• Home
  • »
  • News
  • »
  • state
  • »
  • Mangaluru: ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ಸ್ಫೋಟ; ಸ್ಥಳಕ್ಕೆ ಪೊಲೀಸ್ ಆಯುಕ್ತರ ಭೇಟಿ

Mangaluru: ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ಸ್ಫೋಟ; ಸ್ಥಳಕ್ಕೆ ಪೊಲೀಸ್ ಆಯುಕ್ತರ ಭೇಟಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಟೋ ರಿಕ್ಷಾದಲ್ಲಿ ದಿಢೀರ್ ನಿಗೂಢ ಸ್ಫೋಟವಾಗಿದೆ. ಈ ಘಟನೆ ಮಂಗಳೂರಿನ ನಾಗುರಿಯಲ್ಲಿ ಸಂಭವಿಸಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಮಂಗಳೂರು (ನ.19): ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ದಿಢೀರ್ ನಿಗೂಢ ಸ್ಫೋಟವಾಗಿದೆ. ಮಂಗಳೂರಿನ ನಾಗುರಿಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್‌ ಹಾಗೂ ವಿಧಿವಿಜ್ಞಾನ ಇಲಾಖೆಯ ತಜ್ಞರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.


blast in auto near naguri at mangaluru forensic team visits on spot pvn
ಸಿಸಿಟಿವಿ ದೃಶ್ಯ


ಪ್ರಯಾಣಿಕನ ಬಳಿ ಬ್ಯಾಗ್‌


ಇನ್ನು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತಾಡಿದ ಪೊಲೀಸ್ ಆಯುಕ್ತ ಶಶಿಕುಮಾರ್‌, ಪ್ರಯಾಣಿಕ ಹತ್ತಿದ ಬಳಿಕ ಆಟೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಟೋದಲ್ಲಿ ತೆರಳುತ್ತಿದ್ದ ಪ್ರಯಾಣಿಕನ ಬಳಿ ಬ್ಯಾಗ್‌ ಇತ್ತು. ಘಟನೆಯಲ್ಲಿ ಆಟೋದಲ್ಲಿ ತೆರಳ್ತಿದ್ದ ಪ್ರಯಾಣಿಕನಿಗೆ ಗಾಯವಾಗಿದ್ದು, ಚಾಲಕನಿಗೆ ಯಾವುದೇ ರೀತಿ ಗಾಯವಾಗಿಲ್ಲ. ಘಟನೆ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಆತಂಕ ಬೇಡ ಎಂದಿದ್ದಾರೆ.


ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಮೊದಲು ಬೆಂಕಿ


ಆಟೋದಲ್ಲಿದ್ದ ಪ್ರಯಾಣಿಕನ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಮೊದಲು ಬೆಂಕಿ ಕಾಣಿಸಿದೆ. ಪ್ರಾರಂಭದಲ್ಲಿ ಅಟೋದಲ್ಲಿ ಬೆಂಕಿ‌ ಕಾಣಿಸಿಕೊಂಡಿದೆ. ನಾಗುರಿ ಎಂಬಲ್ಲಿಂದ ಪಂಪ್ ವೆಲ್ ಕಡೆ ಅಟೋ ಸಾಗುತ್ತಿತ್ತು. ನಾಗುರಿಯಿಂದ ಹತ್ತಿದ ಪ್ರಯಾಣಿಕನ ಕೈಯಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.


ಇದನ್ನೂ ಓದಿ: Actor Chetan Post: ಪಾಕಿಸ್ತಾನ್ ಜಿಂದಾಬಾದ್ ಎಂದ ವಿದ್ಯಾರ್ಥಿಗಳ ಪರ ನಿಂತ ಚೇತನ್; ನಟನ ಸಮರ್ಥನೆಗೆ ತೀವ್ರ ಆಕ್ರೋಶ


ಸಾರ್ವಜನಿಕರಿಗೆ ಯಾವುದೇ ಆತಂಕ ಬೇಡ


ಬ್ಯಾಗ್ ಹಿಡಿದುಕೊಂಡ ವ್ಯಕ್ತಿಗೆ ಬೆಂಕಿ ತಗುಲಿದೆ. ಬೆಂಕಿ ತಗುಲಿದ ಸಂದರ್ಭ ಅಟೋ ಒಳಭಾಗ ಸುಟ್ಟು ಹೋಗಿದೆ. ಪ್ರಯಾಣಿಕ ಹಾಗೂ ಅಟೋ ಚಾಲಕನಿಗೆ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಸಮಗ್ರವಾದ ವಿಚಾರಣೆ ನಡೆಸಲಾಗುತ್ತದೆ. ಬ್ಲಾಸ್ಟ್ ಆದ ಬಗ್ಗೆ ಪ್ರತ್ಯಕ್ಷ ಸಾಕ್ಷಿಗಳು ಏನು ಹೇಳಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.


ಕಾರಿನೊಳಗೆ ಬಾಂಬ್ ಸ್ಫೋಟ



ಕೊಯಮತ್ತೂರು, ತಮಿಳುನಾಡು: ನಿನ್ನೆ ಬೆಳಗ್ಗೆ ತಮಿಳುನಾಡಿನ (Tamil Nadu) ಕೊಯಮತ್ತೂರಿನಲ್ಲಿ (Coimbatore) ಕಾರಿನೊಳಗೆ ಬಾಂಬ್ ಸ್ಫೋಟಗೊಂಡು (Car bomb blast), ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು. ಇದೀಗ ಈ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ಭಯೋತ್ಪಾದನಾ (Terrorist) ಕೃತ್ಯ ಎಂದು ಎನ್ಐಎ (NIA) ಶಂಕೆ ವ್ಯಕ್ತಪಡಿಸಿದೆ. ನಿನ್ನೆ ಘಟನೆಯಲ್ಲಿ ಮೃತಪಟ್ಟಿದ್ದ ಮುಬಿನಾ ಎಂಬುವರ ಮನೆಯಲ್ಲಿ ಕೆಲ ಸ್ಫೋಟಕ ವಸ್ತುಗಳು (explosive materials) ಸಿಕ್ಕಿದ್ದು, ಅದನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೊಯಮತ್ತೂರು ಬಳಿಯ ಪೊಲ್ಲಾಚಿ ಉಕ್ಕಡಂ ಪ್ರದೇಶದಲ್ಲಿ ನಿನ್ನೆ ಕಾರು ಸ್ಫೋಟದಿಂದ ಉಕ್ಕಡಂನ ಜಿಎಂ ನಗರ ಸಮೀಪದ ಕೊಟ್ಟೈಪುದೂರಿನ 25 ವರ್ಷದ ಜಮೇಶ ಮುಬಿನ್ ಎಂಬಾತ ಮೃತಪಟ್ಟಿದ್ದ. ಇದೀಗ ಘಟನೆಯ ಹಿಂದೆ ಭಯೋತ್ಪಾದಕ ದಾಳಿ ಶಂಕೆ ವ್ಯಕ್ತವಾಗಿದೆ.





ಸಿಸಿಟಿವಿಯಲ್ಲಿ ಸೆರೆಯಾಯ್ತು ಸ್ಫೋಟದ ದೃಶ್ಯ

ಕೊಯಮತ್ತೂರಿನಲ್ಲಿ ನಿನ್ನೆ ಮುಂಜಾನೆ 4 ಗಂಟೆ ಸುಮಾರಿಗೆ ಕಾರಿನಲ್ಲಿ ಸ್ಫೋಟಗೊಂಡಿತ್ತು. ಉಕ್ಕಡಂ ಪ್ರದೇಶದಲ್ಲಿರೋ ಈಶ್ವರನ್ ದೇಗುಲದ ಬಳಿ ಕಾರಿನಲ್ಲಿದ್ದ LPG ಸಿಲಿಂಡರ್ ಸ್ಫೋಟಗೊಂಡಿತ್ತು.  ಕೊಟ್ಟಾಯಿ ಈಶ್ವರನ್ ದೇಗುಲದ ಬಳಿ ಸ್ಫೋಟಗೊಂಡು, ಜಮೀಶಾ ಮುಬೀನ್​ ಎಂಬಾತ ಮೃತಪಟ್ಟಿದ್ದ. ಬಳಿಕ ಇದೊಂದು ಅಪಘಾತ ಎಂಬ ಭಾವನೆ ಬರುವಂತೆ ಬಿಂಬಿಸಲಾಗಿತ್ತು. ಇದೀಗ ತನಿಖೆ ಬಳಿಕ ಭಯಾನಕ ಮಾಹಿತಿ ಬಹಿರಂಗವಾಗಿದೆ. ಮುಬೀನ್ ಸಿಲಿಂಡರ್ ಲೋಡ್ ಮಾಡ್ತಿರೋ ದೃಶ್ಯ ಲಭ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.

Published by:ಪಾವನ ಎಚ್ ಎಸ್
First published: