಿ ಘೋಷಿಸಲಾಗಿದೆ. ಅಲ್ಲದೇ ಮೇಲ್ಮನೆ ಹಾಗೂ ಕೆಳಮನೆಯಲ್ಲಿ ಇದಕ್ಕೆ ಒಪ್ಪಿಗೆಯೂ ಸಿಕ್ಕಿದೆ. ಹೀಗಿರುವಾಗ ಹಣಕಾಸು ಇಲಾಖೆ ಹಣ ಬಿಡುಗಡೆ ಮಾಡಲು ಸಾದ್ಯವಿಲ್ಲವೆಂದು ಹೇಗೆ ಹೇಳಲು ಸಾಧ್ಯ? ಅಲ್ಲದೇ ಸಿಎಂ ಕುಮಾರಸ್ವಾಮಿ ಕೂಡಾ ಈ ಹಿಂದಿನ ಬಜೆಟ್​ನಲ್ಲಿ ಘೋಷಿಸಲಾದ ಯೋಜನೆಗಳನ್ನು ಮುಂದುವರೆಸುವುದಾಗಿ ಹೇಳಿರುವಾಗ ಅಂತಹ ನೆಪೊ ನೀಡುವುದು ಸರಿಯಲ್ಲ. ನೀವು ಬೇಡಿ, ಸಾಲ ಪಡೆಯಿರಿ ಅಥವಾ ಕಳ್ಳತನವಾದರೂ ಮಾಡಿ, ಆದರೆ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್​ ಪಾಸ್​ ನೀಡಿ" ಎಂದಿದ್ದಾರೆ.
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...