Bengaluru: ಕಣ್ಣು ಕಾಣದಿದ್ರೂ ಎರಡು ಬಾರಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ಮೇಘನಾ: ಎಕ್ಸಾಂಗೆ ಸಿದ್ಧತೆ ನಡೆಸಿದ್ದು ಹೇಗೆ?

ಮೇಘನಾ 2015ನೇ ಬ್ಯಾಟ್ ನಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 11ನೇ rank ಪಡೆದು, ಸದ್ಯ ಬೆಂಗಳೂರಿನ ಖಜಾನೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2020ರಲ್ಲಿ ನಡೆದ ಪರೀಕ್ಷೆಯಲ್ಲಿ ಮೇಘನಾ 465ನೇ Rank ಪಡೆದುಕೊಂಡಿದ್ದಾರೆ.

ಮೇಘನಾ ಕೆ.ಟಿ.

ಮೇಘನಾ ಕೆ.ಟಿ.

  • Share this:
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ (Competitive Exams) ಆಗಬೇಕೆಂದ್ರೆ ಅದಕ್ಕೆ ತಯಾರಿ ಸಹ ಅಷ್ಟೇ ಕಷ್ಟವಾಗಿರುತ್ತದೆ. ಕಣ್ಣು, ಕೈ ಎಲ್ಲವೂ ಚೆನ್ನಾಗಿದ್ರೂ ಕೆಲವರು ಓದಲು (Study) ಆಲಸ್ಯ ತೋರುತ್ತಾರೆ. ಇಂತಹ ಆಲಸಿಗಳೇ ಅಕ್ರಮ ಎಸಗುವ ಮೂಲಕ ಇನ್ನುಳಿದ ಪ್ರತಿಭಾನ್ವಿತ ಅಭ್ಯರ್ಥಿಗಳ ಭವಿಷ್ಯಕ್ಕೆ ಕಲ್ಲು ಹಾಕುತ್ತಾರೆ. ನಿನ್ನೆ ಯುಪಿಎಸ್ ಸಿ (ಕೇಂದ್ರ ಲೋಕಸೇವಾ ಆಯೋಗ) ಫಲಿತಾಂಶ (UPSC Results 2022) ಪ್ರಕಟವಾಗಿದ್ದು, ಮೈಸೂರು ಮೂಲದ ಕೆ.ಟಿ.ಮೇಘನಾ (K.T.Meghana) ಇತರರಿಗೆ ಮಾದರಿಯಾಗಿದ್ದಾರೆ. ಹೌದು ಮೇಘನಾ ಅವರಿಗೆ ದೃಷ್ಟಿ ಸಮಸ್ಯೆಯಿದೆ (Eye Sight). ಶೇ.70 ರಷ್ಟು ದೃಷ್ಟಿ ಸಮಸ್ಯೆ ಹೊಂದಿರುವ ಮೇಘನಾ ಅವರು ಎರಡು ಬಾರಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ. 2022ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಮೇಘನಾ ಕೆ.ಟಿ. ಅವರು 425ನೇ Rank ಪಡೆದುಕೊಂಡಿದ್ದಾರೆ. 2020ರಲ್ಲಿ ನಡೆದ ಪರೀಕ್ಷೆಯಲ್ಲೂ ಮೇಘನಾ ಆಯ್ಕೆಯಾಗಿದ್ದರು. ಆದರೆ ಕಡಿಮೆ Rank ಬಂದ ಹಿನ್ನೆಲೆ ಮತ್ತೊಮ್ಮೆ ಪರೀಕ್ಷೆ ತೆಗೆದುಕೊಂಡಿದ್ದರು.

ಮೇಘನಾ ಅವರು ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕುಡಕೂರು ಗ್ರಾಮದ ನಿವಾಸಿ. ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ಮೇಘನಾ ಕುಟುಂಬಸ್ಥರ ಜೊತೆ ವಾಸವಾಗಿದ್ದಾರೆ. ತಾಂಡವಮೂರ್ತಿ ಮತ್ತು ನವನೀತ ದಂಪತಿಯ ಪುತ್ರಿಯಾಗಿರುವ ಮೇಘನಾ 10ನೇ ತರಗತಿಯಲ್ಲಿ ಓದುತ್ತಿರುವಾ ರೆಟಿನಾ ಸಮಸ್ಯೆಯಿಂದ ಶೇ.70ರಷ್ಟು ದೃಷ್ಟಿ ಕಳೆದುಕೊಂಡಿದ್ದಾರೆ. ದೃಷ್ಟಿ ಸಮಸ್ಯೆ ಕಳೆದುಕೊಂಡರೂ ಛಲ ಬಿಡದ ಮೇಘನಾ ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ:  UPSC ಪರೀಕ್ಷೆಯಲ್ಲಿ ಕನ್ನಡಿಗರ ಸಾಧನೆ; ಇಲ್ಲಿದೆ ಕರ್ನಾಟಕದ ಟಾಪರ್ಸ್​ ಲಿಸ್ಟ್​

ಮಗಳ ಸಾಧನೆ ಬಗ್ಗೆ ಪೋಷಕರ ಸಂತಸ

ಮೇಘನಾ 2015ನೇ ಬ್ಯಾಟ್ ನಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 11ನೇ rank ಪಡೆದು, ಸದ್ಯ ಬೆಂಗಳೂರಿನ ಖಜಾನೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2020ರಲ್ಲಿ ನಡೆದ ಪರೀಕ್ಷೆಯಲ್ಲಿ ಮೇಘನಾ 465ನೇ Rank ಪಡೆದುಕೊಂಡಿದ್ದಾರೆ. ಇಂದು ಬಾರಿ ಕೆಎಎಸ್ ಮತ್ತು ಎರಡು ಬಾರಿ ಯುಪಿಎಸ್ ಸಿ ಯಲ್ಲಿ ತೇರ್ಗಡೆಯಾಗುವ ಮೂಲಕ ನನ್ನಿಂದ ಆಗಲ್ಲ ಎಂದು ಕುಳಿತುಕೊಳ್ಳುವ ಯುವ ಜನತೆಗೆ ಮೇಘನಾ ಪ್ರೇರಣೆಯಾಗಿದ್ದಾರೆ. ಮಗಳ ಸಾಧನೆ ಬಗ್ಗೆ ಪೋಷಕರು ಮತ್ತು ಕುಟುಂಬಸ್ಥರು ಸಂತಸ ವ್ಯಕ್ತಪಡಿಸುತ್ತಾರೆ.

ಕಣ್ಣು ಕಾಣದಿದ್ದರೂ ಯುಪಿಎಸ್ ಸಿ ಅಂತಹ ದೈತ್ಯ ಪರೀಕ್ಷೆಯಲ್ಲಿ ಮೇಘನಾ ತೇರ್ಗಡೆಯಾಗಿದ್ದು ಹೇಗೆ? ಯಾವ ರೀತಿ ಅಭ್ಯಾಸ ಮಾಡುತ್ತಿದ್ದರು ಎಂಬುದರ ಬಗ್ಗೆ ವಿಜಯ ಕರ್ನಾಟಕಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಮೇಘನಾ ಪರೀಕ್ಷೆ ತಯಾರಿ ಹೇಗಿತ್ತು?

ಓದುವ ಛಲ ಮತ್ತು ದೃಢವಾದ ಸಂಕಲ್ಪ ಇದ್ರೆ ಯಾವುದೇ ಸವಾಲುಗಳಿದ್ರೂ ಗುರಿಯನ್ನು ತಲುಪಬಹುದು ಎಂದು ಮೇಘನಾ ಹೇಳುತ್ತಾರೆ. ಜಾಬ್ ಆಕ್ಸೆಸ್ ವಿಥ್ ಸ್ಪೀಚ್ ಎಂಬ ಸಾಫ್ಟ್ ವೇರ್ ಸಹಾಯದಿಂದ ಮೇಘನಾ ಪರೀಕ್ಷೆ ತಯಾರಿ ನಡೆಸಿದ್ದಾರೆ. ಇದೊಂದು ಸತತ ಪ್ರಯತ್ನ ಮತ್ತು ಸಾಕಷ್ಟು ಪರಿಶ್ರಮ ವಹಿಸಬೇಕಿದೆ. ಯುಪಿಎಸ್ ಸಿ ಪರೀಕ್ಷೆ ಸುದೀರ್ಘವಾದ ಹಂತವಾಗಿದೆ. ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನಕ್ಕೆ ಪ್ರತ್ಯೇಕವಾಗಿ ಅಭ್ಯಾಸ ಮಾಡಬೇಕು ಎಂಬುವುದು ಮೇಘನಾ ಅವರ ಮಾತು.

ಮೇಘನಾ ಪರೀಕ್ಷೆ ಬರೆದಿದ್ದು ಹೇಗೆ?

ಅಂಧ ವಿದ್ಯಾರ್ಥಿಗಳಿಗೆ ಯುಪಿಎಸ್ ಸಿಯಲ್ಲಿ ಸ್ಕ್ರೈಬ್ ಫೆಸಿಲಿಟಿ ಲಭ್ಯವಿದೆ. ಇಲ್ಲಿ ಅಂಧ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಹಾಯಕರನ್ನು ನೀಡಲಾಗುತ್ತದೆ. ಪರೀಕ್ಷೆ ಬರೆಯಲು UPSCಯೇ ಅಭ್ಯರ್ಥಿಗಳನ್ನು ನೀಡಬಹದು ಅಥವಾ ನಾವೇ ಕರೆದುಕೊಂಡು ಹೋಗಬಹುದು. ಪರೀಕ್ಷೆ ಬರೆಯುವವರು ಪದವಿಯನ್ನು ಪೂರ್ಣಗೊಳಿಸಿರಬಾರದು ಎಂಬ ನಿಯಮ ಇದೆ.

ಇದನ್ನೂ ಓದಿ:  UPSC Results 2021: ಯುಪಿಎಸ್​ಸಿ ಫಲಿತಾಂಶ ಪ್ರಕಟ; ಮೊದಲ 4 ಸ್ಥಾನದಲ್ಲಿ ಗಳಿಸಿದ ಮಹಿಳೆಯರ ಮಿಂಚು!

ಕೆಪಿಎಸ್ ಸಿಯಲ್ಲಿ ಪ್ರತಿ ಗಂಟೆಗೆ ಹೆಚ್ಚುವರಿಯಾಗಿ 10 ನಿಮಿಷ ಮತ್ತು ಯುಪಿಎಸ್ ಸಿ ಯಲ್ಲಿ ಪ್ರತಿ ಗಂಟೆಗೆ ಹೆಚ್ಚುವರಿಯಾಗಿ 20 ನಿಮಿಷ ನೀಡಲಾಗುತ್ತದೆ.
Published by:Mahmadrafik K
First published: