HOME » NEWS » State » BLACK MAIL IN AN ILLEGAL RELATIONSHIP MYSORE BANNURU MAN COMMITS SUICIDE SESR

ಅಕ್ರಮ ಸಂಬಂಧ ಕುರಿತು ಬ್ಲಾಕ್​ಮೇಲ್​; ಮಾರ್ಯದೆಗೆ ಅಂಜಿ ಯುವಕ ಆತ್ಮಹತ್ಯೆ

ಈ ಕುರಿತು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದ ಈತ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಸುತ್ತಿದ್ದ. ಇದರಿಂದ ಹೆದರಿದ ಸ್ವಾಮಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

news18-kannada
Updated:January 28, 2021, 7:07 PM IST
ಅಕ್ರಮ ಸಂಬಂಧ ಕುರಿತು ಬ್ಲಾಕ್​ಮೇಲ್​; ಮಾರ್ಯದೆಗೆ ಅಂಜಿ ಯುವಕ ಆತ್ಮಹತ್ಯೆ
ಬೆದರಿಕೆ ಹಾಕುತ್ತಿದ್ದ ಆರೋಪಿ
  • Share this:
ಮೈಸೂರು (ಜ. 28): ಗ್ರಾಮದ ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವಕನೊಬ್ಬ ಮಾರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿರುಕೊಂಡಿರುವ ಘಟನೆ ಜಿಲ್ಲೆಯ ಬನ್ನೂರು ಪಟ್ಟಣದ ಭೋವಿ ಕಾಲೋನಿಯಲ್ಲಿ ನಡೆದಿದೆ. ಸ್ವಾಮಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಸ್ವಾಮಿ ಗ್ರಾಮದ ಆಶಾ ಎಂಬ ಯುವತಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದ. ಇವರ ಅಕ್ರಮ ಸಂಬಂಧ ಅರಿತ ಮೋಹನ್​ ಕುಮಾರ್​ ಈ ಸಂಬಂಧ ಅವರಿಗೆ ಬೆದರಿಸುತ್ತಿದ್ದ. ಅಲ್ಲದೇ, ಈ ಕುರಿತು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದ ಈತ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಸುತ್ತಿದ್ದ. ಇದರಿಂದ ಹೆದರಿದ ಸ್ವಾಮಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆಶಾ ಮತ್ತು ಸ್ವಾಮಿ ಇಬ್ಬರು ಅಕ್ರಮ ಸಂಬಂಧವನ್ನು ಹೊಂದಿದ್ದರು. ಈ ವಿಚಾರ ಇದೇ ಗ್ರಾಮದ ಮೋಹನ್​ ಕುಮಾರ್​ ಎಂಬಾಂತನಿಗೆ ತಿಳಿದಿತ್ತು. ಇದೇ ಜ. 16ರಂದು ರಾತ್ರಿ 10 ಗಂಟೆಗೆ ಸ್ವಾಮಿ, ಆಶಾಳ ಮನೆಗೆ ಹೋಗುವುದನ್ನು ಮೋಹನ್​ ಕುಮಾರ್​ ಗಮನಿಸಿದ್ದ. ಈ ವೇಳ ಮೋಹನ್​ ಕುಮಾರ್​ ಕೂಡ ಆಶಾ ಮನೆಗೆ ಪ್ರವೇಶಿಸಿದ್ದಾನೆ. ಈ ಸಂದರ್ಭದಲ್ಲಿ ಸ್ವಾಮಿ ಹಾಗೂ ಆಶಾಳನ್ನು ಬೆತ್ತಲೆಗೊಳಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ.

ಇದನ್ನು ಓದಿ: ಬಿಡುಗಡೆಯಾಯ್ತು ಬಿಗ್​ಬಾಸ್​ ಪ್ರೋಮೋ; ಶೀಘ್ರದಲ್ಲಿಯೇ ದೊಡ್ಮನೆಗೆ ಕಿಚ್ಚನ ಎಂಟ್ರಿ

ಅಲ್ಲದೇ ಈ ವಿಡಿಯೋ ಬಳಸಿಕೊಂಡಿ ತನ್ನ ಜೊತೆ ಕೂಡ ಲೈಂಗಿಕ ಸಂಪರ್ಕ ನಡೆಸುವಂತೆ ಮೋಹನ್​ ಕುಮಾರ್​ ಆಶಾಳಿಕೆ ಬೆದರಿಕೆ ಹಾಕಿದ್ದ. ಇಲ್ಲವಾದಲ್ಲಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಹೆದರಿಸಿದ್ದ, ಇದರಿಂದ ಹೆದರಿದ ಸ್ವಾಮಿ ಜ. 17ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ.

ಈ ಆತ್ಮಹತ್ಯೆ ಹಿಂದಿನ ಘಟನೆಯನ್ನು ಆಶಾಳೇ ಸ್ವಾಮಿ ಅಣ್ಣ ಬಾಬುಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಈ ಹಿನ್ನಲೆ ಬಾಬು ಈ ಕುರಿತು ಬನ್ನೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತಮ್ಮನ ಸಾವಿನ ತನಿಖೆ ನಡೆಸುವಂತೆ ದೂರು ದಾಖಲಿಸಿದ್ದಾರೆ
Published by: Seema R
First published: January 28, 2021, 7:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories