ಪುದುಚೇರಿಯಲ್ಲಿ ಆಪರೇಷನ್​ ಕಮಲ?; ಕಾಂಗ್ರೆಸ್​ ಸರ್ಕಾರ ಬೀಳಿಸಲು ಕರ್ನಾಟಕ ನಾಯಕನ ಮಾಸ್ಟರ್​ ಪ್ಲ್ಯಾನ್​!​

ಅಚ್ಚರಿ ಎಂದರೆ ಪುದುಚೇರಿಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನು ಗೆದ್ದಿಲ್ಲ. ಆದಾಗ್ಯೂ ಸರ್ಕಾರ ರಚನೆ ಮಾಡಲು ಬಿಎಲ್​ ಸಂತೋಷ್ ಕಳೆದ ಆರು ತಿಂಗಳಿಂದ ವರ್ಕೌಟ್​ ಮಾಡುತ್ತಿದ್ದಾರೆ.

Rajesh Duggumane | news18-kannada
Updated:September 11, 2019, 10:31 PM IST
ಪುದುಚೇರಿಯಲ್ಲಿ ಆಪರೇಷನ್​ ಕಮಲ?; ಕಾಂಗ್ರೆಸ್​ ಸರ್ಕಾರ ಬೀಳಿಸಲು ಕರ್ನಾಟಕ ನಾಯಕನ ಮಾಸ್ಟರ್​ ಪ್ಲ್ಯಾನ್​!​
ಬಿ.ಎಲ್​​ ಸಂತೋಷ್​​
  • Share this:
ಬೆಂಗಳೂರು (ಸೆ.11): ಕರ್ನಾಟಕದಲ್ಲಿ ಸರ್ಕಾರ ರಚಿಸಲು ಯಶಸ್ವಿಯಾದ ಬಿಜೆಪಿ ಈಗ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಮೇಲೆ ಕಣ್ಣಿಟ್ಟಿದೆ. ಇಲ್ಲಿ ಒಂದೇ ಒಂದು ಸ್ಥಾನ ಗೆಲ್ಲದೆ ಇದ್ದರೂ, ಬಿಜೆಪಿ ಸರ್ಕಾರ ರಚನೆ ಮಾಡಲು ಮುಂದಾಗಿರುವುದು ವಿಚಿತ್ರ! ಈ ಮೂಲಕ ದಕ್ಷಿಣ ಭಾರತದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಂಗ್ರೆಸ್​​ನ ಪ್ರಾಬಲ್ಯ ಹೊಂದಿರುವ ಕೊನೆಯ ಪ್ರದೇಶವನ್ನು ತನ್ನ ತೆಕ್ಕೆಗೆ ಪಡೆಯಲು ಬಿಜೆಪಿ ಯೋಜನೆ ಹಾಕಿದೆ. ಈ ಬಾರಿ ಆಪರೇಷನ್​ ಕಮಲದ ಚುಕ್ಕಾಣಿ ಹಿಡಿದಿರುವುದು ಬಿಜೆಪಿ ನಾಯಕ ಬಿಎಲ್​ ಸಂತೋಷ್!

ಹೌದು, ಹೀಗೊಂದು ಪ್ರಯತ್ನಕ್ಕೆ ಕರ್ನಾಟಕದ ನಾಯಕ ಬಿಎಲ್​ ಸಂತೋಷ್ ಮುಂದಾಗಿದ್ದಾರೆ. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಅವರು ಹೊರಟಿದ್ದಾರೆ. ಅಚ್ಚರಿ ಎಂದರೆ ಪುದುಚೇರಿಯಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನು ಗೆದ್ದಿಲ್ಲ. ಆದಾಗ್ಯೂ ಸರ್ಕಾರ ರಚನೆ ಮಾಡಲು ಬಿಎಲ್​ ಸಂತೋಷ್ ಕಳೆದ ಆರು ತಿಂಗಳಿಂದ ವರ್ಕೌಟ್​ ಮಾಡುತ್ತಿದ್ದಾರೆ.

ಪುದುಚೆರಿ 30 ಸದಸ್ಯರ ಬಲಾಬಲ ಹೊಂದಿರುವ ವಿಧಾನಸಭೆ. ಇಲ್ಲಿ ಕಾಂಗ್ರೆಸ್​-ಡಿಎಂಕೆ ಸಮ್ಮಿಶ್ರ ಸರ್ಕಾರವಿದ್ದು, ವಿ. ನಾರಾಯಣಸ್ವಾಮಿ ಮುಖ್ಯಮಂತ್ರಿ. ಒಂದು ಕ್ಷೇತ್ರ ಖಾಲಿ ಉಳಿದಿರುವುದರಿಂದ ಸರ್ಕಾರ ರಚನೆಗೆ 15 ಶಾಸಕರ ಬೆಂಬಲ ಬೇಕು. ಕಾಂಗ್ರೆಸ್ 14 ಶಾಸಕರು ಹಾಗೂ ಡಿಎಂಕೆ 3 ಶಾಸಕರಿದ್ದಾರೆ. ಇನ್ನು ಮೂರು ಶಾಸಕರು ಬಿಜೆಪಿಯಿಂದ ನಾಮ ನಿರ್ದೇಶನಗೊಂಡಿದ್ದು, ಅವರಿಗೆ ಮತದಾನದ ಹಕ್ಕಿಲ್ಲ. ವಿಪಕ್ಷ ಸ್ಥಾನದಲ್ಲಿರುವ ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್(AINRC) 7 ಶಾಸಕರನ್ನು ಹೊಂದಿದೆ. . ಇದು ಪದುಚೇರಿಯ ವಿಧಾನಸಭೆಯ ಚಿತ್ರಣ.

ಇದನ್ನೂ ಓದಿ: ಆರ್ಥಿಕ ಹಿಂಜರಿತದ ನಡುವೆಯೂ ನಮ್ಮ ರಾಜ್ಯ ಸುಸ್ಥಿತಿಯಲ್ಲಿದೆ; ಇಲಾಖಾವಾರು ತೆರಿಗೆ ಸಂಗ್ರಹ ಮಾಹಿತಿ ಹಂಚಿಕೊಂಡ ಸಿಎಂ

ಆಪರೇಷನ್​ ಕಮಲ ಹೇಗೆ?:

ಬಿ.ಎಲ್ ಸಂತೋಷ್ ನೇರವಾಗಿ ಕಾಂಗ್ರೆಸ್ ಬುಟ್ಟಿಗೆ ಕೈ ಹಾಕಿದ್ದಾರೆ. ಕಾಂಗ್ರೆಸ್​ಗೆ ಬೆಂಬಲ ನೀಡಿರುವ ಡಿಎಂಕೆ ಶಾಸಕರ ಸಂಪರ್ಕ ಸಾಧಿಸಿದ್ದಾರೆ. ಕಾಂಗ್ರೆಸ್​ನ 7 ಕ್ಕೂ ಹೆಚ್ಚು ಶಾಸಕರ ಜೊತೆ ರಹಸ್ಯವಾಗಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಬಿ.ಎಲ್ ಸಂತೋಷ್ ಟೂ ಥರ್ಡ್ ಶಾಸಕರನ್ನು ಸೆಳೆಯೋಕೆ ಯೋಜನೆ ಹಾಕಿರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಅಡ್ಡಿಯಾಗುವುದಿಲ್ಲ. ಇನ್ನು ಆಲ್ ಇಂಡಿಯಾ ಎನ್ಆರ್ ಕಾಂಗ್ರೆಸ್​ನ ಅಷ್ಟೂ ಶಾಸಕರು  ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ರಚನೆಯ ಕನಸು ಕಾಣುತ್ತಿದೆ.

ಸಿಎಂಗೆ ಟೆನ್ಶನ್​:ಪುದುಚೇರಿ ಸಿಎಂ ನಾರಾಯಣಸ್ವಾಮಿಗೆ ಟೆನ್ಸನ್​ ಆರಂಭವಾಗಿದೆ ಎನ್ನಲಾಗಿದೆ. ಒಂದು ಹಂತದಲ್ಲಿ ಸಿಎಂ ನಾರಾಯನಸ್ವಾಮಿಯೇ ಬಿ.ಎಲ್ ಸಂತೋಷ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆಪರೇಷನ್ ಕಮಲದ ಸುಳಿವು ಸಿಕ್ಕ ಶಾಸಕರ ಮನವೊಲಿಕೆಗೆ ನಾರಾಯಣಸ್ವಾಮಿ ಪ್ರಯತ್ನಿಸುತ್ತಿದ್ದಾರೆ. ಆದರೆ ಪರಿಸ್ಥಿತಿ ಕೈ ಮೀರಿದ್ದು, ಯಾವುದೇ ಘಳಿಗೆಯಲ್ಲೂ ಪುದುಚೇರಿ ಸರ್ಕಾರ ಪತವಾಗಬಹುದು.

ಸಿಎಂ ನಿಂದಲೇ ಬೇಹುಗಾರಿಕೆ!:

ಇನ್ನು ಬಿ.ಎಲ್ ಸಂತೋಷ್ ಹಿಂದೆ ಪುದುಚೇರಿ ಸಿಎಂ ಬೇಹುಗಾರಿಕೆ ಮಾಡಿಸುತ್ತಿದ್ದಾರಂತೆ! ಸಂತೋಷ್ ಸಂಪರ್ಕದಲ್ಲಿ ಯಾವೆಲ್ಲ ಶಾಸಕರಿದ್ದಾರೆಂದು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ನಾರಾಯಣಸ್ವಾಮಿ ಅವರು ದಿನವಿಡೀ ಗುಪ್ತಚರ ಇಲಾಖೆಯ ಮುಖ್ಯಸ್ಥರೊಂದಿಗೆ ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ. ಸಂತೋಷ್​ ಮೇಲೆ ಬೇಹುಗಾರಿಕೆ ನಡೆಸಲು ಒಂದು ತಂಡ ಬೆಂಗಳೂರಿನಲ್ಲಿ ಮತ್ತೊಂದು ತಂಡ ದೆಹಲಿಯಲ್ಲಿ ಕೆಲಸ ಮಾಡುತ್ತಿದೆ ಎನ್ನಲಾಗಿದೆ.

ಪಕ್ಷವನ್ನೇ ಬದಲಿಸಿದ್ದಾರೆ ಸಿಎಂ?:

ಕುರ್ಚಿ ಕಳೆದುಕೊಳ್ಳುವ ಬದಲು ನೀವೇ ಶಾಸಕರ ಜೊತೆ ಬಿಜೆಪಿಗೆ ಹೋಗಿ ಎಂದು ಸಿಎಂ ನಾರಾಯಣಸ್ವಾಮಿಗೆ ಆಪ್ತರೊಬ್ಬರು ಸಲಹೆ ನೀಡಿದ್ದಾರಂತೆ! ಹೀಗಾಗಿ ಏನು ಮಾಡಬೇಕು ಎನ್ನುವ ಗೊಂದಲ ಅವರನ್ನು ಕಾಡುತ್ತಿದೆ.

ಬಿಜೆಪಿ ತೆಕ್ಕೆಗೆ ಪುದುಚೇರಿ?:

ದಕ್ಷಿಣ ಭಾರತದಲ್ಲಿ ಕೈ ಆಡಳಿತದ ಅತಿದೊಡ್ಡ ರಾಜ್ಯ ಕರ್ನಾಟಕವೂ ಕಮಲದ ವಶವಾಗಿದೆ. ಈಗ ಕಾಂಗ್ರೆಸ್​ ಕೊನೆಯದಾಗಿ ಆಡಳಿತದಲ್ಲಿರುವ ಪುದುಚೇರಿ ಸರ್ಕಾರವೂ ಕಮಲದ ವಶವಾಗುವುದು ನಿಶ್ಚಿತ ಎನ್ನುತ್ತಿವೆ ಮೂಲಗಳು. ಸಂತೋಷ್ ಅವರ ಸ್ಟ್ರೋಕ್​ಗೆ ಕೈ ಅಧಿನಾಯಕಿ ಸೋನಿಯಾ ಗಾಂಧಿಯೇ ಬೆಚ್ಚಿ ಬೀಳುವುದು ಖಚಿತ ಎನ್ನಲಾಗಿದೆ.

(ವಿಶೇಷ ವರದಿ: ಚಿದಾನಂದ ಪಟೇಲ್​)

First published: September 11, 2019, 10:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading