Narendra Modi Birthday: ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಮೋದಿ ಹುಟ್ಟುಹಬ್ಬ ಆಚರಣೆ; ರಕ್ತದಾನ ಶಿಬಿರ ಆಯೋಜನೆ

ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ, ಆರೋಗ್ಯ ಇಲಾಖೆ ಹಾಗೂ ರೆಡ್ ಕ್ರಾಸ್ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಹಲವು ಯುವಕ, ಯುವತಿಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ್ರು.

ವೃದ್ಧಾಶ್ರಮದಲ್ಲಿ ಮೋದಿ ಹುಟ್ಟುಹಬ್ಬ ಆಚರಣೆ

ವೃದ್ಧಾಶ್ರಮದಲ್ಲಿ ಮೋದಿ ಹುಟ್ಟುಹಬ್ಬ ಆಚರಣೆ

  • Share this:
ಕೊಡಗು (ಸೆ.17): ಇಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ 72 ನೇ ಹುಟ್ಟು ಹಬ್ಬದ (Birthday) ಹಿನ್ನೆಲೆ ಕೊಡಗು ಜಿಲ್ಲೆಯ ಬಿಜೆಪಿಯಲ್ಲಿ ಹಬ್ಬದ ವಾತಾವರಣ (Festive Atmosphere) ಮನೆ ಮಾಡಿದೆ. ಒಂದೆಡೆ ಬಿಜೆಪಿ ಕಾರ್ಯಕರ್ತರು ರಕ್ತದಾನ ಶಿಬಿರ (Blood Donation Camp) ಮಾಡಿದರೆ, ಮತ್ತೊಂದೆಡೆ ವೃದ್ಧಾಶ್ರಮಗಳಲ್ಲಿ ಅನ್ನದಾನ ಮಾಡಲಾಗಿದೆ. ಮಡಿಕೇರಿ ನಗರದ ಶಕ್ತಿ ವೃದ್ಧಾಶ್ರಮದಲ್ಲಿ ಬಿಜೆಪಿ ಎಸ್ಸಿ ಮೋರ್ಚಾದಿಂದ ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಆಚರಿಸಲಾಯಿತು.

ವೃದ್ದಾರಿಂದ ಕೇಕ್ ಕತ್ತರಿಸಿ ಸಂಭ್ರಮ

ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ಇಟ್ಟು ವೃದ್ಧಾಶ್ರಮದ ವೃದ್ದಾರಿಂದಲೇ ಕೇಕ್ ಕತ್ತರಿಸಿದ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು. ಬಳಿಕ ವೃದ್ಧಾಶ್ರಮದ ಎಲ್ಲರಿಗೂ ಕೇಕ್ ವಿತರಿಸಿ ಬೆಳಗಿನ ಉಪಹಾರ ವಿತರಣೆ ಮಾಡಲಾಯಿತು. ಅಲ್ಲದೆ ಮೋದಿ ಅವರ ನೆನಪಿನಲ್ಲಿ ಪ್ರತಿ ವೃದ್ಧರಿಗೆ ಕೊಡಗಿನ ಚಳಿ ವಾತಾವರಣಕ್ಕೆ ಅನುಕೂಲ ಆಗುವಂತೆ ಸ್ವೆಟರ್ ವಿತರಿಸಲಾಯಿತು.

ವೃದ್ಧರಿಗೆ ಸ್ವೆಟರ್ ವಿತರಣೆ

ಮತ್ತೊಂದೆಡೆ ನಗರದ ರೆಡ್ ಕ್ರಾಸ್ ಭವನದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ರಕ್ತದಾನ ಶಿಬಿರ ನಡೆಯಿತು. ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ನಗರ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಭರತ್ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ವೃದ್ಧರಿಗೆ ಸ್ವೆಟರ್ ವಿತರಣೆ ಮಾಡಲಾಗಿದೆ ಎಂದರು.

ಮಕ್ಕಳೊಂದಿಗೆ ಆಚರಣೆ

ಬಿಜೆಪಿ ಜಿಲ್ಲಾ ಮುಖಂಡ ಮನು ಮಂಜುನಾಥ್ ಮಾತನಾಡಿ ಒಂದೆಡೆ ವೃದ್ಧಾಶ್ರಮದಲ್ಲಿ ಸ್ವೆಟರ್ ಹಂಚುವುದರ ಜೊತೆಗೆ ಅವರಿಗೆ ಉಪಹಾರ ನೀಡಲಾಗಿದೆ. ಮತ್ತೊಂದೆಡೆ ಯುವ ಮೋರ್ಚಾದಿಂದ ರಕ್ತದಾನ ಮಾಡಿದ್ರೆ ಮತ್ತೊಂದೆಡೆ ಬಾಲವನದಲ್ಲಿ ಮಕ್ಕಳೊಂದಿಗೆ ಪ್ರಧಾನಿ ಮೋದಿಯವರ ಹುಟ್ಟು ಹಬ್ಬ ಆಚರಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: PM Narendra Modi Birthday: ಮೋದಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಬೊಮ್ಮಾಯಿ; ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಿಎಂ ಸಂಭ್ರಮಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ರಕ್ತದಾನ ಶಿಬಿರ

ಇನ್ನು ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ, ಆರೋಗ್ಯ ಇಲಾಖೆ ಹಾಗೂ ರೆಡ್ ಕ್ರಾಸ್ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.  ಹಲವು ಯುವಕ, ಯುವತಿಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ್ರು. ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ವಿರಾಜಪೇಟೆ ಶಾಸಕ ಕೆ. ಜಿ ಬೋಪಯ್ಯ ಅವರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರು 72 ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ಜನ್ಮದಿನವನ್ನು ಒಂದು ಹಬ್ಬವನ್ನಾಗಿ ಮಾಡುತ್ತಿರುವುದರ ಜೊತೆಗೆ ಅವರ ಆಶಯದಂತೆ ಸೇವಕಿ ಸಪ್ತಾಹ ಅಂದರೆ ಸೇವೆಯ ಮೂಲಕ ಅವರ ಹುಟ್ಟು ಹಬ್ಬ  ಆಚರಿಸಲಾಗುತ್ತಿದೆ.

BJP Yuva Morcha organized a blood donation camp to celebrate Prime Minister Narendra Modi's birthday
ವೃದ್ಧಾಶ್ರಮದಲ್ಲಿ ಮೋದಿ ಹುಟ್ಟುಹಬ್ಬ ಆಚರಣೆ


ಇದನ್ನೂ ಓದಿ: PM Modi Birthday Gift: ಕೋಲಾರದ ಮಾಲೂರಿನಲ್ಲಿ ಜನಿಸಿದ 25 ಮಕ್ಕಳಿಗೆ ಸಿಕ್ತು ಗೋಲ್ಡ್​ ರಿಂಗ್​ ಗಿಫ್ಟ್!

ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮ

ಹೀಗಾಗಿ ರಕ್ತದಾನ ಶಿಬಿರ ಮಾಡಲಾಗುತ್ತಿದೆ. ಇಂದಿನಿಂದ ಒಂದು ವಾರಗಳ ಕಾಲ ಇಡೀ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಜನರ ಸೇವೆ ಮಾಡುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದರು. ಅವರ ಧಣಿವರಿಯದ ಸೇವೆಯೇ ನಮಗೆ ಪ್ರೇರಣೆಯಾಗಿದ್ದು ಅವರ ಆಶಯದಂತೆ ಇನ್ನಷ್ಟು ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಜಿ ಅವರ ಹುಟ್ಟು ಹಬ್ಬವನ್ನು ಆಯೋಜನೆ ಮಾಡಲಾಗುವುದು ಎಂದು ವಿರಾಜಪೇಟೆ ಶಾಸಕರು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ ಜಿ ಬೋಪಯ್ಯ ಹೇಳಿದರು.
Published by:ಪಾವನ ಎಚ್ ಎಸ್
First published: