• Home
  • »
  • News
  • »
  • state
  • »
  • Black Leopard in Chamarajanagar: ಚಾಮರಾಜ‌ಗರ ಬಿ‌ಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರಿ ಚಿರತೆ! ರಾಜ್ಯದ ಎಲ್ಲೆಲ್ಲಿ ಕರಿ ಚಿರತೆಗಳಿವೆ?

Black Leopard in Chamarajanagar: ಚಾಮರಾಜ‌ಗರ ಬಿ‌ಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರಿ ಚಿರತೆ! ರಾಜ್ಯದ ಎಲ್ಲೆಲ್ಲಿ ಕರಿ ಚಿರತೆಗಳಿವೆ?

ಕಪ್ಪು ಚಿರತೆ

ಕಪ್ಪು ಚಿರತೆ

ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮಗಳು 1.6 ಕಿಲೋಮೀಟರ್  ಅಗಲದ ವನ್ಯಜೀವಿ ಕಾರಿಡಾರ್​ನಿಂದ ಜೋಡಣೆಗೊಂಡಿವೆ. ಕಪ್ಪು ಎರಡೂ ವನ್ಯಜೀವಿಧಾಮಗಳಲ್ಲಿ ಈ ಚಿರತೆ ದಾಖಲಾಗಿರುವುದು ಈ ವನ್ಯಜೀವಿ ಕಾರಿಡಾರ್​ನ ಮಹತ್ವವನ್ನು ಸಾರಿದೆ.

  • Share this:

ಚಾಮರಾಜ‌ಗರ: ಜಿಲ್ಲೆಯ ಬಿ‌ಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (BRT Tiger Reserve in Chamarajanagar) ಕಪ್ಪು ಚಿರತೆಯೊಂದು (Black Leopard) ಕಾಣಿಸಿಕೊಂಡಿದೆ. ಎರಡು ವರ್ಷಗಳ ಹಿಂದೆ  ಮಲೆ ಮಹದೇಶ್ವರ (Male Mahadeshwara) ವನ್ಯಧಾಮದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಚಿರತೆಯೇ ಇದಾಗಿದ್ದು ತನ್ನ ಆವಾಸ ಸ್ಥಾನವನ್ನು ವಿಸ್ತರಿಸಿರುವುದು ದೃಢಪಟ್ಟಿದೆ. ಹೀಗಾಗಿ ಈ ಎರಡೂ ಅರಣ್ಯಗಳ ನಡುವೆ ಇರುವ  ವನ್ಯಜೀವಿ ಕಾರಿಡಾರ್ ಸಂರಕ್ಷಣೆ ಆಗಬೇಕು ಎಂಬ ವನ್ಯಜೀವಿ ತಜ್ಞರು (Wildlife Experts) ಅಭಿಪ್ರಾಯಕ್ಕೆ ಮತ್ತಷ್ಟು ಬಲಬಂದಿದೆ.  ಬಿ‌ಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪತ್ತೆಯಾದ ಕಪ್ಪು ಚಿರತೆ ಹೇಗಿದೆ? ಈ ಚಿರತೆ ಹೇಗೆ ಪತ್ತೆಯಾಯ್ತು ಎಂಬ ಮಾಹಿತಿ ಇಲ್ಲಿದೆ.


ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ಅರಣ್ಯ ವಲಯದಲ್ಲಿ ಡಿಸೆಂಬರ್ 2020ರಲ್ಲಿ ಮೊದಲ ಬಾರಿಗೆ ಅರಣ್ಯ ಇಲಾಖೆಯ ಕ್ಯಾಮೆರಾ ಟ್ರ್ಯಾಪ್​ನಲ್ಲಿ  ಕಪ್ಪು ಚಿರತೆ ದೃಶ್ಯ ಸೆರೆಯಾಗಿತ್ತು. ಈಗ ಹೊಳೆಮತ್ತಿ ನೇಚರ್ ಫೌಂಡೇಶನ್‌ನ ಡಾ.ಸಂಜಯ್ ಗುಬ್ಬಿ ಮತ್ತು ಅವರ ತಂಡದವರು ಬಿಳಿಗಿರಿರಂಗನಬೆಟ್ಟದಲ್ಲಿ ಚಿರತೆಗಳಿಗೆ ಸಂಬಂಧಿತ ಅಧ್ಯಯನಕ್ಕಾಗಿ ನಡೆಸಿದ್ದ ಕ್ಯಾಮರಾ ಟ್ರ್ಯಾಪ್ ನಲ್ಲಿ ಈ ತಿಂಗಳು ಮತ್ತೆ ಗೋಚರಿಸಿದೆ.  ಸುಮಾರು ಈ ಆರು ವರ್ಷದ ಗಂಡು ಚಿರತೆಯನ್ನು, ಅದರ ಮೈ ಮೇಲಿನ ಚಿಟ್ಟೆಯಾಕಾರದ ಗುರುತುಗಳಿಂದ ಗುರುತಿಸಲಾಗಿದೆ.


ವನ್ಯಜೀವಿ ತಜ್ಞ ಡಾ.ಸಂಜಯ್ ಗುಬ್ಬಿ ಅವರ ಕುತೂಹಲಕಾರಿ ವಿವರಣೆ ಕೇಳಿ
ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮಗಳು 1.6 ಕಿಲೋಮೀಟರ್  ಅಗಲದ ವನ್ಯಜೀವಿ ಕಾರಿಡಾರ್​ನಿಂದ ಜೋಡಣೆಗೊಂಡಿವೆ. ಈ ಎರಡೂ ವನ್ಯಜೀವಿಧಾಮಗಳಲ್ಲಿ ಈ ಚಿರತೆ ದಾಖಲಾಗಿರುವುದು ಈ ವನ್ಯಜೀವಿ ಕಾರಿಡಾರ್​ನ ಮಹತ್ವವನ್ನು ಸಾರಿದೆ. ಈ ಕಾರಿಡಾರ್‌ನ ಸಂರಕ್ಷಣೆಯ ತುರ್ತು ಅವಶ್ಯಕತೆಯನ್ನು ಬಿಂಬಿಸುತ್ತದೆ ಎಂದು ವನ್ಯಜೀವಿ ತಜ್ಞ ಡಾ.ಸಂಜಯ್ ಗುಬ್ಬಿ ತಿಳಿಸಿದ್ದಾರೆ.


ಕಾರಿಡಾರ್‌ ಸಂರಕ್ಷಣೆ ಅತಿಮುಖ್ಯ
ಈ ಕಿರಿದಾದ ಕಾರಿಡಾರ್​ನ ಮಧ್ಯೆಯೇ ಕೊಳ್ಳೇಗಾಲ - ಹಾಸನೂರ್ ರಸ್ತೆ (ರಾಜ್ಯ ಹೆದ್ದಾರಿ-38) ಹಾದು ಹೋಗುತ್ತದೆ.  ಈ ರಸ್ತೆಯಲ್ಲಿನ  ವಾಹನ ದಟ್ಟಣೆಯಿಂದ ಈ ಎರಡೂ ಅರಣ್ಯಗಳ ನಡುವೆ ವನ್ಯಜೀವಿಗಳ  ಮುಕ್ತ ಸಂಚಾರಕ್ಕೆ  ಅಡ್ಡಿಯಾಗಿದ್ದು ವನ್ಯಜೀವಿಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ಈ ಕಾರಿಡಾರ್‌ನ್ನು ಸಂರಕ್ಷಿಸುವುದು ಅತ್ಯಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 


ಇದನ್ನೂ ಓದಿ: Bengaluru Hacker: 7 ಕೋಟಿ ಎಗರಿಸಿದ ಬೆಂಗಳೂರಿನ ಹ್ಯಾಕರ್! ಖದೀಮರನ್ನು ಪತ್ತೆಹಚ್ಚಲು ಪೊಲೀಸರ ಶತಪ್ರಯತ್ನ


ರಾಜ್ಯದಲ್ಲಿ ಎಲ್ಲೆಲ್ಲಿ ಕಪ್ಪು ಚಿರತೆಗಳಿವೆ?
ಕಪ್ಪು ಚಿರತೆಗಳು ನಮ್ಮ ರಾಜ್ಯದ ಎಲ್ಲ ಹುಲಿ ಸಂರಕ್ಷಣಾ ಪ್ರದೇಶಗಳಲ್ಲೂ (ನಾಗರಹೊಳೆ, ಬಂಡೀಪುರ, ಭದ್ರ, ಕಾಳಿ ಮತ್ತು ಬಿಳಿಗಿರಿರಂಗನಬೆಟ್ಟ) ದಾಖಲಾಗಿವೆ. ಅದರೊಡನೆ ಬಂಡೀಪುರ ಹುಲಿ ಸಂರಕ್ಷಣಾ ಯೋಜನಾ ಪ್ರದೇಶಕ್ಕೆ ಹೊಂದಿಕೊಂಡಿರುವ ನುಗು ವನ್ಯಜೀವಿಧಾಮದಲ್ಲೂ ದಾಖಲಾಗಿದೆ. ಕಪ್ಪು ಚಿರತೆಗಳು ವನ್ಯಜೀವಿಧಾಮಗಳಾಚೆ ಹೊನ್ನಾವರ, ಉಡುಪಿ, ಕುಂದಾಪುರ ಮತ್ತಿತರ ಪ್ರದೇಶಗಳಲ್ಲೂ ಕಂಡು ಬಂದಿವೆ.


ನಾಗರಹೊಳೆಯ ಕಾಕನಕೋಟೆ ಭಾಗದಲ್ಲಿ ಕಂಡು ಬರುವ ಕಪ್ಪು ಚಿರತೆಯಂತೂ ವನ್ಯಜೀವಿ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿದೆ. ಬಹುಶಃ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅತಿ ಹೆಚ್ಚು ಕಪ್ಪು ಚಿರತೆಗಳ ಸಾಂದ್ರತೆಯಿದೆ.


ಇದನ್ನೂ ಓದಿ: Bengaluru Rain Updates: ಮಳೆ ಹಾನಿ ತಡೆಯಲು ಟಾಸ್ಕ್​ ಫೋರ್ಸ್ ರಚನೆ, ಯಾವ ವಲಯಕ್ಕೆ ಯಾರ ನೇತೃತ್ವ? ಮಾಹಿತಿ ಇಲ್ಲಿದೆ


ಅರಣ್ಯ ಇಲಾಖೆಯ ಕ್ಯಾಮರಾ ಟ್ರ್ಯಾಪ್ ಗಳಲ್ಲಿ ಸಾಕಷ್ಟು ಕಪ್ಪು ಚಿರತೆಗಳು ಇಲ್ಲಿ ದಾಖಲಾಗುತ್ತವೆ.  ಇದೀಗ ಬಿ‌ಆರ್‌ಟಿ ಹುಲಿಸಂರಕ್ಷಿತ ಪ್ರದೇಶದಲ್ಲಿ ಅಪರೂಪದ  ಕಪ್ಪುಚಿರತೆ ಗೋಚರಿಸಿರುವುದು ಮಹತ್ವ ಪಡೆದುಕೊಂಡಿದೆ


ವರದಿ: ಎಸ್.ಎಂ.ನಂದೀಶ್, ಚಾಮರಾಜನಗರ

Published by:guruganesh bhat
First published: