HOME » NEWS » State » BL SANTHOSH AND ARUN KUMAR MEET BS YEDIYURAPPA TO DISCUSS STATE POLITICAL AFFAIR SNVS

ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ ಬಿ.ಎಲ್. ಸಂತೋಷ್ ಮತ್ತು ಅರುಣ್ ಕುಮಾರ್

ಇಂದು ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವ ಸಂತೋಷ್ ಮತ್ತು ಅರುಣ್ ಕುಮಾರ್ ಇಬ್ಬರೂ ರಾಜ್ಯ ರಾಜಕಾರಣ ಬಗ್ಗೆ ಮುಕ್ಕಾಲು ಗಂಟೆ ಚರ್ಚೆ ಮಾಡಿದರು. ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಪ್ರಕ್ರಿಯೆ ನಡೆಯುತ್ತಿರುವುದರಿಂದ ಈ ಭೇಟಿ ಬಹಳ ಮಹತ್ವ ಪಡೆದಿದೆ.

news18
Updated:August 22, 2020, 11:40 AM IST
ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ ಬಿ.ಎಲ್. ಸಂತೋಷ್ ಮತ್ತು ಅರುಣ್ ಕುಮಾರ್
ಯಡಿಯೂರಪ್ಪನವರ ನಿವಾಸದಲ್ಲಿ ಬಿಎಸ್ ಸಂತೋಷ್ ಮತ್ತು ಅರುಣ್ ಕುಮಾರ್
  • News18
  • Last Updated: August 22, 2020, 11:40 AM IST
  • Share this:
ಬೆಂಗಳೂರು(ಆಗಸ್ಟ್ 22): ನಿನ್ನೆಯಿಂದ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಹೆಚ್ಚು ಮಾಡಿರುವ ಬಿಎಲ್ ಸಂತೋಷ್ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಿಎಂ ಅವರ ಕಾವೇರಿ ನಿವಾಸಕ್ಕೆ ಸಂತೋಷ್ ಭೇಟಿ ನೀಡಿದರು. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಜೊತೆ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಯೂ ಇದ್ದರು. ಇಬ್ಬರೂ ಮುಖ್ಯಮಂತ್ರಿಗಳ ಆರೋಗ್ಯ ವಿಚಾರಿಸಿ ಗಣೇಶ ಹಬ್ಬಕ್ಕೆ ಶುಭಾಶಯ ತಿಳಿಸಿದರು.

ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಬಿ.ಎಲ್. ಸಂತೋಷ್ ಅವರು ನಿನ್ನೆಯಷ್ಟೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರನ್ನು ಕರೆಸಿ ಚರ್ಚೆ ನಡೆಸಿದ್ದರು. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ಬಗ್ಗೆ ಗೃಹ ಸಚಿವರಿಂದ ಸಂತೋಷ್ ಮಾಹಿತಿ ಕಲೆ ಹಾಕಿದ್ದರು. ಇನ್ನು, ಡಾ. ಸುಧಾಕರ್ ಬಳಿ ಕೊರೋನಾ ಪರಿಸ್ಥಿತಿ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಸಂತೋಷ್ ಚರ್ಚೆ ನಡೆಸಿದ್ದರೆನ್ನಲಾಗಿದೆ.

ಇದನ್ನೂ ಓದಿ: ಸಂಘ ಪರಿವಾರ ಜಾತಿವಾದಿಯೂ ಅಲ್ಲ, ದೇಶದ್ರೋಹಿಯೂ ಅಲ್ಲ; ಸಿದ್ದರಾಮಯ್ಯ ಆರೋಪಕ್ಕೆ ಸಿ.ಟಿ. ರವಿ ಆಕ್ರೋಶ

ಇಂದು ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವ ಸಂತೋಷ್ ಮತ್ತು ಅರುಣ್ ಕುಮಾರ್ ಇಬ್ಬರೂ ರಾಜ್ಯ ರಾಜಕಾರಣ ಬಗ್ಗೆ ಮುಕ್ಕಾಲು ಗಂಟೆ ಚರ್ಚೆ ಮಾಡಿದರು.


ಬಿಎಲ್ ಸಂತೋಷ್ ಮತ್ತು ಅರುಣ್ ಕುಮಾರ್ ಅವರು ತಮ್ಮ ಮನೆಗೆ ಬಂದ ವಿಚಾರವನ್ನು ಸಿಎಂ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆ ಕುರಿತಂತೆ ಮಾತುಕತೆ ನಡೆಯಿತು ಎಂದು ಸಿಎಂ ತಿಳಿಸಿದ್ದಾರೆ.

ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಪ್ರಕ್ರಿಯೆ ನಡೆಯುತ್ತಿರುವುದರಿಂದ ಈ ಭೇಟಿ ಬಹಳ ಮಹತ್ವ ಪಡೆದಿದೆ.
Published by: Vijayasarthy SN
First published: August 22, 2020, 11:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories