BMTCಗೆ ಪ್ರೈವೇಟ್ ಡ್ರೈವರ್ಸ್! ಔಟ್​ಸೋರ್ಸ್ ಏಜೆನ್ಸಿಯಿಂದ ಚಾಲಕರ ನೇಮಕಕ್ಕೆ ಚಿಂತನೆ

ಬಿಎಂಟಿಸಿ ಆಡಳಿತ ಮಂಡಳಿ ಗುತ್ತಿಗೆ ಆಧಾರದಲ್ಲಿ ಡ್ರೈವರ್ ನಿಯೋಜನೆಗೆ ಬಿಎಂಟಿಸಿ ಚಿಂತನೆ ನಡೆಸಿದೆ. ಎಲೆಕ್ಟ್ರಿಕ್ ಬಸ್ ಗಳಿಗೆ ಮೊದಲು ಬಾಹ್ಯ ಏಜೆನ್ಸಿ ಮೂಲಕ ಚಾಲಕರ ನೇಮಕಕ್ಕೆ ಆಲೋಚನೆ ಮಾಡಿದ್ದು, ಆ ನಂತರ ಹಂತ ಹಂತವಾಗಿ ಮುಂದುವರೆಯಲು, ನಿನ್ನೆ ಜರುಗಿದ  ಬಿಎಂಟಿಸಿ  ಮಂಡಳಿಯ ಸಭೆಯಲ್ಲಿ ಚರ್ಚೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಜೂ.09): ಕೊರೊನಾದಿಂದ (Covid19) ಸಂಕಷ್ಟಕ್ಕೆ ಸಿಲುಕಿದ್ದ ಸಾರಿಗೆ ಇಲಾಖೆ (Transport Department) ಇದೀಗ ಖಾಸಗೀಕರಣಕ್ಕೆ ಒಲವು ತೋರುತ್ತಿದೆ. ನಿನ್ನೆ ಬಿಎಂಟಿಸಿ (BMTC) ಅಧಿಕಾರಿಗಳ ಸಭೆಯಲ್ಲಿ (Meeting) ಈ ಬಗ್ಗೆ ಚರ್ಚೆಯಾಗಿದೆ. ಸಾಲದ ಸುಳಿಯಲ್ಲಿರುವ ಬಿಎಂಟಿಸಿ (BMTC) ಬಸ್ ಗೆ ಗುತ್ತಿಗೆ ಆಧಾರದ ಮೇಲೆ ಚಾಲಕರು ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.ನಷ್ಟದ ಸುಳಿಯಲ್ಲಿರುವ ಸಿಲುಕಿರುವ ಬಿಎಂಟಿಸಿ ಸಾರಿಗೆ ಖಾಸಗೀಕರಣದತ್ತ ಹೆಜ್ಜೆ ಇಟ್ಟಿದೆ. ಈ ಬಗ್ಗೆ ಬಿಎಂಟಿಸಿ ಮಂಡಳಿ ನಿನ್ನೆ‌ ಜರುಗಿದ ಸಭೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಅಧಿಕಾರಿಗಳು ಗಂಭೀರ ಚರ್ಚೆ ನಡೆಸಿದ್ದಾರೆ.

2 ಕೋಟಿ ಸಾಲದಲ್ಲಿದೆ ಬಿಎಂಟಿಸಿ

ಅಂದಾಜು ‌2 ಸಾವಿರ ಕೋಟಿಯಷ್ಟು ಸಾಲದಲ್ಲಿ ಬಿಎಂಟಿಸಿ ಇದೆ. ಇರುವ ಬಸ್ ನಿಲ್ದಾಣಗಳನ್ನೆ ಅಡ ಇಡುವ ಪರಿಸ್ಥಿತಿ ಬಂದಿದೆ. ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಸಂಬಳ ಕೊಡಲು ಹಣ ಇಲ್ಲ. ಪ್ರತಿ‌ ತಿಂಗಳು ವೇತನ ಕೊಡಲು ಸರ್ಕಾರದ ಕೈಯೊಡ್ಡಬೇಕಾಗಿದೆ. ಇದನ್ನ ನಿರ್ವಹಣೆ ಮಾಡೋದು ಬಿಎಂಟಿಸಿ ಸಾರಿಗೆ ಸಂಸ್ಥೆಗೆ ದೊಡ್ಡ ಸವಾಲಾಗಿದೆ.

ಗುತ್ತಿಗೆ ಆಧಾರದಲ್ಲಿ ಡ್ರೈವರ್ ನಿಯೋಜನೆ

ಬಿಎಂಟಿಸಿ ಆಡಳಿತ ಮಂಡಳಿ ಗುತ್ತಿಗೆ ಆಧಾರದಲ್ಲಿ ಡ್ರೈವರ್ ನಿಯೋಜನೆಗೆ ಬಿಎಂಟಿಸಿ ಚಿಂತನೆ ನಡೆಸಿದೆ. ಎಲೆಕ್ಟ್ರಿಕ್ ಬಸ್ ಗಳಿಗೆ ಮೊದಲು ಬಾಹ್ಯ ಏಜೆನ್ಸಿ ಮೂಲಕ ಚಾಲಕರ ನೇಮಕಕ್ಕೆ ಆಲೋಚನೆ ಮಾಡಿದ್ದು, ಆ ನಂತರ ಹಂತ ಹಂತವಾಗಿ ಮುಂದುವರೆಯಲು, ನಿನ್ನೆ ಜರುಗಿದ  ಬಿಎಂಟಿಸಿ  ಮಂಡಳಿಯ ಸಭೆಯಲ್ಲಿ ಚರ್ಚೆಯಾಗಿದೆ.

ಇದನ್ನೂ ಓದಿ: BY Vijayendra: ಈಗಲೇ ಸಿಎಂ ಅನ್ನಬೇಡಿ, ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿದ್ದೇನೆ: ಬಿ ವೈ ವಿಜಯೇಂದ್ರ ಮನವಿ

ವಜಾ ಆಗಿದ್ದ ನೌಕರರ ಮರು ನೇಮಕವಾಗಿಲ್ಲ

ಈ ಹಿಂದೆ ಸಾರಿಗೆ ನೌಕರರು ‌ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರರನ್ನ ವಜಾಮಾಡಲಾಗಿದೆ. ಇದುವರೆಗೂ ಸರ್ಕಾರ ಅವರನ್ನ ಮರು ನೇಮಕ ಮಾಡಿಲ್ಲ. ಹೀಗಾಗಿ ಅವರ ಜಾಗಕ್ಕೆ ಗುತ್ತಿಗೆ ಆಧಾರದ ಮೇಲೆ ಖಾಸಗಿ ಚಾಲಕರನ್ನ ಔಟ್ ಸೋರ್ಸ್ ಆಗಿ ನೇಮಕ ಮಾಡಿಕೊಳ್ಳಲು ಚಿಂತನೆ ನಡೆದಿದೆ ಎಂದು ಬಿಎಂಟಿಸಿ ಉಪಾಧ್ಯಕ್ಷ ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.

ಲಾಭದ ಟ್ರ್ಯಾಕ್​ನಲ್ಲಿ ಬಿಎಂಟಿಸಿ

ಕೊರೋನಾ ಸಮಯದಲ್ಲಿ ನಷ್ಟದಲ್ಲಿದ್ದ ಸಾರಿಗೆ ಇದೀಗ ಲಾಭದ ಟ್ರ್ಯಾಕ್ ನತ್ತ ಬರ್ತಾ ಇದೆ. ಆಲ್ಲದೆ ವಜಾಗೊಂಡ ನೌಕರರನ್ನ ನೇಮಕ ಮಾಡಿಕೊಳ್ಳದೇ ಸರ್ಕಾರ ಸಾರಿಗೆ ಖಾಸಗೀಕರಣದತ್ತ ಯೋಚಿಸುತ್ತಿರುವುದು ಸರಿಯಲ್ಲ ಎಂದು  ಸಾರಿಗೆ ನೌಕರರ ಸಂಘದ ಆನಂದ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Chaddi Politics: ಚಡ್ಡಿ ಹೋಗಿ ಪ್ಯಾಂಟ್ ಬಂದಿರೋದು ಸಿದ್ದುಗೆ ಗೊತ್ತಿಲ್ಲ! ಬಿ.ಸಿ. ನಾಗೇಶ್ ಟಾಂಗ್

ಖಾಸಗಿ ಏಜೆನ್ಸಿ ಮೂಲಕ ಚಾಲಕರನ್ನ ನೇಮಕ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಸಲಾಗಿದೆ ಎಂಬ ಮಾತು ಕೇಳಿ ಬಂದಿದೆ.ಇನ್ನೊಂದು ಕಡೆ ಖಾಸಗಿ ಚಾಲಕರ ನೇಮಕದಿಂದ ಬಿಎಂಟಿಸಿ ಹಣ ಉಳಿತಾಯದ ಪ್ಲ್ಯಾನ್ ಕೂಡ ಮಾಡಿಕೊಂಡಿದೆ. ಆದ್ರೆ ಈಗಾಗಲೇ ‌ಕೆಲಸ ಕಳೆದುಕೊಂಡಿರುವ ಕಾರ್ಮಿಕರ ಆಸೆಗೆ ಶಾಶ್ವತ ತಣ್ಣೀರು ಎರೆಚಲು ಬಿಎಂಟಿಸಿ ಮುಂದಾಗಿದ್ದೀಯಾ ಅನ್ನೋ ಅನುಮಾನ ‌ಮೂಡಿದೆ.

ಬಿಎಂಟಿಸಿ ಖಾಸಗೀಕರಣ

ದಯಮಾಡಿ ಅಮಾನತು, ವಜಾಗೊಂಡ ಸಿಬ್ಬಂದಿಗೆ ಕೂಡಲೇ ಆದೇಶ ಹೊರಡಿಸಿ ಎಂದು ಸಾರಿಗೆ ಮತ್ತೋರ್ವ ಮುಖಂಡ ನಾಗರಾಜ್ ಮನವಿ ಮಾಡಿಕೊಳ್ಳುತ್ತಾರೆ‌.
ಕೊರೋನಾ ಸಮಯದಲ್ಲಿ ಮುಷ್ಕರ ನಡೆಸಿದ್ದ ಸಾರಿಗೆ‌ ನೌಕರರನ್ನ ಸರ್ಕಾರ ವಜಾ ಮಾಡಿದೆ.ಆದ್ರೆ ಇದುವರೆಗೂ ಸರ್ಕಾರ ವಜಾಗೊಂಡ ಸಾರಿಗೆ‌ ನೌಕರರನ್ನ ಮರು ನೇಮಕ ಮಾಡಿಕೊಳ್ಳಲೇ ಇಲ್ಲ. ಈ ಮಧ್ಯೆ ಬಿಎಂಟಿಸಿ ಸಾರಿಗೆ ಸಂಸ್ಥೆಯನ್ನ ಖಾಸಗೀಕರಣ ಮಾಡಲು ಹೊರಟಿರೋದು ಎಷ್ಟರ ಮಟ್ಟಿಗೆ ಸರಿ?
Published by:Divya D
First published: