ವಾಮಾಚಾರ ನೆಪದಲ್ಲಿ ನಡುರಾತ್ರಿ ಮಲಗಿದ್ದ ಕುಟುಂಬದ ಮೇಲೆ ಹತ್ಯೆಗೆ ಸಂಚು?

ಇಡೀ ಕುಟುಂಬವನ್ನ‌ ನಾಶ ಮಾಡಲು ಯಾರೋ ದುಷ್ಕರ್ಮಿಗಳು ಈ ರೀತಿ ಸಂಚು ಮಾಡುತ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ, ಇದೀಗ ಎರಡು ಬಾರಿ ಸಾವಿನಿಂದ ಪಾರಾಗಿರುವ ಕುಟುಂಬ ಭಯದಿಂದಲೇ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

news18-kannada
Updated:September 16, 2020, 9:01 PM IST
ವಾಮಾಚಾರ ನೆಪದಲ್ಲಿ ನಡುರಾತ್ರಿ ಮಲಗಿದ್ದ ಕುಟುಂಬದ ಮೇಲೆ ಹತ್ಯೆಗೆ ಸಂಚು?
ಬೆಂಕಿಯಲ್ಲಿ ಸುಟ್ಟವಸ್ತುವಿನ ಚಿತ್ರಣ
  • Share this:
ಚಿತ್ರದುರ್ಗ (ಸೆಪ್ಟೆಂಬರ್​: 16): ಮಹಾಲಯ ಅಮಾವಸ್ಯೆಗೂ ಮುನ್ನ ಮಲಗಿದ್ದ ವೇಳೆ ನಡುರಾತ್ರಿಯಲ್ಲಿ  ಇಡೀ ಕುಟುಂಬವನ್ನು ಹತ್ಯೆ ಮಾಡಲು ದುಷ್ಕರ್ಮಿಗಳು ಸಂಚು ರೂಪಿಸಿದ್ದು, ಇದಕ್ಕೆ  ವಾಮಾಚಾರದ ರೂಪ ನೀಡಲು ಮುಂದಾಗಿದ್ದಾರೆ. ಆದರೆ,  ಅದೃಷ್ಟವಶಾತ್​ ಕುಟುಂಬ ಈ ಅಪಾಯದಿಂದ ಪಾರಾಗಿದ್ದು, ಇದು ಉದ್ದೇಶಪೂರ್ವಕವಾಗಿ ಯಾರೋ ನಡೆಸಿರುವ ದುಷ್ಕೃತ್ಯ ಎಂದು ಆರೋಪಿಸಿದ್ದಾರೆ.   ನಗರದ ಮದಕರಿ ಯೋಗಶಾಲೆಯ ಬಳಿ ಇರುವ ಪ್ರಸನ್ನ ಕುಮಾರ್ ಎಂಬುವ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ರಾತ್ರೋ ರಾತ್ರಿ ಮನೆಯ ಸುತ್ತ ಬೆಂಕಿ ಒತ್ತಿ ಉರಿದಿದೆ.  ಮನೆಯಲ್ಲಿ  ಪ್ರಸನ್ನಕುಮಾರ್  ಮತ್ತವರ ಹೆಂಡತಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಎಂದಿನಂತೆ ನಿನ್ನೆ ರಾತ್ರಿ ಊಟ ಮಾಡಿ ಎಲ್ಲರೂ ಮಲಗಿ ನೆಮ್ಮದಿಯ ನಿದ್ರೆ ಮಾಡುತ್ತಿದ್ದರು. 

ಮಧ್ಯರಾತ್ರಿ ಎರಡರಿಂದ ನಾಲ್ಕು ಗಂಟೆಗೆ ಸುಮಾರಿಗೆ ಏನೋ ಸುಟ್ಟ ಹೊಗೆಯಿಂದ ಉಸಿರು ಕಟ್ಟಿದಂತಾಗಿದೆ. ಈ ವೇಳೆ ಎಚ್ಚರಗೊಂಡ ಮಗಳಿಗೆ ಮನೆಯ ಹೊರಗಡೆ ಇಟ್ಟಿದ್ದ ಬಟ್ಟೆಗಳಿಗೆ ಬೆಂಕಿ ಹೊತ್ತಿ ಉರಿಯುತ್ತಿದ್ದು ಕಂಡುಬಂದಿದೆ. ತಕ್ಷಣ ಬೆಂಕಿ ಆರಿಸಿ ಮನೆಯ ಒಳಗೆ ಬಂದು‌ ನೋಡಿದಾಗ ನಾಲ್ವರೂ ಮಲಗಿದ್ದ ಪ್ರತ್ಯೇಕ ಹಾಸಿಗೆಗಳ ಸುತ್ತಲೂ ಎಣ್ಣೆ, ತುಪ್ಪ ಸುರಿದಿದ್ದನ್ನು ಗಮನಿಸಿದ್ದಾರೆ. ಅಷ್ಟೆ ಅಲ್ಲದೇ ಹಾಸಿಗೆ ಸುತ್ತಲೂ ಅಲ್ಲಲ್ಲಿ ಕರ್ಪೂರ ಚೆಲ್ಲಿ, ಪೆಟ್ರೋಲ್ ತುಂಬಿದ ಬಾಟಲ್ ಗಳನ್ನು ಇಟ್ಟಿರುವುದು ಕಂಡುಬಂದಿವೆ.

ಅಮವಾಸ್ಯೆಯ ಹಿಂದಿನ ದಿನದ ರಾತ್ರಿ ಹೀಗೆ ಆಗಿರೋದನ್ನ ನೋಡಿದ ಜನರು ಯಾರೋ ವಾಮಾಚಾರ ಮಾಡಿರಬಹುದು ಅನ್ನೋ ಮಾತುಗಳು ಕೇಳಿಬರುತ್ತಿವೆ. ಅಷ್ಟೆ ಅಲ್ಲದೇ ಈ ಹಿಂದೆಯೂ ಅಮವಾಸ್ಯೆ ಸಮಯದಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದ್ದು,  ಇಡೀ ಕುಟುಂಬವನ್ನ‌ ನಾಶ ಮಾಡಲು ಯಾರೋ ದುಷ್ಕರ್ಮಿಗಳು ಪದೇ ಪದೇ ಸಂಚು ಮಾಡುತ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೆ, ಇದೀಗ ಎರಡು ಬಾರಿ ಸಾವಿನಿಂದ ಪಾರಾಗಿರುವ ಕುಟುಂಬ ಭಯದಿಂದಲೇ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನು ಓದಿ:  ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರಿಡಲು ಕನ್ನಡಪರ ಹೋರಾಟಗಾರರ ಆಗ್ರಹ

ಇನ್ನೂ ಈ ಘಟನೆ ನಡೆದ ವೇಳೆ ಮಲಗಿದ್ದವರು ಸಾವಿನಿಂದ ಬಚಾವಾಗಲು ಹರಸಾಹಸ ಪಟ್ಟಿದ್ದಾರೆ. ಹೀಗೆ ರಾತ್ರೋ ರಾತ್ರಿ ನಡೆದಿರುವ ಘಟನೆಯಿಂದ  ಸುತ್ತಮುತ್ತಲ ಜನರು ಆತಂಕಕ್ಕೀಡಾಗಿದ್ದಾರೆ. ಯಾಕಂದ್ರೆ ಮಹಾಲಯ ಅಮವಾಸ್ಯೆ ಹಿಂದಿನ ದಿನ ನಡೆದ ಈ ಘಟನೆ ಯಾಕೆ ನಡೀತು ಅನ್ನೋದು ಪ್ರಶ್ನೆಯಾಗಿದೆ. ಆದರೇ ಈ ಕೃತ್ಯ ಎಸಗಿರುವ ದುಷ್ಕರ್ಮಿಳು ಕೊಲೆಗೆ ಈ ಸಂಚು ರೂಪಿಸಿದ್ದು, ಇದಕ್ಕಾಗಿ ತಂದಿದ್ದ ಎಣ್ಣೆ ಪ್ಯಾಕೇಟ್, ತುಪ್ಪ, ಹಾಗೂ ಪೆಟ್ರೋಲ್ ಬಾಟಲ್ ಗಳನ್ನು  ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಇವೆಲ್ಲವನ್ನೂ ನೋಡಿದ್ರೆ ವಾಮಾಚಾರದ ಹೆಸರಲ್ಲಿ ಕೊಲೆ ಸಂಚು ಎನ್ನಲಾಗಿದೆ.

ಇನ್ನು ಕುಟುಂಬಸ್ಥರಿಗೆ ಯಾರು ಈ ರೀತಿ ಮಾಡಿದ್ದಾರೆ ಎಂಬ ಬಗ್ಗೆ ಅನುಮಾನ ಉಂಟಾಗಿದ್ದು,  ಉದ್ದೇಶ ಪೂರ್ವಕವಾಗಿ ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕೊಲೆಗೆ ಯಾರು ಸಂಚು ರೂಪಿಸಿದ್ದು ಯಾರು ಎಂಬ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಒಟ್ಟಾರೆ ಮಹಾಲಯ ಅಮವಾಸ್ಯೆ ನೆಪದಲ್ಲಿ ಒಂದಿಡೀ ಕುಟುಂಬಕ್ಕೆ ಜೀವಸಹಿತ ಬೆಂಕಿ ಇಟ್ಟು ಕೊಲ್ಲುವ ಪ್ರಯತ್ನ ವಿಫಲವಾಗಿದ್ದು, ಅದೃಷ್ಟವಶಾತ್ ನಾಲ್ಕು ಜೀವಗಳು ಪ್ರಾಣಾಪಾಯದಿಂದ ಪಾರಾಗಿವೆ. ಸದ್ಯ  ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆಗೆ ಸಂಚು ರೂಪಿಸಿದ್ದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಬೇಕಿದೆ.
Published by: Seema R
First published: September 16, 2020, 8:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading