ಬೆಂಗಳೂರು(ಫೆ.09): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಮತ್ತೆ ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಸಾರಿಗೆ ನಿಗಮದ ವಿರುದ್ಧ ತಿರುಗಿ ಬೀಳಲು ಸಾರಿಗೆ ನೌಕರರು ಸಜ್ಜಾಗಿದ್ದಾರೆ. ಹೀಗಾಗಿ ನಾಳೆ ಮಧ್ಯಾಹ್ನ 1 ಗಂಟೆಗೆ ಸಾರಿಗೆ ಸಿಬ್ಬಂದಿಗಳಿಂದ ಪ್ರತಿಭಟನೆ ನಡೆಯಲಿದೆ. ಬಿಎಂಟಿಸಿ ಕೇಂದ್ರ ಕಚೇರಿ ಎದುರು ಕಾರ್ಮಿಕ ಸಂಘಟನೆಗಳು ಜಂಟಿ ಪ್ರತಿಭಟನೆ ನಡೆಸಲಿವೆ. ಈ ಹಿಂದೆ ಕೇವಲ ಒಂದೇ ಒಂದು ಸಂಘಟನೆ ಮಾತ್ರ ಪ್ರತಿಭಟನೆ ನಡೆಸಿತ್ತು. ಈಗ ಎಲ್ಲಾ ಸಂಘಟನೆಗಳು ಸಾರಿಗೆ ನಿಗಮದ ವಿರುದ್ದ ಒಂದಾಗಿ ಪ್ರತಿಭಟಿಸಲು ನಿರ್ಧಾರ ಮಾಡಿವೆ. ಹೀಗಾಗಿ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿವೆ.
ಅರ್ಧವೇತನ ಪಾವತಿ, ಅಧಿಕಾರಿಗಳ ಕಿರುಕುಳ, ರಜೆಗಳ ಸಮಸ್ಯೆ ವಿರುದ್ದ ಸಾರಿಗೆ ಸಿಬ್ಬಂದಿ ಪ್ರತಿಭಟನೆ ನಡೆಸಲಿದ್ದಾರೆ. ಇತ್ತೀಚೆಗೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದ ಸಾರಿಗೆ ನೌಕರರು ಮತ್ತೆ ಪ್ರತಿಭಟನೆಯ ಹಾದಿ ತುಳಿಯಲಿದ್ದಾರೆ. ಆದರೆ ನಾಳೆ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಸಾರಿಗೆ ನೌಕರರು ರಜೆ, ಕೆಲಸ ಮಗಿಸಿಕೊಂಡು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಎಂದಿನಂತೆ ಬಸ್ಸುಗಳು ಸಂಚಾರ ಮಾಡಲಿವೆ ಎಂದು ತಿಳಿದು ಬಂದಿದೆ.
Deep Sidhu Arrest - ರೈತ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ಆರೋಪ; ನಟ ದೀಪ್ ಸಿಧು ಬಂಧನ
ಸಾರಿಗೆ ಸಿಬ್ಬಂದಿ ವೇತನ, ಅಧಿಕಾರಿಗಳ ದಬ್ಬಾಳಿಕೆ ಸೇರಿದಂತೆ ವಿವಿಧ ಬೇಡಿಕೆ ಒತ್ತಾಯಿಸಿ ಸಾರಿಗೆ ನೌಕರರ ಜಂಟಿ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಸಿಐಟಿಯು ನೇತೃತ್ವದಲ್ಲಿ 11 ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ. ಐಎನ್ಟಿಯುಸಿ, ಅಂಬೇಡ್ಕರ್ ಸಮಿತಿ, ಯುನೈಟೆಡ್ ಎಮಪ್ಲಾಯಿ ಫೋರಮ್, ಕೆಂಪೇಗೌಡ ಅಭಿಮಾನಿಗಳ ಬಳಗ, ಬಿಎಂಟಿಸಿ ಮುಸ್ಲಿಂ ಕಾರ್ಮಿಕರ ವೇದಿಕೆ ಸೇರಿದಂತೆ 11 ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ.
ನಾಳೆ ಮಧ್ಯಾಹ್ನ 1 ಗಂಟೆಗೆ ಶಾಂತಿನಗರ ಬಿಎಂಟಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆಯಲ್ಲಿ 300ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗುವ ನಿರೀಕ್ಷೆ ಇದೆ. ಪ್ರತಿಭಟನೆ ಬಳಿಕ ಬಿಎಂಟಿಸಿ ಎಂಡಿಗೆ ಮನವಿ ಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಳೆ ಸಾರಿಗೆ ವಾಹನಗಳಲ್ಲಿ ಯಾವುದೇ ಸಂಚಾರ ವ್ಯತ್ಯಯವಿರುವುದಿಲ್ಲ. ರಜೆಯಲ್ಲಿರುವವರು ಹಾಗೂ ಡ್ಯೂಟಿ ಮುಗಿಸಿಕೊಂಡು ಬಂದವರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಪ್ರಕಾಶ್ ಮಾಹಿತಿ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಭಾಗಿಯಾದರೆ ಸಂಬಳ ಕಟ್: ಕೆಎಸ್ಆರ್ಟಿಸಿ ಆದೇಶ
ಇನ್ನು, ನಾಳೆ ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆ, ಧರಣಿಯಲ್ಲಿ ಭಾಗಿಯಾದರೆ ವೇತನವನ್ನು ಕಡಿತಗೊಳಿಸಲಾಗುತ್ತದೆ ಎಂದು ಕೆಎಸ್ಆರ್ಟಿಸಿ ತನ್ನ ಸಿಬ್ಬಂದಿಗೆ ಆದೇಶ ಹೊರಡಿಸಿದೆ. ಜೊತೆಗೆ ನಾಳೆ ಸಿಬ್ಬಂದಿಗೆ ರಜೆ ನೀಡದಂತೆ ಸತ್ತೋಲೆ ಹೊರಡಿಸಲಾಗಿದೆ. ಬಸ್ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ವಿವಿಧ ಸಂಘಟನೆಗಳು ಸಾರಿಗೆ ಸಿಬ್ಬಂದಿಗಳ ಪ್ರತಿಭಟನೆಗೆ ಕರೆ ನೀಡಿದ ಬೆನ್ನಲ್ಲೇ ಕೆಎಸ್ಆರ್ಟಿಸಿ ಅಲರ್ಟ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ