• Home
  • »
  • News
  • »
  • state
  • »
  • BMTC Electric Bus: ಬಿಎಂಟಿಸಿಯಿಂದ ರಸ್ತೆಗಿಳಿಯಲಿವೆ 921 ಹೊಸ ಎಲೆಕ್ಟ್ರಿಕ್ ಬಸ್​

BMTC Electric Bus: ಬಿಎಂಟಿಸಿಯಿಂದ ರಸ್ತೆಗಿಳಿಯಲಿವೆ 921 ಹೊಸ ಎಲೆಕ್ಟ್ರಿಕ್ ಬಸ್​

ಬಿಎಂಟಿಸಿ ಎಲೆಕ್ಟ್ರಿಕ್ ಬಸ್

ಬಿಎಂಟಿಸಿ ಎಲೆಕ್ಟ್ರಿಕ್ ಬಸ್

ಈ ಬಸ್​​ಗಳಿಗೆ ಶಾಂತಿ ನಗರ ಹಾಗೂ ಯಶವಂತಪುರ ಡಿಪೋಗಳಲ್ಲಿ ಚಾರ್ಜಿಂಗ್ ಸ್ಟೇಷನ್ ವ್ಯವಸ್ಥೆ ಮಾಡಲಾಗುತ್ತದೆ. ಈಗಿರುವ ಡಿಪೋಗಳ ಜೊತೆಗೆ ಎಲೆಕ್ಟ್ರಿಕ್ ಬಸ್ಸುಗಳಿಗಾಗಿಯೇ ಪ್ರತ್ಯೇಕ ಡಿಪೋ ಮಾಡಲು ಬಿಎಂಟಿಸಿ ಸಿದ್ಧತೆ ಕೂಡ ಮಾಡಿಕೊಳ್ಳುತ್ತಿದೆ.

  • News18 Kannada
  • 4-MIN READ
  • Last Updated :
  • Bangalore, India
  • Share this:

ಕೊರೊನಾ (Corona Virus) ನಂತರ ಆರ್ಥಿಕವಾಗಿ ಚೇತರಿಕೆ ಕಾಣುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, (BMTC) ಎಲೆಕ್ಟ್ರಿಕ್ ಬಸ್​​ಗಳತ್ತ (Electric Bus) ಮುಖ ಮಾಡುತ್ತಿದೆ. ಸಂಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿಗೆ ದೊಡ್ಡ ಸಂಖ್ಯೆಯ ಟಾಟಾ ಕಂಪನಿಯ (TATA Company Bus) ಬಸ್ಸುಗಳನ್ನ ಇದೇ ಮೊದಲ ಬಾರಿಗೆ ರಸ್ತೆಗೆ ಇಳಿಸಲು ಮುಂದಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ (Diesel Price Hike) ಕಂಗೆಟ್ಟ ಬಿಎಂಟಿಸಿ ವಿದ್ಯುತ್ ಚಾಲಿತ ಬಸ್​​ಗಳತ್ತ ಮುಖ ಮಾಡಿ ಸಾಕಷ್ಟು ತಿಂಗಳುಗಳಾಯ್ತು. ಈಗಾಗಲೇ JBM ಹಾಗೂ ಅಶೋಕ್ ಲೇ ಲ್ಯಾಂಡ್ ಕಂಪನಿಯ ಒಟ್ಟು 390 ಎಲೆಕ್ಟ್ರಿಕ್ ಬಸ್ಸುಗಳನ್ನ ಸಂಸ್ಥೆ ಹೊಂದಿದ್ದು. ಇದೀಗ ಬರೋಬ್ಬರಿ 921 ಹೊಸ ಮಾದರಿಯ ಟಾಟಾ ಕಂಪನಿಯ ಬಸ್​ಗಳನ್ನ ಬಿಎಂಟಿಸಿ ರಸ್ತೆಗೆ ಇಳಿಸಲು ಸಿದ್ದವಾಗಿದ್ದು ಒಪ್ಪಂದಕ್ಕೂ ಸಹಿ ಹಾಕಲಾಗಿದೆ.


FAME2 ಅಡಿಯಲ್ಲಿ ಹೊಸ ಎಲೆಕ್ಟ್ರಿಕ್ ಬಸ್ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, 6 ತಿಂಗಳ ಒಳಗಾಗಿ ಬೆಂಗಳೂರು ರಸ್ತೆಗೆ ಹೊಸ ಬಸ್​​ಗಳು ಇಳಿಯಲಿವೆ.


ಎಲ್ಲವೂ ನಾನ್​ ಎಸಿ ಬಸ್​ಗಳು


ಈಗ ಸಂಸ್ಥೆಯಲ್ಲಿ 390 ಎಲೆಕ್ಟ್ರಿಕ್ ಬಸ್​ಗಳಿದ್ದು ಹೊಸ 921 ಬಸ್​​​ಗಳ ಸೇರ್ಪಡೆಯಾದ್ರೆ, ಒಟ್ಟು 1,311 ಎಲೆಕ್ಟ್ರಿಕ್ ಬಸ್​​ಗಳು ಬಿಎಂಟಿಸಿ ಸಂಸ್ಥೆಯಲ್ಲಿ ಇರಲಿವೆ. ಇನ್ನು ಈ ಬಸ್​​ಗಳು ಲೋ ಫ್ಲೋರ್ ಬಸ್​ಗಳಾಗಿದ್ದು ಹತ್ತಲು, ಇಳಿಯಲು ಅನುಕೂಲವಾಗಲಿದೆ. ಎಲ್ಲಾ ಬಸ್​ಗಳು ನಾನ್ ಎಸಿ ಬಸ್​ಗಳಾಗಿವೆ.


ಬಿಎಂಟಿಸಿ ಎಲೆಕ್ಟ್ರಿಕ್ ಬಸ್


ಟಾಟಾ ಕಂಪನಿಯಿಂದಲೇ ಬಸ್​ ನಿರ್ವಹಣೆ


ಒಂದು ಬಸ್​​ ಬೆಲೆ ಒಂದು ಕಾಲು ಕೋಟಿ ಆಗುತ್ತದೆ. ಬಸ್​​​ಗಳ ಖರೀದಿಗೆ ನಮ್ಮ ಸಂಸ್ಥೆಯಿಂದ ಯಾವುದೇ ಹಣ ಖರ್ಚು ಮಾಡುತ್ತಿಲ್ಲ. ಒಪ್ಪಂದದ ಮೇರೆಗೆ ಟಾಟಾ ಕಂಪನಿಯ 12 ಮೀಟರ್ ಉದ್ದದ ಬಸ್​​ಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ಬಸ್​​ಗಳ ನಿರ್ವಹಣೆಯನ್ನ ಬಸ್ ಕಂಪನಿಯೆ ಮಾಡುತ್ತದೆ. ಬಸ್ ಕಂಪನಿಯೆ ಚಾಲಕರನ್ನ ನೇಮಿಸಿರುತ್ತದೆ. ಕಂಡಕ್ಟರ್ ಬಿಎಂಟಿಸಿ ಕಡೆಯಿಂದ ಇರುತ್ತಾರೆ. ನಿತ್ಯ 200 ಕಿಲೋ ಬಸ್​ ಸಂಚಾರ ಮಾಡಬೇಕು, ಕಿಲೋ ಮೀಟರ್​​ಗೆ ಇಂತಿಷ್ಟು ಅಂತ ಹಣವನ್ನ ಸಂಸ್ಥೆ ಟಾಟಾ ಕಂಪನಿಗೆ ನೀಡಲಿದೆ ಎಂದು ಬಿಂಎಂಟಿಸಿ ಐಟಿ ವಿಭಾಗದ ನಿರ್ದೇಶಕ ಸೂರ್ಯಸೇನ್ ಹೇಳುತ್ತಾರೆ.


ಶಾಂತಿನಗರ ಮತ್ತು ಯಶವಂತಪುರದಲ್ಲಿ ಚಾರ್ಜಿಂಗ್ ಸ್ಟೇಷನ್


ಇನ್ನು ಈ ಬಸ್​​ಗಳಿಗೆ ಶಾಂತಿ ನಗರ ಹಾಗೂ ಯಶವಂತಪುರ ಡಿಪೋಗಳಲ್ಲಿ ಚಾರ್ಜಿಂಗ್ ಸ್ಟೇಷನ್ ವ್ಯವಸ್ಥೆ ಮಾಡಲಾಗುತ್ತದೆ. ಈಗಿರುವ ಡಿಪೋಗಳ ಜೊತೆಗೆ ಎಲೆಕ್ಟ್ರಿಕ್ ಬಸ್ಸುಗಳಿಗಾಗಿಯೇ ಪ್ರತ್ಯೇಕ ಡಿಪೋ ಮಾಡಲು ಬಿಎಂಟಿಸಿ ಸಿದ್ಧತೆ ಕೂಡ ಮಾಡಿಕೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆಯಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಬಸ್​​ಗಳ ಬಳಕೆಗೆ ಈ ಮೂಲಕ ಸಂಸ್ಥೆ ಮುಂದಾಗಿದೆ.


ಬಿಎಂಟಿಸಿ ಎಲೆಕ್ಟ್ರಿಕ್ ಬಸ್


ಜನವರಿ ಅಥವಾ ಫೆಬ್ರವರಿಯಲ್ಲಿ ಸಾರಿಗೆ ನೌಕರರ ಮುಷ್ಕರ ಸಾಧ್ಯತೆ


ಜನವರಿ ಅಥವಾ ಫೆಬ್ರವರಿಯಲ್ಲಿ ಮುಷ್ಕರ ನಡೆಸಲು ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಸಭೆಯಲ್ಲಿ ಎಲ್ಲ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.


ಈ ಹಿಂದೆಯೂ ಸುದೀರ್ಘ ಕಾಲ ಮುಷ್ಕರ ನಡೆಸಿದ್ದ ಸಾರಿಗೆ ನೌಕರರು


ಸಾರಿಗೆ ನೌಕರರು ಈ ಹಿಂದೆಯೂ ಎರಡು ಬಾರಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದರು. ಆದರೆ ದೀರ್ಘ ಕಾಲ ಮುಷ್ಕರ ನಡೆಸಿದರೂ ಕೂಡ ರಾಜ್ಯ ಸರ್ಕಾರ ಭರವಸೆಗಳನ್ನು ಮಾತ್ರ ನೀಡಿ ಸುಮ್ಮನಾಗಿದೆ. ಆದರೆ ಈವರೆಗೂ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಸಾರಿಗೆ ನೌಕರರ ಸಂಘದ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.


ಇದನ್ನೂ ಓದಿ: Kalaburgi: ಮನೆಗೆ ಬರದ ಕಾಲೇಜಿಗೆ ಹೋಗಿದ್ದ ಯುವತಿ; 3 ದಿನ ನಂತ್ರ ಸೇತುವೆ ಬಳಿ ಶವ ಪತ್ತೆ


ಕಳೆದ ಬಾರಿ ಅಂದರೆ, 2020ರ ಡಿಸೆಂಬರ್ 11 ರಿಂದ 14 ರವರೆಗೂ ಬರೋಬ್ಬರಿ ನಾಲ್ಕು ದಿನಗಳ ಕಾಲ ಮುಷ್ಕರ ನಡೆಸಿದ್ದರು. ಆ ಬಳಿಕ 2021ರ ಏಪ್ರಿಲ್​ 7 ರಿಂದ 21ರ ವರೆಗೂ ಅಂದರೇ ಸುದೀರ್ಘ 15 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು.

Published by:Mahmadrafik K
First published: