lok sabha elections 2019; ಕಣ್ಣೀರು ಸುರಿಸುವುದರಿಂದ ರಾಜ್ಯ ಉದ್ಧಾರವಾಗಲ್ಲ; ಬಿ.ಎಲ್​. ಸಂತೋಷ್​ ಲೇವಡಿ

ರಾಜ್ಯದಲ್ಲಿ ಮೈತ್ರಿ ಸರಕಾರ ಪ್ರತಿ ಮತಕ್ಕೆ ಎರಡು ಸಾವಿರ ರೂಪಾಯಿ ನೀಡಿ ಮತಗಳನ್ನು ಖರೀದಿಸುವ ಹುನ್ನಾರ ನಡೆಸುತ್ತಿದೆ. ಆದರೆ, ದೇಶದ ಜನ ಮತ್ತೊಮ್ಮೆ ನರೇಂದ್ರ ಮೋದಿಯನ್ನೇ ಪ್ರಧಾನಿಯಾಗಿ ಒಪ್ಕೊಳ್ತಾರೆಯೇ ವಿನಃ ರಾಹುಲ್ ಗಾಂಧಿಯನ್ನಲ್ಲ. ಹೀಗಾಗಿ ಮೈತ್ರಿ ಸರ್ಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಿ ಎಂದು ಬಿ.ಎಲ್​. ಸಂತೋಷ್ ಆಗ್ರಹಿಸಿದ್ದಾರೆ.

MAshok Kumar | news18
Updated:April 20, 2019, 10:02 AM IST
lok sabha elections 2019; ಕಣ್ಣೀರು ಸುರಿಸುವುದರಿಂದ ರಾಜ್ಯ ಉದ್ಧಾರವಾಗಲ್ಲ; ಬಿ.ಎಲ್​. ಸಂತೋಷ್​ ಲೇವಡಿ
ಬಿ.ಎಲ್​. ಸಂತೋಷ್.
MAshok Kumar | news18
Updated: April 20, 2019, 10:02 AM IST
ಕೊಪ್ಪಳ (ಏ.20): ರಾಜ್ಯದಲ್ಲಿ ಅಪ್ಪ ಮಕ್ಕಳು ಒಟ್ಟಾಗಿ ಕಣ್ಣೀರು ಸುರಿಸುವುದರಿಂದ ರಾಜ್ಯ ಉದ್ದಾರವಾಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜೆಡಿಎಸ್ ಕುಟುಂಬ ರಾಜಕಾರಣವನ್ನು ಲೇವಡಿ ಮಾಡಿದ್ದಾರೆ.

ಕೊಪ್ಪಳದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಅವರ ಪರವಾಗಿ ಇಂದಿನ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಇಡೀ ಜೆಡಿಎಸ್ ಕುಟುಂಬ ಹೋದಲ್ಲಿ ಬಂದಲ್ಲೆಲ್ಲ ಕಣ್ಣೀರು ಹಾಕುತ್ತಿದೆ. ಆದರೆ, ಇವರು ಕಣ್ಣೀರು ಹಾಕುವುದರಿಂದ ರಾಜ್ಯದ ಅಭಿವೃದ್ಧಿಯಾಗಲ್ಲ”  ಎಂದು ನೇರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಇನ್ನೆರಡು ತಿಂಗಳಲ್ಲಿ ಬಿಜೆಪಿ ಅಧಿಕಾರಕ್ಕೆ; ಆರ್​ಎಸ್​ಎಸ್​ ಸಹ ಸಂಚಾಲಕ ಸಂತೋಷ್

“ರಾಜ್ಯದಲ್ಲಿ ಮೈತ್ರಿ ಸರಕಾರ ಪ್ರತಿ ಮತಕ್ಕೆ ಎರಡು ಸಾವಿರ ರೂಪಾಯಿ ನೀಡಿ ಮತಗಳನ್ನು ಖರೀದಿಸುವ ಹುನ್ನಾರ ನಡೆಸುತ್ತಿದೆ. ಆದರೆ, ದೇಶದ ಜನ ಮತ್ತೊಮ್ಮೆ ನರೇಂದ್ರ ಮೋದಿಯನ್ನೇ ಪ್ರಧಾನಿಯಾಗಿ ಒಪ್ಕೊಳ್ತಾರೆಯೇ ವಿನಃ ರಾಹುಲ್ ಗಾಂಧಿಯನ್ನಲ್ಲ. ಹೀಗಾಗಿ ಮೈತ್ರಿ ಸರ್ಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಿ” ಎಂದು ಆಗ್ರಹಿಸಿದ್ದಾರೆ.

ಅಲ್ಲದೆ ಈ ಚುನಾವಣೆಯಲ್ಲಿ ಕೊಪ್ಪಳದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಕನಿಷ್ಟ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 
First published:April 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ