• Home
 • »
 • News
 • »
 • state
 • »
 • Sirsi Marikamba Jatra 2022: ಶಿರಸಿ ಮಾರಿಕಾಂಬೆಯ ಪ್ರೀತ್ಯರ್ಥ ರಕ್ತದಾನ ಸೇವೆ! ಪೂಜೆ, ಹರಕೆಯ ಜೊತೆಗೆ ರಕ್ತದಾನ ಮಾಡಿ

Sirsi Marikamba Jatra 2022: ಶಿರಸಿ ಮಾರಿಕಾಂಬೆಯ ಪ್ರೀತ್ಯರ್ಥ ರಕ್ತದಾನ ಸೇವೆ! ಪೂಜೆ, ಹರಕೆಯ ಜೊತೆಗೆ ರಕ್ತದಾನ ಮಾಡಿ

ಶ್ರೀ ಮಾರಿಕಾಂಬಾ ದೇವಿ

ಶ್ರೀ ಮಾರಿಕಾಂಬಾ ದೇವಿ

ಜಾತ್ರೆಯ ಸಡಗರದಲ್ಲಿ ರಕ್ತದಾನ ಮಾಡುವ ಸಂಪ್ರದಾಯ ಇನ್ನಷ್ಟು ಪಸರಿಸಲಿ, ಎಲ್ಲ ಊರುಗಳ ಜಾತ್ರೆಗಳಲ್ಲೂ ಈ ಆಚರಣೆ ರೂಢಿಗೆ ಬರಲಿ ಎಂಬುದೇ ಹಾರೈಕೆ.

 • Share this:

  ಭಾರತದಲ್ಲೇ ಸುಪ್ರಸಿದ್ಧವಾದ ಮಾರಿಕಾಂಬಾ ದೇವಿ ಜಾತ್ರೆ  (Sri Marikamba Jatre) ಆರಂಭವಾಗಿದೆ. ರಾಜ್ಯ, ಪರ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷ ಸಂಖ್ಯೆಯಲ್ಲಿ ಈ ಜಾತ್ರೆಗೆ ಜನ ಪ್ರವಾಹ ಹರಿದುಬರುತ್ತದೆ. ಮಾರಿಕಾಂಬೆಯ ದರ್ಶನ, ಪೂಜೆ, ಹರಕೆ, ಸೇವೆ ಸಲ್ಲಿಸುವುದು, ಆ ದೇವಿಯ ಕೃಪೆಗೆ ಪಾತ್ರರಾಗುವುದು ಬಹುತೇಕವಾಗಿ ಎಲ್ಲರ ಉದ್ದೇಶ. ಶ್ರೀದೇವಿ (Sirsi Shri Marikamba Devi) ತಮ್ಮನ್ನು ಹರಸುತ್ತಾಳೆ, ದುಃಖ ದೂರ ಮಾಡುತ್ತಾಳೆ ಎನ್ನುವುದು ಭಕ್ತರ ಬಲವಾದ ನಂಬಿಕೆ.ಅದೇ ಭಕ್ತರು ದೇವರ ಹೆಸರಲ್ಲಿ ರಕ್ತದಾನವನ್ನೂ ಮಾಡಬಹುದು ಎಂಬ ಅತ್ಯುತ್ತಮ ಯೋಚನೆಯೊಂದರ ಬೆನ್ನಟ್ಟಿ ಉತ್ತರ ಕನ್ನಡದ ಶಿರಸಿಯ (Sirsi) ವೈದ್ಯರೊಬ್ಬರು ಕ್ರಿಯಾಶೀಲರಾಗಿದ್ದಾರೆ. ಸ್ವತಃ ರಕ್ತದಾನ ಮಾಡಿದ್ದಾರೆ. ಅವರ ಚಿಂತನೆಯ ಬರಹ ಇಲ್ಲಿದೆ.

  ಜಾತ್ರೆಗಳು ಭಾರತದ ಸಂಪ್ರದಾಯದಲ್ಲಿ ಬಹಳ ಹಿಂದಿನಿಂದ ನಡೆದುಕೊಂಡ ಬಂದ ಆಚರಣೆಗಳಾಗಿವೆ. ಜನ ಮರುಳೋ ಜಾತ್ರೆ ಮರುಳೋ ಎಂಬ ಮಾತೇ ಇದೆ. ಪ್ರಸಿದ್ಧ ಜಾತ್ರೆಗಳಿಗೆ ನೆರೆಯುವ ಭಕ್ತರ ಸಂಖ್ಯೆ ಲಕ್ಷಕ್ಕೂ ಮಿಗಿಲು. ಎಣಿಸಲಾರದಷ್ಟು ಭಕ್ತರು ದೇವರ ದರ್ಶನ ಮಾಡಿ, ಹರಕೆ ತೀರಿಸಿ ಕೃತಾರ್ಥರಾಗುತ್ತಾರೆ.


  ವಿವಿಧ ಆಚರಣೆಗಳಿವೆ
  ಅದೇ ರೀತಿ ಶ್ರೀ ದೇವಿಯ ರಥ ಬರುತ್ತಿರುವಾಗ ಕೋಳಿಗಳನ್ನು ಹಾರಿ ಬಿಡುವಂತಹ ರೂಢಿ ಇಲ್ಲಿದೆ. ದೇವಿಯ ಪ್ರೀತ್ಯರ್ಥ ಕೋಳಿ, ಕುರಿಗಳ ಬಲಿ ನೀಡಿ ನೆತ್ತರು ಹರಿಸುವ ಹಿಂದೆಯೂ ಅವರವರ ಭಾವನೆ, ನಂಬಿಕೆ. ಈ ಜಾತ್ರೆಯ ಸಂದರ್ಭದಲ್ಲಿ ಹತ್ತು ನಿಮಿಷದಲ್ಲಿ ಹಾಕಿದಂತಹ ಮೂಲಧನವನ್ನು ಎರಡರಷ್ಟು ಮಾಡುವವರಿದ್ದಾರೆ.


  ಜಾತ್ರೆಯಿಂದ ಹಲವರಿಗೆ ಉಪಯೋಗ
  ಬಂದಂತಹ ಭಕ್ತರಿಗೆ ತಂಪುಪಾನೀಯ, ಮಜ್ಜಿಗೆ,ಊಟ ನೀಡಿ ಧನ್ಯತೆಯನ್ನು ಪಡೆದುಕೊಳ್ಳುವವರೂ ಇದ್ದಾರೆ. ಇದರ ಸಂಪೂರ್ಣ ವ್ಯತಿರಿಕ್ತವಾಗಿ ಜಾತ್ರೆಯ ಸಂದರ್ಭ ಹಣಗಳಿಕೆ ಸಂಪೂರ್ಣ ಉಪಯೋಗಿಸುವವರಿದ್ದಾರೆ.


  ಮಾರಿಕಾಂಬೆಯ ರಥೋತ್ಸವದ ಮುಂಜಾನೆ ರಕ್ತದಾನ
  ರಕ್ತದಾನ ಮಾಡಿದರೆ ಮಾರಿಕಾಂಬೆ ಇನ್ನಷ್ಟು ಸಂಪ್ರೀತಳಾಗುವಳೆಂಬ ಭಾವನೆ, ಚಿಂತನೆ ನಮ್ಮಲ್ಲಿ ಮೂಡಿದರೆ ಅದು ಅರ್ಥಪೂರ್ಣವಲ್ಲವೇ! ಇಂಥದ್ದೊಂದು ವಿಚಾರವನ್ನು ಭಕ್ತರ ಮನದಲ್ಲಿ ಮೂಡಿಸಿ ಅನುಷ್ಠಾನಗೊಳಿಸುವ ಪ್ರಯತ್ನ ಮಾರಿಕಾಂಬೆಯ ರಥೋತ್ಸವದ ಮುಂಜಾನೆ ರಕ್ತದಾನ ಮಾಡಲಾಗುತ್ತದೆ.


  ಇದನ್ನೂ ಓದಿ: Sirsi Jatre: ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಗೆ ಚಾಲನೆ, ಗದ್ದುಗೆಯಲ್ಲಿ ವಿರಾಜಮಾನಳಾದ ಶಿರಸಿ ಮಾರಿಕಾಂಬೆ


  ಜಾತ್ರೆಗೆ ಬರುವ ಲಕ್ಷಾವಧಿ ಜನರಲ್ಲಿ ನೂರಾರು ಹೃದಯಗಳಾದರೂ ಈ ಮಹತ್ ಕಾರ್ಯಕ್ಕೆ ಮಿಡಿದರೆ, ಮರಣದೊಂದಿಗೆ ಹೋರಾಟ ನಡೆಸಿದ ಅಷ್ಟೇ ಜನರ ಜೀವ ಉಳಿದೀತು ಎನ್ನುವ ಆಶಯ.


  ಮೂಕಪ್ರಾಣಿಗಳ ಬಲಿ ತಡೆಗೆ ಸರ್ಕಾರ ಈಗಾಗಲೇ ಕಾನೂನು ತಂದಿದೆ. ಆದರೆ ಈ ವಿಚಾರ ಭಕ್ತರ ಮನದಿಂದ ಹೊರಹಾಕುವದು ಬಹಳ ಕಷ್ಟ. ಆದರೆ ರಕ್ತದ ಅವಶ್ಯಕತೆ ಎಂದೆಂದೂ ತುರ್ತು ಇಂತಹ ಸಂದರ್ಭವನ್ನು ರಕ್ತದಾನದ ಸೇವೆಯಾಗಿಸಿ ಆ ಜಗನ್ಮಾತೆಯ ಕೃಪೆಯ ಅವಕಾಶಕ್ಕೆ ಜಾತ್ರೆ ಒಂದು ಉತ್ತಮ ಸಂದರ್ಭ.


  ಇದನ್ನೂ ಓದಿ: Viral Photos: ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಪುನೀತ್ ರಾಜ್‌ಕುಮಾರ್ ಪ್ರತ್ಯಕ್ಷ! ನೀವೇ ಫೋಟೋ ನೋಡಿ


  ಹಿಂದಿನ ಜಾತ್ರೆಯಲ್ಲಿ ಪ್ರಥಮ ದಿನ ರಕ್ತದಾನ ಮಾಡಿದ ನಂತರ ರಕ್ತನಿಧಿ ಕೇಂದ್ರಕ್ಕೆ ಬಂದು ರಕ್ತದಾನ ಮಾಡಿದವರು ಗಣ್ಯಾತಿಗಣ್ಯರು ಎನ್ನುವುದು ಗಮನಾರ್ಹ. ಶ್ರೀದೇವಿ ಮಾರಿಕಾಂಬೆಯ ಪ್ರೀತ್ಯರ್ಥವಾಗಿ ಹೀಗೊಂದು ರಕ್ತದಾನ ಸೇವೆ ಮಾಡಿದ್ದೇವೆ ಎನ್ನುತ್ತಾರೆ ಆಯೂರ್ವೇದ ವೈದ್ಯ, ಬರಹಗಾರ ಡಾ. ರವಿಕಿರಣ ಪಟವರ್ಧನ.  ಜಾತ್ರೆಯ ಸಡಗರದಲ್ಲಿ ರಕ್ತದಾನ ಮಾಡುವ ಸಂಪ್ರದಾಯ ಇನ್ನಷ್ಟು ಪಸರಿಸಲಿ, ಎಲ್ಲ ಊರುಗಳ ಜಾತ್ರೆಗಳಲ್ಲೂ ಈ ಆಚರಣೆ ರೂಢಿಗೆ ಬರಲಿ ಎಂಬುದೇ ಹಾರೈಕೆ.


  ಬರಹ: ಡಾ. ರವಿಕಿರಣ ಪಟವರ್ಧನ
  ಆಯುರ್ವೇದ ವೈದ್ಯರು, ಬರಹಗಾರರು, ಶಿರಸಿ

  Published by:ಗುರುಗಣೇಶ ಡಬ್ಗುಳಿ
  First published: