ಬೆಂಗಳೂರು (ಮಾರ್ಚ್ 30); ಮುಂದಿನ ವಾರದಿಂದ ಸಾರಿಗೆ ಬಸ್ ರೋಡಿಗಿಳಿಯುವುದಿಲ್ಲ. ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಮುಂದಾಗಿದ್ದಾರೆ. ಏ.7 ರಿಂದ ಅನಿರ್ದಾಷ್ಟಾವದಿ ಮುಷ್ಕರ ಮಾಡಲು ಸಾರಿಗೆ ನೌಕರರ ಒಕ್ಕೂಟ ನಿರ್ಧರಿಸಿದೆ. ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಾಳೆಯಿಂದ ಸರ್ಕಾರ ಬಿಸಿ ಮುಟ್ಟಿಸಲು ವಿನೂತನವಾಗಿ ಹೋರಾಟವನ್ನು ಸಹ ಹಮ್ಮಿಕೊಂಡಿದ್ದಾರೆ. ಸಾರಿಗೆ ನೌಕರರು ಮತ್ತೆ ಬೀದಿಗಿಳಿಯುತ್ತಿದ್ದಾರೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಮಾಡಿದ್ದ ಮುಷ್ಕರಕ್ಕೆ ಎಚ್ಚೆತ್ತ ಸರ್ಕಾರ ಆಗ ಸಾರಿಗೆ ನೌಕರರ ಎಂಟು ಬೇಡಿಕೆ ಈಡೇರಿಸುತ್ತೇನೆ ಎಂದು ಹೇಳಿತ್ತು. ಅದರಂತೆ ಕೆಲ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಿದೆ. ಆದರೆ ಎಲ್ಲ ಬೇಡಿಕೆಗಳನ್ನು ಸಮರ್ಪಕ ಈಡೇರಿಸಿಲ್ಲ. ಅದರಲ್ಲೂ 6ನೇ ವೇತನ ಆಯೋಗ ಜಾರಿ ಇದುವರೆಗೂ ಮಾಡಿಲ್ಲ. ಮೂರು ತಿಂಗಳು ಕಾದಿದ್ದೇವೆ.
ಮಾರ್ಚ್ 15ಕ್ಕೆ ಗಡುವು ಮುಗಿದಿದೆ. ಮಾರ್ಚ್ 16ಕ್ಕೆ ಕಾರ್ಮಿಕ ಇಲಾಖೆಗೆ ಪತ್ರ ನೀಡಲಾಗಿದೆ, ಇದೀಗ ಮತ್ತೆ ಏಪ್ರಿಲ್ 7 ರವರೆಗೆ ಗಡುವು ನೀಡಿದ್ದೇವೆ. ಬೇಡಿಕೆ ಈಡೇರದೇ ಹೋದಲ್ಲಿ ಏಪ್ರಿಲ್ 7 ರಿಂದ ರಾಜ್ಯಾದ್ಯಂತ ಇರುವ ನಾಲ್ಕು ಸಾರಿಗೆ ನಿಗಮಗಳಿಂದ ಸಾರಿಗೆ ನೌಕರರ ಮುಷ್ಕರ ಮಾಡಲು ಮುಂದಾಗಿದ್ದಾರೆ. ಏಪ್ರಿಲ್ 7ರಿಂದ ಇಡೀ ಸಾರಿಗೆ ವ್ಯವಸ್ಥೆ ಸ್ಥಬ್ಧವಾಗಲಿದೆ. ರಾಜ್ಯದ ಎಲ್ಲಾ ಡಿಪೋಗಳಿಗೆ ಮಾಹಿತಿ ರವಾನೆ ಮಾಡಲಾಗಿದೆ. ಏಪ್ರಿಲ್ 7ರಿಂದ ಬಿಎಂಟಿಸಿ, ಕೆಎಸ್ಸಾರ್ಟಿಸಿ, ವಾಯುವ್ಯ, ಈಶಾನ್ಯ ಬಸ್ ಗಳ ಒಡಾಟ ಇರೋದಿಲ್ಲ. ಏಪ್ರಿಲ್ 1ರ ಕಾರ್ಮಿಕ ಇಲಾಖೆ ಸಭೆಯಲ್ಲಿ ಬೇಡಿಕೆ ಈಡೇರದಿದ್ರೆ ಏ.2ರಿಂದ ಕಪ್ಪು ಪಟ್ಟಿ ಧರಿಸಿ ಕೆಲಸ.
ಕುಟುಂಬಸ್ಥರ ಜತೆ ಬೀದಿಗಳಲ್ಲಿ ಬೋಂಡಾ, ಕಾಫಿ, ಟೀ ಮಾರಾಟ ಮಾಡಲಿದ್ದಾರೆ. ಬೀದಿ ಬದಿ ವ್ಯಾಪಾರ ಮಾಡಲು ನಿರ್ಧಾರ. 15 ದಿನ ಯಾವುದೇ ಮುಷ್ಕರಕ್ಕೆ ಅವಕಾಶ ಇರೋದಿಲ್ಲ ಎಂಬ ಸಿಎಂ ವಿಚಾರನಾವು ಹಸಿದಿದ್ದೀವಿ ನಮ್ಮ ಮೇಲೆ ಎಸ್ಮಾ ಹಾಕಿದ್ರೂ ಹೋರಾಟ ಮಾಡ್ತೀವಿ ಎನ್ನುತ್ತಾರೆ. ಸರ್ಕಾರ ಎಸ್ಮಾ ಪ್ರಯೋಗಿಸಿದರೂ ಜಗ್ಗುವುದಿಲ್ಲ ಎಂದು ಸಾರಿಗೆ ನೌಕರರ ಒಕ್ಕೂಟ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.ಇನ್ನು ಏಪ್ರಿಲ್ 7ರ ವರೆಗೆ ನಾಳೆಯಿಂದ ಸಾರಿಗೆ ನೌಕರರಿಂದ ವಿನೂತನ ಹೋರಾಟ, ಪ್ರತಿಭಟನೆ ಜರುಗಲಿದೆ.
ಏಪ್ರಿಲ್ 1 ರಿಂದ 7ರ ವರೆಗೂ ಹೋರಾಟಏಪ್ರಿಲ್ 1- ಕಪ್ಪು ಪಟ್ಟಿ ಧರಿಸಿ ಹೋರಾಟಏಪ್ರಿಲ್ 2 - ಸಾರ್ವಜನಿಕ ಪ್ರದೇಶಗಳಲ್ಲಿ ಕಾಫಿ, ಟೀ, ಬಜ್ಜಿ , ಬೋಂಡಾ ಮರಾಟಏಪ್ರಿಲ್ 3- ನೌಕರರು, ನೌಕರರ ಕುಟುಂಬಸ್ಥರಿಂದ ಮುಖ್ಯ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಾಣಏಪ್ರಿಲ್ 4 - ಸಾರ್ವಜನಿಕ ರಿಗೆ ಮುಷ್ಕರದ ಕುರಿತಂತೆ ರಾಜ್ಯಾದ್ಯಂತ ಕರಪತ್ರ ಹಂಚಿಕೆಏಪ್ರಿಲ್ 5 - ಧರಣಿ ಸತ್ಯಾಗ್ರಹಏಪ್ರಿಲ್ 6 - ಕುಟುಂಬಸ್ಥರೊಂದಿಗೆ ಸಾಮೂಹಿಕ ಉಪವಾಸ ಸತ್ಯಾಗ್ರಹಏಪ್ರಿಲ್ 7 - ರಾಜ್ಯಾದ್ಯಂತ ಬಸ್ ಗಳ ಓಡಾಟ ಸ್ಥಗಿತಗೊಳಿಸಿ ಹೋರಾಟಕೊರೊನಾ ಮಾರ್ಗಸೂಚನೆ ಹಿನ್ನೆಲೆ ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಹೋರಾಟ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಸಾರಿಗೆ ನೌಕರರ ಸಂಘ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ