Namma Metro: ಬೆಂಗಳೂರು ಮೆಟ್ರೋದಲ್ಲಿ ಕೊಂಡೊಯ್ಯಬಹುದು ಪೆಪ್ಪರ್ ಸ್ಪ್ರೇ; ಮಹಿಳೆಯರ ಸುರಕ್ಷತೆಗೆ ಹೊಸ ಕ್ರಮ
Bangalore Metro: ಮೆಟ್ರೋದಲ್ಲಿ ಒಬ್ಬಂಟಿಯಾಗಿ ಮತ್ತು ರಾತ್ರಿ ಹೊತ್ತು ಓಡಾಡುವ ಮಹಿಳೆಯರು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಪೆಪ್ಪರ್ ಸ್ಪ್ರೇಗಳನ್ನು ಇಟ್ಟುಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.

ನಮ್ಮ ಮೆಟ್ರೋ
- News18 Kannada
- Last Updated: December 3, 2019, 9:29 AM IST
ಬೆಂಗಳೂರು (ಡಿ. 3): ದೇಶದಲ್ಲಿ ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹೈದರಾಬಾದ್ನ ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ರಾಂಚಿಯ ಕಾನೂನು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ತಮಿಳುನಾಡು ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ, ಗುಜರಾತ್ ಬಾಲಕಿ ಮೇಲಿನ ಅತ್ಯಾಚಾರ ಹೀಗೆ ಹೊಸ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಮಹಿಳೆಯರು ಧೈರ್ಯವಾಗಿ ಓಡಾಡಲು ಆತಂಕ ಪಡುವ ಸ್ಥಿತಿ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹಿಳೆಯರು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಲು ಅವಕಾಶ ನೀಡುವ ಸಲುವಾಗಿ ಮೆಟ್ರೋದಲ್ಲಿ ಓಡಾಡುವ ಮಹಿಳೆಯರಿಗೆ ಪೆಪ್ಪರ್ ಸ್ಪ್ರೇ ಕೊಂಡೊಯ್ಯಲು ಬಿಎಂಆರ್ಸಿಎಲ್ ಅವಕಾಶ ಕಲ್ಪಿಸಿದೆ. ಈ ಬಗ್ಗೆ ಸೋಮವಾರ ಆದೇಶ ಹೊರಡಿಸಿರುವ ಬಿಎಂಆರ್ಸಿಎಲ್ ಮೆಟ್ರೋ ಸ್ಟೇಷನ್ಗಳಲ್ಲಿ ಮಹಿಳೆಯರಿಗೆ ಪೆಪ್ಪರ್ ಸ್ಪ್ರೇಗಳನ್ನು ಕೊಂಡೊಯ್ಯಲು ಅವಕಾಶ ನೀಡಬೇಕು ಎಂದು ಸೂಚಿಸಿದೆ.
Bangalore Rains: ಬೆಂಗಳೂರಿನಲ್ಲಿ ಇಂದು ಎಷ್ಟು ಗಂಟೆಗೆ ಮಳೆಯಾಗಲಿದೆ ಗೊತ್ತಾ?ಮೆಟ್ರೋ ನಿಲ್ದಾಣದೊಳಗೆ ಯಾವುದೇ ಅಪಾಯಕಾರಿ ಅಥವಾ ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಹಾಗೇನಾದರೂ ಹರಿತವಾದ ವಸ್ತು, ಅಪಾಯಕಾರಿ ವಸ್ತುಗಳನ್ನು ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದರೆ ತಪಾಸಣೆ ಮಾಡುವಾಗಲೇ ಅದನ್ನು ತೆಗೆದಿಟ್ಟುಕೊಳ್ಳಲಾಗುತ್ತದೆ. ಆದರೆ, ಪೆಪ್ಪರ್ ಸ್ಪ್ರೇ ಕೊಂಡೊಯ್ಯಲು ಮಹಿಳೆಯರಿಗೆ ವಿಶೇಷ ಅನುಮತಿ ನೀಡಲು ಬಿಎಂಆರ್ಸಿಎಲ್ ಸಂಸ್ಥೆ ಮುಂದಾಗಿದೆ.
ಮೆಟ್ರೋದಲ್ಲಿ ಒಬ್ಬಂಟಿಯಾಗಿ ಮತ್ತು ರಾತ್ರಿ ಹೊತ್ತು ಓಡಾಡುವ ಮಹಿಳೆಯರು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಪೆಪ್ಪರ್ ಸ್ಪ್ರೇಗಳನ್ನು ಇಟ್ಟುಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ. ಇದಕ್ಕೂ ಮೊದಲು ಹಲವು ಬಾರಿ ಮಹಿಳೆಯರ ಬ್ಯಾಗ್ನಲ್ಲಿದ್ದ ಪೆಪ್ಪರ್ ಸ್ಪ್ರೇಗಳನ್ನು ತಪಾಸಣೆ ವೇಳೆ ವಾಪಾಸ್ ಪಡೆದಿಟ್ಟುಕೊಂಡ ಘಟನೆಗಳು ನಡೆದಿದ್ದವು. ಈ ಬಗ್ಗೆ ಮಹಿಳೆಯರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು.
4 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ವಿಕೃತ ಕಾಮಿಗೆ ಥಳಿಸಿ, ಊರ ಬೀದಿಯಲ್ಲಿ ಬೆತ್ತಲೆ ಮೆರವಣಿಗೆ
ಕೆಲವರ ಆಫೀಸ್ ಮುಗಿಯುವಾಗ ಸಂಜೆಯಾಗುತ್ತದೆ. ಆಫೀಸ್ ಮುಗಿಸಿ ಮೆಟ್ರೋದಲ್ಲಿ ಬಂದ ನಂತರ ಮನೆ ಸೇರಲು ಬೇರೆ ವಾಹನಗಳಲ್ಲಿ ಹೋಗಬೇಕಾಗುತ್ತದೆ ಅಥವಾ ನಡೆದುಕೊಂಡು ಹೋಗಬೇಕಾಗುತ್ತದೆ. ಈ ವೇಳೆಯಲ್ಲಿ ನಮ್ಮ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಇಟ್ಟುಕೊಂಡಿರುತ್ತೇವೆ. ಅದಕ್ಕೂ ಯಾಕೆ ಅಡ್ಡಿಪಡಿಸುತ್ತೀರಿ? ಎಂದು ಹಲವರು ಟ್ವಿಟ್ಟರ್ನಲ್ಲಿ ಪ್ರಶ್ನಿಸಿದ್ದರು. ಹೀಗಾಗಿ, ಮೆಟ್ರೋ ಸ್ಟೇಷನ್ಗಳ ಎಲ್ಲ ಸೆಕ್ಯುರಿಟಿ ಸಿಬ್ಬಂದಿಗೆ ಈ ಬಗ್ಗೆ ಸೂಚನೆ ನೀಡಲಾಗಿದ್ದು, ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಅವರಿಗೆ ಪೆಪ್ಪರ್ ಸ್ಪ್ರೇ ತೆಗೆದುಕೊಂಡು ಹೋಗಲು ಅವಕಾಶ ನೀಡಬೇಕೆಂದು ನಿರ್ದೇಶನ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹಿಳೆಯರು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಲು ಅವಕಾಶ ನೀಡುವ ಸಲುವಾಗಿ ಮೆಟ್ರೋದಲ್ಲಿ ಓಡಾಡುವ ಮಹಿಳೆಯರಿಗೆ ಪೆಪ್ಪರ್ ಸ್ಪ್ರೇ ಕೊಂಡೊಯ್ಯಲು ಬಿಎಂಆರ್ಸಿಎಲ್ ಅವಕಾಶ ಕಲ್ಪಿಸಿದೆ. ಈ ಬಗ್ಗೆ ಸೋಮವಾರ ಆದೇಶ ಹೊರಡಿಸಿರುವ ಬಿಎಂಆರ್ಸಿಎಲ್ ಮೆಟ್ರೋ ಸ್ಟೇಷನ್ಗಳಲ್ಲಿ ಮಹಿಳೆಯರಿಗೆ ಪೆಪ್ಪರ್ ಸ್ಪ್ರೇಗಳನ್ನು ಕೊಂಡೊಯ್ಯಲು ಅವಕಾಶ ನೀಡಬೇಕು ಎಂದು ಸೂಚಿಸಿದೆ.
Bangalore Rains: ಬೆಂಗಳೂರಿನಲ್ಲಿ ಇಂದು ಎಷ್ಟು ಗಂಟೆಗೆ ಮಳೆಯಾಗಲಿದೆ ಗೊತ್ತಾ?ಮೆಟ್ರೋ ನಿಲ್ದಾಣದೊಳಗೆ ಯಾವುದೇ ಅಪಾಯಕಾರಿ ಅಥವಾ ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಹಾಗೇನಾದರೂ ಹರಿತವಾದ ವಸ್ತು, ಅಪಾಯಕಾರಿ ವಸ್ತುಗಳನ್ನು ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದರೆ ತಪಾಸಣೆ ಮಾಡುವಾಗಲೇ ಅದನ್ನು ತೆಗೆದಿಟ್ಟುಕೊಳ್ಳಲಾಗುತ್ತದೆ. ಆದರೆ, ಪೆಪ್ಪರ್ ಸ್ಪ್ರೇ ಕೊಂಡೊಯ್ಯಲು ಮಹಿಳೆಯರಿಗೆ ವಿಶೇಷ ಅನುಮತಿ ನೀಡಲು ಬಿಎಂಆರ್ಸಿಎಲ್ ಸಂಸ್ಥೆ ಮುಂದಾಗಿದೆ.
ಮೆಟ್ರೋದಲ್ಲಿ ಒಬ್ಬಂಟಿಯಾಗಿ ಮತ್ತು ರಾತ್ರಿ ಹೊತ್ತು ಓಡಾಡುವ ಮಹಿಳೆಯರು ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಪೆಪ್ಪರ್ ಸ್ಪ್ರೇಗಳನ್ನು ಇಟ್ಟುಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ. ಇದಕ್ಕೂ ಮೊದಲು ಹಲವು ಬಾರಿ ಮಹಿಳೆಯರ ಬ್ಯಾಗ್ನಲ್ಲಿದ್ದ ಪೆಪ್ಪರ್ ಸ್ಪ್ರೇಗಳನ್ನು ತಪಾಸಣೆ ವೇಳೆ ವಾಪಾಸ್ ಪಡೆದಿಟ್ಟುಕೊಂಡ ಘಟನೆಗಳು ನಡೆದಿದ್ದವು. ಈ ಬಗ್ಗೆ ಮಹಿಳೆಯರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು.
4 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ವಿಕೃತ ಕಾಮಿಗೆ ಥಳಿಸಿ, ಊರ ಬೀದಿಯಲ್ಲಿ ಬೆತ್ತಲೆ ಮೆರವಣಿಗೆ
ಕೆಲವರ ಆಫೀಸ್ ಮುಗಿಯುವಾಗ ಸಂಜೆಯಾಗುತ್ತದೆ. ಆಫೀಸ್ ಮುಗಿಸಿ ಮೆಟ್ರೋದಲ್ಲಿ ಬಂದ ನಂತರ ಮನೆ ಸೇರಲು ಬೇರೆ ವಾಹನಗಳಲ್ಲಿ ಹೋಗಬೇಕಾಗುತ್ತದೆ ಅಥವಾ ನಡೆದುಕೊಂಡು ಹೋಗಬೇಕಾಗುತ್ತದೆ. ಈ ವೇಳೆಯಲ್ಲಿ ನಮ್ಮ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಇಟ್ಟುಕೊಂಡಿರುತ್ತೇವೆ. ಅದಕ್ಕೂ ಯಾಕೆ ಅಡ್ಡಿಪಡಿಸುತ್ತೀರಿ? ಎಂದು ಹಲವರು ಟ್ವಿಟ್ಟರ್ನಲ್ಲಿ ಪ್ರಶ್ನಿಸಿದ್ದರು.
Loading...
Loading...