• Home
  • »
  • News
  • »
  • state
  • »
  • Veer Savarkarಗೆ ಅಪಮಾನ ಮಾಡೋರು ರೌರವ ನರಕಕ್ಕೆ ಹೋಗ್ತಾರೆ: ಬಿ ಎಲ್ ಸಂತೋಷ್

Veer Savarkarಗೆ ಅಪಮಾನ ಮಾಡೋರು ರೌರವ ನರಕಕ್ಕೆ ಹೋಗ್ತಾರೆ: ಬಿ ಎಲ್ ಸಂತೋಷ್

ವೀರ ಸಾವರ್ಕರ್, ಬಿಎಲ್ ಸಂತೋಷ್

ವೀರ ಸಾವರ್ಕರ್, ಬಿಎಲ್ ಸಂತೋಷ್

ನೇತಾಜಿ ಸುಭಾಷ್ ಚಂದ್ರ ಬೋಸ್ ಪುತ್ಥಳಿ ಸ್ಥಾಪಿಸಲು 2014 ಬರಬೇಕಾಯಿತು. ವಾಮಪಂಥೀಯರಿಂದಲೇ ಈ ದೇಶ ಹಾಳಾಗಿದ್ದು. ಭಾರತದಲ್ಲಿರುವಂತಹ ವಾಮಪಂಥೀಯರು, ವಿಚಾರವಾದಿಗಳು ವಿಶ್ವದಲ್ಲಿ ಮತ್ತೆಲ್ಲಿಯೂ ಸಿಗೋಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಸಾವರ್ಕರ್ ಸೇರಿ ಅನೇಕ ಸೇನಾನಿಗಳ ಕೊಡುಗೆ ಇದೆ.

ಮುಂದೆ ಓದಿ ...
  • Share this:

ಹುಬ್ಬಳ್ಳಿ : ವೀರ ಸಾವರ್ಕರ್​​ಗೆ (Veer Savarkar) ಅಪಮಾನ ಮಾಡಿದ್ರೆ ರೌರವ ನರಕಕ್ಕೆ ಹೋಗ್ತೀರಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (National General Secretary BL Santosh) ಎಚ್ಚರಿಕೆ ನೀಡಿದ್ದಾರೆ. ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವರಾಜ್-75 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಗಾಂಧಿ ಒಬ್ಬರೇ ಅಲ್ಲ‌. ದೇಶಕ್ಕೆ ಗಾಂಧಿಜೀ (Mahatma Gandhiji) ಒಬ್ಬರಿಂದಲೇ ಸ್ವಾತಂತ್ರ್ಯ (Freedom) ಬಂದಿದ್ದಲ್ಲ. ದೇಶದ ಮೂಲೆ ಮೂಲೆಗಳಲ್ಲಿ ಸ್ವಾತಂತ್ರ್ಯ ಹೋರಾಟ ರೂಪುಗೊಂಡಿತ್ತು. ಅನೇಕ ಮಹನೀಯರು ತ್ಯಾಗ - ಬಲಿದಾನದಿಂದ ಸ್ವಾತಂತ್ರ್ಯ ಬಂದದ್ದು ಎಂದು ಹೇಳಿದರು. ಆದ್ರೆ ಕೆಲವು ಇತಿಹಾಸಕಾರರು ಸತ್ಯವನ್ನು ಹೇಳಲೇ ಇಲ್ಲ. ಗಾಂಧೀಜಿ ಒಬ್ಬರಿಂದಲೇ ಸ್ವಾತಂತ್ರ್ಯ ಬಂದಿತೆಂಬಂತೆ ಬಿಂಬಿಸಿದರು ಎಂದರು.


.ನಾನು ಗಾಂಧೀಜಿ ಬಗ್ಗೆ ಮಾತನಾಡಿದರೆ ಗೂಬೆ ಕೂರಿಸುವ ಕೆಲಸ ಮಾಡ್ತಾರೆ. ಆದರೆ ಗಾಂಧೀಜಿ ಅವರನ್ನಷ್ಟೇ ಸ್ವಾತಂತ್ರ್ಯ ಸೇನಾನಿ ಅಂತ ಬಿಂಬಿಸೋದ್ರಿಂದ ಉಳಿದವರೆಲ್ಲರಿಗೂ ಮಾಡಿದ ಅಪಮಾನ ಮಾಡಿದಂತೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ರೌರವ ನರಕಕ್ಕೆ ಹೋಗ್ತೀರಾ


ನೇತಾಜಿ ಸುಭಾಷ್ ಚಂದ್ರ ಬೋಸ್ ಪುತ್ಥಳಿ ಸ್ಥಾಪಿಸಲು 2014 ಬರಬೇಕಾಯಿತು. ವಾಮಪಂಥೀಯರಿಂದಲೇ ಈ ದೇಶ ಹಾಳಾಗಿದ್ದು. ಭಾರತದಲ್ಲಿರುವಂತಹ ವಾಮಪಂಥೀಯರು, ವಿಚಾರವಾದಿಗಳು ವಿಶ್ವದಲ್ಲಿ ಮತ್ತೆಲ್ಲಿಯೂ ಸಿಗೋಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಸಾವರ್ಕರ್ ಸೇರಿ ಅನೇಕ ಸೇನಾನಿಗಳ ಕೊಡುಗೆ ಇದೆ.


ವೀರ ಸಾವರ್ಕರ್ ಬಗ್ಗೆ ಟೀಕೆ ಮಾಡೋದನ್ನೇ ಕೆಲವರು ಕಾಯಕ ಮಾಡಿಕೊಂಡಿದ್ದಾರೆ. ಸಾವರ್ಕರ್ ಬಗ್ಗೆ ಟೀಕೆ ಮಾಡಿದ್ರೆ ಏಳೇಳು ಜನ್ಮಕ್ಕೂ ರೌರವ ನರಕಕ್ಕೆ ಹೋಗ್ತೀರಾ ಬಿ.ಎಲ್.ಸಂತೋಶ್ ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಆನಂದ್ ಸಂಕೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.


ಭಾರತ್ ಜೋಡೋದಿಂದ ರಾಹುಲ್, ಸಿದ್ದು ಆರೋಗ್ಯ ಸುಧಾರಿಸುತ್ತೆ


ಭಾರತ್ ಜೋಡೋ ಯಾತ್ರೆಯಿಂದ ಏನೂ ಆಗಲ್ಲ. ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಆರೋಗ್ಯ ಸುಧಾರಿಸಬಹುದು ಅಷ್ಟೆ ಎಂದು ಕೇಂದ್ರ ಗಣಿ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.


ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದೇಶದಲ್ಲಿ ಹೇಳಹೆಸರಿಲ್ಲದೆ ಹೋಗಿದೆ. ನೆಹರೂರಿಂದ ಹಿಡಿದು ರಾಹುಲ್ ಗಾಂಧಿಯವರೆಗೆ  ಪ್ರತಿನಿಧಿಸಿದ್ದ ಉತ್ತರ ಪ್ರದೇಶದಲ್ಲಿ ಈಗ ಸಂಪೂರ್ಣ ನೆಲಕಚ್ಚಿದೆ. ವಿರೋಧ ಪಕ್ಷದಲ್ಲಿ ಕೊಡೋಕೂ ಕಾಂಗ್ರೆಸ್ ಅರ್ಹತೆ ಪಡೆದಿಲ್ಲ.


ಭಾರತ್ ಜೋಡೋ ಯಾತ್ರೆಯಿಂದ ಪ್ರಯೋಜನ ಇಲ್ಲ


ಈಗ ಭಾರತ್ ಜೋಡೋ ಯಾತ್ರೆ ಮಾಡಿದರೆ ಏನು ಪ್ರಯೋಜನ ಆಗಲ್ಲ. ಒಂದು ಕಾಲಕ್ಕೆ ದೇಶದ 25 - 26 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರ್ತಿತ್ತು. ಜನವಿರೋಧಿ ನೀತಿಯಿಂದಾಗಿ ಕಾಂಗ್ರೆಸ್ ತಳ ಕಚ್ಚಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ವ್ಯವಸ್ಥೆ ಬಗ್ಗೆ ನಾವು ಹೆದರುವ ಅವಶ್ಯಕತೆಯಿಲ್ಲ. ಕಾಂಗ್ರೆಸ್ ನಿಷ್ಪ್ರಯೋಜಕ ಅಪ್ರಯೋಜಕ ಅಂತ ಪ್ರೂವ್ ಮಾಡಬೇಕು. ಬಿಜೆಪಿ ಏನು ಜಾಹೀರಾತು ಕೊಟ್ಟಿದೆಯೋ ನನಗೆ ಗೊತ್ತಿಲ್ಲ. ಆದರೆ ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ ಗೆ ಲಾಭ ತಂದುಕೊಡಲ್ಲ ಎಂದು ಜೋಶಿ ಅಭಿಪ್ರಾಯಪಟ್ಟರು.


ಮೀಸಲಾತಿ ಶೇ.50 ರಷ್ಟು ದಾಟಿದ್ರೆ ಕೇಂದ್ರ ನೋಡಿಕೊಳ್ಳುತ್ತೆ


ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾತಿ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇಕಡಾ 50ನ್ನು ಮೀರಿದ್ದು, ಮೀಸಲಾತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರದಿಂದ ಸಹಕಾರ ನೀಡುತ್ತೇವೆ ಎಂದು ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ:  Caravan: ಟ್ರಿಪ್ ಕ್ರೇಜ್ ಇರುವವರಿಗೆ ಒಂದು ಗುಡ್ ನ್ಯೂಸ್, ಇದು ಸಿಎಂ ಬೊಮ್ಮಾಯಿ ಕೊಟ್ಟ ಆಫರ್!


ಕಾನೂನುನಾತ್ಮಕ ತೊಡಕು ಇದ್ದರೆ ಬಗೆಹರಿಸಲಾಗುವುದು. ಮುಖ್ಯಮಂತ್ರಿಗಳು ಮೀಸಲಾತಿ ಕೊಡುತ್ತೇವೆಂದು ಭರವಸೆ ನೀಡಿದ್ದಾರೆ, ಅವರು ಮೀಸಲಾತಿ ನೀಡುತ್ತಾರೆಂದು ನಂಬಿಕೆ ಇದೆ. ಪಂಚಮಸಾಲಿ ಸೇರಿದಂತೆ ಅನೇಕ ಸಮುದಾಯಗಳು ಮೀಸಲಾತಿ ಹೋರಾಟ ಮಾಡುತ್ತಿವೆ. ಈ ಬಗ್ಗೆ ಸಿಎಂ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.


ಹಿಂದುಳಿದದವರ ಕಲ್ಯಾಣ ಮಾಡಲಿಲ್ಲ


ವಿಶ್ವಕ್ಕೆ ಅತ್ಯುತ್ತಮ ಗ್ರಂಥವನ್ನು ಕೊಟ್ಟಿರುವುದು ಮಹಶ್ರೀ ವಾಲ್ಮೀಕಿ. ನೈಜ ಘಟನೆಯನ್ನ ವಾಲ್ಮೀಕಿ ರಾಮಾಯಣದಲ್ಲಿ ಚಿತ್ರಿಸಿದ್ದಾರೆ. ಇದೇ ಸಂಧರ್ಭದಲ್ಲಿ ಮೀಸಲಾತಿ ಹೆಚ್ಚಳ ಮಾಡಿರುವುದು ಐತಿಹಾಸಿಕ ಜಯಂತಿ ಅನ್ನುವಂತಾಗಿದೆ ಕಾಂಗ್ರೆಸ್ ದಲಿತರನ್ನ ವೋಟ್ ಬ್ಯಾಂಕ್‌ಗಳೆಂದು ತಿಳಿದುಕೊಂಡಿತ್ತು ಎಂದು ವಾಗ್ದಾಳಿ ನಡೆಸಿದರು.


ಇದನ್ನೂ ಓದಿ:   Bengaluru Rapido: ಸರ್ಕಾರಕ್ಕೆ ಡೋಂಟ್ ಕೇರ್ ಎಂದ ರಾಪಿಡೋ; ನಾವೇನೂ ತಪ್ ಮಾಡಿಲ್ಲ ಎಂದ ಕಂಪನಿ


ಕಾಂಗ್ರೆಸ್ ಹಿಂದುಳಿದದವರ ಕಲ್ಯಾಣ ಮಾಡಲಿಲ್ಲ. ಇದೇ ಕಾರಣಕ್ಕೆ ದಲಿತರ ಸ್ಥಿತಿ ಹೀನಾಯವಾಗಿದೆ. ಇದೇ ಸಂಧರ್ಭದಲ್ಲಿ ಮೀಸಲಾತಿ ಹೆಚ್ಚಿಸಿ ಮಹತ್ತರ ಕೊಡುಗೆಯನ್ನ ಕೊಡಲಾಗಿದೆ. ಇದಕ್ಕೆ ಕಾರಣವಾದ ಸಿಎಂ, ಸಚಿವರು, ಸ್ವಾಮೀಜಿಗಳಿಗೆ ಅಭಿನಂದನೆ ಸಲ್ಲಿಸುತ್ತೆವೆ. ಬಿಜೆಪಿ ದಿನ ದಲಿತರ ಬಡವರ ಪರ ಪಕ್ಷ ಎಂದು ಸಾಬೀತು ಮಾಡಿದೆ ಎಂದು ಜೋಶಿ ತಿಳಿಸಿದ್ದಾರೆ.

Published by:Mahmadrafik K
First published: