Namma Metro: ಇನ್ಮುಂದೆ ಚಾಲಕರಿಲ್ಲದೆ ಓಡುತ್ತೆ ನಮ್ಮ ಮೆಟ್ರೋ!

ನಮ್ಮ ಮೆಟ್ರೋ

ನಮ್ಮ ಮೆಟ್ರೋ

ಇನ್ಮುಂದೆ ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲುಗಳು ಓಡಾಟ ನಡೆಸಲಿವೆ. ಈ ರೈಲುಗಳನ್ನು ನಿಯಂತ್ರಣ ಕೊಠಡಿಯಿಂದ ನಿಯಂತ್ರಿಸುವ ವ್ಯವಸ್ಥೆಯೂ ಇರಲಿದೆ.

  • Share this:

ಬೆಂಗಳೂರು (ಜೂ 20): ಬೆಂಗಳೂರಿನ ಜನರಿಗೆ ಟ್ರಾಫಿಕ್​ (Traffic) ಕಿರಿಕಿರಿಯಿಂದ ಮುಕ್ತಿ ನೀಡಿರೋ ನಮ್ಮ ಮೆಟ್ರೋ, ರಾಜಧಾನಿಯಲ್ಲಿ ಜನಸ್ನೇಹಿಯಾಗಿದೆ. ನಮ್ಮ ಮೆಟ್ರೋ (Namma Metro) ಯೋಜನೆ ವಿಸ್ತಾರಗೊಳಿಸಲು ಸರ್ಕಾರ ಮುಂದಾಗಿದೆ. ಇದರ ಜೊತೆಗೆ ಮೆಟ್ರೋ ಪೈಲಟ್ ಸಹಿತ ಚಲಿಸುತ್ತಿದ್ದ ನಮ್ಮ ಮೆಟ್ರೋ ಇನ್ಮುಂದೆ ಪೈಲಟ್ (Pilot)​ ರಹಿತವಾಗಿ ಚಲಿಸಲಿವೆ. ​ಮೆಟ್ರೋ ಪೈಲಟ್​ ಮಾಡುವ ತಪ್ಪುಗಳಿಂದ ಮೆಟ್ರೋ ರೈಲು ಸ್ಥಗಿತಗೊಂಡಿರುವ ಕೆಲ ದೂರುಗಳು ದಾಖಲಾಗಿದ್ದು. ಇನ್ಮುಂದೆ ಪೈಲಟ್​ಗಳಿಲ್ಲದೇ ಮೆಟ್ರೋ ರೈಲು ಸರಾಗವಾಗಿ ಸಂಚಾರ ಮಾಡಲಿದೆ. ಶೀಘ್ರವೇ ಪೈಲಟ್​ ರಹಿತ ಮೆಟ್ರೋ ಸಂಚಾರಕ್ಕೆ ಚಾಲನೆ ಸಿಗಲಿದೆ ಎಂದು ಬಿಎಂಆರ್​ಸಿಎಲ್ (BMRCL)​ ಅಧಿಕಾರಿಗಳು ತಿಳಿಸಿದ್ದಾರೆ.  


ಪೈಲಟ್ ರಹಿತ ನಮ್ಮ ಮೆಟ್ರೋ 


ಬೆಂಗಳೂರಿನಲ್ಲಿ ಸಂಚರಿಸುವ ಮೆಟ್ರೋ ರೈಲುಗಳಲ್ಲಿ ಈ ಹಿಂದೆ ಪೈಲಟ್ ಗಳು ಇರುತ್ತಿದ್ದರು. ಆದರೆ ಇನ್ಮುಂದೆ ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲುಗಳು ಓಡಾಟ ನಡೆಸಲಿವೆ. ಈ ರೈಲುಗಳನ್ನು ನಿಯಂತ್ರಣ ಕೊಠಡಿಯಿಂದ ನಿಯಂತ್ರಿಸುವ ವ್ಯವಸ್ಥೆಯೂ ಇರಲಿದೆ.


ಚಾಲಕ ರಹಿತ ಮೆಟ್ರೋ ರೈಲು ಓಡಿಸಲು ತಯಾರಿ


ಮೆಟ್ರೋ ಚಾಲಕನ ಕೆಲ ತಪ್ಪುಗಳಿಂದ ನಗರದಲ್ಲಿ ಆಗಾಗ ಟ್ರೇನ್ ಗಳು ಸ್ಥಗಿತವಾಗುತ್ತಿದ್ದವು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.ಇದೀಗ ಚಾಲಕ ರಹಿತ ಮೆಟ್ರೋ ರೈಲು ಓಡಿಸಲು ನಮ್ಮ ಮೆಟ್ರೋ ನಿಗಮ ತಯಾರಿ ನಡೆಸಿದ್ದು, ಪೈಲಟ್ ರಹಿತ ನಮ್ಮ ಮೆಟ್ರೋ ಕಾರ್ಯಾಚರಣೆಗೆ ತಯಾರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: BMRCL: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​, ಸೈಕಲ್​ ಕೊಂಡೊಯ್ಯಲು ಸಿಕ್ಕಿದೆ ಪರ್ಮಿಷನ್​


ಹೊಸ ಮಾರ್ಗಕ್ಕೆ  ನಮ್ಮ ಮೆಟ್ರೋ 


ನಮ್ಮ ಮೆಟ್ರೋ ಎರಡನೇ ಹಂತದ‌‌ ಕಾಮಗಾರಿಯ (Construction) ಜೊತೆಗೆ ಮೂರನೇ ಹಂತ ಆರಂಭಿಸಲು ಸಿದ್ದತೆ ನಡೆಸುತ್ತಿದೆ.‌ ಜೊತೆಗೆ ಈ  ವರ್ಷದೊಳಗೆ ಎರಡು ಮೆಟ್ರೋ ಮಾರ್ಗವನ್ನ ಉದ್ಘಾಟಿಸಲು ಮುಂದಾಗಿದೆ. ನಮ್ಮ ಮೆಟ್ರೋದ ಮುಂದಿನ ಪ್ರಾಜೆಕ್ಟ್  (Project) ಏನು..? ಆರಂಭವಾಗುತ್ತಿರುವ ಮಾರ್ಗಗಳ್ಯಾವು..? ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.


ಮೆಟ್ರೋ ಮೂರನೆ ಹಂತದ  34 ಕಿಲೋಮೀಟರ್ ಗೆ ಡಿಪಿಆರ್ ಸಿದ್ದ


ನಮ್ಮ‌ ಮೆಟ್ರೋ ಒಂದನೇ‌ ಹಂತ ಸಂಪೂರ್ಣ ‌ಕಂಪ್ಲೀಟ್ ಆಗಿ, ಎರಡನೇ ಹಂತದ ಕಾಮಗಾರಿ ಮುಂದುವರೆಯುತ್ತಿದೆ.‌ 72 ಕಿಲೋಮೀಟರ್ ಉದ್ದದ ಎರಡನೇ‌ ಹಂತದಲ್ಲಿ ಸುರಂಗ ಮಾರ್ಗ ಕೊರೆಯುವ ಕೆಲಸ ಬಹುತೇಕ ಮುಗಿದಿದ್ದು, ಎಲಿವೇಡೆಟ್ ಕಾಮಗಾರಿಯೂ ಭರದಿಂದ ಸಾಗ್ತಾಯಿದೆ.


ಇದನ್ನೂ ಓದಿ: Namma Metro: ಮೊದಲ ಬಾರಿಗೆ ಇನ್ಫೋಸಿಸ್ ಮೆಟ್ರೋ ನಿಲ್ದಾಣಕ್ಕೆ ಸಿಗಲಿದೆ ಗ್ರೀನ್ ಟ್ಯಾಗ್


ಇದರ ಜೊತೆಗೆ 34  ಕಿಲೋ ಮೀಟರ್ ಉದ್ದದ ಮೂರನೇ ಹಂತವನ್ನೂ ಆರಂಭ ಮಾಡಲು ಮೆಟ್ರೊ ನಿಗಮ‌ ಸಿದ್ದತೆ ಮಾಡಿಕೊಳುತ್ತಿದೆ. ಜೆಪಿ ನಗರ ದಿಂದ - ಔಟರ್ ರಿಂಗ್ ರೋಡ್ - ಯಶವಂತಪುರ - ಹೆಬ್ಬಾಳ - ಏರ್ ಪೋರ್ಟ್ ಮಾರ್ಗ ಹಾಗೂ  ಹೊಸಹಳ್ಳಿ - ಮಾಗಡಿ ಮಾರ್ಗದಲ್ಲಿ ಮೂರನೇ ಹಂತದ ಮೆಟ್ರೊ ಸಂಚಾರ ಮಾಡಲಿದೆ.‌ ಈ ಸಂಬಂಧ  ರೈಟ್ಸ್ ಸಂಸ್ಥೆ ಡಿಪಿಆರ್ ಸಿದ್ದಮಾಡಿದ್ದು, ಮೆಟ್ರೋ ನಿಗಮ  ಕೆಂದ್ರ ಸರ್ಕಾರಕ್ಕೆ ರಿಪೋರ್ಟ್ ಸಲ್ಲಿಕೆ ಮಾಡಿ ಅನುಮೋದನೆ ಪಡೆಯಲಿದೆ.‌


ಮತ್ತಷ್ಟು ವಿಸ್ತರಣೆ ಕಾಣಲಿರುವ ನಮ್ಮ ಮೆಟ್ರೋ.. ಈ ಮಾರ್ಗದ ಜನರಿಗೆ ಟ್ರಾಫಿಕ್ ನಿಂದ‌ ಮುಕ್ತಿ


ಮುಂದುವರೆದು, ನಾಗಸಂದ್ರದಿಂದ  ಅಂತರರಾಷ್ಟ್ರೀಯ ಎಕ್ಸಿಬಿಷನ್ ಸೆಂಟರ್ ಮಾರ್ಗದ ಕಾಮಗಾರಿಯನ್ನ  ಸಿಂಪ್ಲೆಕ್ಸ್ ಕಂಪನಿಯಿಂದ ತೆರವು ಮಾಡಿ ಗೋದ್ರೇಜ್ ಕಂಪನಿಗೆ ನೀಡಲಾಗಿದೆ.‌ ನೈಸ್  ರಸ್ತೆಯನ್ನೂ ದಾಟಿ  ಮೆಟ್ರೋ ಮಾರ್ಗ ಮುಂದುವರೆಯಬೇಕಿದ್ದು ಮಾಸ್ಟರ್ ಪ್ಲಾನ್ ಪ್ರಕಾರ ಕಾಮಗಾರಿ ಆರಂಭಿಸಲಾಗುತ್ತದೆ. ನೆಲಮಂಗಲ ಸೇರಿದಂತೆ  ನಗರದ ಹೊರವಲಯಗಳಲ್ಲಿ ಉಪ ನಗರ ರೈಲು ಯೋಜನೆ ಆರಂಭವಾಗಲಿದೆ.‌ ಈ ಹೊಸ ಮಾರ್ಗದಿಂದ ಈ ಭಾಗದ ಜನರಿಗೆ ಟ್ರಾಫಿಕ್ ನಿಂದ ಮುಕ್ತಿ ಸಿಗಲಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ  ಮೆಟ್ರೋ ಹಾಗೂ ಉಪ ನಗರ ರೈಲಿನ ಸಂಚಾರ  ಆರಂಭವಾಗುವುದರಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಲಿದೆ.

top videos
    First published: