ಪ್ರಯಾಣಿಕರ ಅನುಕೂಲಕ್ಕಾಗಿ ಮೊಬೈಲ್ ಆಪ್: ಮತ್ತಷ್ಟು ಜನಸ್ನೇಹಿಯಾಗಲು ಮುಂದಾದ ಬಿಎಂಟಿಸಿ


Updated:March 20, 2018, 6:51 PM IST
ಪ್ರಯಾಣಿಕರ ಅನುಕೂಲಕ್ಕಾಗಿ ಮೊಬೈಲ್ ಆಪ್: ಮತ್ತಷ್ಟು ಜನಸ್ನೇಹಿಯಾಗಲು ಮುಂದಾದ ಬಿಎಂಟಿಸಿ

Updated: March 20, 2018, 6:51 PM IST
-ಶಾಲಿನಿ ಈಶ್ವರ್, ನ್ಯೂಸ್ 18 ಕನ್ನಡ

ಬೆಂಗಳೂರು(ಮಾ.20): ಹೈಟೆಕ್ ಸಿಟಿ ಬೆಂಗಳೂರಿನಲ್ಲಿ ಬಿಎಂಟಿಸಿ ಜನರ ಜೀವನಾಡಿ. ಹೊಸ ಹೊಸ ಪ್ರಯತ್ನಗಳಿಂದ ಸದಾ ಸುದ್ದಿಯಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜನರಿಗೆ ಹತ್ತಿರವಾಗಲು ಹೊಸ ಪ್ರಯತ್ನಕ್ಕೆ ಕಾಲಿಟ್ಟಿದೆ. ಸಾರ್ವಜನಿಕರ ದೂರು ದುಮ್ಮಾನಗಳನ್ನ ಆಲಿಸಲು ಬಿಎಂಟಿಸಿ ಆಪ್ ಬಿಡುಗಡೆಗೆ ಮುಂದಾಗಿದೆ.

ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವಾಗ ಯಾವುದೇ ಸಮಸ್ಯೆಗಳು ಎದುರಾದರೆ ಈ ಆಪ್ ಮೂಲಕ ದೂರು ಸಲ್ಲಿಸಬಹುದಾಗಿದೆ. ಈ ಆಪ್ ಮೂಲಕ ಸಾರ್ವಜನಿಕರು ಇಲಾಖೆಯೊಂದಿಗೆ ಫುಲ್ ಆಕ್ಟೀವ್‌ ಆಗಿ ಕೂಡ ಇರಲು ಸಹಾಯವಾಗಲಿದೆ.. ಬಸ್​ನ ಸ್ವಚ್ಚತೆ, ಡ್ರೈವರ್​, ಕಂಡಕ್ಟರ್​ ವರ್ತನೆ ಸೇರಿದಂತೆ ಹಲವು ದೂರುಗಳನ್ನು ದಾಖಲು ಮಾಡಬಹುದಾಗಿದೆ.ಆಪ್​ ಮೂಲಕ ಸಾರಿಗೆ ಇಲಾಖೆಯ ಬಗ್ಗೆ ರೇಟಿಂಗ್​ ಕೂಡ ಕೊಡಬಹುದು.

ಸಾರಿಗೆ ಇಲಾಖೆಯ ಟೆಕ್ನಿಕಲ್​ ಟೀಂ ಈಗಾಗಲೇ ಈ ಹೊಸ ಆ್ಯಪ್​​ ಅನ್ನ ರೆಡಿ ಮಾಡಿದ್ದು, ಸದ್ಯದಲ್ಲೇ ಬಿಡುಗಡೆ ಮಾಡಲಿದೆ.

ಒಟ್ಟಿನಲ್ಲಿ, ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಸಾರಿಗೆ ಇಲಾಖೆ ಹೊಸ ಹೊಸ ಪ್ರಯತ್ನ ಮಾಡುತ್ತಿದ್ದು. ಬೆಂಗಳೂರು ಮಹಾನಗರ ಸಾರಿಗೆಯ ಈ ಹೊಸ ಪ್ರಯೋಗ ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಎನ್ನುವುದನ್ನ ಕಾದು ನೋಡಬೇಕಿದೆ.
First published:March 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...