• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Namma Metro: 3ನೇ ಹಂತದ ಮೆಟ್ರೋ ಕಾಮಗಾರಿಗೆ ಫ್ಲೈ ಓವರ್ ಅಡ್ಡಿ; ಡೆಲ್ಮಿಯಾ ಸರ್ಕಲ್ ಸೇತುವೆ ಉಳಿಸಲು ತಂತ್ರಜ್ಞಾನ ಮೊರೆ ಹೋದ BMRCL

Namma Metro: 3ನೇ ಹಂತದ ಮೆಟ್ರೋ ಕಾಮಗಾರಿಗೆ ಫ್ಲೈ ಓವರ್ ಅಡ್ಡಿ; ಡೆಲ್ಮಿಯಾ ಸರ್ಕಲ್ ಸೇತುವೆ ಉಳಿಸಲು ತಂತ್ರಜ್ಞಾನ ಮೊರೆ ಹೋದ BMRCL

ನಮ್ಮ ಮೆಟ್ರೋ ಕಾಮಗಾರಿ

ನಮ್ಮ ಮೆಟ್ರೋ ಕಾಮಗಾರಿ

ನಾಲ್ಕು ವರ್ಷದ ಹಿಂದಷ್ಟೇ ಡೆಲ್ಮಿಯಾ ಸರ್ಕಲ್ ಫ್ಲೈಓವರ್​ಗೆ 25 ಕೋಟಿ ರೂಪಾಯಿ ಖರ್ಚು ಮಾಡಿ ಸೇತುವೆ ನಿರ್ಮಾಣ ಮಾಡಲಾಗಿದ್ದು, ಹೀಗಾಗಿ ಫ್ಲೈಓವರ್ ಉಳಿಸುವುದಕ್ಕೆ ಬಿಎಂಆರ್​ಸಿಎಲ್​ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ನಗರದಲ್ಲಿ ಶೀಘ್ರದಲ್ಲೇ ನಮ್ಮ ಮೆಟ್ರೋ 3ನೇ ಹಂತದ (Namma Metro 3rd Phase) ಕೆಲಸ ಆರಂಭವಾಗಲಿದೆ. ಈ ಬಾರಿಯ ಬಜೆಟ್​ನಲ್ಲೂ (Karnataka Budget) ಸಿಎಂ ಘೋಷಿಸಿದ್ದಾರೆ. ಆದರೆ 3ನೇ ಹಂತದ ಮೆಟ್ರೋಗೆ ನಾಲ್ಕು ವರ್ಷದ ಹಿಂದೆ ಕಟ್ಟಿದ್ದ ಫ್ಲೈ ಓವರ್ (Flyover) ಅಡ್ಡಿಯಾಗಿತ್ತು. ಆದರೆ ಈಗ ನಮ್ಮ ಮೆಟ್ರೋ ಸಮಸ್ಯೆ ನಿವಾರಣೆಗೆ ಮಾಸ್ಟರ್​ ಪ್ಲ್ಯಾನ್ (Master Plan)​ ಮಾಡಿದೆ. ಸದ್ಯ ಬೆಂಗಳೂರಿನಲ್ಲಿ (Bengaluru) ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ನಡೆಯುತ್ತಿದೆ. ಇದರ ಜೊತೆಗೆ 3ನೇ ಹಂತದ ಕಾಮಗಾರಿಗೂ ಚಾಲನೆ ನೀಡೋ ಉತ್ಸಾಹದಲ್ಲಿ BMRCL ಸಿದ್ದತೆ ನಡೆಸಿದೆ.


BBMP ದೂರದೃಷ್ಟಿ ಇಲ್ಲದ ಅಭಿವೃದ್ಧಿ ಕೆಲಸದ್ದೇ ಸಮಸ್ಯೆ!


3ನೇ ಹಂತದ ಯೋಜನೆಯಲ್ಲಿ ಜೆಪಿ.ನಗರದ 4ನೇ ಹಂತದಿಂದ ಕೆಂಪಾಪುರವರೆಗೆ 32.15 ಕಿಲೋ ಮೀಟರ್‌ ದೂರದ ಮೆಟ್ರೋ ಕಾರಿಡಾರ್ ನಿರ್ಮಾಣಕ್ಕೆ ತಯಾರಿ ನಡೆದಿದೆ. ಆದರೆ ಈ ಮಾರ್ಗದಲ್ಲಿ ಜೆ.ಪಿ ನಗರದ ಡೆಲ್ಮಿಯಾ ಸರ್ಕಲ್ ಫ್ಲೈಓವರ್ ಅಡ್ಡಿಯಾಗಿತ್ತು. ಈ ಫ್ಲೈಓವರ್ ಕೇವಲ 4 ವರ್ಷದ ಹಿಂದಷ್ಟೇ BBMP ನಿರ್ಮಿಸಿತ್ತು. ಇತ್ತೀಚಿಗೆ ನಿರ್ಮಿಸಿರುವ ಫ್ಲೈಓವರ್​ ತೆರವು ಮಾಡದೆ ಉಳಿಸಿಕೊಳ್ಳಲು BMRCL ಮಾಸ್ಟರ್​ ಪ್ಲ್ಯಾನ್​ ಮಾಡಿದೆ.


ಜೆ.ಪಿ ನಗರದ ಡೆಲ್ಮಿಯಾ ಸರ್ಕಲ್ ಫ್ಲೈಓವರ್


ಫ್ಲೈಓವರ್ ಮೇಲೆಯೇ ಮೆಟ್ರೋ ಓಡಿಸೋ ಪ್ಲಾನ್!


ಡೆಲ್ಮಿಯಾ ಫ್ಲೈಓವರ್ ಉಳಿಸಿಕೊಳ್ಳಲು ನಿರ್ಧರಿಸಿರುವ ಬಿಎಂಆರ್​ಸಿಎಲ್ ಫ್ಲೈಓವರ್ ಮೇಲೆಯೇ ಮೆಟ್ರೋ ಓಡಿಸೋ ಪ್ಲಾನ್ ಮಾಡಿದೆ. ಫ್ಲೈಓವರ್​ನ 2 ಬದಿ ಪೋರ್ಟಲ್ ಪಿಯರ್ ನಿರ್ಮಿಸಿ ಅದರ ಮೇಲೆ ವೈಡಕ್ಟ್ ಕೂರಿಸಲಾಗುತ್ತೆ. ಅದರ ಮೆಲೆ ಮೆಟ್ರೋ ಹಳಿ ಹಾಕಿ ಟ್ರೈನ್ ಓಡಿಸೋ ಪ್ಲಾನ್ ಮಾಡಲಾಗಿದೆ. ಮೇಲ್ಸೇತುವೆ ಮೇಲೆ ಮೆಟ್ರೋ ಕಾರಿಡಾರ್ 12 ಮೀಟರ್‌ ಎತ್ತರದಲ್ಲಿ ಹಾದು ಹೋಗಲಿದೆ. ಬೆಂಗಳೂರಿನಲ್ಲಿ ಈ ತಂತ್ರಜ್ಞಾನ ಬಳಕೆ ಇದೇ ಮೊದಲು ಎನ್ನಲಾಗಿದೆ.


ಈ ಬಗ್ಗೆ ಮಾಹಿತಿ ನೀಡಿರುವ ಬಿಎಂಆರ್​ಸಿಎಲ್​ ಚೀಫ್​ ಇಂಜಿನಿಯರ್ ಯಶವಂತ್ ಚೌವ್ಹಾಣ್ ಅವರು, ಈಗ ಸೇತುವೆ ಇರುವ ಸ್ಥಳದಲ್ಲಿ ಅದರ ಅಕ್ಕಪಕ್ಕ ಪಿಲ್ಲರ್ ಮಾಡಿಯಲ್ಲಿ ಮೊದಲು ನಿರ್ಮಾಣ ಮಾಡಿಕೊಳ್ಳುತ್ತೇವೆ. ಸಿಮೆಂಟ್ ಅಥವಾ ಕಬ್ಬಿಣದ ಪಿಲ್ಲರ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಅದರ ಮೇಲೆ ಬಿಮ್​ ಸಪೋರ್ಟ್​ ತೆಗೆದುಕೊಂಡು, ರೋಡ್​ ಲೆವೆಲ್​ನಿಂದ ಕನಿಷ್ಠ ಐದುವರೆ ಅಡಿ ಬಿಟ್ಟು ಮೆಟ್ರೋ ಮಾರ್ಗ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದ್ದಾರೆ.




ಜಯದೇವ ಫ್ಲೈ ಓವರನ್ನು ಕೆಡವಿದ್ದ ಬಿಎಂಆರ್​ಸಿಎಲ್​


ನಗರದಲ್ಲಿ ಈ ಹಿಂದೆ ಜಯದೇವ ಫ್ಲೈ ಓವರನ್ನು ಕೆಡವಿದ್ದ ಬಿಎಂಆರ್​ಸಿಎಲ್​ ಸದ್ಯ ಮೆಟ್ರೋ ಜೊತೆಗೆ ಫ್ಲೈಓವರನ್ನೂ ಹೊಸದಾಗಿ ನಿರ್ಮಾಣ ಮಾಡುತ್ತಿದೆ. ಆದರೆ ಈ ಬಾರಿ ಡೆಲ್ಮಿಯಾ ಸರ್ಕಲ್ ಫ್ಲೈಓವರ್ ಹೊಸದಾಗಿ ನಿರ್ಮಾಣವಾದ ಕಾರಣ ಫ್ಲೈಓವರ್​ ಕೆಡವದೇ ಹಾಗೇ ಉಳಿಸುವುದು ಬಿಎಂಆರ್​ಸಿಎಲ್​ಗೆ ಸವಾಲಾಗಿತ್ತು.


ನಾಲ್ಕು ವರ್ಷದ ಹಿಂದಷ್ಟೇ ಈ ಫ್ಲೈಓವರ್​ಗೆ 25 ಕೋಟಿ ರೂಪಾಯಿ ಖರ್ಚು ಮಾಡಿ ಸೇತುವೆ ನಿರ್ಮಾಣ ಮಾಡಲಾಗಿದ್ದು, ಹೀಗಾಗಿ ಫ್ಲೈಓವರ್ ಉಳಿಸುವುದಕ್ಕೆ ಬಿಎಂಆರ್​ಸಿಎಲ್​ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ.


ನಮ್ಮ ಮೆಟ್ರೋ ಕಾಮಗಾರಿ


ಕೆ.ಆರ್. ಪುರಂ ಟು ವೈಟ್‍ ಫೀಲ್ಡ್ ನಮ್ಮ ಮೆಟ್ರೋ!


ಬೆಂಗಳೂರಿನ ಬೈಯಪ್ಪನಹಳ್ಳಿ ಮಾತ್ರ ನಮ್ಮ ಮೆಟ್ರೋ ಸಂಚಾರ ನಡೆಸುತ್ತಿತ್ತು. ಆ ಬಳಿಕ ಕೆಆರ್ ಪುರಂ ವೈಟ್ ಫೀಲ್ಡ್ ಮಾರ್ಗದ ಜನರ ನಿರೀಕ್ಷೆ ಗರಿಗೆದರಿತ್ತು‌. ಯೋಜನೆ ವಿಳಂಬದಿಂದಾಗಿ ಕೊಂಚ ಬೇಸರವೂ ಆಗಿತ್ತು‌. ಇದೀಗ ಬೆಂಗಳೂರು ಜನರಿಗೆ ಮೆಟ್ರೋ ಸಿಹಿಸುದ್ದಿ ನೀಡಲು ಮುಂದಾಗಿದ್ದು, ಮುಂದಿನ ತಿಂಗಳು ವೈಟ್ ಫೀಲ್ಡ್ ಟು ಕೆ ಆರ್ ಪುರಂವರೆಗೆ ಮೆಟ್ರೋ ವಾಣಿಜ್ಯ ಸಂಚಾರ ಶುರುವಾಗಲಿದೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು