ಬೆಂಗಳೂರು(ಮಾ.10): ಬೆಳಗ್ಗಿನ ಜಾವ ಸುಮಾರು ನಾಲ್ಕು ಗಂಟೆಗೆ ಬಿಎಂಟಿಸಿ ಬಸ್ಗೆ(BMTC Bus) ಏಕಾಏಕಿ ಬೆಂಕಿ ತಗುಲಿದ ಪರಿಣಾಮ ಬಸ್ನಲ್ಲಿದ್ದ ನಿರ್ವಾಹಕ (Bus Conductor) ಸಜೀವ ದಹನಗೊಂಡಿದ್ದಾರೆ. ಹೌದು ಡಿಪೋ 31ಕ್ಕೆ ಸೇರಿದ ಬಿಎಂಟಿಸಿ ಬಸ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿದೆ 9Fire Tragedy). ಈ ವೇಳೆ ಬಸ್ನಲ್ಲೇ ಮಲಗಿದ್ದ ಮುತ್ತಯ್ಯಸ್ವಾಮಿ ಹೊರಬರಲಾಗದೇ ಅಲ್ಲೇ ಸುಟ್ಟು ಮೃತಪಟ್ಟಿದ್ದಾರೆ.
ಮೃತ ನಿರ್ವಾಹಕ 45 ವರ್ಷದ ಮುತ್ತಯ್ಯಸ್ವಾಮಿ ಮೂಲತಃ ಗದಗ ಮೂಲದವರು. ಕಳೆದ ಹಲವು ವರ್ಷಗಳಿಂದ ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು ಸದ್ಯ ಬಿಎಂಟಿಸಿಯ 31 ರ ಡಿಪೋದಲ್ಲಿ ನಿರ್ವಾಹಕರಾಗದ್ದರು. ರಾತ್ರಿ ರೂಟ್ ಮುಗಿಸಿ ಲಿಂಗಧೀರನಹಳ್ಳಿ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಚಾಲಕ ಹಾಗೂ ನಿರ್ವಾಹಕ ಅದರಲ್ಲೇ ಮಲಗಿದ್ದರು. ಆದರೆ ಇಂದು ಬೆಳಗ್ಗಿನ ಜಾವ ಸುಮಾರು 4.26 ಕ್ಕೆ ಬಸ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ಇದನ್ನೂ ಓದಿ: Traffic Fine: 50 ಪರ್ಸೆಂಟ್ ಆಫರ್ ಪಡೆದು 33 ಲಕ್ಷ ದಂಡ ಪಾವತಿಸಿದ ಬಿಎಂಟಿಸಿ; 12 ಸಾವಿರ ಸಿಗ್ನಲ್ ಜಂಪ್
ಹೀಗಿರುವಾಗ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮುತ್ತಯ್ಯ ಸ್ವಾಮಿ ಪ್ರಜ್ಞಾಹೀನರಾಗಿ ಮಲಗಿದಲ್ಲೇ ಸುಟ್ಟು ಕರಕಲಾಗಿದ್ದಾರೆ. ಚಾಲಕ ಶೌಚಕ್ಕೆ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದ್ದು, ಅದೃಷ್ಟವಶಾತ್ ಅವರು ಪಾರಾಗಿದ್ದಾರೆ.
ಅಗ್ನಿ ಅವಘಡ ಸಂಭವಿಸಿದ ಬಸ್ 2016 ರಲ್ಲಿ ಟಾಟಾ ಕಂಪನಿಯಿಂದ ಖರೀದಿಸಲಾಗಿದ್ದು, ಬಿಎಸ್ 4 2016 ಮಾಡೆಲ್ನದ್ದಾಗಿದೆ. ಸದ್ಯ ಈ ದುರಂತದಿಂದ ಚಾಲಕ ಶಾಕ್ಗೊಳಗಾಗಿದ್ದು, ಮುತ್ತಯ್ಯ ಸ್ವಾಮಿ ಸಾವಿಗೆ ಯಾರು ಹೊಣೆ ಎಂಬ ಪ್ರಶ್ನೆ ಎದ್ದಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಲಿಂಗದೀರನಹಳ್ಳಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: CM Bommai: ಸಿಎಂ ಬೊಮ್ಮಾಯಿ ಸನ್ಮಾನ ತಿರಸ್ಕರಿಸಿದ ಖ್ಯಾತ ಟೆನಿಸ್ ಆಟಗಾರ
ಇತ್ತ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಹೊತ್ತಿಕೊಳ್ಳಲು ಕಾರಣವೇನು ಎಂಬುವುದನ್ನು ಪತ್ತೆಹಚ್ಚುತ್ತಿದ್ದಾರೆ. ಇಂದು ಬೆಳಿಗ್ಗೆ 5 ಗಂಟೆಗೆ ಲಿಂಗಧೀರನಹಳ್ಳಿಯಿಂದ ಈ ಬಸ್ ಕೆ.ಆರ್ ಮಾರ್ಕೆಟ್ ಗೆ ತೆರಳಬೇಕಿತ್ತು. ಈವರೆಗೆ ಮೆಜೆಸ್ಟಿಕ್ ಗೆ ತೆರಳ್ತಿದ್ದ ಈ ಬಸ್ನ ರೂಟ್ ಮಾರ್ಕೆಟ್ಗೆ ಬದಲಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ