ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ್ದು ರಾಜ್ಯದ ಇತಿಹಾಸದಲ್ಲೇ ಕಪ್ಪುಚುಕ್ಕೆ ; ಹೊರಟ್ಟಿ

ಬಿಜೆಪಿಯ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಸವರಾಜ ಹೊರಟ್ಟಿ, ಬಿಜೆಪಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಬಾರದಿತ್ತು

G Hareeshkumar | news18
Updated:February 6, 2019, 4:24 PM IST
ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ್ದು ರಾಜ್ಯದ ಇತಿಹಾಸದಲ್ಲೇ ಕಪ್ಪುಚುಕ್ಕೆ ; ಹೊರಟ್ಟಿ
ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ
  • News18
  • Last Updated: February 6, 2019, 4:24 PM IST
  • Share this:
- ಶ್ರೀನಿವಾಸ ಹಳಕಟ್ಟಿ

ಬೆಂಗಳೂರು ( ಫೆ.06) :  ರಾಜ್ಯಪಾಲರ ಭಾಷಣಕ್ಕೆ ಅಡ್ಡ ಪಡಿಸಿದ ಬಿಜೆಪಿಯ ನಡೆ ರಾಜ್ಯ ರಾಜಕೀಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಬಜೆಟ್ ಅಧಿವೇಶನ ಪ್ರಾರಾಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು, ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ. ಬಹುಮತವಿಲ್ಲದ ಸರ್ಕಾರ ಬಜೆಟ್ ಮಂಡಿಸಲು ಮುಂದಾಗಿದೆ. ಬಜೆಟ್ ಮಂಡಿಸುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ ಎಂದು ಘೋಷಣೆ ಕೂಗಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ :  ಮಾತಿಗೆ ತಪ್ಪಿದ ಬಿಎಸ್​ವೈ; ಬಿಜೆಪಿ ಶಾಸಕರ ಗಲಾಟೆ, ಐದೇ ನಿಮಿಷದಲ್ಲಿ ಜಂಟಿ ಅಧಿವೇಶನದ ಭಾಷಣ ಮುಗಿಸಿದ ರಾಜ್ಯಪಾಲರು

ಹೀಗಾಗಿ ರಾಜ್ಯಪಾಲರು ಭಾಷಣ ಮೊಟಕುಗೊಳಿಸಿ ನಿರ್ಗಮಿಸಿದರು. ಬಿಜೆಪಿಯ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಸವರಾಜ ಹೊರಟ್ಟಿ, ಬಿಜೆಪಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಬಾರದಿತ್ತು ಎಂದರು

ಹಲವು ಶಾಸಕರು ಅಧಿವೇಶನಕ್ಕೆ ಗೈರು

ಅಧಿವೇಶನ ಆರಂಭದಿಂದ ಅಧಿವೇಶನ ಅಂತ್ಯವಾಗುವವರೆಗೂ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಕೆಪಿಸಿಸಿಯ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಅವರು ಕಾಂಗ್ರೆಸ್‌ನ ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ.ಶಾಸಕರಾದ  ಉಮೇಶ್ ಜಾಧವ್,  ನಾರಾಯಣ ಗೌಡ, ಬಸವರಾಜ ದದ್ದಲ್, ಬಿ ನಾಗೇಂದ್ರ , ಬಿ.ಸಿ. ಪಾಟೀಲ್,  ನಾಗೇಶ್ , ಆರ್. ಶಂಕರ್,  ಜೆ ಎನ್​ ಗಣೇಶ್,  ಮಹೇಶ್ ಕುಮಟಳ್ಳಿ, ಪ್ರತಾಪಗೌಡ, ಸೌಮ್ಯಾ ರೆಡ್ಡಿ  ಹಾಗೆಯೇ ಬಿಜೆಪಿ ಶಾಸಕರಾದ ಅಶ್ವಥ್ ನಾರಾಯಣ್, ಬಾಲಚಂದ್ರ ಜಾರಕಿಹೊಳಿ ಅಧಿವೇಶನಕ್ಕೆ ಗೈರಾಗಿದ್ದಾರೆ.

ರಾಜ್ಯಪಾಲರ ಬೇಸರ

ಸದನದಲ್ಲಿ ಏಕಾಏಕಿ ಜಂಟಿ ಅಧಿವೇಶನದ ಭಾಷಣಕ್ಕೆ ಅಡ್ಡಿಪಡಿಸಿದ ಬಿಜೆಪಿ ನಾಯಕರ ನಡೆಗೆ ರಾಜ್ಯಪಾಲರು ಬೇಸರ ವ್ಯಕ್ತಪಡಿಸಿದರು. ಬಿಜೆಪಿ ನಾಯಕರ ಗದ್ದಲದಿಂದ ಭಾಷಣ ಮೊಟುಕುಗೊಳಿಸಿದ ಅವರನ್ನು ಸ್ಪೀಕರ್​, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಬಿಳ್ಕೋಡಲು ಬಂದರು ಈ ವೇಳೆ ಅವರ ಮುಂದೆ ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

 ಇದನ್ನೂ ಓದಿ: ರಾಜ್ಯ ಬಜೆಟ್​ಗೆ 2 ದಿನ ಬಾಕಿ; ಆಪರೇಷನ್ ಟೆನ್ಷನ್ ನಡುವೆ ಇಂದಿನಿಂದ ಅಧಿವೇಶನ

First published:February 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading