ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ನಿಶ್ಚಿತ? ಶೀಘ್ರದಲ್ಲೇ ಅಧಿಕೃತ ಘೋಷಣೆ


Updated:June 13, 2018, 4:37 PM IST
ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ನಿಶ್ಚಿತ? ಶೀಘ್ರದಲ್ಲೇ ಅಧಿಕೃತ ಘೋಷಣೆ

Updated: June 13, 2018, 4:37 PM IST
- ಥಾಮಸ್ ಪುಷ್ಪರಾಜ್, ನ್ಯೂಸ್18 ಕನ್ನಡ

ಬೆಂಗಳೂರು(ಜೂನ್ 13): ಬಸ್ ಪ್ರಯಾಣಿಕರಿಗೆ ಬಿಎಂಟಿಸಿ ಶಾಕ್ ಕೊಡಲು ಮುಂದಾಗಿದೆ. ಗಗನಮುಖಿಯಾಗ್ತಿರುವ ಡೀಸೆಲ್ ದರ ಹಾಗೂ ನಿಗಮ ಅನುಭವಿಸ್ತಿರೋ ತೀವ್ರ ನಷ್ಟದಿಂದಾಗಿ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ನಿರ್ಧಾರಕ್ಕೆ ಬಂದಿದೆ. ಎಲೆಕ್ಷನ್ ಕಾರಣಕ್ಕೆ ಪೋಸ್ಟ್ ಪೋನ್ ಮಾಡಿದ್ದ ಟಿಕೆಟ್ ದರ ಹೆಚ್ಚಳ ನಿರ್ಧಾರವನ್ನು ಅಂತಿಮವಾಗಿ ಜಾರಿಗೊಳಿಸಲಾಗ್ತಿದ್ದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಶೀಘ್ರದಲ್ಲೇ ಇದನ್ನು ಅಧಿಕೃತಗೊಳಿಸುವ ಸಾಧ್ಯತೆಗಳಿವೆ.

ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಇದು ನಿಜಕ್ಕೂ ಶಾಕಿಂಗ್ ನ್ಯೂಸೇ ಸರಿ. ಬಸ್ ಸಂಚಾರ ಪ್ರಯಾಣಿಕರ ಜೇಬು ಸುಡೋದು ಗ್ಯಾರಂಟಿ. ನಿಗಮಕ್ಕೆ ಎದುರಾಗಿರುವ ಸಂಕಷ್ಟದ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡದೆ ಅನ್ಯ ವಿಧಿಯಿಲ್ಲ. ದರ ಹೆಚ್ಚಳದ ಅನಿವಾರ್ಯತೆಯನ್ನು ಸರ್ಕಾರಕ್ಕೂ ಎಂಡಿ ಪೊನ್ನುರಾಜ್ ಮನವರಿಕೆ ಮಾಡಿಕೊಟ್ಟಿದ್ದಾರೆ. ಎಷ್ಟು ಪ್ರಮಾಣದ ಹೆಚ್ಚಳ  ಮಾಡ್ಬೇಕೆನ್ನುವ ವಿಷಯಕ್ಕೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಸದ್ಯ, ಬಿಎಂಟಿಸಿ  200 ಕೋಟಿ ನಷ್ಟ ಎದುರಿಸ್ತಿದೆ. ಬರುತ್ತಿರುವ ಹಣದಲ್ಲಿ ಶೇಕಡಾ 51 ರಷ್ಟು ನೌಕರರ ಸಂಬಳ-ಭತ್ಯೆಗೆ ಖರ್ಚಾದ್ರೆ, ಶೇಕಡಾ 25 ರಷ್ಟು ಡೀಸೆಲ್​ಗೆ ಹೋಗುತ್ತೆ. ಉಳಿದಿದ್ದು ಬೇರೆ ಖರ್ಚುಗಳಿಗೆ  ವಿನಿಯೋಗವಾಗ್ತಿರುವುದರಿಂದ ಲಾಭವು ಕನಸಿನ ಮಾತಾಗಿದೆ. ಇದೆಲ್ಲಕ್ಕು ಬರೆ ಎಳೆಯುವಂತೆ ಡೀಸೆಲ್ ದರವೂ ಹೆಚ್ಚಾಗ್ತಿರೋದ್ರಿಂದ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗ್ತಿದೆ. ಈ ಪರಿಸ್ಥಿತಿಯಲ್ಲಿ  ನಿಗಮವನ್ನು ಮುನ್ನಡೆಸುವುದು ಕಷ್ಟವಾಗ್ತಿರುವುದರಿಂದ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕದೆ ವಿಧಿಯಿಲ್ಲ ಎಂದು ಪೊನ್ನುರಾಜ್ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ನೌಕರರ ವಾದವೇ ಬೇರೆ:
ಆದ್ರೆ ಸಾರಿಗೆ ನೌಕರರ ನಿಗಮಗಳು ಮಾತ್ರ ಬಸ್ ಪ್ರಯಾಣದರ ಹೆಚ್ಚಳದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಗಮದಲ್ಲಿ ಆಗ್ತಿರುವ ಭ್ರಷ್ಟಾಚಾರಕ್ಕೆ ಬ್ರೇಕ್ ಬಿದ್ರೆ ಬಿಎಂಟಿಸಿ ಲಾಭಕ್ಕೆ ಬರುತ್ತೆ. ಅದನ್ನು ಬಿಟ್ಟು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕೋದು ಎಷ್ಟು ಸರಿ ಎಂದು ನೌಕರರು ಪ್ರಶ್ನಿಸ್ತಾರೆ.

ಲಾಭದತ್ತ ನಿಗಮವನ್ನು ತರಬೇಕೆನ್ನುವ ಜಿದ್ದಿಗೆ ಬಿದ್ದಿರುವ ನೂತನ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಕೂಡ ಪೊನ್ನುರಾಜ್ ಕೊಟ್ಟಿರುವ ಪ್ರಸ್ತಾವನೆಗೆ ತಲೆಯಾಡಿಸಿದ್ದಾರೆ. ಸ್ಟೇಜ್ ವೈಸ್ ಎಷ್ಟು ಪ್ರಮಾಣ ದರ ಏರಿಕೆ ಮಾಡಬಹುದು ಎನ್ನುವ ಲೆಕ್ಕ ಹಾಕಿ ವರದಿ ನೀಡುವಂತೆ ಸೂಚಿಸಿದ್ದಾರಂತೆ. ಶೀಘ್ರವೇ ಸಿಎಂ ಕುಮಾರಸ್ವಾಮಿ ಗಮನಕ್ಕೆ ತಂದು ದರ ಹೆಚ್ಚಳ ಘೋಷಣೆ ಮಾಡಲು ನಿರ್ಧರಿಸಿದ್ದಾರೆ.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...