ಜಾತ್ರೆಯಲ್ಲಿ ಬಲಿಯಾಗುತ್ತಿದ್ದ ಹರಕೆ ಕುರಿಗಳಿಗೆ ಭಾರೀ ಬೇಡಿಕೆ; ಮೈಲಾರಲಿಂಗೇಶ್ವರನಿಗೆ ಹರಿದು ಬಂತು ಲಕ್ಷಾಂತರ ರೂ.ಹಣ

ಈ ಬಾರಿ ಜಿಲ್ಲಾಡಳಿತ ವಿನೂತನವಾಗಿ ಟೆಂಡರ್ ಕರೆದಿದೆ. ಒಂದು ಕುರಿ ಮರಿಗೆ 1050 ರೂ ದರ ನಿಗದಿ ಮಾಡಿ ಟೆಂಡರ್ ಕರೆದಿದೆ. ಟೆಂಡರ್ ನಲ್ಲಿ ಭಾಗಿಯಾದ ಕುರಿ ಸಾಕಾಣಿಕೆದಾರರು ಪ್ರತಿಕುರಿಗೆ 1357 ರಿಂದ 1503 ರೂ.ನಂತೆ ಟೆಂಡರ್ ಮೂಲಕ ಖರೀದಿ ಮಾಡಿದ್ದಾರೆ.

news18-kannada
Updated:January 15, 2020, 3:30 PM IST
ಜಾತ್ರೆಯಲ್ಲಿ ಬಲಿಯಾಗುತ್ತಿದ್ದ ಹರಕೆ ಕುರಿಗಳಿಗೆ ಭಾರೀ ಬೇಡಿಕೆ; ಮೈಲಾರಲಿಂಗೇಶ್ವರನಿಗೆ ಹರಿದು ಬಂತು ಲಕ್ಷಾಂತರ ರೂ.ಹಣ
ಕುರಿಮರಿಗಳನ್ನು ರಕ್ಷಿಸಿದ ಅಧಿಕಾರಿಗಳು
  • Share this:
ಯಾದಗಿರಿ(ಜ.15): ಮೈಲಾರಲಿಂಗೇಶ್ವರ  ಜಾತ್ರೆಯಲ್ಲಿ ಬಲಿಯಾಗುತ್ತಿದ್ದ ಹರಕೆ ಕುರಿಮರಿಗಳನ್ನು  ಅಧಿಕಾರಿಗಳು  ರಕ್ಷಿಸಿ ಅವುಗಳಿಗೆ  ಪುನರ್ಜನ್ಮ ಕೊಟ್ಟಿದ್ದಾರೆ. ಹೆತ್ತ ತಾಯಿಯಿಂದ ದೂರವಾದ ಕುರಿಮರಿಗಳನ್ನು ಭಕ್ತರಿಂದ ಕಾಣಿಕೆ ರೂಪದಲ್ಲಿ ಪಡೆದು ಮತ್ತೆ ಅವು ಮರು ಜೀವಿಸುವಂತೆ ಮಾಡಿದ್ದಾರೆ. ಟೆಂಡರ್ ಮೂಲಕ ಭಕ್ತರಿಗೆ  ಮರಳಿ ಕುರಿಮರಿಗಳನ್ನು ಸಮರ್ಪಿಸಿದ್ದಾರೆ.  ಹೀಗಾಗಿ ಜಾತ್ರೆಯಲ್ಲಿ ಬಲಿಯಾಗುತ್ತಿದ್ದ ಹರಕೆ ಕುರಿ ಮರಿಗಳಿಗೆ ಈಗ ಭಾರೀ ಬೇಡಿಕೆ ಬಂದಿದೆ. ಮಲ್ಲಯ್ಯನ ಜಾತ್ರೆ ಕುರಿ ಮರಿಗಳನ್ನು ಸಾಕ್ಷಾತ್ ಮಲ್ಲಯ್ಯನ ಸ್ವರೂಪಿ ಎಂದು ಭಾವಿಸಿ ಭಕ್ತರು ಟೆಂಡರ್​​​​ ಮಲಯ್ಯನ ಕುರಿಗಳನ್ನು ಖರೀದಿಸಿ ಭಕ್ತಿ ಮೆರೆದಿದ್ದಾರೆ.

ಯಾದಗಿರಿ ತಾಲೂಕಿನ ಮೈಲಾಪೂರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಪ್ರತಿವರ್ಷ ಮಲ್ಲಯ್ಯನ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ಹರಕೆ ಹೊತ್ತ ಭಕ್ತರು ಕುರಿ ಮರಿಗಳನ್ನು ಮಲ್ಲಯ್ಯನ ಪಲ್ಲಕ್ಕಿ ಮೇಲೆ ಎಸೆದು ಭಕ್ತಿ ಮೆರೆಯುತ್ತಾರೆ. ಇದರಿಂದ ಹರಕೆ ಕುರಿಗಳು ಜಾತ್ರೆಯಲ್ಲಿ ಬಲಿಯಾಗುತ್ತವೆ. ಹೀಗಾಗಿ ಜಿಲ್ಲಾಡಳಿತವು  ಜಾತ್ರೆಯಲ್ಲಿ ಪ್ರಾಣಿ ಹಿಂಸೆಗೆ ಕಡಿವಾಣ ಹಾಕಿದೆ. ಪ್ರತಿ ವರ್ಷದಂತೆ ಈ ವರ್ಷ ಪಲ್ಲಕ್ಕಿ ಮೇಲೆ ಕುರಿ ಮರಿಗಳ ಎಸೆಯುವುದನ್ನು ನಿಷೇಧ ಮಾಡಿದೆ.ಧಾರವಾಡದ ಜೈಲಿನಲ್ಲಿ ಹೈಡ್ರಾಮ; ರುಚಿಯಾದ ಊಟ ಕೊಡದಿದ್ದಕ್ಕೆ ತೆಂಗಿನ ಮರವೇರಿ ಕುಳಿತ ಕೈದಿ

ಈ ಬಾರಿ ಜಿಲ್ಲಾಡಳಿತವು ಚೆಕ್ ಪೋಸ್ಟ್ ಆರಂಭಿಸಿ ಜಾತ್ರೆಗೆ ಕುರಿ ಮರಿಗಳನ್ನು ತೆಗೆದುಕೊಂಡು ಬರುವ ಭಕ್ತರ ಮೇಲೆ  ಹದ್ದಿನ ಕಣ್ಣಿಟ್ಟಿತ್ತು. ಪಲ್ಲಕ್ಕಿ ಮೇಲೆ ಎಸೆಯಲು ತರುವ ಕುರಿಮರಿಗಳನ್ನು ಜಿಲ್ಲಾಡಳಿತ ಭಕ್ತರಿಂದ ವಶಕ್ಕೆ ಪಡೆದಿದೆ. ಆ ಮೂಲಕ ಬಲಿಯಾಗುತ್ತಿದ್ದ ನೂರಾರು ಕುರಿ ಮರಿಗಳ ಪ್ರಾಣ ಉಳಿಸುವ ಕೆಲಸ ಮಾಡಿದೆ. ಈಗ ಕುರಿಗಳಿಂದ ಲಕ್ಷಾಂತರ ರೂ ಆದಾಯ ಹರಿದು ಬಂದಿದೆ.

ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಮೊದಲನೇ ಬಾರಿ ಟೆಂಡರ್ ಮೂಲಕ ಕುರಿಗಳ ಟೆಂಡರ್ ಕರೆಯಲಾಗಿತ್ತು. ಭಕ್ತರು ಜಾತ್ರೆಗೆ ತೆಗೆದುಕೊಂಡು ಬಂದ ಸುಮಾರು 894 ಕುರಿಮರಿಗಳನ್ನು ಜಪ್ತಿ ಮಾಡಲಾಗಿದೆ. ಸುಮಾರು 12 ಲಕ್ಷ ರೂ ಆದಾಯ ಬಂದಿದೆ ಎಂದರು.

2012ರ ನಿರ್ಭಯಾ ಅತ್ಯಾಚಾರ ಪ್ರಕರಣ: ಜ.22ಕ್ಕೆ ನಾಲ್ವರು ದೋಷಿಗಳಿಗೆ ಗಲ್ಲುಶಿಕ್ಷೆ ಅಸಾಧ್ಯ?

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿನ್ನೆ ಜಾತ್ರೆಗೆ ತೆಗೆದುಕೊಂಡು ಬಂದ 894 ಕುರಿ ಮರಿಗಳನ್ನು ವಶ ಪಡಿಸಿಕೊಂಡಿದೆ. ಪ್ರತಿ ವರ್ಷ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಕುರಿಗಳನ್ನು ಹರಾಜು ಮಾಡುತ್ತಿದ್ದರು. ಇದರಿಂದ ಹರಾಜು ಪ್ರಕ್ರಿಯೆಯಲ್ಲಿ ದರ ಕೂಡ ಕಡಿಮೆ ಬರುತ್ತಿತ್ತು. ಆದರೆ, ಈ ಬಾರಿ ಜಿಲ್ಲಾಡಳಿತ ವಿನೂತನವಾಗಿ ಟೆಂಡರ್ ಕರೆದಿದೆ. ಒಂದು ಕುರಿ ಮರಿಗೆ 1050 ರೂ ದರ ನಿಗದಿ ಮಾಡಿ ಟೆಂಡರ್ ಕರೆದಿದೆ. ಟೆಂಡರ್ ನಲ್ಲಿ ಭಾಗಿಯಾದ ಕುರಿ ಸಾಕಾಣಿಕೆದಾರರು ಪ್ರತಿಕುರಿಗೆ 1357 ರಿಂದ 1503 ರೂ.ನಂತೆ ಟೆಂಡರ್ ಮೂಲಕ ಖರೀದಿ ಮಾಡಿದ್ದಾರೆ.

ಕಳೆದ ವರ್ಷ 1038 ಕುರಿ ಮರಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ಆದರೆ ಹರಾಜಿನಲ್ಲಿ ಕೇವಲ 10 ಲಕ್ಷ ರೂ ಆದಾಯ ಬಂದಿತ್ತು. ಈಗ ಕುರಿಗಳ ಸಂಖ್ಯೆ ಕಡಿಮೆಯಾಗುವ ಜೊತೆ ಕಡಿಮೆ ಕುರಿ ಮರಿಗಳಲ್ಲಿ ಸುಮಾರು 12 ಲಕ್ಷ ರೂ ಆದಾಯ ಬಂದಿದೆ. ಮೂವರು ಕುರಿ ಸಾಕಾಣಿಕೆದಾರರು ಟೆಂಡರ್ ನಲ್ಲಿ ಭಾಗವಹಿಸಿ ಮೈಲಾರನ ಕುರಿ ಮರಿಗಳನ್ನು ಖರೀದಿ ಮಾಡಿದ್ದಾರೆ.

ಬರಗಾಲದಿಂದ ಸ್ಥಗಿತಗೊಂಡಿದ್ದ ಗಗನಚುಕ್ಕಿ ಜಲಪಾತೋತ್ಸವಕ್ಕೆ ಜ.18ರಂದು ಅದ್ಧೂರಿ ಚಾಲನೆ

ದೇವರ ಕುರಿಗಳೆಂದು ನಾವು ಕುರಿಗಳನ್ನು ಖರೀದಿ ಮಾಡಿದ್ದೇವೆಂದು ಮಹೇಶ್​ ತಿಳಿಸಿದರು. ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದಿಂದ 894 ಕುರಿ ಮರಿಗಳ ಜೀವ ಉಳಿದಿದೆ. ಅವುಗಳನ್ನು  ವಶಪಡಿಸಿಕೊಂಡು ಟೆಂಡರ್ ಮೂಲಕ ಮಾರಾಟ ಮಾಡಲಾಗಿದೆ. ಆ ಮೂಲಕಜಿಲ್ಲಾಡಳಿತ ಕುರಿಗಳಿಂದ ಆದಾಯ ಪಡೆದಿದೆ. ದೈವಿ ಸ್ವರೂಪಿ ಕುರಿಗಳು  ದೇಗುಲಕ್ಕೆ ಲಕ್ಷಾಂತರ ರೂ.ಕಾಣಿಕೆ ತಂದಿವೆ. ದೇವರ ಕುರಿಗಳನ್ನು ಸಾಕಾಣಿಕೆ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಭಕ್ತರು ದರ ಹೆಚ್ಚಳವಾದರೂ ಖರೀದಿ ಮಾಡಿದ್ದಾರೆ.

(ಯಾದಗಿರಿ: ನಾಗಪ್ಪ ಮಾಲಿಪಾಟೀಲ)

 
First published:January 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ