ಬಿಜೆಪಿಯವರು ಕಾರ್ಯಕ್ರಮಗಳಲ್ಲಿ ಗುಂಡು ಹಾರಿಸುತ್ತಿರುವುದು ತಾಲಿಬಾನ್ ಸಂಸ್ಕೃತಿಯನ್ನು ತೋರಿಸುತ್ತೆ: ಬಿ.ಕೆ.ಹರಿಪ್ರಸಾದ್

ಯಾದಗಿರಿಯಲ್ಲಿ  ಕೇಂದ್ರ ಸಚಿವ ಭಗವಂತ ಖೂಬಾ ಅವರ ನೇತೃತ್ವದಲ್ಲಿ ನಡೆದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಗುಂಡು ಹಾರಿಸಿದ್ದನ್ನು  ಬಿ ಕೆ ಹರಿಪ್ರಸಾದ್ ಅವರು ಕಟುವಾಗಿ ಟೀಕಿಸಿದರು.

ಕಾರ್ಯಕ್ರಮದಲ್ಲಿ ಬಿ.ಕೆ.ಹರಿಪ್ರಸಾದ್

ಕಾರ್ಯಕ್ರಮದಲ್ಲಿ ಬಿ.ಕೆ.ಹರಿಪ್ರಸಾದ್

  • Share this:
ಕೊಡಗು : ಸಮಾವೇಶ, ಸಮಾರಂಭಗಳಲ್ಲಿ ಬಿಜೆಪಿಯವರು ಗುಂಡು ಹಾರಿಸುವ ಮೂಲಕ ತಾಲಿಬಾನ್ ಸಂಸ್ಕ್ರತಿಯನ್ನು ತೋರಿಸುತಿದ್ದಾರೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಎಂಎಲ್​​ಸಿ ಬಿ.ಕೆ.ಹರಿಪ್ರಸಾದ್ ಅವರು ಇಲ್ಲಿನ ಮೂರ್ನಾಡಿನಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಕೊಡವ ನ್ಯಾಷನಲ್ ಕೌನ್ಸಿಲ್ ನಿಂದ ನಡೆದ ಕೊಡವ ಹಕ್ಕೊತ್ತಾಯ ಕಾರ್ಯಕ್ರಮದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಯಾದಗಿರಿಯಲ್ಲಿ  ಕೇಂದ್ರ ಸಚಿವ ಭಗವಂತ ಖೂಬಾ ಅವರ ನೇತೃತ್ವದಲ್ಲಿ ನಡೆದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಗುಂಡು ಹಾರಿಸಿದ್ದನ್ನು  ಬಿ ಕೆ ಹರಿಪ್ರಸಾದ್ ಅವರು ಕಟುವಾಗಿ ಟೀಕಿಸಿದರು.

ಬಿಜೆಪಿಯವರು ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿನ ಸಂಸ್ಕ್ರತಿಯನ್ನು ಕರ್ನಾಟಕದಲ್ಲಿ ಜಾರಿ ಮಾಡುತ್ತಿದ್ದಾರೆ. ಇದು ನಿಜವಾಗಿಯೂ ಕರ್ನಾಟಕದ ಜನರು ನಾಚಿಕೆಪಡುವಂತೆ ಮತ್ತು ತಲೆ ತಗ್ಗಿಸುವಂತೆ ಮಾಡಿದೆ ಎಂದರು. ಇನ್ನು ಕೋವಿಡ್ ನಿಯಂತ್ರಿಸುವುದಕ್ಕಾಗಿ ಲಾಕ್ಡೌನ್ ಜಾರಿಗೆ ತರುತ್ತಿದ್ದಾರೆ. ಆದರೆ ಎಲ್ಲಿ, ಯಾವ ರೀತಿಯ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕಾಗಿತ್ತೋ ಅವುಗಳನ್ನು ಜಾರಿಗೆ ತರುತ್ತಿಲ್ಲ. ಮನಸ್ಸೋ ಇಚ್ಛೆ ನಿಯಮಗಳನ್ನು ಜಾರಿಗೆ ತಂದು ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದಾರೆ. ಆದರೆ ನಿಯಮಗಳನ್ನು ಜಾರಿಗೆ ತರುವ ಬಿಜೆಪಿಯವರೆ ಆ ನಿಯಮಗಳನ್ನು ಪಾಲಿಸದೇ ಗಾಳಿಗೆ ತೂರುತಿದ್ದಾರೆ. ರೂಲ್ಸ್ ಫಾರ್ ಫೂಲ್ಸ್ ಎನ್ನುವಂತೆ ಮಾಡಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಯಾವುದೇ ನಿಯಮಗಳನ್ನು ಜಾರಿಗೆ ತಂದರು ಅದು ಬಿಜೆಪಿಯವರಿಗೆ ವಿನಾಯ್ತಿ ಎನ್ನುವಂತಾಗಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ದಬ್ಬಾಳಿಕೆ ಸ್ವಲ್ಪ ಸಮಯವಷ್ಟೇ, ಜಾಸ್ತಿ ದಿನ ನಡೆಯಲ್ಲ: ಪ್ರಧಾನಿ ಮೋದಿ

ನಾವು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡಿದಾಗ ನಮ್ಮನ್ನೆಲ್ಲಾ ಅರೆಸ್ಟ್ ಮಾಡಿ ಹೆಬ್ಬೆಟ್ಟು ಹಚ್ಚನ್ನು ತೆಗೆದುಕೊಂಡರು. ಜೀವನದಲ್ಲೇ ಎಲ್ಲೂ ಹೆಬ್ಬೆಟ್ಟು ನೀಡಿರಲಿಲ್ಲ ಎಂದರು. ಅದೇ ಬಿಜೆಪಿಯ ನಾಲ್ಕು ಸಚಿವರು ಬಂದರೆ ಸಾವಿರಾರು ಜನರನ್ನು ಸೇರಿಸಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಅಂದರೆ ಬೆಜೆಪಿಯವರಿಗೆ ಕೊವಿಡ್ ನಿಯಮಗಳಿಂದ ವಿನಾಯ್ತಿನಾ ಎಂದು ಪ್ರಶ್ನಿಸಿದರು. ಇಂತಹ ಅವೈಜ್ಞಾನಿಕ ಕೋವಿಡ್ ನಿಯಮಗಳನ್ನು ಯಾಕಾದರೂ ಜಾರಿ ಮಾಡುತ್ತಿದ್ದಾರೆ. ಕೇವಲ ಮೋದಿಯವರ ಫೋಟೋ ಹಾಕಿ ಧನ್ಯವಾದ ಹೇಳಿದರೆ ಆಗುವುದಿಲ್ಲ ಎಂದರು.

ಇದಕ್ಕೂ ಮೊದಲು ನಡೆದ ನಡೆದ ಕೊಡವ ಹಕ್ಕೊತ್ತಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ. ಕೆ ಹರಿಪ್ರಸಾದ್ ಕೊಡವರು ವಿಶೇಷ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಹೊಂದಿರುವವರು. ಮತ್ತು ಭಾಷಾ ಅಲ್ಪಸಂಖ್ಯಾತರೂ ಹೌದು. ಹೀಗಾಗಿ ಹೈದರಾಬಾದ್ ಕರ್ನಾಟಕದ ಜನರಿಗೆ ಸಂವಿಧಾನದ 370 ಜೆ ಅಡಿಯಲ್ಲಿ ವಿಶೇಷ ಸ್ಥಾನ ಮಾನ ನೀಡಿರುವಂತೆ ಕೊಡವರಿಗೂ ಕಲಂ 370 ಕೆ ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು. ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್ ಯು ನಾಚಪ್ಪ ಮಾತನಾಡಿ ಹಲವು ವರ್ಷಗಳಿಂದ ಕೊಡವರನ್ನು ಎಸ್ಟಿ ಸಮುದಾಯಕ್ಕೆ ಸೇರಿಸುವಂತೆ ಹೋರಾಟ ಮಾಡಲಾಗುತ್ತಿದೆ. ಆದರೆ ಅದು ಇಂದಿಗೂ ಸಾಧ್ಯವಾಗಿಲ್ಲ. ಜೊತೆಗೆ ಕೊಡವರ ಕೋವಿಯ ಹಕ್ಕು ಯಾವುದೇ ನಿಬಂಧನೆಗಳಿಲ್ಲದೆ ಮುಂದುವರೆಸಬೇಕು ಎಂದು ಒತ್ತಾಯಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: