ಮಠಾಧೀಶರಿಂದ ಮುಖ್ಯಮಂತ್ರಿಗಳನ್ನು ಬೆದರಿಸೋ ಕೆಲಸ - ಸಂಖ್ಯಾಬಲದಿಂದ ಬೆದರಿಸ್ತೇವೆ ಅನ್ನೋದು ತಪ್ಪು ; ನಿಡುಮಾಮಿಡಿಶ್ರೀ

ಯಡಿಯೂರಪ್ಪನವರು ಹಿರಿಯರು ಆರು ಕೋಟಿ ಜನರ ಪ್ರತಿನಿಧಿ ಅವರು ಬಂದಾಗ ಮಠಗಳಲ್ಲಿ ಅವರನ್ನು ಕಡಿಮೆ ಎತ್ತರದಲ್ಲಿ ಕುಳಿಸಿ ತಾವು ಮಾತ್ರ ದೊಡ್ಡ ಎತ್ತರದ ಖುರ್ಚಿಯಲ್ಲಿ ಕುಳಿತು ಕೊಳ್ಳುವದು ಒಂದು ಪದ್ದತಿಯನ್ನು ಕೆಲವರು ಮಾಡುತ್ತಿದ್ದಾರೆ

G Hareeshkumar | news18-kannada
Updated:January 15, 2020, 7:24 PM IST
ಮಠಾಧೀಶರಿಂದ ಮುಖ್ಯಮಂತ್ರಿಗಳನ್ನು ಬೆದರಿಸೋ ಕೆಲಸ - ಸಂಖ್ಯಾಬಲದಿಂದ ಬೆದರಿಸ್ತೇವೆ ಅನ್ನೋದು ತಪ್ಪು ; ನಿಡುಮಾಮಿಡಿಶ್ರೀ
ನಿಡುಮಾಮುಡಿ ಮಠದ ಚನ್ನಮಲ್ಲವೀರಭದ್ರ ಸ್ವಾಮೀಜಿ
  • Share this:
ಹಾವೇರಿ(ಜ.15) : ಮುಖ್ಯಮಂತ್ರಿಯನ್ನೆ ಬೆದರಿಸುವ ಕೆಲಸವನ್ನು ಕೆಲ ಮಠಾಧೀಶರು ಮಾಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿಯವರನ್ನ ಗೌರವಿಸಬೇಕು. ಸಂಖ್ಯಾ ಬಲದಿಂದ ಮುಖ್ಯಮಂತ್ರಿ ಬೆದರಿಸುತ್ತೇವೆ ಎಂಬುದು ತಪ್ಪು. ತಾಯಿತನದ ಗುಣ ಯಡಿಯೂರಪ್ಪನವರಲ್ಲಿದೆ ಎಂದು ನರಸೀಪುರದಲ್ಲಿ ನಿಡುಮಾಮುಡಿ ಮಠದ ಚನ್ನಮಲ್ಲವೀರಭದ್ರ ಸ್ವಾಮೀಜಿ ಹೇಳಿದರು.

ಯಡಿಯೂರಪ್ಪನವರು ಹಿರಿಯರು ಆರು ಕೋಟಿ ಜನರ ಪ್ರತಿನಿಧಿ ಅವರು ಬಂದಾಗ ಮಠಗಳಲ್ಲಿ ಅವರನ್ನು ಕಡಿಮೆ ಎತ್ತರದಲ್ಲಿ ಕುಳಿಸಿ ತಾವು ಮಾತ್ರ ದೊಡ್ಡ ಎತ್ತರದ ಖುರ್ಚಿಯಲ್ಲಿ ಕುಳಿತು ಕೊಳ್ಳುವದು ಒಂದು ಪದ್ದತಿಯನ್ನು ಕೆಲವರು ಮಾಡುತ್ತಿದ್ದಾರೆ ಇದು ತಪ್ಪು ಎಂದು ಚನ್ನಮಲ್ಲವೀರಭದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಹಾವೇರಿ ತಾಲ್ಲೂಕಿನ ನರಸಿಪುರದಲ್ಲಿ ನಡೆದ ಅಂಬಿಗರ ಚೌಡಯ್ಯ 900ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಮುಖ್ಯಮಂತ್ರಿ ನಮ್ಮ ಪ್ರಧಾನಮಂತ್ರಿ ನಮ್ಮ ರಾಷ್ಟಪತಿ ಹಣ ಹಾಗೂ ನಮ್ಮ ಉಪರಾಷ್ಟ್ರಪತಿ ಗಳನ್ನು ನಾವು ಸಾರ್ವಜನಿಕವಾಗಿ ಸಮಾನ ಗೌರವದಿಂದ ಕಾಣಬೇಕಾಗಿದೆ. ಎತ್ತರದಲ್ಲಿ ಕುಳಿತುಕೊಳ್ಳುವದರಿಂದ ಯಾರೂ ದೊಡ್ಡವರಾಗುವದಿಲ್ಲ ಎಂದು ಸ್ವಾಮೀಜಿಗಳಿಗೆ ನಿಡುಮಾಮಿಡಿಶ್ರೀ ಕಿವಿ ಮಾತು ಹೇಳಿದರು.

ಮುಖ್ಯಮಂತ್ರಿಗಳನ್ನ ಕಡಿಮೆ ಎತ್ತರದಲ್ಲಿ ಕುಳಿಸುವದರಿಂದ ನಾಡಿನ ಆರು ಕೋಟಿ ಜನರಿಗೆ ಅವಮಾನ ಮಾಡಿದ ಹಾಗೆ ಎಂದರು. ಅಷ್ಟೇ ಅಲ್ಲದ ಯಡಿಯೂರಪ್ಪನವರು ಇನ್ನೂ ಮೂರು ವರ್ಷ ಮುಖ್ಯಮಂತ್ರಿಗಳಾಗಿ ಮುಂದುವರಿಯಬೇಕು. ಈ ಹಿಂದೆ ಅನೇಕ ತಪ್ಪುಗಳನ್ನು ಅವರು ಮಾಡಿದ್ದಾರೆ. ಇನ್ನುಮುಂದೆ ಈ ರೀತಿಯ ತಪ್ಪುಗಳನ್ನು ಮಾಡುವುದಿಲ್ಲ ಎಂದು ಅಂದುಕೊಂಡಿದ್ದೇವೆ.. ಹಿಂದೆ ಸಿಎಂ ಭೇಟಿಯಾಗೋದು ಸಾಧ್ಯ ವಾಗುತ್ತಿರಲಿಲ್ಲ. ಬಲಿಷ್ಠರಿಗೆ ಭಾಗಬೇಡಿ, ನಿಮ್ಮ ಸಂಯಮ ಪರೀಕ್ಷೆ ಮಾಡುತ್ತಿದ್ದಾರೆ ಎಂದು ಚನ್ನಮಲ್ಲವೀರಭದ್ರ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ : ಸಿಎಂ ಯಡಿಯೂರಪ್ಪ ಮತ್ತು ಸಂತೋಷ್ ಜಗಳದಿಂದ ರಾಜ್ಯಕ್ಕೆ ಕುಷ್ಠರೋಗ ; ಮಾರುತಿ ಮಾನ್ಪಡೆ ಕಿಡಿ

ಯಡಿಯೂರಪ್ಪ ಅವರ ಹೆಸರಿಗೆ ಕಳಂಕ ತರುವವರು ಅವರ ಹಿಂದೆ ಇದ್ದಾರೆ. ಅವರಿಂದ ತುಂಬಾ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಕಿವಿ ಮಾತು ಹೇಳಿದರು.
First published: January 15, 2020, 5:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading