ದೊಡ್ಡಬಳ್ಳಾಪುರದಲ್ಲಿ ದೇವರಿಗೆ ವಾಮಾಚಾರ; ಹೆಚ್ಚಾಗ್ತಿದೆ ನಿಧಿ ಕಳ್ಳರ ಹಾವಳಿ

ಕಳೆದ 15 ದಿನಗಳ ಹಿಂದೆ  ಮೊದಲ ಪ್ರಯತ್ನ ಮಾಡಿದ್ದು, ನಿಂಬೆ ಹಣ್ಣು ಹಾಗೂ ಇತರೆ ವಸ್ತುಗಳನ್ನು ಬಳಸಿ ಪ್ರಯತ್ನ ಮಾಡಲಾಗಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಪೂಜೆಗೆ ಬಳಸಿದ ವಸ್ತುಗಳಿಗೆ ಬೆಂಕಿ ಇಟ್ಟು ನಾಶ ಮಾಡಿದರು. ಆದರೆ ಕಿಡಿಗೇಡಿಗಳು ಎರಡನೇ ಬಾರಿ ಪ್ರಯತ್ನ ಪಟ್ಟು ಗುಂಡಿಯನ್ನು ಸಹ ತೆಗೆದಿದ್ದಾರೆ.

ಭೂಮಿ ಅಗೆದಿರುವ ದೃಶ್ಯ

ಭೂಮಿ ಅಗೆದಿರುವ ದೃಶ್ಯ

  • Share this:
ದೊಡ್ಡಬಳ್ಳಾಪುರ(ಅ.12):  ದೇವಾಲಯದ ಬಳಿ ನಿಧಿ‌ ಸಿಗುತ್ತದೆ ಎಂಬ ಆಸೆಯಿಂದ ದೇವಾಲಯದ ಹಿಂದೆ ಮುಂದೆ ಗುಂಡಿ ತೋಡಿ ವಾಮಾಚಾರ ಮಾಡಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮದುರೆ ಸಮೀಪದ ಮದಗೊಂಡನಹಳ್ಳಿ  ಗ್ರಾಮದ ಹೊರಭಾಗದಲ್ಲಿ ಇರುವ ರಾಮ ದೇವರ ದೇವಾಲಯದ ಬಳಿ ನಿಧಿ ಶೋಧಕ್ಕಾಗಿ ದಿಗ್ಭಂಧನ, ಪೂಜೆ, ಮಾಟ, ಮಂತ್ರ ಮಾಡಲಾಗಿದೆ.  ಗುಂಡಿ ತೋಡಿ ನಿಂಬೆಹಣ್ಣು , ಅರಿಶಿಣ, ಕುಂಕುಮ ಹಾಗೂ ವಾಮಾಚಾರಕ್ಕೆ ಬಳಸುವ ವಸ್ತುಗಳನ್ನು ಉಪಯೋಗಿಸಿ ಶೋಧಕಾರ್ಯ ನಡೆಸಿದ್ದಾರೆ. ಈ ಘಟನೆಯಿಂದ ದೇವಾಲಯದ ಬಳಿ ಗ್ರಾಮಸ್ಥರು ತೆರಳು ಭಯ ಭೀತರಾಗಿದ್ದಾರೆ.

ದೇವಸ್ಥಾನಕ್ಕೆ 150 ವರ್ಷದ ಇತಿಹಾಸ

ದೇವಾಲಯಕ್ಕೆ ‌150 ವರ್ಷದ ಹಿನ್ನೆಲೆಯಿದ್ದು,  ರಾಮ ವನವಾಸಕ್ಕೆ ಬಂದ ಸಮಯದಲ್ಲಿ ಒಂದು ಬಂಡೆಯ ಮೇಲೆ‌ ಹೆಜ್ಜೆಯಿಟ್ಟಿದ್ದಾರೆ ಎಂಬ ಕುರುಹನ್ನು ನಂಬಿ ಇಲ್ಲಿ ಸಣ್ಣ ದೇವಾಲಯವನ್ನು ನಿರ್ಮಿಸಿ ಪೂಜಾ ಕೈಕರ್ಯಗಳನ್ನು ಮಾಡುತ್ತಾರೆ. ಪ್ರತಿ ವರ್ಷ ಊರಿನ ಗ್ರಾಮಸ್ಥರೆಲ್ಲಾ ಸೇರಿ ಪರೇವು ಎಂಬ ಕಾರ್ಯಕ್ರಮ ಮಾಡಿ ಊರಿಗೆಲ್ಲಾ ಊಟ ಹಾಕಲಾಗುತ್ತದೆ. ಎರಡನೇ ಪ್ರಯತ್ನ, ದೇವಾಲಯದ ಕೆಳಗೆ ನಿಧಿ ಇದೆ ಎಂಬ ನಂಬಿಕೆಯಿಂದ ಕಿಡಿಗೇಡಿಗಳು ಎರಡನೇ ಬಾರಿ ನಿಧಿ ತೆಗೆಯಲು ಪ್ರಯತ್ನ ಪಟ್ಟಿದ್ದಾರೆ.

ಬಡತನವನ್ನೇ ಹಾಸಿ ಹೊದ್ದ ಬೇಡಗಂಪಣರು; ಅರಣ್ಯ ರೋಧನವಾದ ಮೀಸಲಾತಿಯ ಕೂಗು

ಕಳೆದ 15 ದಿನಗಳ ಹಿಂದೆ  ಮೊದಲ ಪ್ರಯತ್ನ ಮಾಡಿದ್ದು, ನಿಂಬೆ ಹಣ್ಣು ಹಾಗೂ ಇತರೆ ವಸ್ತುಗಳನ್ನು ಬಳಸಿ ಪ್ರಯತ್ನ ಮಾಡಲಾಗಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಪೂಜೆಗೆ ಬಳಸಿದ ವಸ್ತುಗಳಿಗೆ ಬೆಂಕಿ ಇಟ್ಟು ನಾಶ ಮಾಡಿದರು. ಆದರೆ ಕಿಡಿಗೇಡಿಗಳು ಎರಡನೇ ಬಾರಿ ಪ್ರಯತ್ನ ಪಟ್ಟು ಗುಂಡಿಯನ್ನು ಸಹ ತೆಗೆದಿದ್ದಾರೆ.

ಗ್ರಾಮಾಂತರ ಭಾಗದಲ್ಲಿ ನಿಧಿಗಳ್ಳರ ಕಾಟ ಹೆಚ್ಚಾಗಿದೆ. ಪ್ರಸಿದ್ಧ ಸ್ಥಳಗಳನ್ನು ಗುರುತಿಸಿ ಈ ರೀತಿಯ ಮಾಡುತ್ತಿದ್ದಾರೆ.  ನಮ್ಮ ಗ್ರಾಮದ ದೇವಾಲಯದ ಬಳಿ ಎರಡನೇ ಬಾರಿಗೆ ಪ್ರಯತ್ನ ಪಟ್ಟಿದ್ದಾರೆ.  ಪುರಾತನ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಸಾಕಷ್ಟು ಪುರಾತನ ದೇವಸ್ತಾನ ಕೋಟೆ, ಕೊತ್ತಲಗಳಲ್ಲಿ ನಿದಿ ಇದೆ ಎಂಬ ದುರಾಸೆಗೆ ಹಾಳು ಮಾಡುತ್ತಿದ್ದು, ಮಾಕಳಿ ದುರ್ಗ ಬೆಟ್ಟ ಸೇರಿದಂತೆ ಐತಿಹಾಸಿಕ ಸ್ಥಳ, ಗುಡಿ ಗಳನ್ನೆ ಟಾರ್ಗೆಟ್ ಮಾಡಿ ಹಳ್ಳ ತೆಗೆದು ಕಟ್ಟಡಗಳನ್ನ ಹಾಳು ಮಾಡುತ್ತಿರುವುದು ಸಾರ್ವಜನಿಕರ ನಿದ್ದೆ ಕೆಡಿಸಿದೆ.

ಸಾಕಷ್ಟು ಪುರಾತನ ಕೋಟೆ, ಕೊತ್ತಲ ದೇವಸ್ಥಾನಗಳಿರುವ ಪ್ರದೇಶಗಳು ಬಹುತೇಕ ಅರಣ್ಯ ಪ್ರದೇಶದಲ್ಲಿ ಇವೆ. ಇಂತಹ ದುರುಳರು ಶಸ್ತ್ರ ಸಮೇತ ಬಂದಿರುತ್ತಾರೆ. ಯಾರಾದ್ರೂ ತಡೆಯಲಿಕ್ಕೆ, ಪ್ರತಿರೋಧ ವ್ಯಕ್ತಪಡಿಸಿದ್ರೆ ಏನು ಮಾಡಲಿಕ್ಕೂ ಸಹಿಸದ ಮಟ್ಟಕ್ಕೆ ಪಾನಮತ್ತ ಮತ್ತು ಅಪಾಯಕಾರಿ ಜನರು ಇರ್ತಾರೆ ಹಾಗಾಗಿ ದೇವಾಲಯದ ಬಳಿಗೆ ತೆರಳು ಜನರು ಭಯ ಪಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು.
Published by:Latha CG
First published: