HOME » NEWS » State » BMTC AND KSRTC BUS NOT TRAVEL FROM TODAY BEFORE ONE DAY STRIKE RHHSN

ನಾಳಿನ ಸಾರಿಗೆ ಮುಷ್ಕರಕ್ಕೆ ಈಗಿನಿಂದಲೇ ಬಿಸಿ; ಮಧ್ಯಾಹ್ನದ ಬಳಿಕ ಬಹುತೇಕ ಓಡಾಟ ನಿಲ್ಲಿಸಿದ ಬಸ್​ಗಳು

ಸಾರಿಗೆ ನೌಕರರು ಮತ್ತು ಸರ್ಕಾರದ ಮಧ್ಯೆ ತಿಕ್ಕಾಟ ಮುಂದುವರಿದಿದೆ. ಸರ್ಕಾರದ ಭರವಸೆಗಳ ನಡುವೆಯೂ ನಾಳೆ ಮುಷ್ಕರಕ್ಕೆ ಸಜ್ಜಾಗಿರುವ ಸಾರಿಗೆ ನೌಕರರ ವಿರುದ್ಧ ಸರ್ಕಾರವೂ ತೊಡೆತಟ್ಟಿ ನಿಂತಿದೆ. ನಾಳೆ ಮುಷ್ಕರ ನಡೆಸಲು ನೌಕರರು ಹಠ ತೊಟ್ಟರೆ ಸರ್ಕಾರ ಎಸ್ಮಾ ಜಾರಿಗೂ ಸಜ್ಜಾಗಿದೆ ಎಂದು ಮೂಲಗಳು ಹೇಳುತ್ತಿವೆ.

news18-kannada
Updated:April 6, 2021, 3:29 PM IST
ನಾಳಿನ ಸಾರಿಗೆ ಮುಷ್ಕರಕ್ಕೆ ಈಗಿನಿಂದಲೇ ಬಿಸಿ; ಮಧ್ಯಾಹ್ನದ ಬಳಿಕ ಬಹುತೇಕ ಓಡಾಟ ನಿಲ್ಲಿಸಿದ ಬಸ್​ಗಳು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಮತ್ತೆ ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ನಾಳಿನ ಮುಷ್ಕರದ ಬಿಸಿ ಇಂದು ಮಧ್ಯಾಹ್ನದಿಂದಲೇ ಪ್ರಾರಂ‌ಭವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಬಸ್​ ನಿಲ್ದಾಣಗಳಲ್ಲಿ ಸರಿಯಾಗಿ ಬಸ್​ಗಳು ಬಾರದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ. ಬಸ್ ಕೊರತೆ ಇರುವುದರಿಂದ ಇರುವ ಬಸ್​ಗಳಲ್ಲೇ ಪ್ರಯಾಣ ಮಾಡಿ ಸಹಕರಿಸುವಂತೆ ಮೈಕ್ ಮೂಲಕ ಬಿಎಂಟಿಸಿ ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಬಿಎಂಟಿಸಿ ಡಿಪೋಗಳಲ್ಲಿ ಬಸ್​ಗಳು ಸರಿಯಾಗಿ ಆಪರೇಟ್ ಆಗುತ್ತಿಲ್ಲ. ಸೆಕೆಂಡ್ ಶಿಫ್ಟ್​ನಲ್ಲಿ ಕೆಲ ಡಿಪೋಗಳಲ್ಲಿ ಡ್ರೈವರ್ ಬಂದರೆ ಕಂಡಕ್ಟರ್ ಇಲ್ಲ‌. ಕೆಲ ಡಿಪೋಗಳಲ್ಲಿ ಕಂಡಕ್ಟರ್ ಬಂದ್ರೆ ಡ್ರೈವರ್​ಗಳು ಇಲ್ಲ. ಬಸ್​ಗಳ ಚಾಲನೆಗೆ ಸಿಬ್ಬಂದಿ ಕೊರತೆ ಎದುರಾಗಿದೆ. ಮುಷ್ಕರಕ್ಕೆ ಕರೆ ಕೊಟ್ಟಿರುವ ಮುಖಂಡರಿಂದ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆದಿದೆ. ಮೆಜೆಸ್ಟಿಕ್ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿ ಬಸ್ ನಿಲ್ದಾಣದಲ್ಲಿ ಬೆರಳಣಿಕೆ ಬಸ್ ಗಳ ಓಡಾಟ ಮಾತ್ರವಿದೆ. ಪ್ಲಾಟ್ ಫಾರಂ ಖಾಲಿ ಖಾಲಿಯಾಗಿವೆ.

 ಸಾರಿಗೆ ನೌಕರರು ಮುಷ್ಕರ ನಡೆಸದಂತೆ ಕೆಎಸ್​ಆರ್​ಟಿ ಸಿ ಎಂಡಿ ಶಿವಯೋಗಿ ಕಳಸದ ಅವರು ಪಾಂಪ್ಲೆಟ್ಸ್ ಪ್ರಕಟಿಸಿ ಮನವಿ ಮಾಡಿದ್ದಾರೆ. ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಸರ್ವಪ್ರಯತ್ನ ಮಾಡುತ್ತಿದೆ. ಯಾರ ಪ್ರಚೋದನೆಗೂ ಒಳಗಾಗದೆ ಎಲ್ಲರೂ ಡ್ಯುಟಿಗೆ ಹಾಜರಾಗಿ. ಮುಷ್ಕರ ಮಾಡುವುದು ನಿಯಮಬಾಹಿರವಾಗುತ್ತದೆ. ಸರ್ಕಾರದ ನಿಯಮ ಮೀರಿ ಪ್ರತಿಭಟನೆ ಮಾಡಿದರೆ ನೌಕರರ ವಿರುದ್ಧ ಎಸ್ಮಾ ಜಾರಿಯಾಗಲಿದೆ ಎಂದು ಭಿತ್ತಿಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಆರನೇ ವೇತನ ಜಾರಿ ಸಾಧ್ಯವೇ ಇಲ್ಲ ಎಂದ ಸರ್ಕಾರ; ಸಾರಿಗೆ ಮುಷ್ಕರ ನಡೆಸಿದರೆ ಎಸ್ಮಾ ಜಾರಿಗೂ ಸಜ್ಜು

ಸಾರಿಗೆ ನೌಕರರು ಮತ್ತು ಸರ್ಕಾರದ ಮಧ್ಯೆ ತಿಕ್ಕಾಟ ಮುಂದುವರಿದಿದೆ. ಸರ್ಕಾರದ ಭರವಸೆಗಳ ನಡುವೆಯೂ ನಾಳೆ ಮುಷ್ಕರಕ್ಕೆ ಸಜ್ಜಾಗಿರುವ ಸಾರಿಗೆ ನೌಕರರ ವಿರುದ್ಧ ಸರ್ಕಾರವೂ ತೊಡೆತಟ್ಟಿ ನಿಂತಿದೆ. ನಾಳೆ ಮುಷ್ಕರ ನಡೆಸಲು ನೌಕರರು ಹಠ ತೊಟ್ಟರೆ ಸರ್ಕಾರ ಎಸ್ಮಾ ಜಾರಿಗೂ ಸಜ್ಜಾಗಿದೆ ಎಂದು ಮೂಲಗಳು ಹೇಳುತ್ತಿವೆ. ಸಾರಿಗೆ ನೌಕರರ ಒಂಬತ್ತು ಪ್ರಮುಖ ಬೇಡಿಕೆಗಳ ಪೈಕಿ ಆರನೇ ವೇತನ ಆಯೋಗದ ವರದಿ ಜಾರಿಯ ಬೇಡಿಕೆಯನ್ನು ಮಾತ್ರ ಈಡೇರಿಸಲು ಸಾಧ್ಯ ಇಲ್ಲ ಎಂದು ಸರ್ಕಾರ ಬಹಳ ಸ್ಪಷ್ಟವಾಗಿ ಹೇಳಿದೆ. ಆರನೇ ವೇತನ ಜಾರಿ ಬದಲು ಸಾರಿಗೆ ನೌಕರರಿಗೆ ಶೇ. 8ರಷ್ಟು ಸಂಬಳ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಆದರೆ, ವೇತನ ಹೆಚ್ಚಳ ಬೇಕಾಗಿಲ್ಲ. ತಮಗೆ ಆರನೇ ವೇತನ ಆಯೋಗ ಜಾರಿಯೇ ಆಗಬೇಕು ಎಂಬುದು ಸಾರಿಗೆ ನೌಕರರ ಸಂಘದ ಹಠ. ಹೀಗಾಗಿ, ಬುಧವಾರ ಮುಷ್ಕರ ನಡೆಸಿಯೇ ತೀರುತ್ತೇವೆ ಎಂದು ನೌಕರರು ಹಠ ತೊಟ್ಟಿದ್ದಾರೆ.
Youtube Video

ನಾಳೆ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಇದರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಸಾರಿಗೆ ಇಲಾಖೆ ಎಸಿಎಸ್ ಅಂಜುಮ್ ಪರ್ವೇಜ್, KSRTC ಎಂಡಿ ಶಿವಯೋಗಿ ಕಳಸದ್, ಬಿಎಂಟಿಸಿ ಎಂಡಿ ಶಿಖಾ, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ ಸೇರಿ ಹಲವರು ಪಾಲ್ಗೊಂಡಿದ್ದರು. ಸರ್ಕಾರ ಭರವಸೆಗಳನ್ನ ನೀಡಿದರೂ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ವಿಚಾರದಲ್ಲಿ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳುವಂತೆ ಸಿಎಂ ಈ ಸಭೆಯಲ್ಲಿ ಸೂಚಿಸಿದರೆಂಬ ಮಾಹಿತಿ ಕೇಳಿಬಂದಿದೆ.
Published by: HR Ramesh
First published: April 6, 2021, 3:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories