HOME » NEWS » State » BLACK FUNGUS CASE FOUND AT YADAGIRI AND MEDICINE NOT AVAILABLE NMPG LG

Black Fungus: ಯಾದಗಿರಿಯಲ್ಲಿ ಬ್ಲ್ಯಾಕ್ ಫಂಗಸ್​ಗೆ ತುತ್ತಾದವರಿಗೆ ಇಲ್ಲ ಔಷಧಿ...!

ಖುದ್ದು ಶಾಸಕ ರಾಜುಗೌಡ ಅವರು ಬ್ಲ್ಯಾಕ್ ಫಂಗಸ್ ಬಗ್ಗೆ ಮಾಹಿತಿ ಹೊರ ಹಾಕಿದ್ದಾರೆ. ಆದರೆ, ಜಿಲ್ಲಾಡಳಿತ ಹಾಗೂ ಆರೋಗ್ಯ ‌ಇಲಾಖೆಯು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡುವ ಕೆಲಸ ಮಾಡಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಇನ್ನೂ ಈ ಬಗ್ಗೆ ‌ಮಾಹಿತಿ ಪಡೆಯುವ ಕೆಲಸ ಮಾಡುತ್ತಿದ್ದಾರೆ.

news18-kannada
Updated:May 18, 2021, 4:08 PM IST
Black Fungus: ಯಾದಗಿರಿಯಲ್ಲಿ ಬ್ಲ್ಯಾಕ್ ಫಂಗಸ್​ಗೆ ತುತ್ತಾದವರಿಗೆ ಇಲ್ಲ ಔಷಧಿ...!
ಸಾಂದರ್ಭಿಕ ಚಿತ್ರ
  • Share this:
ಯಾದಗಿರಿ(ಮೇ 18): ರಾಜ್ಯದ ಕೆಲ ಜಿಲ್ಲೆಗಳಲ್ಲಿ ಬ್ಲ್ಯಾಕ್ ಫಂಗಸ್  ಪ್ರಕರಣಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ಆದರೆ ಈಗ ಯಾದಗಿರಿ ಜಿಲ್ಲೆಗೂ ಬ್ಲ್ಯಾಕ್ ಫಂಗಸ್ ವಕ್ಕರಿಸಿದ್ದು, ಮತ್ತೆ ಆತಂಕಕ್ಕೆ ಕಾರಣವಾಗಿದೆ. ಸೋಂಕಿತ ಮಹಿಳೆಯು ಯಾದಗಿರಿ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ರಾಜ್ಯ ಸರ್ಕಾರ ಬ್ಲ್ಯಾಕ್ ಫಂಗಸ್ ನಿಯಂತ್ರಣ ಮಾಡಲು ಸೋಂಕಿಗೆ ತುತ್ತಾದ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಅಗತ್ಯ ಔಷಧಿಗಳನ್ನು ಪೂರೈಕೆ ಮಾಡಿಲ್ಲ. ಇದರಿಂದ ಫಂಗಸ್ ಗೆ ತುತ್ತಾದವರು ಚಿಕಿತ್ಸೆ ಪಡೆಯಲು ಪರದಾಡುವಂತಾಗಿದೆ‌.

ಯಾದಗಿರಿ ‌ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿ ಮಾಡಿದ್ದರೂ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿವೆ.ಯಾದಗಿರಿ ‌ಜಿಲ್ಲೆಯಲ್ಲಿ ನಿನ್ನೆ 360 ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಲ್ಲಿಯವರೆಗೆ 23,339 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ  6 ಜನ‌ ಕೋವಿಡ್​ನಿಂದ ಮೃತ ಪಟ್ಟಿದ್ದಾರೆ. ಇಲ್ಲಿಯವರೆಗೆ 151 ಜನ ಕೋವಿಡ್ ಗೆ ಬಲಿಯಾಗಿದ್ದಾರೆ. ನಿನ್ನೆ ಕೋವಿಡ್ ನಿಂದ ಗುಣಮುಖರಾದವರ ಸಂಖ್ಯೆ ‌ಕೂಡ ಹೆಚ್ಚಾಗಿದೆ. 668 ಜನ‌ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯಕ್ಕೆ 383 ಕೋವಿಡ್ ಸೋಂಕಿತರು ಆಸ್ಪತ್ರೆ ಹಾಗೂ ‌ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೋನಾ ಲಾಕ್​​ಡೌನ್ ಕಲಿಸಿದ‌ ಕೃಷಿ ಪಾಠ; ಟೆರೇಸ್​​ನಲ್ಲಿ ಮಲ್ಲಿಗೆ ಬೆಳೆದು ಗಮನ ಸೆಳೆದ ಪುತ್ತೂರಿನ ಯುವಕ

ಬ್ಲ್ಯಾಕ್ ಫಂಗಸ್ ನಿಂದ ಆತಂಕ...!

ಯಾದಗಿರಿ ‌ಜಿಲ್ಲೆಯಲ್ಲಿ ಈಗಾಗಲೇ ಒಂದು ಬ್ಲ್ಯಾಕ್ ಫಂಗಸ್  ಪ್ರಕರಣ ಪತ್ತೆಯಾಗಿದೆ ಎಂದು ಖುದ್ದು ಸುರಪುರ ಶಾಸಕ ರಾಜುಗೌಡ ಅವರೇ ಮಾಹಿತಿ ನೀಡಿದ್ದಾರೆ. ಯಾದಗಿರಿಯಲ್ಲಿ ಈಗಾಗಲೇ ಒಬ್ಬರಿಗೆ ಬ್ಲ್ಯಾಕ್ ಫಂಗಸ್ ಕಾಣಸಿಕೊಂಡಿದೆ. ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಲ್ಯಾಕ್ ಫಂಗಸ್ ಗೆ ಅಗತ್ಯ ಚಿಕಿತ್ಸೆ ಪಡೆಯಬೇಕೆಂದರೆ ಯಾದಗಿರಿಯಲ್ಲಿ ಔಷಧಿಗಳನ್ನು ಸರಕಾರ ಪೂರೈಕೆ ಮಾಡಿಲ್ಲ. ಸರಕಾರ ಔಷಧಿಗಳನ್ನು ‌ಪೂರೈಕೆ ಮಾಡಬೇಕೆಂದು ಶಾಸಕ ರಾಜುಗೌಡ ಯಾದಗಿರಿಯಲ್ಲಿ ಆಗ್ರಹಿಸಿದ್ದಾರೆ.

ಖುದ್ದು ಶಾಸಕ ರಾಜುಗೌಡ ಅವರು  ಸಿಎಂ ಬಿ.ಎಸ್. ಯಡಿಯೂರಪ್ಪ,ಆರೋಗ್ಯ ಸಚಿವ ಡಿ.ಸುಧಾಕರ್ ಅವರಿಗೆ ಕೈಮುಗಿದು ಅಗತ್ಯ ಔಷಧಿಗಳನ್ನು ಪೂರೈಕೆ ಮಾಡಿ, ಬಡವರಿಗೆ ಉಚಿತ ಚಿಕಿತ್ಸೆ ಸಿಗುವಂತಹ ಕೆಲಸ ಸರಕಾರ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ. ಸಿಎಂ ಅವರೇ ಆರೋಗ್ಯ ಸಚಿವ ಡಾ.ಸುಧಾಕರ ಅವರೇ ದಯವಿಟ್ಟು ಬ್ಲ್ಯಾಕ್ ಫಂಗಸ್ ಗೆ ಔಷಧಿಗಳನ್ನು ಒದಗಿಸಬೇಕು, ಸರಕಾರ ಮುಂಜಾಗ್ರತೆ ವಹಿಸಿ ಔಷಧಿಗಳನ್ನು ‌ನೀಡಬೇಕು ಇಲ್ಲದಿದ್ದರೆ ಬಹಳ ಕಷ್ಟವಾಗುತ್ತದೆ.ಬಡವರು ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಕಾರಣ ಸರಕಾರ ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ಪಡೆಯಲು ಎಲ್ಲಾ ಜಿಲ್ಲೆಗಳಿಗೆ ಅಗತ್ಯ ಔಷಧಿಗಳನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.

ಖುದ್ದು ಶಾಸಕ ರಾಜುಗೌಡ ಅವರು ಬ್ಲ್ಯಾಕ್ ಫಂಗಸ್ ಬಗ್ಗೆ ಮಾಹಿತಿ ಹೊರ ಹಾಕಿದ್ದಾರೆ. ಆದರೆ, ಜಿಲ್ಲಾಡಳಿತ ಹಾಗೂ ಆರೋಗ್ಯ ‌ಇಲಾಖೆಯು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡುವ ಕೆಲಸ ಮಾಡಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಇನ್ನೂ ಈ ಬಗ್ಗೆ ‌ಮಾಹಿತಿ ಪಡೆಯುವ ಕೆಲಸ ಮಾಡುತ್ತಿದ್ದಾರೆ.ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಪಾಟೀಲ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾದ ಬಗ್ಗೆ ನಮಗೆ ಸದ್ಯ ಯಾವುದೇ ಮಾಹಿತಿ ಬಂದಿಲ್ಲ.ಇದರ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ. ಇದರ ಬಗ್ಗೆ ಮಾಹಿತಿ ‌ಪಡೆದುಕೊಳ್ಳುತ್ತೇವೆ. ಬ್ಲ್ಯಾಕ್ ಫಂಗಸ್​ಗೆ ಚಿಕಿತ್ಸೆ ನೀಡಲು ಔಷಧಿಗಳನ್ನು ಖರೀದಿ ಮಾಡಲು ಈಗಾಗಲೇ ರಾಜ್ಯಕ್ಕೆ ಇಂಡೆಂಟ್ ಕಳುಹಿಸಲಾಗಿದೆ. ಈ ಬಗ್ಗೆ ಸರಕಾರ ಪೂರೈಕೆ ಮಾಡಲಿದೆ ಎಂದರು.
Youtube Video

ಯಾದಗಿರಿ ಜಿಲ್ಲೆಯಲ್ಲಿ ಸದ್ಯಕ್ಕೆ ಶಾಸಕ ರಾಜುಗೌಡ ಅವರು ಹೇಳಿರುವ ಮಾಹಿತಿ ಪ್ರಕಾರ, ಒಂದು ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗಿದೆ. ಮತ್ತೆ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವ ಮುನ್ನ ಸರಕಾರ ಎಚ್ಚೆತ್ತು ಅಗತ್ಯ ಕ್ರಮಕೈಗೊಂಡು ಔಷಧಿಗಳನ್ನು ಪೂರೈಕೆ ಮಾಡಿ ಸೋಂಕಿತ ಜೀವ ಉಳಿಸುವ ಕಾರ್ಯ ಮಾಡಬೇಕಿದೆ.
Published by: Latha CG
First published: May 18, 2021, 4:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories