ವಿಜಯಪುರ: ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆಗಳು (SSLC Exam) ನಡೆಯುತ್ತಿವೆ. ಕೆಲವೆಡೆ ಹಿಜಾಬ್ (Hijab) ಗೊಂದಲ ಬಿಟ್ಟರೆ ಎಲ್ಲಾ ಕಡೆ ಶಾಂತ ರೀತಿಯಲ್ಲಿ ಪರೀಕ್ಷೆ ನಡೆದಿದೆ. ಹಿಜಾಬ್ ಧರಿಸುವ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಗೆ (Exam Hall) ಅನುಮತಿ ನೀಡಲಾಗಲ್ಲ ಎಂದು ಸರ್ಕಾರ (Government) ಹೇಳಿತ್ತು. ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನ್ನುವಾಗಲೇ ವಿಜಯಪುರದಲ್ಲಿ (Vijayapura) ಘಟನೆಯೊಂದು ನಡೆದಿದೆ. ಈ ಘಟನೆಯಿಂದ ಎಸ್ಎಲ್ಎಲ್ಸಿ ವಿದ್ಯಾರ್ಥಿಗಳು (Students), ಪೋಷಕರು (Parents) ಹಾಗೂ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಹೌದು, ಎಸ್ಎಸ್ಎಲ್ಸಿ ವಿದ್ಯಾರ್ಥಿಯೊಬ್ಬನ ಫೋಟೋಗೆ (Photo) ಹಾರ ಹಾಕಿ, ಕಿಡಿಗೇಡಿಗಳು ತಿಥಿ ಪೂಜೆ ಮಾಡಿದ್ದಾರೆ. ಇದನ್ನು ನೋಡಿ ಆ ವಿದ್ಯಾರ್ಥಿಯ ಪೋಷಕರು ಹೆದರಿಕೊಂಡಿದ್ದು, ನಮ್ಮ ಮಗನ ಮೇಲೆ ವಾಮಾಚಾರ (Black Magic) ನಡೆದಿರಬಹುದು ಅಂತ ಆತಂಕಗೊಂಡಿದ್ದಾರೆ.
ಎಸ್ಎಸ್ಎಲ್ಸಿ ವಿದ್ಯಾರ್ಥಿ ಫೋಟೋಗೆ ತಿಥಿ ಪೂಜೆ
ಎಸ್ಎಸ್ಎಲ್ಸಿ ಪರೀಕ್ಷಾರ್ಥಿಯ ಫೋಟೋಗೆ ತಿಥಿ ಪೂಜೆ ಮಾಡಿದ್ದಾರೆ. ಈ ಮೂಲಕ ವಾಮಾಚಾರ ಮಾಡಿರೋ ಶಂಕೆ ವ್ಯಕ್ತವಾಗಿದೆ. ವಿಜಯಪುರ ತಾಲೂಕಿನ ಅರಕೇರಿ ತಾಂಡಾ ಬಳಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಈ ಘಟನೆ ನಡೆದಿದೆ. ಸಚಿನ್ ನಾಯಕ ಎಂಬ ವಿದ್ಯಾರ್ಥಿಯ ಫೋಟೋಗೆ ಹೂವಿನ ಹಾರ ಹಾಕಿ, ತೆಂಗಿನಕಾಯಿ ಒಡೆದು, ಗಡಿಗೆ ಇಟ್ಟು, ಹಾಲ್ ಟಿಕೆಟ್ ಝರಾಕ್ಸ್ ಪ್ರತಿ ಇಟ್ಟು ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.
ಘಟನೆಯಿಂದ ವಿದ್ಯಾರ್ಥಿ ಪೋಷಕರಿಗೆ ಆತಂಕ
ಈ ಘಟನೆಯಿಂದ ವಿದ್ಯಾರ್ಥಿ ಭಯಗೊಂಡಿದ್ದಾನೆ. ಅಲ್ಲದೆ ಆತನ ಪೋಷಕರು ಕೂಡ ಭಯದಿಂದಿದ್ದಾರೆ. ನಮ್ಮ ಮಗನ ಫೋಟೋ ಇಟ್ಟು ಈ ರೀತಿ ದುಷೃತ್ಯವೆಸಗಿದವರ ಪತ್ತೆ ಮಾಡಬೇಕೆಂದು ಸಚಿನ್ ಪೋಷಕರು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಇತ್ತ ಸಚಿನ್ ಆತಂಕದಿಂದಲೇ ಪರೀಕ್ಷೆಗೆ ತೆರಳಿದ್ದಾನೆ. ವಿಜಯಪುರ ನಗರದ ಶಾಂತಿನಿಕೇತನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿರುವ ಸಚಿನ್ಗೆ ಬೆಂಗಾವಲಾಗಿ ತಾತ ಮತ್ತು ಸಹೋದರ ತೆರಳಿದ್ದರು. ಈ ವೇಳೆ ಗ್ರಾಮಸ್ಥರು ಕೂಡ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ SSLC ಪರೀಕ್ಷೆ ಆರಂಭ: Hijab ಧರಿಸಿ ಬಂದ್ರೆ ನೋ ಎಂಟ್ರಿ
ಎರಡನೇ ಬಾರಿ ನಡೆಯಿತಂತೆ ವಾಚಾಮಾರ
ಅಂದ ಹಾಗೆ ಸಚಿನ್ ಮೇಲೆ ಇದು ಮೊದಲ ಬಾರಿ ನಡೆಯುತ್ತಿರುವ ವಾಮಾಚಾರವಲ್ಲ. ಸಚಿನ್ ಮೇಲೆ ನಡೆದಿರುವ ತಿಥಿ ಕಾರ್ಯ ಹಾಗೂ ವಾಮಾಚಾರ ಇದು ಎರಡನೇ ಬಾರಿಯಾಗಿದೆ. ಹೀಗಾಗಿ ಕುಟುಂಬ ತೀವ್ರ ಆತಂಕದಲ್ಲಿದ್ದು, ಈ ಬಗ್ಗೆ ಗಂಗಾರಾಮ ಅವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪರೀಕ್ಷೆ ಬರೆಯುವ ವೇಳೆ ಹೃದಯಾಘಾತಕ್ಕೆ ವಿದ್ಯಾರ್ಥಿನಿ ಬಲಿ
ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಆಘಾತಕಾರಿ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಅಕ್ಕೂರು ಗ್ರಾಮದ ನಿವಾಸಿ ಅನುಶ್ರೀ ಎಂಬ ವಿದ್ಯಾರ್ಥಿನಿ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾಳೆ.
ಚಿಕಿತ್ಸೆ ಫಲಿಸದೇ ಕೊನೆಯುಸಿರು
ಮಾದಾಪುರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಅನುಶ್ರೀ, ಇಂದು ಟಿ.ನರಸೀಪುರ ತಾಲೂಕಿನ ವಿದ್ಯೋದಯ ಪರೀಕ್ಷಾ ಕೇಂದ್ರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ಕುಸಿದು ಬಿದ್ದ ವಿದ್ಯಾರ್ಥಿನಿಯನ್ನು ಸಿಬ್ಬಂದಿಗಳು ಕೂಡಲೇ ಟಿ. ನರಸೀಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Hijab Controversy: "ನೀವೇಕೆ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡ್ತೀರಿ?" ಹಿಜಾಬ್ ವಿವಾದದ ಬಗ್ಗೆ ಭುವನ ಸುಂದರಿ ಗರಂ
ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ 8,73,846 ವಿದ್ಯಾರ್ಥಿಗಳು
ಈ ಬಾರಿ 8,73,846 ವಿದ್ಯಾರ್ಥಿಗಳಿಂದ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇಂದಿನಿಂದ ಏಪ್ರಿಲ್ 11ರ ವರೆಗೆ ನಡೆಯಲಿರುವ SSLC ಪರೀಕ್ಷೆಗಳು ನಡೆಯಲಿವೆ. ಈ ಬಾರಿ 8,20,888 ಫೆಶ್ಶರ್ ವಿದ್ಯಾರ್ಥಿಗಳು, 46,200 ರಿಪೀಟ್ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ 4,52,732 ಗಂಡು ಮಕ್ಕಳು, 4,21,110 ಹೆಣ್ಣು ಮಕ್ಕಳಿದ್ದಾರೆ. 04 ತೃತಿಯ ಲಿಂಗಿಗಳು ಹಾಗೂ ವಿಭಿನ್ನ ಸಾಮಾರ್ಥ್ಯವುಳ್ಳ ವಿದ್ಯಾರ್ಥಿಗಳು 5,307 ಸೇರಿದಂತೆ ಒಟ್ಟು 8,73,846 ಮಕ್ಕಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ