HOME » NEWS » State » BLACK MAIL VIDEO SENT TO EX MLA SON IN DHARWAD MYD SESR

ಮಾಜಿ‌ ಶಾಸಕನ‌ ಮಗನಿಗೆ ಬ್ಲಾಕ್‌ ಮೇಲ್​ : ಅಶ್ಲೀಲ ವಿಡಿಯೋ ಕಳಿಸಿ ಹಣ ದೋಚಿದ ತಂಡ, ದೂರು ದಾಖಲು

ತನಿಖೆ ಆರಂಭಿಸಿರುವ ಸೈಬರ್ ಪೊಲೀಸರಿಗೆ ಪ್ರಾಥಮಿಕ ಮಾಹಿತಿಯಲ್ಲೇ ಇದು ಗುಜರಾತ್ ಮೂಲದ ಚಾಲಕಿಗಳ ಕೆಲಸ ಎಂದು ತಿಳಿದು ಬಂದಿದೆ

news18-kannada
Updated:March 22, 2021, 6:23 PM IST
ಮಾಜಿ‌ ಶಾಸಕನ‌ ಮಗನಿಗೆ ಬ್ಲಾಕ್‌ ಮೇಲ್​ : ಅಶ್ಲೀಲ ವಿಡಿಯೋ ಕಳಿಸಿ ಹಣ ದೋಚಿದ ತಂಡ, ದೂರು ದಾಖಲು
ಪ್ರಾತಿನಿಧಿಕ ಚಿತ್ರ
  • Share this:
ಧಾರವಾಡ (ಮಾ. 22) : ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಸಿಡಿ ಪ್ರಕರಣವು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ನಡುವೆಯೇ ಇದೀಗ ಮಾಜಿ ಶಾಸಕರ ಮಗನಿಗೆ ಬ್ಲಾಕ್ ಮಾಡಿ ಹಣ ವಸೂಲಿ ಮಾಡಲು ಮುಂದಾಗಿರುವ ಪ್ರಕಣವೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ನವಲಗುಂದ ಕ್ಷೇತ್ರದ ಮಾಜಿ ಜೆ.ಡಿ.ಎಸ್ ಶಾಸಕ  ಅವರ ಮಗ ನವೀನ ಕೋನರಡ್ಡಿಗೆ ಅನಾಮಧೇಯ ವಿಡಿಯೋ ಕಾಲ್​ ಮೂಲಕ ಬ್ಲಾಕ್​ಮೇಲ್​ ಮಾಡಲಾಗಿದೆ. ಪ್ರಭಾವಿ ವ್ಯಕ್ತಿಗಳ ಮಕ್ಕಳನ್ನೇ ಈ ತಂಡ ಗುರಿಯಾಗಿಸಿ ಈ ಕೃತ್ಯ ಎಸಗುತ್ತಿದೆ. ಎನ್.ಹೆಚ್.ಕೊನರಡ್ಡಿ ಅವರ ಪುತ್ರ ನವೀನ ಕೊನರಡ್ಡಿ ಗೆ ಹನಿ ಟ್ರ್ಯಾಪ್ ಮಾಡಿ 13,200 ಹಣವನ್ನು ವಸೂಲಿ ಮಾಡಿದ್ದಾರೆ.  ಫೆಬ್ರವರಿ 18 ರಂದು ನವೀನ ಕೋನರಡ್ಡಿಗೆ  ವ್ಯಾಟ್ಸ್ ಆಪ್ ವಿಡಿಯೋ ಕಾಲ್ ಬಂದಿದೆ. ಕಾಲ್​ ರಿಸೀವ್​ ಮಾಡಿದಾಗ ಯಾರು ಕಂಡಿಲ್ಲ. ಕಾಲ್ ಕಟ್ ಮಾಡಿದ ನವೀನ್ ಗೆ ಅರ್ಧ ಗಂಟೆಯಲ್ಲೇ ಶಾಕ್ ಕಾದಿತ್ತು. ಅದುವೇ ಆ ಕರೆ ಮಾಡಿದ ನಂಬರ್ ನಿಂದ ಎಡಿಟ್ ಮಾಡಲಾದ ಅಶ್ಲೀಲ ವಿಡಿಯೋ ಒಂದು ನವೀನ್ ಮೊಬೈಲ್ ಗೆ ಬಂದಿತ್ತು. 

ಬಳಿಕ ನವೀನ್​ಗೆ ಒಂದು ಸಂದೇಶ ರವಾನೆ ಮಾಡಲಾಗಿದೆ.  ಈ ವಿಡಿಯೋ ಯಾರಿಗೂ ಶೇರ್ ಮಾಡಬಾರದು ಅಂದ್ರೆ ಹಣ ಹಾಕುವಂತೆ ತಂಡ ಬೆದರಿಸಿದೆ.  ಮರ್ಯಾದೆಗೆ ಅಂಜಿದ ನವೀನ 13,200 ರೂ ಗಳನ್ನ ಹಂತ ಹಂತವಾಗಿ ಫೋನ್ ಪೇ ಮೂಲಕ ವರ್ಗಾಯಿಸಿದ್ದಾರೆ.  ಈ ಬಗ್ಗೆ ತಮ್ಮ ತಂದೆಯ ಗಮನಕ್ಕೆ ತಂದಾಗ ಅವರು ಪೊಲೀಸರಿಗೆ ತಿಳಿಸುವಂತೆ  ಸೂಚನೆ ನೋಡೊದರು. ನಂತರ ನವೀನ ಹುಬ್ಬಳ್ಳಿ ಹುಬ್ಬಳ್ಳಿಯ ಸೈಬರ್ ಕ್ರೈಮ್ ನಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೂರಿನ ಪ್ರತಿ


ಈ ಪ್ರಕಣದ ಬಗ್ಗೆ ನ್ಯೂಸ್ 18 ನೊಂದಿಗೆ ಮಾತನಾಡಿದ ನವೀನ ಕೊನರಡ್ಡಿ, ನನಗೆ ಫೆ.18 ರಂದು ವಾಟ್ಸಪ್ ಕಾಲ್ ಬಂದಿತ್ತು. ಅದನ್ನು ರಿಸಿವ್​ ಮಾಡಿದಾಗ ಯಾರ ಮುಖ ಕಾಣಲಿಲ್ಲ ಕೆಲವೇ ಸೆಕೆಂಡನಲ್ಲಿ ನಾನು ಕಾಲ್ ಕಟ್ ಮಾಡಿದ, ನಂತರ ಅವರೊಂದು 12 ಸೆಕೆಂಡ್​ ವಿಡಿಯೋ ಕಳಿಸಿದರು.  ನನ್ನ ಫೋಟೊ ಎಡಿಟ್ ಮಾಡಿ ಅಶ್ಲೀಲ ವಿಡಿಯೋಗೆ ಮಾಡಿದ್ದರು. ಬಳಿಕ ಈ ವಿಡಿಯೋ ವೈರಲ್ ಮಾಡಬಾರದೆಂದರೆ ಹಣ ಬೇಕೆಂದು ಬೇಡಿಕೆ ಇಟ್ಟರು. ನನ್ನ ತಪ್ಪಿಲ್ಲದಿದ್ದರೂ ಅವರಿಗೆ ಹಣ ಹಾಕಿದೆ. ಬಳಿಕ ನಮ್ಮ ತಂದೆಯವರ ಮಾತಿನಂತೆ ಸೈಬರ್ ಕ್ರೈಮ್ ನಲ್ಲಿ ದೂರು ನೀಡಿದ್ದೇನೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ. ರಾಜಕೀಯ, ಉದ್ಯಮಿಗಳ ಮಕ್ಕಳನ್ನು ಇಂದು ಗುರಿ ಮಾಡಿ ಬ್ಲಾಕ್ ಮೇಲ್​ ಮಾಡಲಾಗುತ್ತಿದೆ. ಇವರನ್ನು ಬಂಧಿಸಿ, ಸೂಕ್ತ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು

ಇದನ್ನು ಓದಿ: ಕೊರೋನಾ​ ಲಸಿಕೆ ಪಡೆದ ಶಾಸಕಿ ಅನಿತಾ ಕುಮಾರಸ್ವಾಮಿ

ಸದ್ಯ ಈ ತನಿಖೆ ಆರಂಭಿಸಿರುವ ಸೈಬರ್ ಪೊಲೀಸರಿಗೆ ಪ್ರಾಥಮಿಕ ಮಾಹಿತಿಯಲ್ಲೇ ಇದು ಗುಜರಾತ್ ಮೂಲದ ಚಾಲಕಿಗಳ ಕೆಲಸ ಎಂದು ತಿಳಿದು ಬಂದಿದೆ. ಅಲ್ಲದೇ ಈ ತಂಡದ ಖಾತೆ ಕೂಡ ಲಾಕ್ ಮಾಡಿದ್ದಾರೆ.

ಒಟ್ಟಾರೆ ಹುಬ್ಬಳ್ಳಿ-ಧಾರವಾಡ ಅವಳಿ ನಗರ ದೊಡ್ಡದಾಗಿ ಬೆಳೆಯುತ್ತಿದೆ. ಇಲ್ಲಿಯೂ ಸಹ ಹನಿಟ್ರ್ಯಾಪ್ ತಂಡ ಹಲವಾರು ಯುವಕರನ್ನ ತನ್ನ ಬಲೆಗೆ ಬಿಳಿಸಿಕೊಂಡಿದೆ ಎನ್ನಲಾಗುತ್ತಿದ್ದು, ಈಗಾಗಲೇ ಸೈಬರ್ ಠಾಣೆಯಲ್ಲಿ 5 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅದೆಷ್ಟೋ ಯುವಕರು ಮಾನ ಮರ್ಯಾದೆಗೆ ಅಂಜಿ ಪ್ರಕರಣ ದಾಖಲು ಮಾಡಲು ಸಹ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಏನೇ ಆಗಲಿ ಈ ಖತರ್ನಾಕ್ ತಂಡದ  ಹಿಂದಿನ ‌ಕಿಂಗ್‌ಪಿನ್ ಯಾರು, ಇವರೆಲ್ಲ‌ಎಷ್ಟು ಜನರಿಗೆ ಮೋಸ ಮಾಡಿದ್ದಾರೆ ಎಂಬುದನ್ನು ಸೈಬರ್ ಕ್ರೈಂ ಪೊಲೀಸರು  ಬಂಧಿಸಿದ ಬಳಿಕವಷ್ಟೆ ಬಯಲಿಗೆ ಬರಲಿದೆ.(ವರದಿ:  ಮಂಜುನಾಥ ಯಡಳ್ಳಿ)
Published by: Seema R
First published: March 22, 2021, 6:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories