• Home
  • »
  • News
  • »
  • state
  • »
  • Black Magic: ಸಮಾಧಿ ಬಳಿ ಸುಂದರ ಯುವತಿಯ ಫೋಟೋ ಇಟ್ಟು ವಶೀಕರಣ! ಬೆಚ್ಚಿಬಿದ್ದ ಗ್ರಾಮಸ್ಥರು

Black Magic: ಸಮಾಧಿ ಬಳಿ ಸುಂದರ ಯುವತಿಯ ಫೋಟೋ ಇಟ್ಟು ವಶೀಕರಣ! ಬೆಚ್ಚಿಬಿದ್ದ ಗ್ರಾಮಸ್ಥರು

ಯುವತಿ ಫೋಟೋ ಇಟ್ಟು ವಾಮಾಚಾರ

ಯುವತಿ ಫೋಟೋ ಇಟ್ಟು ವಾಮಾಚಾರ

ಸಮಾಧಿಯ ಬಳಿ ಸುಂದರ ಯುವತಿಯ ಫೋಟೋ ಇಟ್ಟು, ಫೋಟೋದ ಸುತ್ತಲೂ ಅರಿಶಿನ ಕುಂಕುಮ ಜತೆಗೆ ರಂಗೋಲಿ ಹಾಕಿದ್ದಾರೆ. ಮತ್ತೊಂದಡೆ ತೆಂಗಿನಕಾಯಿ, ಎಲೆ, ಅಡಿಕೆ, ಕಡ್ಡಿ, ಕರ್ಪೂರದಿಂದ ಪೂಜೆ ಮಾಡಲಾಗಿದೆ. ರಂಗೋಲಿಯಲ್ಲಿ ವಶೀಕರಣ ಎಂದು ಕನ್ನಡದಲ್ಲಿ ಬರೆಯಲಾಗಿದೆ.

  • News18 Kannada
  • Last Updated :
  • Karnataka, India
  • Share this:

ದೊಡ್ಡಬಳ್ಳಾಪುರ (ನ.22): ವಾಮಾಚಾರದ (Black Magic) ಕುರುಹುಗಳು ನೆಮ್ಮದಿಯಾಗಿದ್ದ ಊರ ಜನರ ನಿದ್ದೆಗೆಡಿಸಿದೆ. ಸಮಾಧಿಯ (Burial) ಬಳಿ ಸುಂದರ ಯುವತಿಯ ಫೋಟೋ (Girl Photo) ಇಟ್ಟು ರಂಗೋಲಿಯಲ್ಲಿ ವಶೀಕರಣ ಎಂದು ಬರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಎಸ್‌ಎಂ ಗೊಲ್ಲಹಳ್ಳಿ ಗ್ರಾಮದಲ್ಲಿ (Village) ನಡೆದಿದೆ. ಎರಡು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು, ಗ್ರಾಮದ ಹೊರಭಾಗದ ಸ್ಮಶಾನದ ಬಳಿ ಕುರಿಗಾಹಿಗಳು ಹೋದಾಗ ಈ ಕೃತ್ಯ ಬೆಳಕಿಗೆ ಬಂದಿದೆ.


ಸಮಾಧಿ ಬಳಿ ಹುಡುಗಿ ಫೋಟೋ ಇಟ್ಟು ವಾಮಾಚಾರ


ಸಮಾಧಿಯ ಬಳಿ ಸುಂದರ ಯುವತಿಯ ಫೋಟೋ ಇಟ್ಟು, ಫೋಟೋದ ಸುತ್ತಲೂ ಅರಿಶಿನ ಕುಂಕುಮ ಜತೆಗೆ ರಂಗೋಲಿ ಹಾಕಿದ್ದಾರೆ. ಮತ್ತೊಂದಡೆ ತೆಂಗಿನಕಾಯಿ, ಎಲೆ, ಅಡಿಕೆ, ಕಡ್ಡಿ, ಕರ್ಪೂರದಿಂದ ಪೂಜೆ ಮಾಡಲಾಗಿದೆ. ರಂಗೋಲಿಯಲ್ಲಿ ವಶೀಕರಣ ಎಂದು ಕನ್ನಡದಲ್ಲಿ ಬರೆಯಲಾಗಿದೆ. ಇದನ್ನು ನೋಡಿದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.




ಫೋಟೋದಲ್ಲಿರುವ ಯುವತಿ ಯಾರು?


ವಾಮಾಚಾರ ಮಾಡುವ ಕಾರಣಕ್ಕೆ ಈ ಕೃತ್ಯವನ್ನ ಕಿಡಿಗೇಡಿಗಳು ನಡೆಸಿರುವ ಸಾಧ್ಯತೆ ಇದೆ. ಆ ಯುವತಿ ಯಾರು ಅಂತ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೇಳಿದಾಗ ಎಲ್ಲಿಯೂ ಆಕೆಯ ಬಗ್ಗೆ ತಿಳಿದಿಲ್ಲ. ಕಿಡಿಗೇಡಿಗಳು
ವಾಮಾಚಾರ ಮಾಡಿರುವ ಸ್ಥಳದಲ್ಲಿ ವಶೀಕರಣ ಅಂತ ಬರಹಗಳನ್ನು ಬರೆದು ರಂಗೋಲಿ ಹಾಕಿದ್ದಾರೆ.


ಮೂರು ತಿಂಗಳಲ್ಲಿ ಮೂವರು ಸಾವು


ಗ್ರಾಮದ ಮಂಜುನಾಥ್ ಎಂಬುವರ ಮನೆಯಲ್ಲಿ ಮೂರು ತಿಂಗಳಲ್ಲಿ ಮೂವರು ಸಾವನ್ನಪ್ಪಿದರು, ಇತ್ತೀಚೆಗೆ ಮೃತಪಟ್ಟವರ ಸಮಾಧಿಯ ಬಳಿ ವಶೀಕರಣದ ಪೂಜೆ ಮಾಡಿರುವುದು ಮಂಜುನಾಥ್ ಕುಟುಂಬದವರ ಆತಂಕಕ್ಕೆ ಕಾರಣವಾಗಿದೆ.


ಮಂಜುನಾಥ್ ಕುಟುಂಬಸ್ಥರಲ್ಲಿ ಆತಂಕ


ಮಂಜುನಾಥ್ ಕುಟುಂಬದವರ ಮೇಲೆ ವೈಯಕ್ತಿಕ ದ್ವೇಷ ಸಾಧಿಸುತ್ತಿರುವ ವ್ಯಕ್ತಿಗಳು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಮತ್ತು ಗ್ರಾಮದಲ್ಲಿ ಅಶಾಂತಿ ವಾತಾವರಣ ಸೃಷ್ಟಿ ಮಾಡಲು ಕೆಲವು ಕಿಡಿಗೇಡಿಗಳು ಇಂತಹ ಕೃತ್ಯ ಮಾಡಿರುತ್ತಾರೆ ಎಂಬ ಸಂಶಯ ಸಹ ಇದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಗ್ರಾಮದ ಹೆಣ್ಣು ಮಕ್ಕಳು, ಪೋಷಕರಲ್ಲಿಯೂ ಆತಂಕ


ಗ್ರಾಮಸ್ಥರಲ್ಲಿ ವಾಮಾಚಾರದ ಬಗ್ಗೆ, ಭಯ ಶುರುವಾಗಿದೆ. ಯುವತಿಯ ಫೋಟೋ ಇಟ್ಟಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಗ್ರಾಮದ ಹೆಣ್ಣು ಮಕ್ಕಳು ಮತ್ತು ಪೋಷಕರಲ್ಲಿಯೂ ಆತಂಕ ಮನೆ ಮಾಡಿದೆ. ಈ ಬಗ್ಗೆ ತನಿಖೆ ನಡೆಸುವಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಒತ್ತಾಯಿಸಿದ್ದಾರೆ.


ಮಾಟ ಮಂತ್ರದ ಕುರುಹುಗಳು ಪತ್ತೆ


ಕೆಲ ದಿನಗಳ ಹಿಂದೆ ಕೊಳ್ಳೇಗಾಲದಲ್ಲಿ ಮತ್ತೆ ಮಾಟ ಮಂತ್ರದ ಕುರುಹುಗಳು ಪತ್ತೆಯಾಗಿವೆ. ಕೊಳ್ಳೇಗಾಲ ತಾಲ್ಲೂಕಿನ ಜಕ್ಕಳಿ ಗ್ರಾಮ ಸಮೀಪದ ಕೋಟೆಕೆರೆ ಪ್ರದೇಶದಲ್ಲಿ ಮಧ್ಯರಾತ್ರಿ ವಾಮಾಚಾರ ನಡೆಯುತ್ತಿರುವ ಆರೋಪ ಕೇಳಿ ಬಂದಿತ್ತು.‌ ಕೆರೆಯಲ್ಲಿ ಬಲಿ‌ ಕೊಟ್ಟ ಕೋಳಿ‌, ಕೆರೆ ಅಂಗಳದಲ್ಲಿ ಅರಿಶಿಣ, ಕುಂಕುಮ,‌ ಗಂಧದ ಕಡ್ಡಿ, ನಿಂಬೆ ಹಣ್ಣು, ಹಳೆಯ ಬಟ್ಟೆಗಳು ಪತ್ತೆಯಾಗಿವೆ. ಈ ಸಂಬಂಧ ರೈತ ಸಂಘದ ಶೈಲೇಂದ್ರ ಅವರು, ಕೃಷಿಕರು, ಕೂಲಿ ಕಾರ್ಮಿಕರು ಜಮೀನಿಗೆ ಹೋಗಲು ಭಯ ಪಡುವಂತಾಗಿದೆ.‌‌‌


ಇದನ್ನೂ ಓದಿ: Sexual Harassment: ಅಜ್ಜಿಗೆ ನಿದ್ದೆ ಮಾತ್ರೆ ಹಾಕಿ ಮನೆಗೆ ನುಗ್ಗಿದ; 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕ!


ಈ ಭಾಗದಲ್ಲಿ ಉತ್ತಮ ಮಳೆಯಾಗಿ ಕೆರೆ ತುಂಬಿದ್ದು, ಕೃಷಿಗೆ ನೆರವಾಯಿತು ಎಂದು ರೈತರು ಎಂದುಕೊಂಡಿದ್ದರು. ಆದರೆ, ಕೆರೆ ನೀರಿನಲ್ಲಿ ಬಲಿ ಕೊಟ್ಟ ಕೋಳಿ, ಕೆರೆಯ ದಡದಲ್ಲಿ ಹರಡಿರುವ ಮಾಟ ಮಂತ್ರದ ವಸ್ತುಗಳು ಜನರಲ್ಲಿ ಭಯವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ. ಇಂತಹ ಕೃತ್ಯಗಳಿಗೆ ಕಡಿವಾಣ ಬೀಳಬೇಕು. ಮಾಟ ಮಂತ್ರದ ಹೆಸರಿನಲ್ಲಿ ಮೋಸ ಮಾಡುವ ಜನರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Published by:ಪಾವನ ಎಚ್ ಎಸ್
First published: