ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 'ನಮ್ಮ ಬಿಎಂಟಿಸಿ' ಮೊಬೈಲ್ ಆ್ಯಪ್ (Namma BMTC Mobile App) ಬಿಡುಗಡೆ ಮಾಡಿದೆ. ಬಸ್‌ಗಳನ್ನು ಟ್ರ್ಯಾಕ್ (Bus Tracking) ಮಾಡಲು ಈ ಆ್ಯಪ್ ಸಹಾಯ ಆಗಲಿದೆ. ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಆ್ಯಪ್ ಮೂಲಕ ಪ್ರಯಾಣಿಕರು (Passengers) ಬಸ್ ಎಲ್ಲಿದೆ? ಯಾವ ಸಮಯಕ್ಕೆ ಬರಲಿದೆ ಎಂಬುದನ್ನು ತಿಳಿಯಬಹುದಾಗಿದೆ. ಮುಂಬರುವ ತಿಂಗಳುಗಳಲ್ಲಿ ಸ್ಕ್ರ್ಯಾಪ್ ಆಗಲಿರುವ ಬಸ್‌ಗಳಲ್ಲಿ ಲೈವ್ ಟ್ರ್ಯಾಕಿಂಗ್ ಲಭ್ಯವಿರುವುದಿಲ್ಲ.
ನಮ್ಮ ಬಿಎಂಟಿಸಿ ಆ್ಯಪ್ ವಿಶೇಷತೆ
1.ಬಳಕೆದಾರರಿಗೆ ನೈಜ ಸಮಯದಲ್ಲಿ ಬಿಎಂಟಿಸಿಯ ಬಸ್ ಟ್ರ್ಯಾಕ್ ಮಾಡಲು ಸಹಾಯವಾಗಲಿದೆ.
2.ಪ್ರಯಾಣವನ್ನು ತೊಂದರೆಯಿಂದ ಮುಕ್ತವಾಗಿಸಲು ಇತರ ಆಯ್ಕೆ
3.ಬಸ್ ದರದ ವಿವರಗಳು, ಮಾರ್ಗಗಳು ಮತ್ತು ವೇಳಾಪಟ್ಟಿ ಲಭ್ಯವಿರಲಿವೆ.
4.400 ವೋಲ್ವೋ ಬಸ್‌ಗಳು ಸೇರಿ ದಿನ ಸುಮಾರು 5,600 ಬಸ್‌ಗಳನ್ನು ನಿರ್ವಹಿಸುತ್ತೇವೆ.
5.ನಮ್ಮ ಬಿಎಂಟಿಸಿ’ ಆ್ಯಪ್ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿದೆ.
7.ಭಾಷೆ ಬದಲಾಯಿಸಲು ಸರಳವಾದ ಆಯ್ಕೆಯನ್ನೂ ನೀಡಲಾಗಿದೆ
8.ಸೈನ್ ಇನ್ ಮಾಡುವುದರೊಂದಿಗೆ ಅಥವಾ ಗೆಸ್ಟ್ ಯೂಸರ್ ಆಗಿಯೂ ಬಳಸಬಹುದು
9.ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡಲು ಎಸ್ಒಎಸ್ ವೈಶಿಷ್ಟ್ಯ ಎಂಬೆಡ್ ಮಾಡಲಾಗಿದೆ
10.ಬಿಎಂಟಿಸಿ ಸಹಾಯವಾಣಿಗಳಿಗೆ ಸಂಪರ್ಕಿಸಲು ಆ್ಯಪ್ನಲ್ಲಿ ಲಿಂಕ್ ಸಹ ನೀಡಲಾಗಿದೆ.
11.ವಾಹನ ನಿಲುಗಡೆ, ವಿಶ್ರಾಂತಿ ಕೊಠಡಿ, ಎಟಿಎಂಗಳ ಬಗ್ಗೆಯೂ ಮಾಹಿತಿ ಪಡೆಯಬಹುದು.
ಇದನ್ನೂ ಓದಿ: KGF Babu ನಿವಾಸದಲ್ಲಿ ಸಾವಿರಕ್ಕೂ ಅಧಿಕ ವೋಟರ್ ಐಡಿ ಪತ್ತೆ!
12.ಕುಡಿಯುವ ನೀರಿನ ಸೌಲಭ್ಯ, ನಿರ್ದಿಷ್ಟವಾಗಿ ಬಸ್ ನಿಲ್ದಾಣಗಳು ಮತ್ತು ಟಿಟಿಎಂಸಿ ಒದಗಿಸುವ ಸೌಲಭ್ಯ ತಿಳಿದುಕೊಳ್ಳಬಹುದಾಗಿದೆ.
13.ಶುಲ್ಕ ಕ್ಯಾಲ್ಕುಲೇಟರ್ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಸೇರಸಲಾಗುತ್ತದೆ ಎಂದು ಬಿಎಂಟಿಸಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ