• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Raichuru: ರಾಜ್ಯದಲ್ಲಿ ಮಾಟಮಂತ್ರ ರಾಜಕೀಯ; ಕೇರಳದಿಂದ ಮಂತ್ರವಾದಿಗಳನ್ನ ಕರೆಸಿದ್ರಾ?

Raichuru: ರಾಜ್ಯದಲ್ಲಿ ಮಾಟಮಂತ್ರ ರಾಜಕೀಯ; ಕೇರಳದಿಂದ ಮಂತ್ರವಾದಿಗಳನ್ನ ಕರೆಸಿದ್ರಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾಟಮಂತ್ರ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ. ನಮ್ಮದು ಅಭಿವೃದ್ಧಿಯ ಮಂತ್ರ. ಬೇಕಾದ್ರೆ ಸಿದ್ದು ಬಂಡಿ ಮಾಟಮಂತ್ರ ಯಾರು ಮಾಡಿಸಿದ್ದಾರೆ ಅನ್ನೋದನ್ನು ಕಂಡು ಹಿಡಿದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.

  • Share this:

ರಾಯಚೂರು: ವಿಧಾನಸಭೆ ಚುನಾವಣೆ (Assembly Election 2023) ಹತ್ತಿರ ಬರುತ್ತಿದ್ದಂತೆ ಮಾಟಮಂತ್ರ (Black Magic) ರಾಜಕೀಯ ಶುರುವಾಗಿದೆ. ಲಿಂಗಸುಗೂರು (Lingasuguru) ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ (JDS Candidate Siddu Bandi) ಮನೆ ಮತ್ತು ಕಚೇರಿ ಮುಂದೆ ಮಾಟ ಮಂತ್ರ ಮಾಡಿಸಲಾಗಿದೆ. ನಿಂಬೆ ಹಣ್ಣು, ಪಂಚಲೋಹದ ತಾಯತ, ಕಾಯಿ, ಕರಿದಾರದಿಂದ ಮಾಟ ಮಂತ್ರ ಮಾಡಿಸಲಾಗಿದೆ. ಬಿಜೆಪಿಯವರೇ ಮಾಟಮಂತ್ರ ಪ್ರಯೋಗಿಸಿದ್ದಾರೆ ಎಂದು ಸಿದ್ದು ಬಂಡಿ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾನಪ್ಪ ವಜ್ಜಲ್ (BJP Leader Manappa Vajjal) ಮೇಲೆ ಆರೋಪ ಮಾಡಿದ್ದಾರೆ. ಸಿದ್ದು ಬಂಡಿ ಅವರ ಮನೆ ಮುಂದೆ ಇರಿಸಲಾಗಿದ್ದ ವಸ್ತುಗಳನ್ನು ಜೆಡಿಎಸ್ ಕಾರ್ಯಕರ್ತರು (JDS Activist) ಸುಟ್ಟು ಹಾಕಿದ್ದಾರೆ. ಈ ರೀತಿ ಎರಡನೇ ಬಾರಿ ಮಾಡಲಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ಹೇಳುತ್ತಿದ್ದಾರೆ.


ಮಾಟಮಂತ್ರದ ಕುರಿತು ನ್ಯೂಸ್ 18 ಜೊತೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ, ಕಚೇರಿ ಮತ್ತು ಮನೆ ಆವರಣದಲ್ಲಿ ಪಂಚಲೋಹ ಮಾದರಿಯ ವಸ್ತು, ತಾಯತ, ಕಪ್ಪು ಬಟ್ಟೆ, ನಿಂಬೆಹಣ್ಣು ಸೇರಿದಂತೆ ಹಲವು ವಸ್ತುಗಳನ್ನು ಇರಿಸಿದ್ದಾರೆ. ನಾವು ಪ್ರಚಾರ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ನಮ್ಮ ಮಾರ್ಗ ಮಧ್ಯೆದಲ್ಲಿಯೇ ಈ ವಸ್ತುಗಳನ್ನು ಇರಿಸಿದ್ದರು. ಅನುಮಾನದಿಂದ ಕಾರ್ ನಿಲ್ಲಿಸಿ ನೋಡಿದಾಗ ಮಾಟಮಂತ್ರ ಮಾಡಿರೋದು ಗೊತ್ತಾಯ್ತು ಎಂದು ಸಿದ್ದು ಬಂಡಿ ಹೇಳಿದ್ದಾರೆ.


ಬಿಜೆಪಿ ಅವರಿಂದಲೇ ಮಾಟಮಂತ್ರ ಎಂದ ಸಿದ್ದು ಬಂಡಿ


ಈ ರೀತಿ ಮಾಟಮಂತ್ರ ಮಾಡಿಸೋರು ಬಿಜೆಪಿ ಅವರೇ ಎಂದು ಆರೋಪಿಸಿದ ಸಿದ್ದು ಬಂಡಿ, ಈ ಹಿಂದೆ ಮಾಡಿದ್ದರು. ಕೇರಳದಿಂದ ಮಂತ್ರವಾದಿಗಳನ್ನು ಕರೆಸಿ ಈ ಕೆಲಸ ಮಾಡಲಾಗುತ್ತಿದೆ. ಈ ಮೊದಲು ಮನೆಯ ಸುತ್ತಲೂ ಸೋಂಪ್ ಕಾಳು ಹಾಕಿದ್ದರು. ನಮ್ಮ ಕಾರ್ಯಕರ್ತರು ಈ ವಸ್ತುಗಳಿಗೆ ಬೆಂಕಿ ಹಾಕಿದರು ಎಂದು ಹೇಳಿದರು.


black magic politics in lingasugur assembly constituency mrq
ಸಿದ್ದು ಬಂಡಿ, ಜೆಡಿಎಸ್ ನಾಯಕ


ನಮ್ಮದು ಅಭಿವೃದ್ಧಿ ಮಂತ್ರ ಎಂದ ಬಿಜೆಪಿ ನಾಯಕ


ಸಿದ್ದು  ಬಂಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್, ನಮಗೆ ಮಾಟಮಂತ್ರ ಗೊತ್ತಿಲ್ಲ. ಸಿದ್ದು ಬಂಡಿ ಅವರೇ ಕೈಯಲ್ಲಿ ಹಲವು ದಾರಗಳನ್ನು ಕಟ್ಟಿಕೊಂಡಿದ್ದಾರೆ. ಆ ದಾರಗಳು ಮಾಟಮಂತ್ರದ್ದು ಎಂದು ನಾನು ತಿಳಿದುಕೊಂಡಿದ್ದೇನೆ. ನಮ್ಮ ನಂಬಿಕೆ ಮತದಾರರು ಮತ್ತು ಕುಲದೇವತೆ ವೀರನಾಗಮ್ಮ ಮೇಲೆಯೇ ಹೊರತು ಮಾಟಮಂತ್ರದ ಮೇಲಲ್ಲ. ಇದೆಲ್ಲಾ ಅವರಿಗೆ ಗೊತ್ತಿದೆ ಎಂದು ಹೇಳಿದರು.




ಮಾಟಮಂತ್ರ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ. ನಮ್ಮದು ಅಭಿವೃದ್ಧಿಯ ಮಂತ್ರ. ಬೇಕಾದ್ರೆ ಸಿದ್ದು ಬಂಡಿ ಮಾಟಮಂತ್ರ ಯಾರು ಮಾಡಿಸಿದ್ದಾರೆ ಅನ್ನೋದನ್ನು ಕಂಡು ಹಿಡಿದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.


ಇದನ್ನೂ ಓದಿ: Parameshwara: ಸೈಬರ್ ಕ್ರೈಂ ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಾಜಿ ಡಿಸಿಎಂ ಜಿ ಪರಮೇಶ್ವರ್​​ ಆಪ್ತ; ಕಾರಣವೇನು?


ಚನ್ನಪಟ್ಟಣದಲ್ಲಿ ಕೊನೆಯ ಚುನಾವಣೆ ಎಂದ HDK


2023ರ ಚುನಾವಣೆ ನನ್ನ ಕೊನೆಯ ಚುನಾವಣೆ. 2028ರ ಚುನಾವಣೆಗೆ ನಿಮ್ಮಲ್ಲೇ ಒಬ್ಬರು ಅಭ್ಯರ್ಥಿ ಆಗಬೇಕು ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (Former CM HD Kumaraswamy) ಹೇಳಿದ್ದಾರೆ. ಚನ್ನಪಟ್ಟಣದಲ್ಲಿ (Channapatna) ಮಾತನಾಡಿದ ಅವರು, ಮಂಡ್ಯದ ಕಾರ್ಯಕರ್ತರು ಕೆ.ಆರ್.ಪೇಟೆಯಲ್ಲಿ ಬಂದು ಚುನಾವಣೆಗೆ ನಿಲ್ಲಿ ಎಂದು ಮನವಿ ಮಾಡಿದರು. ಚನ್ನಪಟ್ಟಣದಲ್ಲಿ ನಿಮ್ಮನ್ನು ಸೋಲಿಸಲು ಮಸಲತ್ತು ಮಾಡಿದ್ದಾರೆ ಎಂದರು. ಆದರೆ ನಾನು ಇದಕ್ಕೆ ಹೆದರುವುದಿಲ್ಲ ಎಂದು ಹೇಳಿದರು.


black magic politics in lingasugur assembly constituency mrq
ಮಾನಪ್ಪ ವಜ್ಜಲ್, ಬಿಜೆಪಿ ನಾಯಕ


ಚನ್ನಪಟ್ಟಣದ ದೊಡ್ಡಮಳೂರು ಗ್ರಾಮದ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಇದು ಬೆಂಗಳೂರು ಹಾಲು ಒಕ್ಕೂಟ ಸಹಕಾರ ಸಂಘದ ಕಾರ್ಯಕ್ರಮ ಅಲ್ಲ. ಇದು ಜಯಮುತ್ತು ಸಹಕಾರ ಸಂಘದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಅನುಮತಿ ಕೊಡಲು ಬಮೂಲ್ ನಿರಾಕರಿಸಿದೆ. ಎಲ್ಲಾ ಅಧಿಕಾರಿಗಳು ಯಾವ ರೀತಿ ನಡೆದುಕೊಂಡಿದ್ದಾರೆ ಅನ್ನೊದು ಗೊತ್ತಿದೆ ಎಂದರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು