HOME » NEWS » State » BLOOD DONATION MOVEMENT BY TOYOTA KIRLOSKAR COMPANY EMPLOYEES IN BIDADI ATVR HK

ಟೊಯೋಟಾ ಕಾರ್ಮಿಕರಿಂದ ರಕ್ತದಾನ ಚಳವಳಿ: ಸರ್ಕಾರ, ಆಡಳಿತ ಮಂಡಳಿ ವಿರುದ್ಧ ವಿನೂತನ ಹೋರಾಟ

ಕಳೆದ 50 ದಿನಗಳಿಂದ ಕಂಪನಿಯ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಟೊಯೋಟಾ ಕಾರ್ಮಿಕ ಒಕ್ಕೂಟ ಇವತ್ತಿನಿಂದ ಎರಡು ದಿನಗಳ ಕಾಲ ರಕ್ತದಾನ ಚಳವಳಿ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ಆಡಳಿತ ಮಂಡಳಿಗೆ ಬಿಸಿಮುಟ್ಟಿಸಲು ನಿರ್ಧಾರ ಮಾಡಿದ್ದಾರೆ

news18-kannada
Updated:December 28, 2020, 7:30 PM IST
ಟೊಯೋಟಾ ಕಾರ್ಮಿಕರಿಂದ ರಕ್ತದಾನ ಚಳವಳಿ: ಸರ್ಕಾರ, ಆಡಳಿತ ಮಂಡಳಿ ವಿರುದ್ಧ ವಿನೂತನ ಹೋರಾಟ
ರಕ್ತದಾನ ಮಾಡಿದ ಕಾರ್ಮಿಕರು
  • Share this:
ರಾಮನಗರ(ಡಿಸೆಂಬರ್​. 28): ಕಳೆದ 50 ದಿನಗಳಿಂದ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ವಿರುದ್ಧ ಕಾರ್ಮಿಕ ಒಕ್ಕೂಟದವರು ನಡೆಸುತ್ತಿರುವ ಹೋರಾಟ ಈಗ ಮತ್ತಷ್ಟು ತೀವ್ರತೆ ಪಡೆದಿದೆ. ರಾಜ್ಯ ಸರ್ಕಾರ ಹಾಗೂ ಕಂಪನಿ ಆಡಳಿತ ಮಂಡಳಿಗೆ ಬಿಸಿಮುಟ್ಟಿಸಲು ಕಾರ್ಮಿಕರು ತಮ್ಮ ರಕ್ತವನ್ನೇ ಹರಿಸುತ್ತಿದ್ದಾರೆ. ಮುಂದೆ ಸೂಕ್ತ ನಿರ್ಧಾರ ಕೈಗೊಳ್ಳದೇ ಇದ್ದರೆ ಪ್ರಾಣವನ್ನೇ ಪಣಕ್ಕಿಡಲಾಗುತ್ತದೆ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ರಾಮನಗರ ಜಿಲ್ಲೆ ಬಿಡದಿ ಕೈಗಾರಿಕ ಪ್ರದೇಶದಲ್ಲಿರುವ ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಕಾರ್ಮಿಕರು ರಕ್ತದಾನ ಮಾಡುವ ಮೂಲಕ ವಿನೂತನವಾಗಿ ಹೋರಾಟ ನಡೆಸಿದರು. 7 ಜನ ಕಾರ್ಮಿಕರು ಈ ಹಿಂದೆ ಸಾವನ್ನಪ್ಪಿದ್ದರು. ಅವರ ನೆನಪಿಗೆ ಹಾಗೂ ಕಾರ್ಮಿಕರ ನ್ಯಾಯಯುತ ಬದುಕಿಗೆ ಹೋರಾಟ ನಡೆಸಿದರು.

ಕಳೆದ 50 ದಿನಗಳಿಂದ ಕಂಪನಿಯ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಟೊಯೋಟಾ ಕಾರ್ಮಿಕ ಒಕ್ಕೂಟ ಇವತ್ತಿನಿಂದ ಎರಡು ದಿನಗಳ ಕಾಲ ರಕ್ತದಾನ ಚಳವಳಿ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ಆಡಳಿತ ಮಂಡಳಿಗೆ ಬಿಸಿಮುಟ್ಟಿಸಲು ನಿರ್ಧಾರ ಮಾಡಿದ್ದಾರೆ. ಈಗಾಗಲೇ ನಮ್ಮ 65 ಜನ ಕಾರ್ಮಿಕರನ್ನ ಕೆಲಸದಿಂದ ಅಮಾನತ್ತು ಮಾಡಿದ್ದಾರೆ.

7 ಜನರನ್ನ ಕೆಲಸದಿಂದಲೇ ವಜಾ ಮಾಡಿದ್ದಾರೆ. ಹಾಗಾಗಿ ಅವರನ್ನ ಮತ್ತೆ ಕೆಲಸಕ್ಕೆ ತೆಗದುಕೊಳ್ಳಬೇಕೆಂದು ಕಾರ್ಮಿಕ ಒಕ್ಕೂಟದವರು ಆಗ್ರಹಿಸಿದರು. ಜೊತೆಗೆ ಕಾರ್ಮಿಕರ ಎಲ್ಲಾ ಸಮಸ್ಯೆಗಳನ್ನ ಬಗೆಹರಿಸಬೇಕೆಂದು ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಚಕ್ಕೆರೆ ಪ್ರಸನ್ನ ಒತ್ತಾಯಿಸಿದರು.

ಇನ್ನು ಇವತ್ತಿನಿಂದ ಎರಡು ದಿನಗಳ ಕಾಲ ನಡೆಯುವ ಬೃಹತ್ ರಕ್ತದಾನ ಚಳವಳಿಯಲ್ಲಿ ಸರಿಸುಮಾರು 1500 ಸಾವಿರಕ್ಕೂ ಹೆಚ್ಚು ಜನ ಕಾರ್ಮಿಕರು ತಮ್ಮ ರಕ್ತವನ್ನ ದಾನ ಮಾಡುವ ಮೂಲಕ ಹೋರಾಟ ನಡೆಸಲಿದ್ದಾರೆಂದು ಮಾಹಿತಿ ಲಭ್ಯವಾಯಿತು.

ಕಾರ್ಮಿಕರಲ್ಲದೇ ಅವರ ಕುಟುಂಬಸ್ಥರು ಸಹ ಹೋರಾಟಕ್ಕೆ ಬೆಂಬಲ ನೀಡಿದ್ದು, ಸವಿತಾ ಮಧು ಎಂಬ ಮಹಿಳೆ ಕೂಡ ರಕ್ತದಾನ ಮಾಡುವ ಮೂಲಕ ಕಾರ್ಮಿಕರ ಹೋರಾಟಕ್ಕೆ ನನ್ನ ಬೆಂಬಲವೂ ಇದೇ ಎಂದು ಅಭಿಪ್ರಾಯಪಟ್ಟರು.

ಚಳವಳಿ ಪ್ರಾರಂಭವಾದ 1 ಗಂಟೆಯಲ್ಲಿಯೇ 100ರಕ್ಕೂ ಹೆಚ್ಚು ಬಾಟಲ್‌ನಷ್ಟು ರಕ್ತ ಶೇಖರಣೆಯಾಗಿತ್ತು, ನಾಳೆಯೂ ಸಹ ಈ ಹೋರಾಟ ಬೃಹತ್ ಮಟ್ಟದಲ್ಲಿ ನಡೆಯಲಿದೆ ಎಂದು ಕಾರ್ಮಿಕ ಒಕ್ಕೂಟದವರು ತಿಳಿಸಿದ್ದಾರೆ. ರಾಷ್ಟ್ರೋತ್ಥಾನ ರಕ್ತನಿಧಿ ಹಾಗೂ ಬೆಳ್ಳಿ ರಕ್ತನಿಧಿ ಸಂಸ್ಥೆಯವರು ಸಂಗ್ರಹ ಮಾಡಿಕೊಂಡರು.

ಇದನ್ನೂ ಓದಿ : ಆರಂಭವಾಗದ ಭತ್ತ ಖರೀದಿ ಕೇಂದ್ರ; ರಾಶಿಯಲ್ಲಿಯೇ ಮೊಳಕೆಯೊಡೆಯುತ್ತಿರುವ ಭತ್ತಇನ್ನು ಇವತ್ತಿನ ಈ ಹೋರಾಟಕ್ಕೆ ಟೊಯೋಟಾ ಕಂಪನಿಯ ಆಡಳಿತ ಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ಮಾಹಿತಿ ಲಭ್ಯವಾಗಿದೆ. ಕಂಪನಿಯ ಗೇಟ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಪೆಂಡಲ್ ಹಾಕಿ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ಆದರೆ, ಕಂಪನಿಯವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಅಲ್ಲೇ ಒಂದು ಮಳಿಗೆಯನ್ನ ಬಾಡಿಗೆಗೆ ಪಡೆದು ಚಳವಳಿಯನ್ನ ಪ್ರಾರಂಭಿಸಿದ್ದಾರೆ.

ಒಟ್ಟಾರೆ ಟೊಯೋಟಾ ಕಾರ್ಮಿಕ ಒಕ್ಕೂಟ-ಆಡಳಿತ ಮಂಡಳಿಯವರ ಈ ಜಗಳ ಇನ್ನು ಎಷ್ಟು ದಿನಗಳ ಕಾಲ ಮುಂದುವರೆಯುತ್ತೆ ಎಂಬುದನ್ನ ಕಾಲವೇ ಉತ್ತರಿಸಬೇಕಿದೆ.

ವರದಿ: ಎ. ಟಿ. ವೆಂಕಟೇಶ್
Published by: G Hareeshkumar
First published: December 28, 2020, 7:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories