ಬೆಂಗಳೂರು: ಕೆಲಸಕ್ಕೆಂದು ಹೊರಟಿದ್ದ ಬಿಎಂಟಿಸಿ ಚಾಲಕ (BMTC Driver) ಲಾಡ್ಜ್‌ವೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ (Suicide Case) ಘಟನೆ ಬೆಂಗಳೂರಿನ (Bengaluru) ಕೆಂಗೇರಿಯಲ್ಲಿ (Kengeri) ನಡೆದಿದೆ. ಕೆಂಗೇರಿಯ ಲಾಡ್ಜ್‌ವೊಂದರಲ್ಲಿ ಯುವಕನ ಮೃತದೇಹ ಪತ್ತೆಯಾಗಿದ್ದು, ಮೃತ ಬಿಎಂಟಿಸಿ ಚಾಲಕನನ್ನು ಚನ್ನಪಟ್ಟಣ ಮೂಲದ ಪುಟ್ಟೇಗೌಡ (28) ಎಂದು ಗುರುತಿಸಲಾಗಿದೆ.
ಕಳೆದ ಆರು ತಿಂಗಳಿನಿಂದ ಬಿಬಿಎಂಟಿಸಿ ಡ್ರೈವರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುಟ್ಟೇಗೌಡ ಅವರು ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕೆಲಸಕ್ಕೆ ಹೋಗುತ್ತೀನಿ ಎಂದು ಮನೆಯ ಸದಸ್ಯರ ಬಳಿ ಹೇಳಿ ಹೊರಟಿದ್ದರು. ಅದರೆ ಸಂಜೆ ವೇಳೆಗೆ ಕೇಂಗೇರಿಯ ಲಾಡ್ಜ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತ ಪುಟ್ಟೇಗೌಡನ ಹಣೆ ಮೇಲೆ ಗಾಯವಾಗಿದೆ ಎಂದು ಸಂಬಂಧಿಕರು ಆರೋಪ ಮಾಡಿದ್ದು, ಹೀಗಾಗಿ ಈ ಸಾವಿನ ಹಿಂದೆ ಪುಟ್ಟೇಗೌಡನ ಮನೆಯವರು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Bengaluru: ಆಟೋ ಹತ್ತಿದಾಕೆಯ ಮಗಳನ್ನೇ ಪಟಾಯಿಸಿದ, ಸೂಸೈಡ್ ನಾಟಕ ಮಾಡಿದ ಯುವತಿ ಸಾವು!
ಯುವತಿ ಜತೆ ಬಂದಿದ್ದ ಪುಟ್ಟೇಗೌಡ!
ಬಿಎಂಟಿಸಿ ಚಾಲಕರಾಗಿದ್ದ ಪುಟ್ಟೇಗೌಡ ಅವರ ಸಾವಿಗೂ ಮೊದಲು ಕೆಂಗೇರಿ ಲಾಡ್ಜ್‌ಗೆ ಬರುವ ವೇಳೆ ಒಬ್ಬಳು ಯುವತಿಯ ಜೊತೆಗೆ ಬಂದಿದ್ದರು. ಲಾಡ್ಜ್‌ನಲ್ಲಿ ಸ್ವಲ್ಪ ಕಾಲ ಇಬ್ಬರೂ ಜತೆಗಿದ್ದರು. ಬಳಿಕ ಯುವತಿ ರೂಂನ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿಕೊಂಡು ಹೊರ ಹೋಗಿದ್ದಾಳೆ. ಹಣ ಬಾಕಿ ಇರುವ ಹಿನ್ನೆಲೆ ಸಂಜೆ ವೇಳೆಗೆ ಲಾಡ್ಜ್‌ನ ಸಿಬ್ಬಂದಿ ರೂಂಗೆ ತೆರಳಿ ಬಾಗಿಲು ಓಪನ್ ಮಾಡಿದಾಗ ಪುಟ್ಟೇಗೌಡ ಸಾವನ್ನಪ್ಪಿರುವ ವಿಚಾರ ತಿಳಿದುಬಂದಿದೆ. ಸದ್ಯ ಮೃತ ಯುವಕನ ಮನೆಯವರು ಆ ಯುವತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Crime News: ನನಗೆ ಬದುಕೋ ಆಸೆ ಇದೆ, ಆದ್ರೂ ಸಾಯ್ತಿದ್ದೀನಿ; ಕೈ ಮೇಲೆಯೇ ಡೆತ್ ನೋಟ್ ಬರೆದು ಗೃಹಿಣಿ ಆತ್ಮಹತ್ಯೆ!
‘ಕುಟುಂಬದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ’
ಬಿಎಂಟಿಸಿ ಚಾಲಕ ಪುಟ್ಟೇಗೌಡ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಚಾಲಕನ ಸಹೋದರ ಸಿದ್ದೇಗೌಡ ಅವರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಹೋದರನ ಸಾವಿನ ಬಗ್ಗೆ ಅನುಮಾನ ಇರುವ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ನಮ್ಮ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಹೀಗಾಗಿ ಪುಟ್ಟೇಗೌಡನ ಸಾವಿನಲ್ಲಿ ಅನುಮಾನವಿದೆ. ತಲೆ ಹಾಗೂ ಮುಖದ ಮೇಲೆ ರಕ್ತದ ಗಾಯಗಳಾಗಿವೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ವಿನಂತಿಸಿದ್ದಾರೆ.
ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಯೂಡಿಆರ್ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಾವಿನ ಕುರಿತು ತನಿಖೆ ಆರಂಭಿಸಿದ್ದಾರೆ. ಸದ್ಯ ಮೃತ ಪುಟ್ಟೇಗೌಡ ಅವರ ಮೃತದೇಹ ಆರ್ ಆರ್ ಆಸ್ಪತ್ರೆಯಲ್ಲಿದ್ದು, ಮಂಗಳವಾರ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಪೊಲೀಸರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ.
ದೂರಿನಲ್ಲಿ ಯುವತಿಯ ಉಲ್ಲೇಖವಿಲ್ಲ
ಅಂದ ಹಾಗೆ ಮೃತ ಯುವಕ ಪುಟ್ಟೇಗೌಡ ಅವರ ಅನುಮಾನಾಸ್ಪದ ಸಾವಿನ ಕುರಿತಂತೆ ಅವರ ಸಹೋದರ ಸಿದ್ದೇಗೌಡ ಅವರು ಕೆಂಗೇರಿ ಪೊಲೀಸ್ ಠಾಣೆಯಲ್ಲಿದ ದೂರು ದಾಖಲಿಸಿದ್ದರಾದರೂ ಸಾವಿನ ಹಿಂದೆ ಯುವತಿಯ ಕೈವಾಡ ಇದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿಲ್ಲ. ಆರಂಭದಲ್ಲಿ ದೂರಿನ ಪ್ರತಿಯಲ್ಲಿ ಅಪರಿಚಿತ ಯುವತಿ ಬಗ್ಗೆ ಉಲ್ಲೇಖ ಮಾಡಲಾಗಿತ್ತು. ಬಳಿಕ ಪೊಲೀಸರ ಸೂಚನೆಯಂತೆ ಹೊಸ ದೂರು ನೀಡಿದ್ದು, ತನಿಖಾ ಹಂತದಲ್ಲಿ ಯುವತಿ ಬಗ್ಗೆ ತನಿಖೆ ಮಾಡೋದಾಗಿ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಪೊಲೀಸರು ಸೂಚಿಸಿದಂತೆ ಮೃತನ ಸಹೋದರ ದೂರು ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ